ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಲೋಕನೀತಿಯ ಕೃತಿಗಳು ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು ಭ್ರಷ್ಟನೆನಿಸದೆ ಬಿಡವು ಇವನ ಪ ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು ಹರಿಯಿಂದ ಹತನಾಗಿ ಹೋದಾ ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ ತರಿದನಲ್ಲವೆ ಭೀಮ ತಾನು 1 ದಾಯವನು ಲೋಭದಿಂ ಕೌರವನು ಪಾಂಡವರಿ ಗೀಯದುದಕವನೇನು ಪಡೆದಾ ರಾಯದಶರಥ ತನ್ನ ಸತಿಸುತರ ಮೋಹವಿರೆ ಆಯುವಿಂ ಗತನಾಗಿ ಹೋದಾ 2 ಜಮದಗ್ನಿಯ ಹೋಮಧೇನುವಂ ಮದದಿಂದೆ ಕಾರ್ತಿವೀರ್ಯಾರ್ಜುನನು ಕೊಳಲು ಅಮಿತಬಲನಾಪರಶುಧಾರಿಯು ತಾನು ಸಮರದೊಳೆ ಸವರುತ್ತ ಅವನ ಕಳೆದ3 ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು ವಿಷ್ಣುಚಕ್ರವು ಕೊಂದಿತವನ ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು 4 ವಾಸುದೇವನ ಮೇಲಸೂಯೆಯಿಂ ಪೌಂಡ್ರಕ ವಾಸುದೇವನೊಳು ಅಳಿದ ಕಂಡ್ಯಾ ದೂಷಣೆಯು ಡಂಬಗಳು ನಾಶನವ ಗೈಯುವುವು ಈಶ ಸುಜನರಿಗಾಗಿ ಭಾವಿಸುವ ಜಗದೀ5 ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ ಅಪಹಾರಗೈದ ಶ್ರೀರಾಮ ತಲೆಯಾ ರಿಪುಗಳಾ ಮಧು ಕೈಟಭರ ಮಮತೆಯನು ಉಪಮೆಯಲ್ಲಿದು ಮಾಯಿ ಮುರಿದ ನೋಡಾ 6 ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ ಸರ್ವವೂ ಹೆಜ್ಜಾಜಿ ಕೇಶವಾ ಯೆಂದು ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ ಒರ್ವನೇ ಜಗದೀಶನೆಂದು ನಮಿಸೀ 7
--------------
ಶಾಮಶರ್ಮರು
ಗುರುಸತ್ಯವರರೆಂಬ ಕಲ್ಪಭೂಜಾ ಧರೆಯೊಳಗೆಮ್ಮನುದ್ಧರಿಸ ಬಂತಿದಕೊ ಪ ಶ್ರೀಮಧ್ವಮತವೆಂಬೋ ಭೂಮಿಯೊಳಗುದ್ಭವಿಸಿ ರಾಮ ವೇದವಾಸ್ಯರಂಘ್ರಿ ಯುಗಳ ವ್ಯೋಮ ಮಂಡಲವನಾಶ್ರಯಿಸಿ ಸತ್ಕೀರ್ತಿನಿ ಸ್ಸೀಮ ಶಾಖೋಪಶಾಖೆಗಳಿಂದ ಶೋಭಿಸುತ 1 ಭವವೆಂಬ ಭಾಸ್ಕರತಪದಿಂದ ಬೆಂದು ಬಂ ದವರ ಮಂದಸ್ಮಿತ ನೆಳಲಿಂದಲೀ ಪ್ರವಣರಂತಃಸ್ತಾಪ ಕಳೆದು ನಿತ್ಯದಲಿ ಸ ತ್ಕವಿ ದ್ವಿಜಾಳಿಗಲಿಗಾಶ್ರಿತರಾಗಿ ಮೆರೆವ 2 ಕರ್ಮ ಜ್ಞಾನ ಮಾರ್ಗಸ್ಥ ಜನರಿಗಾಗಿ ಲ್ಲಿಹವು ಫಲ ಪುಷ್ಪ ಐಹಿಕಾಮುಷ್ಮಿಕಾ ಭುಜಗ ಹೃ ದ್ಗುಹದೊಳಿಪ್ಪದು ಮಾಯಿಮೂಷಕಗಳೋಡಿಸುತ 3
--------------
ಜಗನ್ನಾಥದಾಸರು
ಜೋ ಸಚ್ಚಿದಾನಂದನೆ ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ ಧ್ರುವ ಹುಟ್ಟಿ ಬಂದು ನಿಜದೋರಿದೆ ಖೂನ ಮುಟ್ಟಿ ಬೀರುವ ಸುಚಿನ್ನಸಾಧನ ಇಟ್ಟ ಕಾವಲಿ ಹಾಕಿದೆ ಮೌನ ಮೆಟ್ಟಿಮರ್ದಿಸಿ ಬಂದೆ ಮಾವನ 1 ಮಾಡಬಂದೆ ನೀ ಧರ್ಮಸ್ಥಾಪನಿಯ ನೋಡಬಂದೆನಿಷ್ಟ ಜನರಾರ್ಚನಿಯ ಆಡಬಂದೆ ನಂದಯಶೋದೆ ಮನಿಯ ನೀಡಬಂದೆ ನಿಜಸುಖಸಾಧನಿಯ 2 ಶಿಷ್ಟಜನರಿಗಾಗಿ ಸಹಾಕಾರಿ ಸೃಷ್ಟಿಯೊಳು ತೋರಬಂದೆ ಶ್ರೀಹರಿ ದುಷ್ಟ ಜನರ ಮರ್ದಿಸುವಾವತಾರಿ ಕಂಸಾರಿ 3 ದೇವಾದಿಗಳ ಮಗುಟಮಣಿಯೆ ಭಾವಿಸಲಳವಲ್ಲ ಸದ್ಗುಣಿಯೆ ಕಾವ ದೈವ ನೀನೆ ಕೃಷ್ಣ ಕರುಣೆಯೆ ದೇವಕಿ ಗರ್ಭನಿಧಾನದ ಖಣಿಯೆ 4 ಬಲವಾಗಿ ಎನಗಬಂದೆ ಸರ್ವೇಶ ಒಲಿದು ಭಾನುಕೋಟಿತೇಜಪ್ರಕಾಶ ಫಲವ ನೀಡಿ ತೋರಬಂದೆ ಸಂತೋಷ ಸಲಹಬಂದೆ ಮಹಿಪತಿ ಪ್ರಾಣೇಶ 5 ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ ನೀನೆ ಮುರಾರಿ 6 ಅನೆ ಕಾಯಲಿಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀಹರಿ 7 ಪತಿತ ಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾನಿನ್ನ ತೆಗಳಿದೆನೇ ರಂಗಯ್ಯ ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ ನೀನೇತಕೆನ್ನೊಳು ದಯತೋರದಿರುವೆ ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ ನೀನೇ ಕಮಠನಾಗಿ ನಗವೆತ್ತಿ ನಿಂದೆ ದಾನವ ಸಂಹಾರಕಾಗಿ ಸೂಕರನಾದೆ ನೀನೇ ನರಹರಿಯೆಂದು ನುತಿಸಿದೆನಲ್ಲದೆ 1 ಭೂಮಿಯನಳೆದವನೆಂದೆ ನೀನೇ ಭೂಮಿಪರನು ಕೊಂದೆ ಎಂದೆ ಭೂಮಿಜೆಯರಸ ರಾವಣವೈರಿಯೆಂದೆ ಕಾಮಪಾಲನು ಹಲಧರನೆಂದೆನಲ್ಲದೆ 2 ತರುಣಿದ್ರೌಪದಿಗಾಗಿ ಕುರುಕುಲವಿರಿದೆ ತುರಗವನೇರಿ ದುಷ್ಟರನೆಲ್ಲ ತರಿದೆ ಶರಣ ಜನರಿಗಾಗಿ ಹರಿಹರ ನೀನಾದೆ ವರದ ಮಾಂಗಿರಿರಂಗ ನೀನೆಂದೆನಲ್ಲದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ ಪ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ಅ.ಪ. ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು 1 ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ 2 ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ- ಸಾದದಿಂದ ಹರಿಕಾಥಾಮೃತ ಸಾರತತ್ವ ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ ಸಾದರದಲಿ ಪೇಳಿ ದುಷ್ಕøತ ದೂರಮಾಡಿ ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ 3
--------------
ಶ್ರೀದವಿಠಲರು