ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆಂತು ತುತಿಪೆ ನಿನ್ನಾ ಶ್ರೀ ಗುರು ರನ್ನಾ ಆನೆಂತು ತುತಿಪೆ ನಿನ್ನಾ ಪ ಆನೆಂತು ತುತಿಪೆ ಪಂಚಾನನಸುತ ಪವ ಮಾನ ಹನುಮ ಭೀಮ ಆನಂದತೀರ್ಥನೆ ಅ.ಪ. ಸನಕನಂದನ ಸನತಕುಮಾರಾದಿ ಮುನಿಗಳು ಹರಿ ದರುಶನವ ಮಾಡುವೆವೆಂದು ಘನಹರುಷದಿ ಮೋಕ್ಷವನು ಕುರಿತು ಬಂದೊ ಡನೆ ಬಾಗಿಲಲಿ ನಿಲ್ಲೆನಲು ಜಯ ವಿಜಯ ರನ ನೋಡಿ ಎರಡೊಂದು ಜನುಮದಲಿ ಕ್ರೂರ ಸಿರಿ ವನಜಾಕ್ಷರಗೋಸ್ಕರಾ ಅವತರಸಿ ಗುಣಪೂರ್ಣ ಗುರು ಸಮೀರಾ ಸೇವಿಪೆನೆಂದಾ ಕ್ಷಣದಿ ಜನಿಸಿ ವಾನರಾ ರೂಪಿಲಿ ಭುವ ವನದೊಳು ಮೆರೆದೆ ಅಸಮಶೂರಾ ಹರಿಹರಾ 1 ಕೋತಿ ಕಟಕಮಾಡಿ ಜಾತರಹಿತ ಹರಿ ಗೇ ತಲೆಬಾಗಿ ಸುಪ್ರೀತಿಯಿಂದಲಿ ರವಿ ಜಾತನ ಸಲಹಿ ಅತೀ ತೀವ್ರದಿಂದಲಿ ವಾತವೇಗದಿ ವನಧಿಯ ತಡಿಲ್ಲದೆ ದಾಟಿ ಮಾತೆಗುಂಗುರವಿತ್ತ ಶೋಕತರುಗಳ ಭೀತಿ ಬಡದಲೆ ಕಿತ್ತಿ ರೋಮ ಬಳ ವ್ರಾತವೆಲ್ಲವ ನುಗ್ಗೊತ್ತೀ ಲಂಕಾಪುರ ಜಾತವೇದಸಗೆ ಇತ್ತೀ ಹನುಮಶಿರಿ ನಾಥನಿಗೆರಗಿ ಪಡೆದ ಬಹುಕೀರ್ತಿ 2 ದುರುಳ ಕಲ್ಯಾದ್ಯರು ಊರ್ವಿಯೊಳ್ಪುಟ್ಟಿ ಸಂ ಚರಿಸುತ್ತ ಇರಲಾಗಿ ಮರುತದೇವನು ಅವ ತರಿಸಿ ಅವನಿಯೊಳು ದುರಿಯೋಧನುಣಲಿತ್ತ ಗರಳವ ಭುಂಜಿಸಿ ಅರಗಿನ ಸದನದಿ ಪುರೋಚನಾದಿಗಳನ್ನು ಉರುಹಿ ಏಕಚಕ್ರಾ ಪುರದಲ್ಲಿದ್ದ ಬಕಾಸುರನ ಸದೆದು ಭೂಮಿ ಸುರವೇಷವನೆ ಧರಿಸೀ ಪಾಂಚಾಲಿ ಸ್ವಯಂ ವರ ಪತಿಕರಿಸಿ ಮಗಧದೇಶ ದರಸನ ಸಂಹರಿಸೀ ರಾಜಸೂಯಜ್ಞ ಹರಿಗೆ ಅರ್ಪಿಸಿದಿ ಮೆರೆಸೀ 3 ಭಕುತಳಾದ ಇಂದುಮುಖಿ ದ್ರೌಪದಿಗೆ ಸೌಗಂ ಧಿಕವ ತರುವೆನೆಂದು ವೃಕೋದರ ಪೋಗಲು ಅಕುಟಿಲ ಹನುಮಂತನನು ಅವಲೋಕಿಸ್ಯಂ ಜಿಕೆಯಿಂದ ನಿಂದು ಮಾರಕಜನರಿಗೆ ಮೋ ಕುಪಥ ಖಳರನೊರಿಸಿ ನೀ ಸಖಿಗೆ ಪೂವಿತ್ತು ಗುರುಕುಮಾರನಸ್ತ್ರಕ ಳುಕದೆ ಯುದ್ಧವ ಮಾಡಿದೆ ದುಶ್ಯಾಸನ ರಕುತ ವೆರಿಸಿ ಕುಡಿದೆ ಉಭಯಗಳ ರ ಥಿಕರ ಬಲವಕರೆದೆ ಭಯದಲಿ ಉ ದಕದಲಿರ್ದ ದುರ್ಯೋಧನನೂರು ಕಡಿದೆ 4 ಭೀಮ ಭಯಂಕರ ಕಾಮಕೋಟಿ ಚಲ್ವ ಧೀಮಂತಜನ ಮನೋಪ್ರೇಮ ಪಾವನ ಗುಣ ಸ್ತೋಮ ಸರ್ವಾಧಾರ ಭ್ರಾಮಕಜನ ವನ ಧೂಮಕೇತುವೆ ಸರ್ವಾಸೀಮ ಸೌಖ್ಯ ಪೂರ್ಣ ಸಾಮಜ ಹರಿಗುರು ರೋಮ ಕೋಟೇಶ್ವರ ಶ್ರೀಮಾನ್ಯ ಭಕುತಲ ಲಾಮ ಭವ್ಯ ಚರಿತಾ ಸೋಮಕುಲ ಸೋಮ ಸುಖ ಭರಿತಾ ಭಕುತ ಪ್ರೀತಾ ಕಾಯ ಹಿತದಿಂದ ನಿರುತಾ 5 ಮಣಿಮಂತನೆಂಬವನಿಯೊಳು ಪುಟ್ಟಿ ವೇ ನನ ಮತ ಪಿಡಿದು ಜೀವನೆ ಪರಮಾತ್ಮನೆಂ ದೆನುತ ಸ್ಥಾಪಿಸಿ ಪಣೆಗಣ್ಣೆನ್ವರದಿಂದ ಅನಿಮಿಷರೆಲ್ಲರು ವನಜಜಗುಸುರಲು ಮುನಿಗಳು ಸಹ ನಾರಾಯಣನ ಪದಕೆ ದಂಡ ಪ್ರಣಾಮವ ಮಾಡಿ ಸ್ತೋತ್ರವಿನಯದಿ ಗೈಯೆ ಅನಿಲನ ಅವಲೋಕಿಸಿ ಪೇಳಲು ಹರಿ ಮನ ಭಾವವನು ಗ್ರಹಿಸಿ ಮಧ್ಯಗೇಹ ಮನೆಯೊಳಗವತರಿಸಿ ಮೆರೆದೆ ಗುರು ಅನುಗಾಲದಲಿ ನಿನ್ನ ಗುಣಗಳಾಶ್ರೈಸೀ 6 ವಾಸುದೇವನೆಂಬ ಭೂಸುರನಾಮದಿ ಲೇಸಾಗಿ ಚರಿಸಿ ಸಂತೋಷ ಭರಿತರಾಗಿ ಸಂ ನ್ಯಾಸಾಚ್ಯುತ ಪ್ರೇಕ್ಷರಾ ಕರಸರಸಿಜ ದೀ ಸಂತೋಷದಿ ಕೊಂಡು ಆಶÀಂಕರರÀ ಭಾಷ್ಯ ದೂಷಿಸೆ ಗರುಗಳುಲ್ಲಾಸ ಸನ್ಮುಖದಲಿ ವಿ ಶೇಷದಿಂದಲಿ ವಿರಚಿಸುವುದೆನಲು ಉ ಲ್ಲಾಸದಿಂದಲಿ ಕೇಳಿ ಆಕ್ಷಣದಿ ಸಂ ತೋಷ ಮನದಲಿ ತಾಳಿ ಮೋಹಕವ ಪರಿಹ ಆಶೆ ಪೂರೈಸಿದ ಘನನಿನ್ನ ಲೀಲೆ 7 ತರಳತನದಲಿ ಬದರಿಗೈದಿ ಪಾರಾ ಶರ ನಾರಾಯಣನ ಸಂದರುಶನ ಕೊಂಡು ತೀ ವರದಿಂದ ಹರಿತತ್ವ ನಿರ್ಣಯ ಶಾಸ್ತ್ರವ ವಿರಚಿಸುವುದಕಿನ್ನು ವರವ ಪಡೆದು ಬಂದು ದುರುಳ ಭಾಷ್ಯಗಳೆಂಬ ಗರಳ ತರುಗಳ ಮುರಿದಿಕ್ಕಿ ನೀ ಮೂವ ತ್ತೆರಡೈದು ಗ್ರಂಥಗಳ ನಿರ್ಮಿಸಿ ವಿಬು ಧರಿಗೆಲ್ಲ ಪೇಳಿ ವ್ಯಾಳ ಭೂಷಣದೇವ ಪರನೆಂಬ ಯುಕುತಿಜಾಲ ಹರಿದು ಹರಿ ಪರ ಶ್ರೀ ಬೊಮ್ಮಾದ್ಯರೆ ಗುರುಗಳೆಂದೆನಲು 8 ನಮೋ ನಮೋ ಸಮೀರನೆ ನಮೋ ಶ್ರೀ ಮುಖ್ಯಪ್ರಾಣ ನಮೋ ನಮೋ ದಯಾಸಿಂಧು ನಮೋ ಭಕ್ತಜನ ಬಂಧು ನಮೋ ನಮೋ ಗುಣಶೀಲ ನಮೋ ಭಾರತಿಲೋಲ ನಮೋ ನಮೋ ಭವ್ಯಾಂಗ ನಮೋ ಅರಿಗಜಸಿಂಗ ನಮೋ ನಮೋ ಜಗದ್ವ್ಯಾಪ್ತ ನಮಿತಜನರಾಪ್ತ ನಮೋ ನಮೋ ಸುಖತೀರ್ಥ ನಮೋ ಮೂರ್ಲೋಕದ ಕರ್ತ ನಮೋ ಗುರುಕುಲ ತಿಲಕ ಪಾಲಿಸು ಎನ್ನ ತಮಹರದೂರಶೋಕ ಸಜ್ಜನರಿಗೆ ಅಮಿತ ಮೋದದಾಯಕ ಶ್ರೀಭೂ ದುರ್ಗಾ ರಮಣ ಜಗನ್ನಾಥವಿಠಲ ಭಕ್ತಾಧಿಕಾ 9
--------------
ಜಗನ್ನಾಥದಾಸರು
ಆಪ್ತರಾರೆಂಬುದನು ಆಲೋಚನೆಯ ಮಾಡೆ ಆಪ್ತರೊಬ್ಬರ ಕಾಣೆ ನೀನಲ್ಲದೆ ಪ ಆಪ್ತರನ್ಯರ ನಂಬಿ ತಪ್ತ ಜೀವನನಾದೆ ತೃಪ್ತಿಯ ಬೇಡುವೆ ನಿತ್ಯತೃಪ್ತ ನಿನ್ನನು ದೇವ ಅ.ಪ ಕೋಳಿಕೂಗದೆ ಬೆಳಕು ಬಾರದೆನ್ನುವ ನುಡಿಯ ಕೇಳಿ ತಲೆದೂಗಿದೆನು ಮೂಢತನದಿ ಪೇಳಿದುದು ಮಾಡಿದೆನು ತಾಳಿದೆನು ಮರ್ಮನುಡಿ ಪೇಳಲೇನುಪಯೋಗ ಶ್ರೀಲಲಾಮ ಸುಧಾಮ 1 ದಿಟ್ಟ ಜನರಾಪ್ತರಾಗುವರೆ ಜಗದಿ ಇಷ್ಟರಂದದಿ ಹೊರಗೆ ಕೆಟ್ಟ ಯೋಚನೆಯೊಳಗೆ ಸುಟ್ಟ ಬೆರಳಿಗೆ ಸುಣ್ಣವಿಡುವರೊಬ್ಬರ ಕಾಣೆ 2 ಕೂತ ಕೊಂಬೆಯ ಬುಡವ ತಾ ತರಿವ ಮೇಧಾವಿ ಮಾತು ಕೇಳುವ ಜನಗಳಾಪ್ತರಾಗುವರೆ ಪ್ರೀತ ನೀನಾಗೊ ಅನಿಮಿತ್ತಬಾಂಧವ ನಿನ್ನ ದೂತ ದೂತರ ದೂತನಾಗುವೆ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಕರುಣಿಸಮ್ಮಾ ತಾಯೆ ಕರುಣಿಸಮ್ಮಾ ಪ. ಕರುಣಿಸಮ್ಮಾ ಭರದಿ ವರಪ್ರಸಾದವ ತ್ವರದಿ ವರ ಶಂಕರನ ಜಾಯೆ ತ್ವರಿತದಿ ಕಾಯೆ ಅ.ಪ. ಇಷ್ಟ ಮೂರುತಿ ಶಿವನ ದಿಟ್ಟ ತೊಡೆಯಲಿ ಮೆರೆವ ದಿಟ್ಟ ರೂಪವ ತೋರೆ ದಿಟ್ಟ ಸುಂದರಿಯೆ ಪಾದ ಎನ್ನ ದಿಟ್ಟತನದಲಿ ಭಜಿಪ ಇಷ್ಟಕೊಡು ಮಾತೆ 1 ಭಜಿಪರ ಮನದಾತೆ ಸುಜನರಾಪ್ತೆಯೆ ನಿನ್ನ ಭಜಿಪ ಮನವನು ಇತ್ತು ಕಾಪಾಡು ತಾಯೆ ನಿನ್ನ ಸುಜನ ಸಂಗವನಿತ್ತು ದುರ್ಜನ ಸಂಗವ ಬಿಡಿಸಿ ಪಾದ ಭಜಿಪ ಭಾಗ್ಯವ ನೀಡೆ 2 ಭಾಗ್ಯದೇವತೆ ನೀನು ಸೌಭಾಗ್ಯ ಮಾಂಗಲ್ಯದಾ ಭಾಗ್ಯವನು ಕೊಟ್ಟು ಕಾಪಾಡು ತಾಯೆ ಕಾಯೆ ಯೋಗ ಮೂರುತಿ ಶ್ರೀ ಶ್ರೀನಿವಾಸ ಸಹೋದರಿಯೆ ಅನುರಾಗದಿಂ ಹರಿಪದವ ಭಜಿಪ ಭಾಗ್ಯವನಿತ್ತು 3
--------------
ಸರಸ್ವತಿ ಬಾಯಿ
ಪಾಲಯಮಾಂ ಪಾರ್ವತಿಯೆ ಪಾಪ ವಿನಾಶಿನಿ ತಾಯೆ ಶೀಲ ಮೂರುತಿ ಶಿವೆ ಈ ಜಾಲ ಸಂಸಾರದಿ ಪ. ತ್ರಿಜಗ ಪೂಜಿತೆ ನಿನ್ನ ಭಜಿಸೂವಾಮನವಿತ್ತು ಸುಜನರಾಪ್ತೆಯೆ ಎನ್ನಾ 1 ರಾಗ ರಾಗದಿ ನಿನ್ನ ಅನುರಾಗದಿಂ ಪೂಜಿಪೆ ಭಾಗ್ಯವನು ಕೊಟ್ಟು ನೀ ವೈರಾಗ್ಯ ಭಕ್ತಿಯನು 2 ಅರಿಶಿಣ ಕುಂಕುಮವನ್ನು ವರ ಮಾಂಗಲ್ಯದಾ ಭಾಗ್ಯ ನಿರುತದಿ ನೀಡುತ ಪೊರೆಯೆ ಶ್ರೀ ಶ್ರೀನಿವಾಸ ಸಹೋದರಿಯೆ3
--------------
ಸರಸ್ವತಿ ಬಾಯಿ
ರಾಮಾ ರಘುಕುಲರಾಮ ಪ ಸುರ ಸಾರ್ವಭೌಮ ಪಾಹಿ ಗುಣಧಾಮಾ ಅ.ಪ. ವಾಹನ ಫಣೀಂದ್ರಶಯನ ವರ ದೇಂದ್ರನುತ ರಾಮಚಂದ್ರಾ 1 ಚಂಡಬಾಣ ಕೋದಂಡಾ ವಿಧೃತ ದೋ ರ್ದಂಡಾ ಲೋಕೈಕ ಶುಂಡಾ 2 ಗೋಪ್ತಾ ಮೂಜಗದ್ವ್ಯಾಪ್ತಾ ದೋಷನಿ ರ್ಲಿಪ್ತಾ ವಿಬುಧಜನರಾಪ್ತಾ 3 ಘನ್ನಾ ಸೌಪರಿಛಿನ್ನ ಕಾಲಾತಿ ಭಿನ್ನ ಜಗದ ಮೋಹನ್ನಾ 4 ಅಂಬಾವಲ್ಲಭ ಬಿಂಬಾಸುರ ಮುನಿಕ ದಂಬಾ ಸೇವೆ ಕೈಕೊಂಬಾ 5 ಗಣ್ಯಾಗಣ್ಯನೆ ಶರಣ್ಯ ಸಲಹೋ ನಿ ರ್ವೀಣ್ಣ ಸುರವರವರೇಣ್ಯ 6 ಜ್ಞಾನಾನಂದಾದಿ ನಾನಾ ಗುಣಪೂರ್ಣ ಶ್ರೀ ನಾರಾಯಣ ಸಮಾನಾ 7 ಕಪಿಲಾ ಭಕ್ತರಿಗೆ ಸುಫಲಾದಾಯಕ ಚಪಲಚಿತ್ತರಿಗೆ ಉಪಲಾ 8 ಸೀತಾಪತೆ ಜಗನ್ನಾಥ ವಿಠಲ ಖ್ಯಾತಾ ಭವವನನಿಧಿ ಪೋತಾ 9
--------------
ಜಗನ್ನಾಥದಾಸರು
ಶ್ರೀ ತುಳಸಿ ಜಯ ತುಳಸಿ ಜಯ ಜಯಾ ಜಯತು ತುಳಸಿ ಶ್ರೀ ಕೃಷ್ಣನ ಅರಸಿ ಜಯತು ಜಯತು ಜಯ ಶುಭಕರಿ ಪ. ಪಾಲಗಡಲನು ಮಥಿಸೆ ಶ್ರೀಲೋಲ ಅಮೃತವನ್ಹಂಚೆ ಬಾಲ ಶ್ರೀ ಕೃಷ್ಣನ ಲೋಲ ಲೋಚನದಿ ಬಾಲೆ ನೀನುದಿಸಲುತ್ಸವದಿಂದ ಸುರರೆಲ್ಲ ಮೇಲೆ ಅಂಬರದಿಂದ ಪುಷ್ಪವೃಷ್ಟಿಯನು ಕರೆಯೆ ಜಯ ಜಯ ವಾದ್ಯದಿ 1 ದ್ವಿಜರೆಲ್ಲ ವೇದ ಘೋಷದಿ ನಿನ್ನ ಸ್ತುತಿಸಲು ಅಜಭವಾದಿಗಳೆಲ್ಲ ಸ್ತೋತ್ರವನು ಗೈಯ್ಯೆ ಭುಜಗಭೂಷಣಸಖನು ತ್ರಿಜಗವಂದಿತ ನಿನ್ನ ಭಜಕ ಜನರಾಪ್ತ ಶ್ರೀ ಕೃಷ್ಣ ವರಿಸಿದನೆ ಜಯ ಜಯ ಕಲ್ಯಾಣಿ 2 ದೇವಸ್ತ್ರೀಯರು ಬಂದು ದೇವ ಉಡುಪ ತಂದು ದೇವಕಿತನಯನ ಸಹಿತ ನಿನ್ನ ಪಾವನದರಿಶಿಣ ಕುಂಕುಮ ಪರಿಮಳ ಗಂಧದಿ ದೇವಿ ಪುಷ್ಪಮಾಲೆಯ ಪೂಜಿಸಿದರು ಸತಿ 3
--------------
ಸರಸ್ವತಿ ಬಾಯಿ