ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ಕ್ಷಣತೋರಿ ಇಲ್ಲದಂತಾಗುವ ವಿಷಮ ಮಹ ಕನಸಿನ ಮೋಹದಿಂ ಕೆಡಬೇಡ ಮನುಜ ಪ ಹಲವು ಜನಮದಿ ಬಿದ್ದು ತಿಳಿಯದೆ ಇಹ್ಯಪರಕೆ ತೊಳಲುತ ಬಳಲುತ ತಿರುತಿರುಗಿ ಗಳಿಸಿದ ನರಜನುಮ ವಿವರಿಸಿ ನೋಡದೆ ಕಳಕೊಂಡು ಬಳಿಕಿನ್ನು ಸುಲಭವಲ್ಲೆಲೆ ಖೋಡಿ 1 ನೀರಮೇಲಣ ಗುರುಳೆಯಂತೆ ಕಾಂಬುವ ಈ ನರಕ ಮೂತ್ರದ ತನುಭಾಂಡವಿದು ಅರಿಯದೆ ಮೋಹಿಸಿ ಪರಿಪರಿ ಕುಣಿಕುಣಿದು ಪರಮ ರೌರವ ನರಕಕ್ಹೋಗ ಬೇಡೆಲೆ ಖೋಡಿ 2 ಜವನÀದೂತರು ಬಂದು ಕವಿದುಕೊಳ್ಳಲು ಆಗ ಕಾಯುವರಾರಿಲ್ಲ ಕೈಪಿಡಿದು ದಿವನಿಶೆಯೆನ್ನದೆ ಭವಹರ ಶ್ರೀರಾಮ ದೇವನ ನೆರೆನಂಬಿ ಭವಮಾಲೆ ಗೆಲಿಯೊ 3
--------------
ರಾಮದಾಸರು
ನಿನ್ನವಳ ಬಗೆಯ ಪೇಳುವೆನು ಕೇಳೋಮನ್ನಿಸೋ ಮಾನಿನೀಮಣಿಯನು ಕೃಪಾಳೋ ಪ ಕನ್ನಡಿಯ ನೋಡಿದಳೋ ಕರುಳ ನೇವರಿಸಿದಳೋಚಿನ್ನದುಂಗುರವ ಬೆರಳೊಳಗಿಟ್ಟಳೋಕಣ್ಣಕಪ್ಪಿಟ್ಟು ತಿಲಕವ ತಿದ್ದಿಕೊಂಡಳೋರನ್ನದೊಡವುಗಳ ಸಖಿಯರಿಗೆ ಕರದಿತ್ತಳೋ 1 ಜಾತಿಮುತ್ತಿನ ಸರವ ಹಾಕಿಕೊಂಡಳೋ ಕೊರಳ್ಗೆಜಾತಿಮಲ್ಲಿಗೆಯ ಮಾಲೆಯ ಮುಡಿದಳೋಪ್ರೀತಿಯಿಂ ಸಾಕಿದ ಗಿಣಿಯ ತರಿಸಿ ನೋಡಿದಳೋನೂತನದ ಚಂಗಾವಿ ಸೀರೆಯನೆ ನೆರಿದುಟ್ಟಳೋ 2 ಚಿತ್ತಾರದ ಪಟದಲ್ಲಿ ನಿನ್ನ ರೂಪನೆ ಬರೆದುಅರ್ತಿಯಿಂ ಕೈಮುಗಿದು ನೋಡುತಿಹಳೋಹೊತ್ತುಗಳೆವುದಕೆ ಹರಣಲ್ಲಿ ಬಂದುನೆರದುಳುಹೊಚಿತ್ತಜನಮದಭಂಗ ಕೆಳದಿ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಪರಮಪಾವನ ಸಂಸಾರದ ಘನ ಅ.ಪ ಕರಿಯಪಾಲನ ಕರುಣ ಕಡುಕಮಲನಯನ ಖರೆಯ ಸುಖಕೆ ತೊರಪಿಟ್ಟೆನ್ನ ಕೊರಗಿಪ್ಪ ಕಿರಿಕಿರಿಯ ತರಿದು1 ಜನಕಜಾವರ ಜನಕ ಜಗದ ಜಯ ಸುಖಕರ ಜನುಜನಮದಿ ಜನಿಸಿ ಬರುವ ಜಡರನಳಿದು ಜಯವ ನೀಡಿ 2 ಸುಜನ ಜೀವನ ಸುಖಶರಧಿ ಸುಮನರೊಂದನ ಶುಭಕೆ ಶುಭವೆನಿಸುವ ಸುಮುಕ್ತಿ ಸುದಯದಿತ್ತು ಸಲಹು ಶ್ರೀರಾಮ 3
--------------
ರಾಮದಾಸರು
ಪಾಲಿಸೆ ಪದುಮಾಲಯೆ, ನೀನೇ ಗತಿ ಪ ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ- ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ಅಪ ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ- ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣಸಂ ಪನ್ನ ರಕ್ಕಸನನ್ನು ಸೀಳಿದ ಪನ್ನಗಾದ್ರಿ ನಿವಾಸೆ ಹರಿಪ್ರಿಯೆ 1 ಅರಿಯದ ತರಳನೆಂದು ಶ್ರೀಪತಿ ಸತಿ ಕರುಣದಿ ಸಲಹೆ ಬಂದು ಕರುಣಾಸಿಂಧು ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖನು ಸುರರ ಬಾಧಿಸೆ ಹರಿವರರ ದಂಡೆತ್ತಿ ಬಹುಮುಖ ದುರುಳನ ಶಿರ ತರಿದವನ ಪ್ರಿಯೆ 2 ಅಜ ಮನಸಿಜ ಜನನಿ ಅಂಬುಜಪಾಣಿ ನಿತ್ಯ ಕಲ್ಯಾಣಿ ಕುಜನಮದರ್Àನ ವಿಜಯವಿಠ್ಠಲ ಭಜಿಸಿ ಪಾಡುವ ಭಕ್ತಕೂಟವ ನಿಜದಿ ಸಲಹುವೆನೆಂಬ ಬಿರುದುಳ್ಳವಿಜಯಸಾರಥಿ ವಿಶ್ವಂಭರ ಪ್ರಿಯೆ 3
--------------
ವಿಜಯದಾಸ
ವೃಂದಾವನದ ಸೇವೆಯ ಪ. ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ. ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1 ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2 ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3 ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4 ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5
--------------
ವಾದಿರಾಜ