ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ವಿಶೇಷ ಸಂದರ್ಭದ ಹಾಡುಗಳು 486 (1) ಹೆಜ್ಜಾಜಿಕೇಶವಸುಪ್ರಭಾತ ಏಳಯ್ಯ ಜಾಜಿಪುರೀಶ ಕೇಶವರಾಯ ಬೆಳಗಾಯಿತೇಳಯ್ಯ ಎದ್ದುರುಳಯ್ಯ ಪ ಕೋಟೆ ಚನ್ನಿಗನೆಂದು ಹೆಸರಾದವನೆ ಪೇಟೆ ಚನ್ನಿಗನಾಗಿ ನೆಲೆಸಿರುವವನೆ ಏಳಯ್ಯ ಬೆಳಗಾಯಿತು 1 ಗರುಡ ವಾಹನನಾಗಿ ಕಣ್ಗಾವಲಾಗಿಹನೆ ಕು- ದುರೆ ವಾಹನನಾಗಿ ಊರೆಲ್ಲ ಕಾಯುವನೆ ಏಳಯ್ಯ ಬೆಳಗಾಯಿತು 2 ಶ್ರೀದೇವಿ ಭೂದೇವಿಯರ ನಡುವೆ ಅರಸಾಗಿ ಬಾಧೆಹೊತ್ತಾಜನರ ಹಾರೈಸುತಿರುವನೆ ಏಳಯ್ಯ ಬೆಳಗಾಯಿತು 3 ನಾರದರು ತುಂಬುರರು ದೇವತೆಗಳೆಲ್ಲ ಎ- ದುರಲಿ ನಿಂದು ವಂದಿಸುತಿಹರಲ್ಲ ಏಳಯ್ಯ ಬೆಳಗಾಯಿತು 4 ವಂದಿ ಮಾಗಧರು ಜಯಘೋಷ ಮಾಡುತ್ತ ಮಂದಿ ಮಂದಿಯೆ ನಿಂತು ನುತಿಸುತ್ತಿಹರು ಏಳಯ್ಯ ಬೆಳಗಾಯಿತು 5 ಭಂಟರು ಬಂದು ಮಂಗಳರವದಿಂದ ಗಂಟೆ ಜಾಗಟೆಗಳ ನುಡಿಸುತಲಿಹರು ಏಳಯ್ಯ ಬೆಳಗಾಯಿತು 6 ಮುನ್ನಿನ ರವಿಯು ಉದಯಿಸುತಿರುವನು ಹೊನ್ನಿನ ಕಿರಣಗಳ ಪಸರಿಸುತಿರಿವನು ಏಳಯ್ಯ ಬೆಳಗಾಯಿತು 7 ಬೀದಿಯ ಜನರೆಲ್ಲ ಬೇಗ ಬೇಗನೆ ಎದ್ದು ಹಾದಿಯ ಸಿಂಗರಿಸಿ ಕಾಯುತಲಿರುವರು ಏಳಯ್ಯ ಬೆಳಗಾಯಿತು 8 ಪೇಟೆ ಚೆನ್ನಿಗನ ಕಡೆಯಿಂದ ದಂಡೊಂದು ಭ ರಾಟೆ ವಾದ್ಯಗಳ ನುಡಿಸುತ್ತ ಬರುತಿಹುದು ಏಳಯ್ಯ ಬೆಳಗಾಯಿತು 9 ಕೊಂಬು ಕಹಳೆಗಳ ಊದುವರು ಕೆಲವರು ತುಂಬು ಮಂತ್ರಗಳ ಹೇಳುವರು ವೈಷ್ಣವರು ಏಳಯ್ಯ ಬೆಳಗಾಯಿತು 10 ಸುಮಂಗಲೆಯರು ಕಳಸ ಹೊತ್ತಿಹರು ಸುಮ್ಮಾನದಿ ಭಕುತರು ಕುಣಿಯುತಲಿಹರು ಏಳಯ್ಯ ಬೆಳಗಾಯಿತು 11 ಅಭಯ ಹಸ್ತನೆ ಏಳ ಕಮಲವದನನೆ ಏಳು ಉಭಯ ಜನರುಗಳೆಲ್ಲ ದರುಶನಕೆ ಕಾದಿಹರು ಏಳಯ್ಯ ಬೆಳಗಾಯಿತು 12 ನಿನ್ನ ಭಕ್ತರು ನಿಂತು ಧ್ಯಾನ ಮಾಡುತಲಿಹರು ಎನ್ನರಸ ಜಾಜಿಪುರ ವರದ ಕೇಶವರಾಯ ಏಳಯ್ಯ ಬೆಳಗಾಯಿತು 13
--------------
ನಾರಾಯಣಶರ್ಮರು
ಆಲವವೆ ನಮಗೆ ಸಫಲವು ಕಾಣಿರೊ ಶ್ರೀಲಕುಮಿಯ ಪತಿಯ ನೆನೆವೆಯಾಗಿ ಪ ಕೀಳು ಜನರಿಂದ ಆಡುವಾ ನುಡಿಗಳು ಹಾಳು ಹರಟೆಗಳು ಬಹು ಜಾಳು ಮಾತುಗಳು ಕಾಲ ಪರಿವುದು ಕೇಳಿ ಜನರುಗಳೆ ನಾಳೆ ನೋಡಿದಂಥ ದಾಸರು ದೊರೆಯರು1 ವ್ಯಾಳೆ ಬಂದಾಗ ಸಾಧಿಸದವನಾ ಬಾಳಿವೆ ಬೋಳೆ ಅದು ಗೋಳಲ್ಲವೆ ಗಾಳಿ ಬಂದಾ ಕೈಲೆ ತೂರಿಕೊಳ್ಳಿರೊ ಮ್ಯಾಲೆ ತನ್ನೊಶವೇನೊ ದೇಶಕಾಲಗಳು 2 ಸೋಲಿಸಿ ದುರ್ಮತರ ಕೀಳು ಮಳಿಗೆಗಳ ಪರಿ ಸೀಲಿಸೊ ಪ್ರತಿ ದಿವಸದಲಿ ಅಲವ ಬೋಧರ ಮತವ ಲೀಲೆಯಿಂ ತಿಳಿಕೊಂಬ್ಯ ಪಾಲಿಸುವ ದಯದಿಂದ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಏನೆಂಬೆ ನಿಮ್ಮ ಕರುಣವು ದೇವವರ್ಯ, ಶ್ರೀಮ- ಪ ದಾನಂದತೀರ್ಥಾರ್ಯ ಹರಿಕಾರ್ಯಧುರ್ಯ ಅ.ಪ. ವಾರಿಧಿಯ ಗೋಷ್ಪಾದ ನೀರಂತೆ ದಾಟ್ಯಂದುಮಾರು ಮಲೆತಾಕ್ಷನನು ಮುರಿದು ಮೆರೆದೆಸಾರಿ ಬಹ ರಕ್ಕಸರ ಮುರಿದÉೂಟ್ಟಿ ನೀನಿಂದುಮೇರೆಯಿಲ್ಲದ ಭವಾಂಬುಧಿಯ ದಾಟಿಸಿದೆ 1 ದಾನವನಶೋಕವನ ಕಿತ್ತು ಈಡ್ಯಾಡಂದುಶ್ರೀನಾಥಗೆನುತ ಲಂಕೆಯನುರುಪಿದೆಮಾನವರ ಶೋಕವನ ಬೇರೊರಸೆ ಕಿತ್ತಿಂದುದಾನವರಿಹ ಪುರವ ಪೂರೈಸಿ ಮೆರೆದೆ 2 ಬೇಗ ಸಂಜೀವನವ ತಂದಿತ್ತು ಪೊರೆದ್ಯಂದುನಾಗಪಾಶದಿ ನೊಂದ ಕಪಿಕಟಕವಈಗ ಹರಿಭಕುತಿ ಸುಧೆಯ ನೆರೆದು ಪಾಲಿಸಿದೆರಾಗದಿಂ ಭವಪಾಶಬದ್ಧ ಜನರುಗಳನ್ನು 3 ಭವಾಬ್ಧಿ ಮಗ್ನ ಜನಗಳನಿಂದು 4 ಹತ್ತು ದಿಕ್ಕನು ಗೆಲಿದು ರಾಜಸೂಯದಿ ಅಂದುಚಿತ್ತೈಸಿ ಹರಿಗಗ್ರ ಪೂಜೆಯನು ಮಾಡಿದೆಹತ್ತೆರಡು ಮತ್ತೊಂದು ದುರ್ಭಾಷ್ಯ ಜರಿದಿಂದು ಬಿತ್ತರಿಸಿದೆ ಭಾಷ್ಯದಿಂದಗ್ರಪೂಜೆಯನು 5 ದ್ರೌಪದಿಯ ಸಂತವಿಟ್ಟಂದು ಮುಡಿ ಪಿಡಿದೆಳೆದಪಾಪಿ ದುಶ್ಶಾಸನನ ಬಸುರನ್ನು ಬಗೆದೆಪಾಪಿ ಜನರುಗಳೆಳೆಯೆ ವೇದಾಂತ ದೇವಿಯರಶ್ರೀಪತಿಗೆ ಸೇರಿಸಿದೆ ಭಾವವರಿದಿಂದು 6 ಅಂದು ಕಲಿಯಂಶ ದುರ್ಯೋಧನನ ಸಂದುಗಳಕುಂದದೆ ಮುರಿದೆ ಗದೆಯಿಂದ ಸದೆದುಇಂದು ಕಲಿಯನನೇಕ ಶಾಸ್ತ್ರ ಶಸ್ತ್ರಗಳಿಂದಕೊಂದೆಳೆದೆ ಹರಿಯ ಮನ್ನೆಯದಾಳು ಭಳಿರೆ 7 ಶ್ರುತಿಪಂಕಜಗಳರಳೆ ಅಜ್ಞಾನ ತತಿಯೋಡೆಗತಿಗಳಡಗೆ ಮಿಥ್ಯವಾದಿ ಖಳರಕುಮತಗಳು ಮುರಿಯೆ ಸತ್ಪಥವು ಕಾಣಿಸಲುವಿತತವಾಯಿತು ನಿನ್ನ ಪ್ರಭೆ ಸೂರ್ಯನಂತೆ 8 ಜ್ಞಾನಚಂದ್ರಿಕೆ ಪೊಳೆಯೆ ಭಕ್ತಿವಾರಿಧಿಯುಕ್ಕೆಮನ ಚಕೋರವು ವಿಷ್ಣುಪದದಿ ನಲಿಯೆದೀನ ಜನ ಭಯವಡಗೆ ತಾಪತ್ರಯಗಳೋಡೆಆನಂದತೀರ್ಥೇಂದು ಶ್ರೀ ಕೃಷ್ಣ ತಾ ಮೆಚ್ಚೆ 9
--------------
ವ್ಯಾಸರಾಯರು
ಶ್ರೀ ಜಗನ್ನಾಥದಾಸರ ಸ್ತೋತ್ರ ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ 1 ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ 2 ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ 3 ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು 4 ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ 5
--------------
ಶ್ರೀಶಪ್ರಾಣೇಶವಿಠಲರು