ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನನುದ್ಧರಿಸಲಾಗದೆ ಚೆನ್ನರಾಯ ಪ. ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣಕಮಲದಾಣೆ ಅ.ಪ. ನಿಗಮ ಉಸುರುತಿರಲು ನಿನ್ನಚರಣವನ್ನು ಶಿರದೊಳಾಂತೆ ಎನ್ನ ಮೇಲಣಕರುಣವಿಲ್ಲದದೇನುಕಾರಣ ಸಲಹಬೇಕುಸುರರ ಮಸ್ತಕದ ಸುಭೂಷಣ 1 ಹಿಂದೆ ನಾನನಾಥನಾಗಿ ಒಂದೆರಡ[ಲ್ಲಾ]ನೇಕ ಜನ್ಮದಿಬಂದು ನರಕಯಾತನೆಯಲ್ಲಿ ನೊಂದು ಬೆಂದು ಬಾಯಬಿಡುತಬಂದೆ ನಿನ್ನ ಪೆಸರುಗೊಂಡೆನೊ ಸನಾಥನಾಗಿಮುಂದೆ ನಾಮಸುಧೆಯನುಂಡೆನೊ ನೀ ಕೃಪಾಳುಎಂದು ನುಡಿವರನ್ನು ಕಂಡೆನೊ 2 ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನಸಲಿಗೆಯೊಳೀ ಬಿನ್ನಪವನು ಸಲಿಸುತಿಹೆನು ಮುಂದಕಿನ್ನುಜಲುಮ ಬಾರದಂತೆ ವರವನು ಇತ್ತು ಎನ್ನಸಲಹೊ ದೊರೆಯೆ ನಿನ್ನ ಕರೆಯೆನೊ ಮುಂದೆ ಮುಕುತಿ-ಲಲನೆಯೊಡನೆ ಸುಖದಲಿರುವೆನು 3 ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊ-ಯಿಸಿ ತಿರುಗುತಿರÀಲು ಮೋಹಪಾಶವೆನ್ನ ಸುತ್ತಿಕೊಂಡುಘಾಸಿ ಮಾಡುತಿರಲು ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ ಸಲಹೊ ಸ-ರ್ವೇಶ ನಂಬಿದವನ ಕೆಡಿಸದೆ 4 ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದುಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನಮವೆತ್ತಿಉನ್ನತಾಹುದು ನಿನ್ನ ಕೀರುತಿ ನಾಶವಾಹುದುಎನ್ನ ಭವದ ಬಹಳ ಧಾವತಿ ಸಲಹೊಚೆನ್ನ ಹಯವದನಮೂರುತಿ 5
--------------
ವಾದಿರಾಜ
ಕಾಯೊ ಕರುಣದಿಂದೆನ್ನನು ತೋಯಜಾಕ್ಷನೆ ನೀನು ಪ ಕಾಯೊ ಕರುಣದಿ ತೋಯಜಾಕ್ಷನೆ ನೀನು ಹೇಯ ಜನಮವೆತ್ತಿ ಮಾಯಕೆ ಸಿಲುಕಿದೆ ಅ.ಪ. ಹಿಂದೆ ತಪ್ಪಿದೆನ್ಯಯ್ಯ ಮುಂದೆ ಬುದ್ಧಿಯು ಬಂತು ಸಿಂಧುಶಯನ ನೀನು ಬಂದು ಮೈದೋರಿ 1 ಸತಿಸುತರೆನಗೆ ಅತಿ ಹಿತರೆಂತೆಂದು ಮತಿಭ್ರಾಂತನಾಗಿದ್ದೆ ಪತಿತ ಪಾವನನೆ 2 ಕೊಟ್ಟು ಆದರಿಸಲು ಇಷ್ಟ ಮಿತ್ರರು ಇದ್ದು ಕೆಟ್ಟುಪೋದಮೇಲೆ ಕೈಬಿಟ್ಟರು ನೀ ಬಿಡಬೇಡ 3 ತಂದೆತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೆರಮಣನೆ ಬಂಧವ ಬಿಡಿಸೀಗ 4 ಕರುಣಾಸಾಗರ ನಿನ್ನ ಮರೆಹೊಕ್ಕೆ ನಾನೀಗ ಶರಣರ ಪೊರೆಯುವ ರಂಗೇಶವಿಠಲನೆ 5
--------------
ರಂಗೇಶವಿಠಲದಾಸರು