ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷ ಅತಿ ಶೋಭಿಸುತಿದೆ ಶ್ರೀಪತಿವಾಹನ ಪ ಚತುರದಶ ಲೋಕದಲಿ ಅಪ್ರತಿವಾಹನ ಅ.ಪ. ವಿನುತಕಶ್ಯಪ ಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಅತ್ಯಾಢ್ಯ ವಾಹನ ವನಧಿ ಮಧ್ಯಧಿ ನಾವಿಕರ ಭಕ್ಷಿಸಿದ ವಾಹನ ಜನಪನಾಜ್ಞದಿ ಕೂರ್ಮಾಗಜರ ನುಂಗಿದ ವಾಹನ1 ಕುಲಿಶಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ವಾಹನ 2 ಕಾಲನಾಮಕನಾಗಿ ಕಮಲಭವನಲಿ ಜನಿಸಿ ಕಾಲಾತ್ಮಹರಿಯ ಸೇವಿಪ ವಾಹನ ಕಾಳಗದಿ ಕಪಿವರರ ಕಟ್ಟುಬಿಡಿಸಿದ ವಾಹನ ವಾಲಖಿಲ್ಲರ ಪಿಡಿದ ವರವಾಹನ 3 ವಾಹನ ನಿಜ ರೂಪದಿ ಹರಿಸೇವೆಗೈವ ವಾಹನ ಆ ಪಿತೃಗಳಿಗಮೃತ ಪ್ರಾಪ್ತಿಸಿದ ವಾಹನ ವಾಹನ 4 ಪನ್ನಗಾಶನವಾಹನ ಪತಿತ ಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥ ವಿಠ್ಠಲಗೆ ಉನ್ನತ ಪ್ರಿಯವಾದ ಶ್ರೀ ಗುರುಡವಾಹನ 5
--------------
ಜಗನ್ನಾಥದಾಸರು