ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೋ ಕರುಣ ಕೃಪೆಯಿಂದ ಹರಿ ಮುಕುಂದ ಧ್ರುವ ಕರುಣಾನಂದದ ಸಾಗರ ಕರಿವರ ಶರಣಾಗತಜನರ ಮಂದಾರ ಪರಮ ಉದ್ಧಾರ ಸುರ ಸಂಸಾರಾಯದಾಗರ ಪರಾತ್ಪರ ತರಣೋಪಾಯದಾಧಾರ 1 ಅನಾಥ ಜನರಾಶ್ರಯ ನೀನೆ ನಿಶ್ಚಯ ಅನುಭವಾನಂದಾ ಹೃದಯ ಘನಮಯ ದಿನಕರಕೋಟಿ ಪ್ರಭೆಯೆ ಜನವನಲಿಹ್ಯ ಮುನಿಜನರ ಹೃದಯ ಅನುದಿನದಲಕ್ಷಯ 2 ವಿಹಿತವಿಚಾರದ ವಿವರ ಈಹ್ಯಶ್ರೀಧರ ಸ್ವಹಿತ ಸುಖದ ಸುಸಾರ ಬಾಹ್ಯಾಂತರ ಮಹಿಮೆ ನಿನ್ನದು ಅಪಾರ ಮಹೇಶ್ವರ ಇಹ್ಯ ಪರದ ದಾತಾರ ಮಹಿಪತಿ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ ಶರಣು ಸಮೀರ ಕುಮಾರ ಉದಾರನೆ ಶರಣು ಪಾವನ ಕಾಯಾ ಪ ಹರಿ ಪೂರ್ಣಾಂಶದಿ ಜನಿಸಿ ಹರಿ ಕುಲೋದ್ಬವ ನೆನಿಸಿ ಹರಿಯತುಡಕಿ ಬಂದು ಹರಿತೇಜದಿ ನಿಂದು ಹರಿಸೆ ಧನುಜ ಮೃಗವಾ ಹರಿರೂಪದಲಿ ನಿಂದೆಹರಿಮಂದಿರದಲಿನಲಿದೆ ಹರಿಬರಲು ನಮಿಸಿ ಹರಿದಶ್ವಜ ಗೊಲಿಸಿ ಹರಿಹಯಜಗ ಮುನಿದೇ 1 ಗೋಪೆಂದ್ರ ನಾಜÉ್ಞಯಲಿ ಗೋಪದಾಂಬುಧಿ ಪರಿಲಿ ಗೋಪನಲಂಘಿಸಿ ಗೋಪುತ್ರಿಯ ಕಂಡು ಗೋಪೀಡಕರ ಮುರಿದೇ ಗೋಪಾಲಗಿದಿರಾಗಿ ಗೋಪಾಸ್ತ್ರವಶವಾಗಿ ಗೋಪುರವ ನುರುಹಿ ಗೋಪಾನ್ವಯ ಗುರುಹಿ ಗೋಪದವಿಯ ಪಡೆದೆ 2 ಮಹಿದರಾನೇಕವತಂದು ಮಹೋದಧಿಯನೆ ಜಿಗಿದು ಅಹಿ ಮಹಿರಾವಣಾನ್ವಯ ಮಹಿರುಹದಲಿ ತರಿದೇ ಮಹಿಯೋಳು ಮೂರವತಾರಿ ಮಹಿಮಾನೆಕವಬೀರಿ ಮಹಿಪತಿ ಸುತಪ್ರಭು ಮಹಿಜಳ ಕೂಡಿಸಿ ಮಹದಾ ಗ್ರಣಿಯಾದೆ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿಕ್ಕಿದೆಲ್ಲೊ ಕೃಷ್ಣ ನೀನು ಸಿಕ್ಕಿದೆಲ್ಲೊ ನಮ್ಮ ಕೈಯ ಹೊಕ್ಕು ಮುನಿಯ ಹಕ್ಕಿಯೊಳಾದ್ಯೊ ತೆಕ್ಕಿಯ ಪುಕ್ಕಸಾಟಿಯ 1 ಬಿಟ್ಟರ ಗೊಲ್ಲತೇರಲ್ಲೊ ಕಟ್ಟಿದ ಸೊಲ್ಲೊ ಮುಟ್ಟಿ ಬಿಡುವವರಲ್ಲೊ ಘಟ್ಯಾಗಿ ನಿಲ್ಲೊ 2 ನಾವು ಬಲ್ಲೆವು ನಿನ್ನಾಟ ಎವಿ ಹಾಕುನೋಟಿ ಹವಣಿಸಿ ಹಿಡಿದೆವೊ ನೀಟ ಭಾವಿಸಿ ಈ ಮಾಟ 3 |ಬಲ್ಲತನವದೋರಿದೊ ಇಲ್ಲಿ ಮರುಳಾದ್ಯೊ ನಿಲ್ಲೊ ನಮ್ಮೊಳು ನೀನಾದ್ಯೊ ಎಲ್ಲಿಗೆ ಹೋದ್ಯೊ 4 ವಶವಾಗಲಿಕ್ಕ ನಮಗ ವಸುಧಿಯೊಳಗ ಯಶೋದೆ ಹಡೆದಳು ತಾ ಈಗ ಲೇಸಾಗಿ ನಿನಗ 5 ನಾವು ಹಿಡಿದೇವೆಂಬುವ ಮಾತ ಪೂರ್ವಾರ್ಜಿತ ನವನೀತ ಸವಿದೋರಿ ಹಿತ 6 ಭಾನುಕೋಟಿ ಸು ಉದಯ ಮುನಿಜನರಾಶ್ರಯ ನೀನಾಗಿ ಸಿಕ್ಕಿದ್ಯೊ ಕೈಯ ದೀನ ಮಹಿಪತಿಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಲಿಸು ನಮ್ಮನು ಪರಬ್ರಹ್ಮ ಶ್ರೀ-ಲೋಲಾನಂತ ಗುಣಾಲಯನೇ ಪ.ನೀಲಾಭ್ರದಾಭ ಕಾಲನಿಯಾಮಕಮೂಲೇಶ ಪುರುಷ ಮೂರ್ಲೋಕಾಧಿಪ ಅ.ಪ.ಉತ್ತಮ ಗುಣಗಳು ಬತ್ತಿಪೋದುವೈದೈತ್ಯರ ಗುಣವು ಪ್ರವರ್ಧಿಪುದುಚಿತ್ತಸಾಕ್ಷಿ ತವ ಭಕ್ತಿಕಥಾಮೃತನಿತ್ಯನಿತ್ಯಸವಿಸುತ್ತ ಹಿಂಬಾಲಿಸೆ1ಭಾಗವತಜನರ ಯೋಗಕ್ಷೇಮ ಸಂಯೋಗೋದ್ಯೋಗಿ ನೀನಾಗಿರಲುಕೂಗುವಾಸುರರ ಕೂಡೆ ಕೂಡಿಸದೆಭೋಗಿಶಯನಭವರೋಗಭೇಷಜನೆ2ಪಾವನಕರ ನಾಮಾವಳಿ ವರ್ಣಿಪಸೇವಕ ಜನರ ಸಂಭಾವಿಸುವಕೇವಳಾನಂದ ಠೀವಿಯ ಪಾಲಿಸುಶ್ರೀವಾಸುದೇವ ದೇವಕೀತನಯ] 3ಶುದ್ಧತಮೋಗುಣಬದ್ಧ ದೈತ್ಯ ಪ್ರ-ಸಿದ್ಧರಾಗಿಹರು ಮದ್ಯಪರುಬುದ್ಧಿಜ್ಞಾನ ಸಮೃದ್ಧಿ ಭಕ್ತಿಯಿಂ-ದುದ್ಧರಿಸೈಗುರುಮಧ್ವವಲ್ಲಭನೆ4ಕೇಶವಾಚ್ಯುತ ಪರೇಶ ಹೃದ್ಗುಹನಿ-ವಾಸ ವಾಸವಾದ್ಯಮರನುತಶ್ರೀಶ ಶ್ರೀವೆಂಕಟೇಶ ಭಕ್ತಜನರಾಶ್ರಯಸ್ಥಿತದಿನೇಶಶತಪ್ರಭ5ಮಂಗಲ ಜಗದೋತ್ತುಂಗರಂಗಮಾತಂಗವರದ ನೀಲಾಂಗ ನಮೋಅಂಗಜಪಿತಲಕ್ಷ್ಮೀನಾರಾಯಣಸಂಗೀತಪ್ರಿಯವಿಹಂಗತುರಂಗನೆ6
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ