ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಮುನಿದು ಇಳೆಯೊಳಗೇ| ಸುರಮುನಿ ಜನಪಾಲನ ಮನದಲಿ ಬಂದದಿ ನೆರೆಯದೇ ಸಾರುವದೀಗ ಪ ನಿನ್ನಯ ಒಪ್ಪುವ ಮಾರ್ಗವ ನೋಡುತ| ಮುಚ್ಚನು ಕುಡಿಗಂಗಳ ಯವಿಯಾ| ಪನ್ನಗವೇಣೀ ನಿನ್ನವಿಯೋಗ ದುಗುಡದೀ| ಕುಳಿತನುಡಗಿ ಅವಯವ ಸೋಹ್ಯಾ 1 ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ ಹಿಂದಕ ಕಾಲೆಳೆದಾ| ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ ಜ್ವಾಲಾಂಗನು ಆದಾ 2 ಕಪಟದಿ ಬಂದು ನೋಡುವೆ ನಿನ್ನೆನುತಲಿ ಯಾಚಕ ರೂಪತಾಳಿದನು| ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ ತೊರೆಂದೆ ಚಂದನು ಶರಧಿಯನು3 ದಿನದೊಳಗರಗಳಗಿ ಗಮಿಸದು ಯನುತಲಿ ವನದೋಳು ಪೋಗಿ ಹೊತ್ತುಗಳೆವಾ|ಮನಿ ಮನಿ ಪೊಕ್ಕು ಗೋಕುಲದಲಿ ನಿನ್ನನು ಅರಸುತಿಹನು ಪಾವನ ದೇವಾ4 ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ ಕೋಪದಿ ಕಂಡ ವೃತವಳದಾ| ಅತಿತವನೋಡದೇ ತಾನಾಗಿ ಬಂದನು ಹಯವೇ ನೋಡೆ ಜೀವನ ಜಗದಾ 5 ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ ಹಾಸ್ಯದ ಮುಖವನು| ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು ಮಹಿಪತಿ ಸುತ ಪ್ರಭುವಿನ ದಯದೀ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪರಮಪುರುಷಪರೇಶಪಾವನಪರಮಮುನಿಜನಪಾಲನ ಶರಧಿಶಯನ ವಿಹಂಗವಾಹನ ಶಾರದಾಂಬುಜಲೋಚನ 1 ವಾಸುದೇವ ವಿರಂಚಿವಂದಿತ ವಾಸವಾದಿ ಸುರಾರ್ಚಿತ ವಾಸುಕಿಪ್ರಿಯ ಭೂಷಭಾವಿತ ವಾಸರೇಶಕುಲೋದಿತ 2 ಶರಣಜನರಘಹರಣ ಸೌಖ್ಯವಿತರಣ ಶುಭಸಾಗರ ವರದ ಪುಲಿಗಿರಿವಾಸ ವೆಂಕಟವಿಠಲ ದಯಾಕರ 3
--------------
ವೆಂಕಟವರದಾರ್ಯರು
ಬಂದ ದುರಿತವಾ ಚನ್ನಕೇಶವಾ ನಂದನಂದನಾ ದೂರಮಾಡೆಲೋ ಪ ಆದಿದೇವನೇ ಮರೆಯ ಹೊಕ್ಕೆನೋ ಸಾದುವರ್ಯರ ಮನ್ನಿಸೋ ಹರೇ1 ಭವದಿ ನೊಂದೆನೋ ಬಂಧ ಬಿಡಿಸಲೋ ಅವನಿಪಾಲನೆ ಸಾನುರಾಗದೀ 2 ಸುಜನಪಾಲನೇ ಕುಜನ ಕಾಲನೇ ಭಜನೆ ಮಾಳ್ಪಿನೊ ರಕ್ಷಿಸೋ ಹರೇ 3
--------------
ಕರ್ಕಿ ಕೇಶವದಾಸ
ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ - ಇಂದು ಎನ್ನ ಮಾತ ಲಾಲಿಸೊ ತಂದೆ ಕುಂದು ಎಣಿಸದೆನ್ನ ಪಾಲಿಸೊ 1 ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ- ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ 2 ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ 3 ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ 4 ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ ಕಟ್ಟೆವಾಸ ವೆಂಕಟೇಶನೆ ಸಕಲ ಭಾರ ಸುಜನಪಾಲನೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಪಾಲಿಸು ಪರಮೇಶಾ ಪಾಪವಿನಾಶಾಪಾಲಿಸು ಪಾರ್ವತೀಶಾಫಾಲಲೋಚನಫಣಿಭೂಷಣ ನತಜನಪಾಲನೆ ಪಾಪವಿಹಾರಣ ಕಾರಣ ಪನಿತ್ಯನಿರ್ಮಲ ಚಿತ್ತನೀಕ್ಷಿಸೋ ಎನ್ನನಿತ್ಯತೃಪ್ತನೆ ಖ್ಯಾತ ನಿತ್ಯನಂದನೆನೀಲಕಂಧರಶಶಿಧರನಿರ್ಮಲರಜತಾದ್ರಿ ನಿಲಯನೆ ವಿಲಯನೆ 1ಅಂಬಾ ವರದೇವ ಜಯ ಜಯವಿಶ್ವಕು-ಟುಂಬಿಲ ಸದ್ಭಾವಲಂಬೋದರ ಗುಹಜನಕ ಸದಾಶಿವನಂಬಿದೆ ಸಲಹೊ ಪ್ರಸೀತ ಸತ್ಪಾತ್ರ 2ಆಗಮಶ್ರುತಿಸಾರ ಭಕ್ತರಭವರೋಗಶೋಕವಿದೂರಯೋಗಿಗಳ ಹೃದಯ ಸಂಚಾರನೆ ಭವಬಂಧನೀಗಿಸು ಗೋವಿಂದ ದಾಸನ ಪೋಷನೆ 3
--------------
ಗೋವಿಂದದಾಸ