ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ಕ್ಷಣತೋರಿ ಇಲ್ಲದಂತಾಗುವ ವಿಷಮ ಮಹ ಕನಸಿನ ಮೋಹದಿಂ ಕೆಡಬೇಡ ಮನುಜ ಪ ಹಲವು ಜನಮದಿ ಬಿದ್ದು ತಿಳಿಯದೆ ಇಹ್ಯಪರಕೆ ತೊಳಲುತ ಬಳಲುತ ತಿರುತಿರುಗಿ ಗಳಿಸಿದ ನರಜನುಮ ವಿವರಿಸಿ ನೋಡದೆ ಕಳಕೊಂಡು ಬಳಿಕಿನ್ನು ಸುಲಭವಲ್ಲೆಲೆ ಖೋಡಿ 1 ನೀರಮೇಲಣ ಗುರುಳೆಯಂತೆ ಕಾಂಬುವ ಈ ನರಕ ಮೂತ್ರದ ತನುಭಾಂಡವಿದು ಅರಿಯದೆ ಮೋಹಿಸಿ ಪರಿಪರಿ ಕುಣಿಕುಣಿದು ಪರಮ ರೌರವ ನರಕಕ್ಹೋಗ ಬೇಡೆಲೆ ಖೋಡಿ 2 ಜವನÀದೂತರು ಬಂದು ಕವಿದುಕೊಳ್ಳಲು ಆಗ ಕಾಯುವರಾರಿಲ್ಲ ಕೈಪಿಡಿದು ದಿವನಿಶೆಯೆನ್ನದೆ ಭವಹರ ಶ್ರೀರಾಮ ದೇವನ ನೆರೆನಂಬಿ ಭವಮಾಲೆ ಗೆಲಿಯೊ 3
--------------
ರಾಮದಾಸರು
ಪರಮಪಾವನ ಸಂಸಾರದ ಘನ ಅ.ಪ ಕರಿಯಪಾಲನ ಕರುಣ ಕಡುಕಮಲನಯನ ಖರೆಯ ಸುಖಕೆ ತೊರಪಿಟ್ಟೆನ್ನ ಕೊರಗಿಪ್ಪ ಕಿರಿಕಿರಿಯ ತರಿದು1 ಜನಕಜಾವರ ಜನಕ ಜಗದ ಜಯ ಸುಖಕರ ಜನುಜನಮದಿ ಜನಿಸಿ ಬರುವ ಜಡರನಳಿದು ಜಯವ ನೀಡಿ 2 ಸುಜನ ಜೀವನ ಸುಖಶರಧಿ ಸುಮನರೊಂದನ ಶುಭಕೆ ಶುಭವೆನಿಸುವ ಸುಮುಕ್ತಿ ಸುದಯದಿತ್ತು ಸಲಹು ಶ್ರೀರಾಮ 3
--------------
ರಾಮದಾಸರು