ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೆ ಶ್ರೀ ಹರಿ ಜಾಯೆ ಸಜ್ಜನಪ್ರೀಯೆ ಸುರಮುನಿ ಗೇಯೆ ಪ ಕಾಯ ನಿನ್ನದುಕಾಯೇ ಕರುಣಾಬ್ಧಿಯೇಅ.ಪ. ಪದ್ಮ ಮಂದಿರೆ ಪದ್ಮ ಗಂಧಿನಿಪದ್ಮಕುಚ ರಾಣಿ ಪದ್ಮಶರ ಮಾತೇಪದ್ಮ ಬಾಂಧವೆ ಪದ್ಮರಿಪು ತಾಯೆ ||ಪದ್ಮಿ ಪದ್ಮಾಕ್ಷಿ ಪದ್ಮಾಭಿನ್ನ ಪದ್ಮಪಾದ ಹೃ-ತ್ಪದ್ಮದೊಳಗಿಟ್ಟ ಮುದ್ದು ಮಹಾ ಲಕುಮೀ 1 ವೃಷ್ಟಿ ಗರೆಯಾಲುಈ ಕೊಲ್ಲೂರೊಳು ನೀ ಕರುಣದಿ ನಿಂದೀ 2 ನಿನ್ನ ಪಾದಾಬ್ಜವನ್ನು ಅನುದಿನಸನ್ನುತಿಸುವೆ ಚೆನ್ನ ವಿಜಯ ರಾ-ಯನ್ನ ಮನೆ ಮುಂದೆ ಕುನ್ನಿಯನ್ನೇ ಮಾಡಿ ಎನ್ನ ಪುಟ್ಟಿಪುದು ||ಪನ್ನಗವೇಣಿ ಘನ್ನ ದುರಿತಾಬ್ಧಿಯನ್ನೆ ದಾಟಿಸಿನಿನ್ನ ಆಳ್ವ ಮೋಹನ ವಿಠ್ಠಲ ರಾಯನ್ನ ಎನಗೆ ತೋರೆ 3
--------------
ಮೋಹನದಾಸರು
ಕೈಲಾಸವಾಸ ಗೌರೀಶ ಈಶ ಪ ತೈಲ ಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋ ಅ ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿಭೂಷಣನೆ ಎನ್ನವಗುಣಗಳೆಣಿಸದಲೆ ವಿಹಿತ ಧರ್ಮದಿ ಕೊಡು ವಿಷ್ಣುಭಕುತಿಯ ಶಂಭೋ 1 ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಲ್ಲದೆ ದನುಜ ಗಜಮದ ಹರಿಯೆ ದಂಡ ಪ್ರಣಾಮವ ಮಾಳ್ಪೆ ಮಣಿಸು ಈ ಮನವ ಸಜ್ಜನರ ಚರಣದಿ ಶಂಭೋ2 ಭಾಗೀರಥೀಧರನೆ ಭಯವ ಪರಿಹರಿಸೈಯ ಲೇ ಸಾಗಿ ಒಲಿದು ಸಂತತ ಶರ್ವದೇವ ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ ಜಾಗುಮಾಡದೆ ಭಜಿಪ ಭಾಗ್ಯವನು ಕೊಡೋ ಶಂಭೋ3
--------------
ವಿಜಯದಾಸ
ನೀ ಎನ್ನ ಕಾಯಲಿ ಬೇಕೊ - ಘನ್ನ ಮಹಿಮಾ ಪ ಬನ್ನ ಬಡಿಸುವದು ಅನ್ಯಾಯ ನಿನಗಿದಾಪನ್ನಪಾಲ ಅ.ಪ ಘನ್ನ ಮಹಿಮೆಯತೋರಿ - ಎನ್ನ ಕಾಯಲಿ ಬೇಕು ನಿನ್ಹೊರತು ಗತಿ ಎನಗೆ - ಮುನ್ನಾರು ಗುರುವೆ 1 ಎನ್ನ ಮಾತನು ನೀನು - ಚನ್ನಾಗಿ ಚಿತ್ತೈಸಿ ಅನ್ಯಜನರಾಬಾಧೆ - ಮುನ್ನ ಕಳೆಯ ಬೇಕೊ 2 ಘನ್ನ ಶಿರಿ ಕೃಷ್ಣನು ತನ್ನ ಸಖನಿಗೆ ಮಹಾ ಉನ್ನ ತೈಶ್ವರ್ಯವಿತ್ತವ - ನನ್ನ ಕಾಯ್ದ ತೆರದಿ 3 ಇನ್ನು ಪೇಳುವುದೇನೊ ಗುರು - ರನ್ನ ಭವದಾಶ್ರಮವು ಇನ್ನು ತಿಳಿಯದೆ ನಿನಗೆ -ಘನ್ನ ಸರ್ವಙ್ಞರಾಯಾ 4 ಸನ್ನುತಜನಪ್ರೀಯ - ನಿನಗೆ ಮೊರೆಯಿಡುವೆ ಘನ್ನ ಗುರು ಜಗನ್ನಾಥ ವಿಠಲ ದೂತಾ ದಾತಾ 5
--------------
ಗುರುಜಗನ್ನಾಥದಾಸರು
ಬಾಗಿ ಬೇಡುವೆ ಪಿಡಿಯೊ ಬೇಗ ಕೈಯಾ ಭಾಗವತ ಜನಪ್ರೀಯ ಭಾಗಣ್ಣದಾಸಾರ್ಯ ಪ ದ್ವಿಜ ಕುಲಾಬ್ಧಿಗೆ ಪೂರ್ಣ | ದ್ವಿಜರಾಜನೆಂದೆನಿಪ ವಿಜಯವಿಠಲದಾಸರೊಲುಮೆ ಪಾತ್ರ || ನಿಜಮನದಿ ನಿತ್ಯದಲಿ | ಭುಜಗಶಯನನಪಾದ ಭಜಿಪ ಭಾಗ್ಯದಿನಲಿವ | ಸುಜನರೊಳಿಡು ಎಂದು 1 ನೀನೇವೆ ಗತಿಯೆಂದ | ದೀನರಿಗೆ ನಾನೆಂಬ ಹೀನಮತಿ ಕಳೆದು ಪವಮಾನ ಪಿತನ | ಧ್ಯಾನಗೈಯ್ಯುವ ದಿವ್ಯ ಜ್ಞಾನ ಮಾರ್ಗವ ತೋರಿ | ಸಾನುರಾಗದಿ ಪೊರೆವ | ದಾನಿ ದಯಾವಾರಿಧಿಯೆ 2 ಮಂದಜನ ಸಂದೋಹ | ಮಂದಾರ ತರುವಿಜಿತ || ಕಂದರ್ಪ ಕಾರುಣ್ಯಸಿಂಧು ಬಂಧೋ || ಕಂದನಂದರಿದೆನ್ನ | ಕುಂದು ಎಣಿಸದೆ ಹೃದಯ ಮಂದಿರದಿ ಶ್ರೀ ಶಾಮಸುಂದರನ ತೋರೆಂದು 3
--------------
ಶಾಮಸುಂದರ ವಿಠಲ
ಶರಣು ಶ್ರೀ ಗುರುರಾಯ | ಶರಣು ಬುಧ ಜನಪ್ರೀಯ | ಶರಣು ಪಾವನ | ಶರಣು ನಮ್ಮಯ್ಯ ಪ ಧರಣಿಯೊಳಗ ವಿದ್ಯ ದಾವರಣವಿಕ್ಷೇಪದಿ ಹರಿಯ ಭವ ಜನುಮ ಮರಣ ಬಲಿಗೆ ಸಿಲುಕಿ | ಹರಣ ಹಾಕುತಿದೆ ನೋಡೀ ಕರುಣದಿಂದ ಭಯ ನೀಡಿ | ತರಣೋಪಾಯ ದೋರಿ ದೀನೋದ್ಧರಣ ಮಾಡಿ ಹೊರೆದೇ 1 ನರದ ಹುಳುವ ತಂದು ಮಂದಿರದೊಳಿಟ್ಟು | ತನ್ನಂಗ ತೆರದಿ ಮಾಳ್ಪಾ ಭೃಂಗಿಯ ತೆರದೆ ನಂಬಿದವರಾ | ಕರೆದು ಬೋಧಾಮೃತದ ನುಡಿವೆರದು ಚಿನುಮಯಾನಂದ ಮರದ ಠಾವ ತಪ್ಪಿಸಿ ಎಚ್ಚರದೊಳು ನಿಲಿಸಿದೇ 2 ಮುಕುತಿ ಸಾಧನವಾದಾ ಭಕುತಿ ನವ ವಿಧ ಶಾಸ್ತ್ರ | ಯುಕುತಿ ಪ್ರಾಬಲ್ಯ ವಿರಕ್ತಿಯನಗಿಲ್ಲಾ | ಶಕುತ ಗುರು ಮಹಿಪತಿಯ ಭಕುತ ನೆನಿಸಿದಕಿನ್ನು ಅಕುತೋ ಭಯ ಹೊಂದುವಾ ಶಕುತಿ ನೀಡಯ್ಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ | ಸಲಹೆನ್ನ ಪರಮ ಗೇಹ್ಯಾ ಪ ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ | ಸಿಕ್ಕಿ ಬಹು ನೊಂದೆನೆಂದು | ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ | ಮಕ್ಕಳಂದದಲಿ ಚೆನ್ನಾಗೆನ್ನಾ 1 ಪಿಂತಿನಾ ಭವಣೆಗಳು | ಎಂತಾದರಾಗಲೀ | ಶಾಂತ ಮೂರುತಿಯೇ ಎನ್ನಾ | ಅಂತರಂಗದಲಿನ್ನು ನಿಂತು ನಿನ್ನಯ ರೂಪ | ಸಂತತವಾಗಿ ದೋರೋ ಬೀರೋ 2 ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ | ನಿನ್ನ ಪದಯುಗಳ ದೋರಿ | ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ | ಇನ್ನಾರೆ ದಯಮಾಡೋ ನೋಡೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು