ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ಬದಲು ನಾನೊಲ್ಲೆನೊ ವಿದಿತ ವೇದ್ಯ ಪ ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ ಕುಣಿ ಕುಣಿವೆನು ನಿನ್ನ ಜನರೆಂದರೆ ಗುಣತ್ರಯ ವಾರಣ ನಿನ್ನ ವಾರುತಿಯಿರೆ ಒಣ ಹರಟೆಗಳ ನಾ ಕೇಳಲೊಲ್ಲೆ 1 ನೀಚ ಜನರಂಗಳ ಸಂಗವ ಕೊಡದಿರು ವಾಚದಿಗನ್ಯರಿಗಾಲ್ಪರಿಸಬೇಡ ಸೂಚಿಸು ನಿನ್ನಯ ಗುಣಗಣಂಗಳೆನೆ ನಾ ಯಾಚಿಪೆ ಇದನೆ ಇದನೆ ಮುರಾರೆ 2 ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು ಕಾಸು ಬಾಳದು ಕೇಳು ಕರುಣಾಬ್ಧಿಯೆ ತಾಸು ಒಂದಾದರು ಅವನೆ ಸುಜೀವಿಯೊ ವಾಸುದೇವವಿಠಲ ನಿನ್ನವರವನೊ 3
--------------
ವ್ಯಾಸತತ್ವಜ್ಞದಾಸರು
ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ. ಭುಜದಲೊತ್ತಿದ ಶಂಖಚಕ್ರಾಂಕಿತವನ್ನು ನಿಜ ದ್ವಾದಶನಾಮ ಧರಿಸಿಪ್ಪರಾ ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ ಸುಜನರಂಗಣವ ಪೊಗದೆ ಬನ್ನಿರೆಂದು 1 ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ ಲೇಪಿಸಿ ಹರಿಹರರೊಂದೆಂಬ ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2 ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತಲೊಮ್ಮೆ ಕರಗಳ ಮುಗಿದು ನ - ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3 ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ- ದಿರಕೆ ಪೋಗಿ ಪೋಗಿ ನಿರ್ಬಂಧಿಸಿ ಬರಿದೆ ಬೈದು ಬಳಲಿಸುವ ಪಾಪಿಗಳ ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4 ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು ಪನ್ನಗಶಯನನೆ ಗತಿಯೆನುತ ಉನ್ನತ ಹರಿದಿನ ವ್ರತವನಾಚರಿಪ ಪ್ರ- ಸನ್ನರ ಗುಣವ ಕೆಣಕದೆ ಬನ್ನಿರೆಂದು 5 ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು ಚಿಮ್ಮುತ ಚೀರುತ ಬೊಬ್ಬೆಗಳಿಡುತ ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6 ಕೇಶವ ಹರಿ ಅಚಲಾನಂದವಿಠಲನ್ನ ಶೇಷಗಿರಿಯ ತಿರುಮಲೇಶನ ದಾಸರ ದಾಸರ ದಾಸನೆಂದೆನಿಸುವ ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7
--------------
ಅಚಲಾನಂದದಾಸ
ಎಲೆ ಮನವೇ ಕೇಳು ಕೇಶವನ ನಾಮವ ನುಡಿಸು |ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |ಎಲೆ ಕರ್ಣಗಳಿರ ಅಚ್ಯುತನ ಕಥೆಕೇಳಿ1ಎಲೆ ನೇತ್ರಗಳಿರ ಶ್ರೀ ಕೃಷ್ಣಮೂರ್ತಿಯ ನೋಡಿ |ಎಲೆ ಪಾದಗಳಿರ ಹರಿಯಾತ್ರೆಯನು ಮಾಡಿ ||ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |ತುಳಸೀ ಪರಿಮಳವನಾಘ್ರಾಣಿಸನುದಿನವು 2ಎಲೆ ಶಿರವೆ ನೀನಧೋಕ್ಷಜನ ಶ್ರೀ ಚರಣದ |ಜಲರುಹದೊಳಗಳಿಯುಂಟೆ ಲೋಲಾಡು |ಎಲೆ ತನುವೆ ನೀನು ಶ್ರೀ ಪುರಂದರವಿಠಲನ |ಸಲೆ ಭಕುತ ಜನರಂಗ ಸಂಗತಿಯಲಿ ಬಾಳು 3
--------------
ಪುರಂದರದಾಸರು