ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇನು ಬಲ್ಲವನು ನಾನಲ್ಲ ಹರಿಯೆ ನಿನ್ನ ಧ್ಯಾನಧಿಕೆಂಬುದೊಂದೆ ನಾ ಬಲ್ಲೆ ಪ ನಿನ್ನ ಧ್ಯಾನವೆ ಮರೆವ ತರಿದ್ಹಾಕುವುದೆಂಬೆ ನಿನ್ನ ಧ್ಯಾನವೆ ಅರಿವ ಸ್ಥಿರ ಮಾಳ್ಪುದೆಂಬೆ ಶರಧಿ ಹೀರುವುದೆಂಬೆ ಸಿರಿ ನೀಡ್ವುದೆಂಬೆ 1 ನಿನ್ನ ಧ್ಯಾನವೆ ದು:ಖದೂರ ಮಾಡುವುದೆಂಬೆ ನಿನ್ನ ಧ್ಯಾನವೆ ಸುಖದ ವಾರಿಧಿಯೆಂಬೆ ನಿನ್ನ ಧ್ಯಾನವೆ ಮುಖ್ಯ ಚಾರುವೇದಗಳೆಂಬೆ ನಿನ್ನ ಧ್ಯಾನವೆ ಜ್ಞಾನಮೂಲಸಾರೆಂಬೆ 2 ನಿನ್ನ ಧ್ಯಾನವೆ ತತ್ವರೂಪವಾಗಿಹ್ಯದೆಂಬೆ ನಿನ್ನ ಧ್ಯಾನವೆ ಮುಕ್ತಿಮೂಲಾಧಾರೆಂಬೆ ನಿನ್ನ ಧ್ಯಾನವೆ ಭಕ್ತ ಜನಪ್ರಾಣಪದಕೆಂಬೆ ಎನ್ನಯ್ಯ ಶ್ರೀರಾಮ ನಿನ್ನಿಂದೆ ನಾನೆಂಬೆ 3
--------------
ರಾಮದಾಸರು
ಮಾಧವ ಮಧುಸೂದನ ಗೋವರ್ಧನ ಪ ದೋಷನಿವಾರಣ ಶೇಷಾರಿಗಮನ ವಾಸುಕಿಗಿರಿಶಯನ 1 ಕೀಟಕ ಸಂಹರ ಹಾಟಕಾಂಬರ ತಾಟಕಿಪ್ರಾಣಹರಣ 2 ಕೌಸ್ತುಭಮಾಲಾ ಕುಜನರ ಕಾಲ ಕಂಸಾಸುರಾದಿ ಮರ್ದನ 3 ಗೋಕುಲವಾಳಿದ ಗೋಪಿಯರ್ವರದ ಗೊಪ ಗೋಪತಿ ನಂದನ 4 ಮಂದರ ನಿಲಯ ಸಿಂಧುಜಾಪ್ರಿಯ ಬಂಧುವೆ ಅನಾಥಜನ 5 ಜಗದೋದ್ಧಾರಣ ಜಗತ್ರಯಮೋಹನ ಜಗಜೀವನ ಪಾವನ 6 ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ ಶಂಖಸುರಾದಿ ಮರ್ದನ 7 ಯದುಕುಲಸಂಭವ ಸದಯ ಯಾದವ ಸದಮಲಸುಖಸದನ 8 ಹರಿಗೋವಿಂದ ಪರಮಾನಂದ ನರಹರಿ ಸಿರಿರಮಣ 9 ಸಿರಿನರಸಿಂಗ ಪರಿಭವಭಂಗ ಪರತರ ಗಿರಿಧಾರಣ 10 ನಿತ್ಯನಿರಾಮಯ ನಿರ್ಗುಣ ನಿರ್ಭಯ ನಿರಂಜನ 11 ಪರಮಪುರುಷ ಹರಿ ಸರ್ವೇಶ ಸುರಮುನಿನುತಚರಣ 12 ನಿಮಗೋಚರ ಜಗದಾಧಾರ ಅಘನಾಶ ಭಜಕಜನ 13 ವೇದಾದಿನಮಿತ ವೇದವೇದಾತೀತ ಸಾಧುಸಜ್ಜನಪ್ರಾಣ 14 ವರದಶ್ರೀರಾಮ ನಿರತರ ಪ್ರೇಮ ಪರಿತರ ಪರಿಪೂರ್ಣ15
--------------
ರಾಮದಾಸರು
ಶ್ರೀರಾಮಾ ರಘುಕುಲಸೋಮ ಕಾಮಿತ ಶುಭಫಲದಾಯಕ ಪ. ರಮಾರಮಣನೆ ಭೀಮ ಪರಾಕ್ರಮ ಸುಂದರ ಅ.ಪ. ದಾನವಾಂತಕ ಶ್ರೀ ಜಾನಕೀ ನಾಯಕರಾಮ ದೀನಾನಾಥ ಪರಿತ್ರಾಣ ಪ್ರಪನ್ನ ಜನಪ್ರಾಣ 1 ವಾಸವಾನುಜ ಜಗದೀಶ ಪರೇಶ ಪರಾತ್ಪರ ದಾಸಜನಾಶ್ರಯ ಶ್ರೀಶ ಸರ್ವೇಶ ದಯಾಸಾಗರ 2 ಮಂಗಳಾತ್ಮಕ ಭವಭಂಗ ಶ್ರೀರಂಗನಾಯಕಿ ರಮಣ ಅಂಗಜಜನಕ ಪಾಂಡುರಂಗ ಕರುಣಾಂತರಂಗ 3 ನಾಗೇಶಪಾಲಕ ನಾಗೇಶವರತಲ್ಪನೆ ಶ್ರೀ ನಾಗಾರಿವಾಹನ ವರನಾಗಾದ್ರಿನಿಕೇತನ ರಾಮಾ 4
--------------
ನಂಜನಗೂಡು ತಿರುಮಲಾಂಬಾ
ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು
ಶ್ರೀಕರ ಚರಿತ್ರ ಅಂಜನೆಯ ಪುತ್ರಸಕಲ ಲೋಕೇಶ ಸಲಹಯ್ಯ ಬಾಲ ಹನುಮಯ್ಯ ಪ.ಸಿದ್ಧ ಮುನಿಸೇವ್ಯ ಸೀತಾಶೋಧಕಾಭಯಶುದ್ಧ ವಿಜ್ಞಾನನಿಧೆಅಪ್ರಮೇಯಉದ್ಧಟ ದಶಾಸ್ಯಮದಹರಣ ಬುಧಜನಪ್ರಾಣಖದ್ಯೋತಕೋಟಿ ತೇಜಾತ್ಮಾಂತರಾತ್ಮ ಶ್ರೀ1ಲಂಕಾ ಭಯಕಾರ ರಘುರಾಮಂಘ್ರ್ರಿ ಕಂಜಭ್ರಮರಶಂಕರಹಿತ ನಿಶಾಚರ ಭೀಕರಪಂಕಜಪ್ರಿಯ ಬಾಲಯತಿ ಕಾರ್ಯಪಾರಶೀಲಸಂಖ್ಯಾವಿರಹಿತವೀರ್ಯ ಸುರವರಾರ್ಯ 2ಶತಕೋಟಿ ರಾಮಾಯಣಗಾನ ಪ್ರವೀಣಸೀತಾಸುಖಪದಗ ಸೋಮಕುಲಲಲಾಮಯತಿರೂಪ ತತ್ವಪ್ರದೀಪ ಪೂರ್ಣ ಪ್ರತಾಪಸತತ ಪ್ರಸನ್ನವೆಂಕಟ ಸ್ಮರಣಕರ 3
--------------
ಪ್ರಸನ್ನವೆಂಕಟದಾಸರು