ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಬಿನ್ನಪ ಕೇಳೊ ಘನ್ನ ಮಹಿಮನೆ ಭವ ಬನ್ನ ಬಡಿಸುತಲಿಹುದೋ ಸ್ವಾಮಿ ಪ ಇನ್ನು ನೀ ಪೊರೆಯೊ ಅಪನ್ನಜನರಾಪಾಲ ಮನ್ನಿಸಿ ಕಾಯೊ ಸ್ವಾಮೀ ಪ್ರೇಮೀ ಅ.ಪ ಆಗಾಮಿಸಂಚಿತಭೋಗಂಗಳು ಎನ್ನ ಯೋಗ ಮಾರ್ಗಕೆ ಪೋಗದಂತೆ ಹೇಗೆ ಮಾಡಿ ಙÁ್ಞನನೀಗೆ ನಿನ್ನಲಿ ಮನಸು ಯೋಗವನು ಮಾಡಗೊಡದೇ ಜಾಗುಮಾಡುತ ಪರಮಭಾಗವತರಲಿಸದಾ ಆಗಮಗಳ ತಿಳಿಯದೇ ಹೀಗಾಗಿ ನಾನು ಅಯೋಗ್ಯನೆನಿಸೀ ಜಗದಿ ಕಾಗಿಯಾಗಿ ತಿರುಗಿದೇ ಸ್ವಾಮಿ 1 ಹೆತ್ತ ಈ ಮೊದಲು ಮತ್ತಾರು ಜನರಿಲ್ಲ ಹೊತ್ತಿಗೇ ಕರೆದನ್ನವೀವರಿಲ್ಲಾ ಗೊತ್ತು ಸ್ಥಳಗಳು ಇಲ್ಲ ವೃತ್ತಿ ಸ್ವಾಸ್ಥ್ಯಗಳಿಲ್ಲ ಚಿÉತ್ತ ಶುದ್ಧಿಯು ಮೊದಲೆ ಇಲ್ಲಾ ಎತ್ತ ಪೋದರೆನ್ನ ಇತ್ತ ಬಾಯೆಂತೆಂದು ಹತ್ತಿರ ಕರೆವೊರಿಲ್ಲ ಎತ್ತ ಪೋದರೆನ್ನ ಮತ್ತೆ ಪಾಲಿಪರ್ಯಾರೊ ಉತ್ತಮನೆ ನೀನೆ ಕಾಯೋ ಸ್ವಾಮೀ 2 ಗರ್ಭವಾಸದಕಿಂತ ದುರ್ಭರಾಭವತಾಪ ನಿರ್ಭರಾವಾಗಿಹುದೋ ಅರ್ಭಕಾಮತಿಯಿಂದ ಅಭರ್Àಟಾ ಕಾರ್ಯವನು ನಿರ್ಭಯದಿ ಮಾಡಿದೆನೊ ಗರ್ಭ ನಾ ದೂತ ನೀ ನಿರ್ಭಯವ ಕೊಡದಿರಲು ಲಭ್ಯವೇ ಸರ್ವಕಾರ್ಯಾ ಲಭ್ಯ ಶ್ರೀಪತಿ ನೀನು ಲಭ್ಯನಾಗದಿರೆ ವೈ ದÀರ್ಭಿರಮಣಾ ಕಷ್ಟವೋ ಸ್ವಾಮಿ 3 ಉಡುವ ವಸ್ತ್ರಗಳಿಲ್ಲ ಒಡಲಿಗಶನವು ಇಲ್ಲ ಕೊಡುವ ಧನ ಮೊದಲೆ ಇಲ್ಲ ಪೊಡವಿಯೊಳು ನಾನತೀ ಬಡವನಲ್ಲದೆ ಮಹಾ ಕಡು ಪಾಪಿಯಾದೆನಲ್ಲೋ ತುಡುಗುತನದಲಿ ಪರರ ಮಡದಿಯರ ನಾ ಬಲು ದೃಢಮನಸಿನಿಂದ ಬಯಸಿ ಧೃಢ ಭಕುತಿಯಿಂದ ಅಡಿಗೆರಗದಲೆ ನಾನು ಪೊಡವಿಭಾರಾದೆನಲ್ಲೋ ಸ್ವಾಮೀ 4 ಓದಿ ಬರೆಯಾಲಿಲ್ಲ ವೇದ ಪಠಿಸಾಲಿಲ್ಲ ಮೋದತೀರ್ಥರ ಶಾಸ್ತ್ರ ತಿಳಿಯಲಿಲ್ಲಾ ವಾದಶಾಸ್ತ್ರಗಳಿಲ್ಲ ಭೇದಪಂಚಕವಿಲ್ಲ ಸಾಧನದ ಮಾರ್ಗವಿಲ್ಲ ಖೇದಗೊಳಿಸುವ ಭವದ ಹಾದಿ ತಿಳಿಯದೆ ನಾನು ಮೋದಕÀರವೆಂದು ಅಲ್ಲೀ ಸಾದರದಿ ಬಿದ್ದು ಆಮೋದಬಡುತಲಿ ದ್ವಿ ಪಾದಪಶು ನಾನಾದೆನಲ್ಲೋ ಸ್ವಾಮೀ 5 ಸತಿಸುತ ಮೊದಲಾದ ಅತಿಹಿತ ಜನರೆನ್ನ ಸತತ ಸಂತ್ಯಜಿಸಿಹರೋ ವಿತತವಾಗಿಹ ಮಹಾಪತಿತದಾರಿದ್ರ್ಯನ್ನ ಅತಿಬಾಧೆ ಬಡಿಸುತಿಹದೋ ಇತರ ಜನರೂ ಎನ್ನ ಅತಿದÀೂರದಲಿ ನೋಡಿ ಅತಿಹಾಸ್ಯ ಮಾಡುತಿಹರೋ ವ್ರತತಿಜಾಂಬಕÀ ನಿನ್ನ ನತಿಸಿ ಬೇಡಿಕೊಂಬೆ ಸತತ ನೀ ಪಾಲಿಸೆಂದೂ ಸ್ವಾಮೀ 6 ತಂದೆ ತಾಯಿಯೂ ನೀನೆ ಬಂಧು ಬಳಗವು ನೀನೆ ಇಂದು ಸಿಂಧು ಒಳಗೆ ಬಿದ್ದೆ ಮುಂದಕ್ಕೆ ಕರೆದು ಕಾಯೋ ಸುಂದರಾಂಗನೆ ಕೃಪಾಸಿಂಧು ನೀ ಬಿಡೆ ಎನ್ನ ನೊಂದದಲೆ ಸಲಹೊರ್ಯಾರೋ ಸ್ವಾಮಿ 7 ಹೊಟ್ಟೆಗಿಲ್ಲದೆ ನಾನು ಬಟ್ಟೆ ಹಾಸೀ ನರರಿ ಗ್ವಟ್ಟರಿಸಿ ಒದರುತಿಹೆನೋ ಪುಟ್ಟದಿರಲೂ ಅನ್ನ ಸಿಟ್ಟಿನಿಂದಾ ನಾಯಿ ಬೆಟ್ಟಕ್ಕೆ ಒದರಿ ತಾನೂ ಹೊಟ್ಟೆಯುಬ್ಬೀ ಕೊನೆಗೆ ಹೊರಳಿ ಹೊರಳಿ ತಾನು ಸುಟ್ಟ ಬೂದಿಲಿ ಬೀಳ್ವ ತೆರದೀ ಒಟ್ಟು ಮಾತಿದು ಕೃಪಾವಿಟ್ಟು ನೀ ಎನ್ನನು ಥsÀಟ್ಟನೇ ಕರಪಿಡಿದು ಕಾಯೋ ಸ್ವಾಮೀ 8 ನಿನ್ನ ದಾಸನು ಆಗಿ ಅನ್ಯರನ ಬೇಡಿದರೆ ಘನ್ನತೆಯು ನಿನಗುಂಟೇ ಘನ್ನ ಜನಪನ ತನುಜ ಇನ್ನು ದೈನ್ಯದಿ ತಾನೆ ಅನ್ಯರನು ಬೇಡುವುದು ಉಂಟೇ ಚೆನ್ನ ಸುಮನಸ ಧೇನು ಮುನ್ನ ಮನೆಯೊಳಿರೆ ಗೋ ವನ್ನು ಬಯಸುವರುಂಟೇ ಇನ್ನು ಪೇಳುವದೇನು ಎನ್ನಭವಣೇ ತಿಳಿದು ಇನ್ನು ಕಾಯಲಿ ಬೇಕೋ ಸ್ವಾಮೀ ಶುದ್ಧಮಾರ್ಗವ ಬಿಟ್ಟು ಬದ್ಧ ಭವಸಾಗರವೆ ಉದ್ಧಾರ ಮಾಳ್ಪದೆಂದೂ ಶಿದ್ಧಜನರಾ ಸೇವೆಗೆ ಬದ್ಧನಾಗದೆ ದುರಾ ರಾಧ್ಯ ಜನರನ್ನು ಭಜಿಸೀ ಉದ್ಧರಿಸುವೊ ಶ್ರೀ ಮಧ್ವಸಿದ್ಧಾಂತದ ಸೂ ಪದ್ಧತಿಯನ್ನೆ ಬಿಟ್ಟೂ ಸಿದ್ಧಮೂರುತಿ ಎನ್ನ ¥ದ್ಧಗಳ ಎಣಿಸದಲೆ ಉದ್ಧಾರಮಾಡೊ ಸ್ವಾಮೀ ಪ್ರೇಮೀ 10 ದಾತ ನೀನೇ ಎನ್ನ ಮಾತುಲಾಲಿಸಿ ಭವದ ರತಿಯನ್ನೇ ಬಿಡಿಸಿ ಕಾಯೋ ಪೊತನಲ್ಲವೆ ನಿನಗೆ ಆತುರದಿ ನಾನೀ ರೀತಿಯಿಂದಲಿ ಪೇಳಿದೆ ಯಾತರಾ ಮಾತೆಂದು ನೀ ಪ್ರೀತಮನಕೇ ತರದೆ ತಾತನೂಕೀ ಬಿಟ್ಟರೆನ್ನಾ ಸೋತುಬಂದಾ ನಿನಗೆ ಆತುರಾವ್ಯಾಕೆಂದು ನೀತವಾಗೀ ಕಾಯ್ವರಾರೋ ಸ್ವಾಮೀ 11 ಮಾತೆ ಮಕ್ಕಳಿಗೆ ವಿಷದಾತೆಯಾಗೇ ತಂದೆ ಪೋತರ ಮಾರಿದಾರೆ ದಾತನಾದಾ ರಾಜ ಆತುರಾದಿಂದಲಿ ನಿಜ ದೂತರರ್ಥಪಹಾರಮಾಡೆ ನೀತಸತಿಯು ತನ್ನ ನಾಥನಾಯು ತಾನೆ ಘಾತವನೆ ಮಾಡಿದಾರೆ ನೀತವೇ ನಿನಗಿದಕೆ ಯಾತರಾ ಚಿಂತೆ ಈ ಮಾತಿನಂತೆ ನಿನಗೆ ಪ್ರೀತೇ ಸ್ವಾಮೀ ಎಷ್ಟು ಪೇಳಲಿ ಎನ್ನ ಕಷ್ಟರಾಶಿಗಳೆಲ್ಲ ಶ್ರೇಷ್ಟವಾಗಿರುತಿಹವೊ ಸ್ವಾಮೀ ದುಷ್ಟನಾದರು vನ್ನ ಭ್ರಷ್ಟಮಗನನು ತಾಯಿ ಅಟ್ಟೀಸೂವಳೆ ಅಡವಿಗೆ ಎಷ್ಟು ಕೆಟ್ಟವ ನಾನಾರಿಷ್ಟನಾದರು ಕೃಪಾ ದೃಷ್ಟಿಯಿಂದಲಿ ನೋಳ್ಪಳೋ ನಷ್ಟದೈವ ನಾನರಿಷ್ಟ ಅಙÁ್ಞನಿ ಕರುಣಾ 13 ದೃಷ್ಟಿ ಯಿಂದಲಿ ನೋಡಿ ಸಲಹೋ ಸ್ವಾಮೀ ಕುಟಿಲ ಖಳಮತಿಯು ನಟಿನೆಮಾಡುತ ಭವಲಂ ಪಟದೊಳಗೆ ಬಿದ್ದಿಹೆನೂ ಸ್ವಾಮೀ ಶಠÀತರನು ನಾನತಿಕಠಿಣಮನಸೀನಿಂದ ಧಿಟಜ್ನಾನಿದ್ರೋಹಗೈದೆ ದಿಟರಿಲ್ಲ ಎನಗೆಂದು ನಟಿಸುತ್ತ ಸರ್ವದ ಅಟನೆಮಾಡಿದೆ ಸರ್ವರಲ್ಲಿ ಪಟುತರನು ನಾನೆಂದು ಧಿಟಗುರುಜಗನ್ನಾಥ ವಿಠಲ ದೇವಾ ನಿನ್ನ ಮರೆದೆ ಸ್ವಾಮೀ 14
--------------
ಗುರುಜಗನ್ನಾಥದಾಸರು
ಧುರಧೀರನಿವನೆಂದು ನೆರೆವೆರೆಯಲೈತಂದು ಮರುಳಾದೆ ನಾನಿಂದು ಮುಂದೆ ನಿಂದು ನಾರ್ವಟ್ಟೆಯುಟ್ಟಿರುವ ಅರಣ್ಯದೊಳಗಲೆವ ನಾರುಬೇರನೆ ಮೆಲುವ ಅರರೆ ಚಲುವ ಜನಪನಂದನನೆನಿಸಿ ಮುನಿಜನರ ತಾವೆರಸಿ ವನವನದಿ ಸಂಚರಿಸುತಿರುವ ಸಹಿಸಿ ಲಲನೆಯನು ಕರೆತರಲು ಪಲವು ಕಪಿಗಳನೆರೆದು ಜಲಧಿಯನು ಬಂಧಿಸಿದನಲಘುಬಲನೆ ಇನಿತು ಸಾಹಸವುಳ್ಳ ಸುಗುಣನಿಧಿಗೆ ಮನವೊಲಿದು ನಾ ಬಂದು ಮೋಸಪೋಗೆ ಮಿಣುಕಿ ಫಲವೇನಿನ್ನು ಮಿಂಚಿದುದಕೆ ಧಣಿಯೆನಗೆ ಶೇಷಾದ್ರಿವರನೆ ಸಾಕೆ
--------------
ನಂಜನಗೂಡು ತಿರುಮಲಾಂಬಾ
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ಶೇಷ ಅತಿ ಶೋಭಿಸುತಿದೆ ಶ್ರೀಪತಿವಾಹನ ಪ ಚತುರದಶ ಲೋಕದಲಿ ಅಪ್ರತಿವಾಹನ ಅ.ಪ. ವಿನುತಕಶ್ಯಪ ಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಅತ್ಯಾಢ್ಯ ವಾಹನ ವನಧಿ ಮಧ್ಯಧಿ ನಾವಿಕರ ಭಕ್ಷಿಸಿದ ವಾಹನ ಜನಪನಾಜ್ಞದಿ ಕೂರ್ಮಾಗಜರ ನುಂಗಿದ ವಾಹನ1 ಕುಲಿಶಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ವಾಹನ 2 ಕಾಲನಾಮಕನಾಗಿ ಕಮಲಭವನಲಿ ಜನಿಸಿ ಕಾಲಾತ್ಮಹರಿಯ ಸೇವಿಪ ವಾಹನ ಕಾಳಗದಿ ಕಪಿವರರ ಕಟ್ಟುಬಿಡಿಸಿದ ವಾಹನ ವಾಲಖಿಲ್ಲರ ಪಿಡಿದ ವರವಾಹನ 3 ವಾಹನ ನಿಜ ರೂಪದಿ ಹರಿಸೇವೆಗೈವ ವಾಹನ ಆ ಪಿತೃಗಳಿಗಮೃತ ಪ್ರಾಪ್ತಿಸಿದ ವಾಹನ ವಾಹನ 4 ಪನ್ನಗಾಶನವಾಹನ ಪತಿತ ಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥ ವಿಠ್ಠಲಗೆ ಉನ್ನತ ಪ್ರಿಯವಾದ ಶ್ರೀ ಗುರುಡವಾಹನ 5
--------------
ಜಗನ್ನಾಥದಾಸರು