ಒಟ್ಟು 28 ಕಡೆಗಳಲ್ಲಿ , 18 ದಾಸರು , 27 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಭಾಗ್ಯಾದ ಲಕ್ಷ್ಮಿ ಹೋಗಮ್ಮ ದೊಡ್ಡಮ್ಮ ನೀ ಪ ಪೀಡೆಕಾಲುಗಳ ಮುಚ್ಚುತ ನೀವೋ ಡÉೂೀಡಿ ಪೋಗುತಲಿ ನಿಲ್ಲದೆ ವ್ಯಾಜ್ಯಗ- ಳಾಡುವ ಸ್ಥಳದಲಿ ನೆಲೆಯಾಗುತ ಹಾಳ ಗೋಡೆಯೊಳಿರುತಿಹ ಕತ್ತೆಯಂತೆ 1 ದೀಪದ ನೆರಳಲಿ ಕೋಪಿಯಮನದಲಿ ಲೋಪವಾದಕರ್ಮದಿ ಸಂತತವು ನಾಪರನೆಂಬುವ ಮಾಢನಲ್ಲಿ ನಿ- ವ್ರ್ಯಾಪಾರಿಯ ಚಿತ್ತದಿ ಯಾವಾಗಲು 2 ಪಾದ ಗದರಿಸುತಾಡುವ ಬಿರುನುಡಿಯಲಿ ನಿಂ- ದ್ಯದ ಮಾತಾಡುವವರÀ ಬಾಯಲಿನೀ ಮುದದೊಳಿದ್ದು ಅಜ್ಞಾನವ ಪಾಲಿಸೆ 3 ಪ್ರತಿದಿನದಲಿ ಅಳುತಿಹ ಸಂಸಾರದಿ ನೀ ಪತಿಯೊಡನವರೊಳಿರುತ ಮೂರ್ಖರಲಿಯ- ನೃತವಾಡಿಸಿ ನರಕವ ಪೊಂದಿಸಲು 4 ಮರವೆ ಸುಷುಪ್ತಿಯು ಬಹುವಿಧ ಮೋಹವು ನೆರೆನಂಬಿದವರಿಗೀವುತ ನೀಹಗ- ಲಿರುಳು ಕಲಿಯೊಡನೆ ಯೆಡೆಬಿಡದಲ್ಲಿಗೆ 5 ಹಾಳುಮಾಡಿಕೊಂಬುವ ಜನಗಳು ನಿ- ವೂಳಿಗವನು ಕೈಕೊಳ್ಳುತ ಬಿಡದೆ 6 ಗುರುರಾಮ ವಿಠಲನ ಶರಣ ಜನರ ಕ- ಣ್ದೆರದು ನೋಡದಿರು ಬೇಡುವೆ ನಿನ್ನನು ನಿರುತವು ನಿರ್ದಯ ಮಾಡುತ ದುರುಳರ ಪರಮ ಕೃಪಾದೃಷ್ಟಿಯಲಿ ನೋಡಲು 7
ಆವನ ಭಯ ತನಭಾವದಿ ಗುರುಪದ ಸೇವಕನಾದÀವಗೆ ಪ ಕೋವಿದ ಕುಲ ಸಂಭಾವಿತ ಗುರುವರ ಕಾವನೆನುತ ಮನೋಭಾವದಲಿರುವವಗೆ ಧಾರುಣಿಪತಿ ತನ್ನ ಸೇರದೆ ಪರಿಪರಿ ಗಾರುಮಾಡಿದರೇನೂ ಕ್ರೂರತನದಲಧಿಕಾರಿ ಜನಂಗಳು ದೂರ ನೋಡಲೇನು ನಾರಿ ತನುಜ ಪರಿವಾರದ ಜನರೂ ಮೋರೆಗಾಣದಿರಲೇನೂ ಘೋರ ಭಯ ಪರಿಹಾರಕ ನಮ್ಮ ಧೀರ ಗುರುಪದ ಸೇರಿದ ನರನಿಗೆ 1 ಕಾಮಿತ ಫಲಪ್ರದ ಈ ಮಹಮಹಿಮನ ನೇಮದಿ ಭಜಿಸುವಗೆ ಆಮುಷ್ಮಿಕ ಸುಖ ಪ್ರೇಮದಿ ನೀಡುವ ಕಾಮಧೇನು ನಂಬಿದಗೆ ಧೀಮಂತರ ಮಹÀಸ್ತೋಮದಿ ನಮಿತನ ನಾಮವ ಜಪಿಸುವಗೆ ಈ ಮಹ ಸಾರ್ವಭೌಮನ ಪದಯುಗ ತಾಮರಸವೆ ಹೃದ್ಯೋಮದಿ ನೆನೆವಗೆ 2 ಭೂತಲ ಮಧ್ಯದಿ ಖ್ಯಾತಿಯ ಪಡೆದ್ಯತಿ ನಾಥನ ಸ್ಮರಿಸುವಗೆ ಭೂತ ಪ್ರೇತಭಯ ಘಾತಿಸಿ ನಿಜಸುಖ ದಾತನ ಮೊರೆಪೊಕ್ಕವಗೆ ಕಾತರ ಪಡುವ ಅನಾಥsÀರ ಪೊರೆವನ ದೂತನಾದ ನರಗೆ ದಾತ ಗುರುಜಗನ್ನಾಥ ವಿಠಲನ ಪ್ರೀತಿಯಪಡೆದ್ಯತಿನಾಥನ ಭಜಿಪಗೆ 3
ಏನೆಂದುಸುರುವೆ ಈ ನವರಾತ್ರಿಯಾ | ಸ್ವಾನಂದ ಸುಖಮಯ ಮಹಿಪತಿ ಚರ್ಯಾ ಪ ಮೊತ್ತ ಜನರು ಕೂಡಿ ಭಿತ್ತಿ ಬಾಗಿಲುಗಳ ಬಣ್ಣದಿ ನಿಚ್ಚಳ | ತೆತ್ತ ಮಾಡಳರವಿ ತಳಿಲು ತೋರಣದಿ | ಮತ್ತೆ ದೇವಾಲಯ ಮಂಡಿತ ಜಗಲಿಯಾ | ಸುತ್ತ ಕದಳೀ ಕಂಭದಿ ಮ್ಯಾಲಿಯ | ಉತ್ತಮ ಮಂಟಪದಿ ತರಗು ತೆಂಗು | ಉತ್ತತ್ತೀ ಬಹು ಓಲವೀ ಕಟ್ಟಿಹ | ವತ್ತೊತ್ತಿ ಥರ ಥರದಿ ನಮ್ಮಯ್ಯಾನಾ 1 ಕಡಲೆ ತಂಡುಲ ಗುಡ ಶರ್ಕರವ ಮತ್ತೆ ಗೂಡಿಹ ಸಮಸ್ತ | ಘೃತ ವಡವೆಯ ತುಂಬಿಹ ಸ್ಟೈಪಾಕ ಮಾಡಲಿ | ತಡೆಯದೆ ಕೊಡುತಿಹರು ಓಡ್ಯಾಡಲು | ಅಡಿಗಡಿಗೊಬ್ಬೊಬ್ಬರು ಆಜ್ಯವ | ಧೃಡ ಭಕ್ತಿಯುಳ್ಳವರು ನಮ್ಮಯ್ಯನಾ 2 ಏಕೋ ಭಾವನೆಯಲಿ ಯಾತ್ರೆಯ ಸದ್ಭೋಧಾಸಕ್ತರು | ಬೇಕಾದಿ ಸಾಕುವದೇವ ದೇವರಾ ಸಾರಿ ಸುಜನ ವಿಂಡು | ಹಾಕಿ ಸಾಷ್ಟಾಂಗದಲಿ ಪರಿ ಲೋಕ ನೆರೆಯುತಿರಲಿ ನಮ್ಮಯ್ಯನಾ 3 ಮೊದಲಿನ ದಿವಸದಿ ಸಂಧ್ಯಾವಂದನಜಪಾನುಷ್ಠಾನಾ | ವಿದಿತ ಬಂಗಾರ ವೆಳಿಯಲಿ ಬರೆದ ಚದುರ | ಝಗ ಝಗ ಅದು ನಕ್ಷತ್ರ ಮಾಲಿ ನಮ್ಮಯ್ಯನಾ 4 ಪಡದಿಯ ಸೋಂಪಿಲಿ ಬಹು ವಿಚಿತ್ರ | ಸಡಗರದಲಿ ದೇವ ಸಂಪುಟ ಮೆರೆವಾ| ವಡೆಯನ ಏನೆಂದ್ಹೇಳಲಿ ನಮ್ಮಯ್ಯಾನಾ 5 ಸನ್ನುತ ಗಂಗೆಯ ಸಲಿಲವು ಮುನ್ನ ಪಂಚಾಮೃತ ದಾಗಲು ಅಭಿಷೇಕ | ಸುಗಂಧವನ್ನು ಅರ್ಪಿಸಿ ಚಲ್ವದಾ ಸಾಲಾದಾ | ಘನ್ನ ದೀಪದೆಡೆ ಬಲದಾ ನಮ್ಮಯ್ಯನಾ 6 ಪರಿಮಳ ದಿಂಡಿಗೆ ಪರಿ ಪುಷ್ಪದಾ ಪಸರಿಕೆ ಬಹುಳವಾ | ತರುವಾರಾ ಧೂ ಬಲವೆಡಾ ಊದುಬತ್ತಿಯ ಗಿಡಾ | ನೆರೆ ಏಕಾರತಿಯಾಗಲಿ ನೈವೇದ್ಯ ಹರಿವಾಣವನು | ಬರಲಿ ಹರಿಗೆ ಪ್ರತ್ಯಕ್ಷದಲೀ ನಮ್ಮಯ್ಯನಾ 7 ವಾದಾ ಪೂಗೀ ಫಲಾ ಹರಿವಾಣ ಆರತಿ ಪೂರಣಾ | ಛಂದ ಭೇದಿಸಿ ಘನತಾಳಾ ಬಲು ಶಂಖ ನಾಮ ಘೋಷದಿತಿಂತ | ರಾದವರು ಪಾಡಲೀ ನೀರಾಂಜನ | ಸಾದಿಪ ಸಮಯದಲಿ ಕಣ್ಣಿನಲಿ ನಮ್ಮಯ್ಯನಾ 8 ಮೆರೆವ ಷೋಡಷದಿಂದ ಹರಿತೀರ್ಥಕೊಳ್ಳಲು ಹರುಷದಿ ಜನಗಳು | ಕರುವೇದ ಘೋಷ ಮಾಡು ಮಾಡಿ ಕುಳ್ಳಿರೆ | ಪರಮಾನ್ನ ಪರಿ ಶಾಕಗಳು ಸೂಪಘೃತ | ಗಿರಿಸಿಹ ದೀಪಗಳು ನಮ್ಮಯ್ಯನಾ 9 ಪ್ರೌಢದಿ ಹರಿ ನಾಮಾ ಆಡಲೇನದು ತೃಪ್ತಿ ಆಯಿತು ಉಂಡು | ನೀಡೆ ವೇದೋಕ್ತದ ನುಡಿ ಆಶೀರ್ವಾದ | ಮಾಡುತ ಬ್ರಾಹ್ಮರು ಮನೆಗೆ ಹೋಗುವರು | ಗಾಡ ಮದ್ದಲೆ ಸದರು ಸಭೆಯೊಳುಗೂಡಿ | ಒಡೆಯನಿದಿರು ಹರಿಯ ಕೊಂಡಾಡಿ ಆರತಿಯತ್ತೀರ ನಮ್ಮಯ್ಯನಾ 10 ಮುಂಚಿಲಿ ನಡೆಯಲು ಅರ್ಚನೆಯಾ ಅರ್ತಿ | ಸಂಭ್ರಮದಲಿ ನೋಡಿ ಸದ್ಗತಿ ಸೂರ್ಯಾಡಿ | ಕೊಂಬರು ಸ್ವಸ್ಥಲ ಕುರಿತು ಆಜ್ಞೆಗಳ | ಇಂದಿಲ್ಲ ಆನಂದದೀ ಈ ಮಹಿ ಮಾಡಂಬರೆನ್ನ ಮುಖದಿ ನುಡಿಸಿದ | ಶಂಭು ಮಹಿಪತಿ ದಯದಿ ನಂದನ | ಬೊಂಬಿ ಸೂತ್ರ ದಂದದಿ ನಮ್ಮಯ್ಯನಾ 11
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
ಕಾವವನೆ ಕರ್ಮಜಯ ಬಳಿಕಂ ಸಾವವನೆ ಉಣ್ಣುವರು ಜನರು ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ ದಾಸವೃಂದವು ತೋಷದಿಂದಲೆ ಪೂಶರಯ್ಯನ ವಿಡಿದು ಘನ ಸಂ- ಸುಕೃತ ಫಲವಿಹುದೋ ಶ್ರೀಶನಲಿ ನಿಜದಾಸ ಭಕುತಿಯ ಮೀಸಲಿರಿಸೀ ಮನವ ಮೋಹದೆ ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು 1 ಮೃಗಜಲಕೆ ನೀರೆಂದು ಭಾವಿಸಿ ಪೊಗಲೆಳಿಸುವೆರಳೆಗಳ ಪರಿಯಲಿ ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು ಮಿಗಿಲಾಗಿದ ವಿಷಯಲನಲದಿ ಧಗಧಗಿಸಿ ಜನಗಳು ಪೋಪರಲ್ಲದೆ ಖಗಪತೀ ವಾಹನನ ನೆನೆಯರು ಜಗವ ಪಾವನನು 2 ನೀರಜಾಸನ ಪಿತನೆ ಅಕ್ಷಯ ಶ್ರೀ ರಮಾವಲ್ಲಭನೆ ತವ ಪರಿ ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು ಸಾರಸುಮತಿಯನಿತ್ತೆಮಗೆ ಹರೆ ಸೇರಿಸೆಮ್ಮನು ನಿನ್ನ ಅಡಿಯಲಿ ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು 3
ಕೇಳಿದಾಗಲೇ ಹೇಳಬಹುದೇನೋ ಬ್ರಹ್ಮಾನುಭವಮಿದು ಪ ಹಾಳುವಾದವಲಾ ವಿಚಾರಿಸಲೇಳು ವ್ಯಸನಕೆ ಸಿಲ್ಕಿ ಕುಣಿಯುವ ಅ.ಪ ಖೂಳ ಕಪಟರಿಗೆಂತು ಅನುಭವಶಾಲಿಗಾಗಿಹ ಪರತರಾನ್ವಯ ಸುಳ್ಳಮಳ್ಳರಿಗಾಗದಹುದಣ್ಣ ವೇದಾಂತಸಾರಸ ಮೂಲ ಪ್ರಣವ ವಿಚಾರಕಹುದಣ್ಣ ಯಾರಾದಡಾಗಲೀ ನೀಲಜ್ಯೋತಿಯ ಕಾಣದೆ ಬರಿ ಶೂಲ ಶೀಲಕೆ ಸಿಲ್ಕಿ ಕುಣಿಯುತ ಆಲಿಸೆಂದು ನಮಸ್ಕರಿಸುತಿಹ ಜಾವಿದ್ಯದ ಪೋಲಿ ಜನಗಳು 1 ಪಂಡಿತರಿಗೇನದು ಕಂಡು ತಿಳಿಯಣ್ಣ ದೂರವಿಲ್ಲವು ಅಂಡದೊಳಗಿಹ ಪಿಂಡವೇ ಬ್ರಹ್ಮಾಂಡ ವೇದಾಂತಾರ್ಥ ಸಮ್ಮತಿ ಭಂಡರಿಗೆ ಬಹುಭಾಷೆಗಹುದೇನ ಕುಂಡಲೀಪುರ ತತ್ಪ್ರಯಾಣವು 2 ಓದಿ ವಿಕ್ರಯವನ್ನು ಮಾಡ್ಯಾರು ಓಂಕಾರ ಬೀಜದ ಹಾದಿಯನು ತಾವು ಕಾಣದೋಡ್ಯಾರೊ ರಾ ಜಾಧಿರಾಜರೂ ಕಾವಿ ಜಗಳವ ಕುಂತು ನೋಡ್ಯಾರು ವೇದಾಂತಿಗಳೂ ನಿಜ ಜ್ಞಾನಪುತ್ಥಳಿಯನ್ನು ಕಂಡ್ಯಾರು ಆದಿಮಧ್ಯಾಂತಗಳರಿಯದ ವಾದಿಗಳಿಗೆಂತಕ್ಕು ತತ್ವದ ಬೋಧೆಯೊಳಗಿಹುದು ಆದಿತತ್ವವು 3 ಕವಿಗಳೆಷ್ಟೋ ಕಷ್ಟಪಟ್ಯಾರು ಅವಸಾನಕರಂ ಭವದ ಬಲೆಯೊಳು ಕಟ್ಟಿಕುಟ್ಯಾರು ಆಗಲ್ಲಿ ಸುಜನರು ಜ್ಞಾ ನವೈರಾಗ್ಯವನು ಕೊಟ್ಯಾರು ಶಿವನು ತಾನೆಂತೆಂಬ ಅದ್ವೈತವನು ಆಡಲ್ಕಡಕಲಹುದೇ ಭುವನದೊಳು ಪಂಚಾಕ್ಷರೋ ನಿಜತ್ರಿಣೆಯಸತಿ ಮೋಕ್ಷೆಚ್ಛೆ ಕವಚಂ4 ನಾಗನಗರಿಪುರೀಶ ಕಾಣಣ್ಣ ಆಧ್ಯಾತ್ಮದನುಭವ ಕಾಗಿ ನಿನ್ನೊಳ ಹುಡುಕಬೇಕಣ್ಣ ಹಂಸಾಶ್ರಯದಿ ನಿನ್ನೊ ಳಗಿದೆಲ್ಲವು ಹುಡುಕಿ ನೋಡಣ್ಣ ಭೋಗಿಶಯನ ಶ್ರೀ ತುಲಸೀರಾಮನ ರಾಗವಿರಹಿತನಾಗಿ ಭಜಿಸಿದಡಾಗ ನಿನ್ನೊಳಗಂಕುರಿಪುದ 5
ಚಾಮುಂಡೇಶ್ವರಿ ಪಾಲಿಸು ಬೇಗದಿಂಚಾಮರಾಜೇಂದ್ರ ನೃಪನ ಪಪ್ರೇಮದಿಂ ರಾಜ್ಯಾಭಿಷೇಕವ ಮಾಡಿಸಿಈ ಮ'ಯನ್ನೀತನಿಂದಾಳಿಸು ತಾಯೆ ಅ.ಪನವರಾತ್ರಿಯು ಬಂತೆನ್ನುತ ಜನಗಳುತವಕಿಸುತಿಹರಮ್ಮಅವನೀಶಾಧಿಪನ ಸಿಂಹಾಸನವೇರಿಸಿನವರಾತ್ರಿಯುತ್ಸವವಂ ಮಾಡಿಸು ತಾಯೆ 1ಈ ಪಟ್ಟಣಕಭಿಮಾನಿ ನೀನಿರೆ ಜನತಾಪ ಪಡುವುದುಂಟೆಪಾಪ ಕೃತ್ಯಂಗಳ ಮಾಳ್ಪರ ಪರಿದು ನೀತಾಪವಳಿದು ತಂಪಿಸಿ ಜನವನು ಪೊರೆಯೆ 2ಧರೆಯೊಳುತ್ತಮ ಮಹಾಬಲಗಿರಿವಾಸಿನಿಗುರು ವಾಸುದೇವ ರೂಪಿಣಿಕರುಣದಿಂ ನಾರಾಯಣದಾಸನ ಮನಕೆಹರುಷವ ಕೊಡು ವೆಂಕಟಪತಿ ಸೋದರಿ3
ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ದಾರಿಯ ಕಾಣದೆ ಅ.ಪ ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು ಕಂಟಕ ವೆಮ್ಮನು ಕಾಲಿಡಲಮ್ಮಗೊಡವು ಹರಿ1 ದಾರಿಯೊಳಡಸಿಹುದು ರಾರು ಮಂದಿ ಮುಳಿದು ಸಾರಿ ಸಾರಿ ಬಾಯಾರಿಸುತಿರ್ಪವು 2 ಯನು ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ತನು ಸಂಬಂಧದ ಜನಗಳು ದುರ್ಮೃಗ ವನು ಪೋಲುತ ನಮ್ಮನು ಬಾಧಿಸುತಿರುವರು 3 ಕ್ಷುದ್ರವಿಷಯಗಳುಛಿದ್ರವಹುಡುಕುವ ವಧ್ರುವದೇಹದೊಳು ಕದ್ರುಸುತರವೊಲುಪದ್ರವ ಗೈವ ಭದ್ರದ ಭೀತಿಗಳೂ ಪದ್ರವ ಜರೆಯೆಂಬುದ್ರಿಕ್ತಾಂಗನೆ 4 ಸುರನರವರರೊಳು ಶರಣೋಪಾಯವರ ವರದವಿಠಲ ನಿಜ ಚರಣವ ನಂಬಿದೆ 5
ನೋಡಿದೆನು ಕೃಷ್ಣನ್ನ | ದಣಿಯ ನೋಡಿದೆನು ಕೃಷ್ಣನ್ನ | ಮನದಣಿಯ ಪ. ಪಾಡಿದೆನು ವದನದಲಿ ಗುಣಗಳ ಮಾಡುತಲಿ ಸಾಷ್ಟಾಂಗ ಕಡು ಕೃಪೆ ಬೇಡಿದೆನು ಹರಿಯ ಅ.ಪ. ಅರುಣ ಉದಯದ ಮುನ್ನ ಯತಿಗಳೂ ಶರಣವತ್ಸಲನನ್ನು ಪೂಜಿಸಿ ಕರದಿ ಕಡಗೋಲನ್ನು ಪಿಡಿದಿಹ ಬಾಲರೂಪನಿಗೆ ತರತರದ ನೇವೇದ್ಯವರ್ಪಿಸಿ ತುರುಕರುಗಳಾರತಿ ಗೈಯ್ಯುತ ಪರಮಪುರುಷಗೆ ವಂದಿಸಲು ಈ ಚರಿತ ಮತ್ಸ್ಯನ್ನಾ 1 ಮಧ್ವರಾಯರ ಹೃದಯವಾಸಗೆ ಮುದ್ದು ಯತಿ ಪಂಚಾಮೃತಂಗಳ ಶುದ್ಧ ಗಂಗೋದಕದ ಸ್ನಾನವಗೈಸಿ ಸಡಗರದಿ ಮಧ್ಯೆ ಮಧ್ಯೆ ನೈವೇದ್ಯವರ್ಪಿಸಿ ಮುದ್ದು ತರಳರಿಗ್ಹೆಜ್ಜೆ ಪಂಕ್ತಿಯು ಅಗಣಿತ ಕೂರ್ಮರೂಪನ್ನಾ2 ಉದಯಕಾಲದಿ ಸರ್ವ ಜನಗಳು ಮುದದಿ ಮಧ್ವ ಸರೋವರದೊಳು ವಿಧಿಯಪೂರ್ವಕ ಸ್ನಾನ ಜಪ ತಪವಗೈದು ಮಾಧವನಾ ಉದಯದಾಲಂಕಾರ ದರ್ಶನ ಪದುಮನಾಭಗೆ ನಮನಗೈವರು ವಿಧಿಕುಲಕೆ ಉದ್ಧಾರಕರ್ತನು ವರಹನೆಂದಿವನಾ 3 ಪಾಲಿಸಲು ಬಾಲನ ಶ್ರೀ ಗೋ ಪಾಲಕೃಷ್ಣನು ಕಂಭದಲಿ ಲೀಲೆಯಿಂದಲಿ ಉದಿಸಿ ಖೂಳನ ಸೀಳೀ ತೊಡೆಯಲ್ಲಿ ಬಾಲೆಯನು ಕುಳ್ಳಿರಿಸಿಕೊಂಡಘ ಜಾಲಗಳ ಸುಡುವಂಥ ದೇವನು ಬಾಲರೂಪವ ಧರಿಸಿ ನಿಂತಿಹ ಲೋಲ ನರಹರಿಯ 4 ಅದಿತಿ ದ್ವಾದಶವರ್ಷ ತಪಸಿಗೆ ವಿಧಿ ಜನಕ ತಾ ಕುವರನಾದನು ಅದರ ತೆರದಲಿ ವ್ರತವ ಗೈದ ವೇದವತಿಗಿನ್ನು ಚದುರ ತನಯನ ವರವನಿತ್ತನು ಯದುಕುಲಾಗ್ರಣಿ ಅವರ ಭಕ್ತಿಗೆ ಒದಗಿ ಬಂದ ಮೂರ್ತಿವಾಮನನೆಂಬ ವಟುವರನ5 ದುಷ್ಟ ಕ್ಷತ್ರಿಯರನ್ನೆ ಕೊಲ್ಲುತ ಅಷ್ಟು ಭೂಮಿಯ ದಾನಗೈಯುತ ದಿಟ್ಟ ತಾನೆಲ್ಲಿರಲಿ ಎಂಬುವ ಯೋಚನೆಯ ತಳೆದು ಅಟ್ಟಿ ಅಬ್ಧಿಯ ಪುರವ ನಿರ್ಮಿಸಿ ಪುಟ್ಟ ರೂಪವ ತಾಳಿ ಬರುತಲಿ ಮೆಟ್ಟಿ ನಿಂತಿಹ ರಜತ ಪೀಠದಿ ಶ್ರೇಷ್ಠ ಭಾರ್ಗವನ 6 ಪಿತನ ಆಜ್ಞೆಯ ಪೊತ್ತು ಶಿರದಲಿ ಸತಿ ಅನುಜ ಸಹಿತದಿ ಜತನದಲಿ ವನವಾಸ ಮುಗಿಸುತ ದಶಶಿರನ ಕೊಂದ ಅತಿ ಸಹಾಯವ ಗೈದ ಶರಧಿಗೆ ಪ್ರತಿಯುಪಕಾರವನು ಕಾಣದೆ ಜತನದಲಿ ತಾ ನಿಲ್ಲೆ ನೆಲಸಿದ ಜಾನಕೀಪತಿಯ7 ಗೋಪಿಯರ ಉಪಟಳಕೆ ಸಹಿಸದೆ ಗೋಪನಂದನರೊಡನೆ ಕಾದುತ ತಾಪಪಡಿಸುವ ಕಂಸರನುಚರರಿಂದ ಕಳದೋಡಿ ಗೋಪಿ ಮೊಲೆ ಕೊಡುತರ್ದದಲಿ ಬಿಡೆ ಈ ಪರಿಯ ತಾಪಗಳ ಸಹಿಸದೆ ತಾಪಸರ ಪೂಜೆಗಳ ಬಯಸುತ ಬಂದ ಗೋಪತಿಯ 8 ವೇದ ಬಾಹಿರರಾದ ದುರುಳರು ವೇದ ಮಾರ್ಗವ ಪಿಡಿಯೆ ಸುರತತಿ ನೀ ದಯದಿ ಸಲಹೆಂದು ಪ್ರಾರ್ಥಿಸೆ ಜಿನ ವಿಮೋಹಕನೂ ವೇದರ್ಥವ ಗುಪ್ತದಲಿ ತಾ ಬೋಧಿಸುತ ಮೋಹಕವ ಕಲ್ಪಸಿ ಬುದ್ಧ ಪ್ರಮೋದನೆಂಬುವನಾ 9 ಚತುರ ಪಾದವು ಕಳದು ಧರ್ಮವು ಅತಿಮಲಿನವಾಗುತಲಿ ಕಲಿಜನ ಚತುರ ಜಾತಿಯ ಕಲೆತು ಕಂಗೆಡೆ ಭಕ್ತವರ್ಗಗಳು ಗತಿಯು ನೀನೆ ಪೊರೆಯೊ ಎಂದೆನೆ ಸತಿಯ ಹೆಗಲೇರುತಲಿ ಖಡ್ಗದಿ ಹತವಗೈಯ್ಯುತ ಖಳರ ಸುಜನರ ಪೊರೆದ ಕಲ್ಕಿಯನು10 ನೋಡಿದೆನು ವರ ಮಚ್ಛ ಕೂರ್ಮನ ನೋಡಿದೆನು ಧರಣೀಶ ನೃಹರಿಯ ನೋಡಿದೆನು ವಾಮನನ ಭಾರ್ಗವ ರಾಮಚಂದ್ರನನೂ ನೋಡಿದೆನು ಕಡಗೋಲ ಕೃಷ್ಣನ ಬುದ್ಧ ಕಲ್ಕಿಯ ನೋಡಿದೆನು ಗುರು ವರದ ಗೋಪಾಲಕೃಷ್ಣವಿಠ್ಠಲನ 11
ಪುರಂಜನೋಪಾಖ್ಯಾನ ಲಾವಣಿ ಗೆರಗಿ ಮಹೇಶ್ವರನಾ ಶಾರದೆಯ ಸರಸಿಜಸಂಭವನಾ | ಇಂದಿರೆ ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ ಕರುಣಿಪುದು ಜ್ಞಾನ | ಚರಣಗಳಿಗೆ ಬಿನ್ನೈಸುವೆನಾ 1 ಯತಿಗಣಪ್ರಾಸೊಂದಾದರು ತಿಳಿಯದು ಮತಿಹೀನನು ನಾನು | ನಾನಾಚಮ- ತ್ಕøತಿಗಳರಿಯದವನು | ಆದರೀ ಕೃತಿಯಲಿ ತಪ್ಪೇನು | ಮತಿವಂತರಾಲಿಸುವುದು ನೀವಿದನು 2 ಒಂದರೊಳಗೆ ಎರಡಾಗಿ ಎರಡರೊಳು ಹೊಂದಿ ಮೂರ್ನಾಲ್ಕೈದಾಗಿ ಆರೇಳೆಂಟೊಂಬತ್ತುಗಳಾಗಿ | ಸಕಲದೊಳು ಹೊಂದಿರುವುದುತಾಗಿ ಕುಂದಿಲ್ಲದೆ ಇರುತಿರುವ ಮಹಾತ್ಮನ ರಂದವ ಚನ್ನಾಗಿ | ತಿಳಿದು ಸುಖ ತಂದವನೇಯೋಗಿ 3 ಮೊದಲು ಮಹತ್ ಸೃಷ್ಟಿಯಲಿ ಎಲ್ಲತ- ತ್ವದಲಿ ತೋರುತಿಹುದು ಬೇರೆಬೇರಾಗಿ ಕಾಣಿಸುವುದು ಅದುಭುತವಾಗಿಹ ಅನಾದಿ ಕರ್ಮತ್ರಿ- ವಿಧದಿ ಭಾದಿಸುವುದು | ಅದರೊಳು ಬಿ- ಡದೆ ತಾ ಮುತ್ತುವುದು ಎಂದಿಗು ನಿಜವತಿ ರಹಸ್ಯವಿದು 4 ಮೊಟ್ಟೆವೊಂದು ದಶಸಾವಿರವರುಷಗ ಳಿಟ್ಟು ಜಲದಿತಾನು | ಅದಕೆ ಕೈ- ಗೊಟ್ಟು ಎಬ್ಬಿಸಿದನು | ನಾನಾ ವಿಧ ವೆಷ್ಟಿ ಸಮಷ್ಟಿಗಳೆರಡೆಂದದರೊಳು ಗುಟ್ಟಂಗಡಿಸಿದನು | ಗುರಿಯಮಾ ಡಿಟ್ಟು ಚೇತನಗಳನು | ಅನೇಕವು ಪಟ್ಟಣ ರಚಿಸಿದನು 5 ಈ ಪಟ್ಟಣಕಾರ್ ಮಂದಿ ಇರುವರತಿ ಕಾಪಾಡುವರದರೊಳು ವ್ಯಾಪಾರಗಳನು | ಬಹುವಿಧಮಾಡುವ- ರಾಪುರ ಜನರುಗಳು | ಇವರುನಡೆ ಕೋಪಿಸೆ ಹಗಲಿರುಳು 6 ಎರಡು ಮಾರ್ಗದೊಳಿರುತಿಹರೆಲ್ಲರು ಹುರುಡಿಲ್ಲವುನೋಡೆ | ಗಜಿಬಿಜಿಯು ತರತರದಲಿಮಾಡೆ | ನಮಗಿದೆ ಸ್ಥಿರವೆನ್ನುತ ಕೂಡೆ | ಪರಿಪರಿ ಬಗೆಯಲಿ ಭೇದ ಪುಟ್ಟುವುದು ಕರೆಕರೆಯಂದುಡೆ | ವಳಗೆಕೆಲ ಬರುಹರುಷದಿ ನೋಡೆ | ಯುವಶೃಂ- ಗರುವು ಇದಕೆ ಈಡೆ 7 ಇದೆತನ್ನದೆನುತೋರ್ವಳು ಮಾನಿನಿ ಚದುರತನದಿ ಬಂದು | ಊರ ಮುಂದಿರುವ ವನದಿ ನಿಂದು | ಅವಳಿಗಿರು ವುದು ಜನ ಹನ್ನೊಂದು ಚದುರೆಯೈದುತಲೆ ಸರ್ಪವಾಡಿಸುತ ಜಾಣೆಯಿರುವಳಂದು | ತಾನೊಬ್ಬನ ಇಂದು | ಸುಖದೊಳಾ- ಳ್ಬೇಕುರಾಜ್ಯವೆಂದು 8 ಅರಸನೊಬ್ಬ ವಿಜ್ಞಾತನೆಂಬ ಭೂ- ಸುರನಸಹಿತನಾನಾ | ದೇಶಗಳ ತಿರುಗುತ ಉದ್ಯಾನ | ವನದಿಕಂ- ಡನು ಆತರುಣಿಯನ ಪರಮ ಮಿತ್ರನಹ ಬ್ರಾಹ್ಮಣನ ಮರೆತು ಹರುಷದಿ ಪೊಕ್ಕುವನ | ಸ್ಮರಶರಕೆ ತರಹರಿಸುತಲಿರೆ ಮನ | ಕೇಳಿದನು ನಗುತಲಿ ನಾರಿಯನ 9 ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ- ರೇನು ಪೇಳೆ ಹೆಣ್ಣೆ | ಮಾತನಾ- ಡೆಲೆ ತಾವರೆಗಣ್ಣೆ | ನಿನ್ನ ಮೈ- ಸುಲಿದ ಬಾಳೆಯ ಹಣ್ಣೆ ಯಾರದು ಈ ಜನ ಉರಗವೇನು ವನ- ವಾರದು ಶಶಿವದನೆ | ಈ ಪುರವ- ನಾಳುವನಾವವನೆ | ಒರ್ವಳಿ- ಲ್ಲಿರುವುದಕೇನ್ಹದನೆ 10 ಎನಲು ನಸುನಗುತವನಿತೆನುಡಿದಳೀ ಜನಗಳು ನನ್ನವರು | ಇಲ್ಲಿಕಾ- ಣುವ ಪುರ ನನ್ನೂರು | ಸರ್ಪನ- ನ್ನದು ಇದಕಿನ್ನಾರು | ಅರಸರಿಲ್ಲ ನಾನೊಬ್ಬಳಿರುವೆನೀ ವನದೊಳು ನೀನ್ಯಾರು | ನಿನ್ನಕಥೆ ವಿವರಿಸೆನಗೆ ತೋರು | ಯನ್ನ ಬಳಿ- ಗಿಷ್ಟವಿರಲುಸಾರು 11 ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ- ನೆನ್ನ ಪುಷ್ಪಶರನು | ನೀನುಪೇ- ಪರಿ ವಲ್ಲಭನನು ಮಾಡಿಕೊ ಎನ್ನನು ಬಹು ಬಲ್ಲಿಯಳೆ ನೀನು | ನಿನ್ನಸರಿ ಚಲ್ವೆಯರಾರಿನ್ನು | ಇಬ್ಬ- ರಾಳ್ವೆಯೀವೂರನ್ನು 12 ಎನಲು ಹರುಷಗೊಂಡಾಕೆ ಸಮ್ಮತಿಸಿ ಜನವೆರಗಿತಂದು | ನುಡಿದಳಾಮೊಗದ- ಲಿನಗೆತಂದು | ನಿನ್ನಮೇಲ್ ಮನಸಾಯಿತುಯಿಂದು ನಿನ್ನನು ಮಾನವೇತಕಿಂದು | ಆಳು ಜನಸಹಿತ ಪುರವ ಮುಂದು ನೀನು ನಾನಿರುವೆವಾಗಿವಂದು 13 ಸರ್ವವನ್ನು ಭವದಿ ಆದರಿಸುತತತ್ಪುರ ಮಧ್ಯ | ದೊ ಳುಪ್ಪರಿಗೆಯೇರಿ ತ್ವರದಿ | ಸರ ಸಗಳನಾಡಿ | ಬಹುತರದಿ ಮುಳುಗಿ ಸಂಸಾರವೆಂಬಶರಧಿ 14 ಅನ್ನಪಾನಾಭರಣ ಕುಸುಮ ವಿನ್ನು ಗಂಧಧೂಪ | ತಾಂಬೂಲಗಳ ಮನ್ನಣೆಯಲಿ ಭೂಪ | ಪೊಂದಿದ ಸುಖ ವನು ನಾನಾರೂಪ | ನನ್ನದು ಎನ್ನುತಲಿ ಪ್ರತಾಪ | ಶಾಲಿತಾ- ರಾಜ್ಯವಾಳಿದನಾಗುತಭೂಪ 15 ದ್ವಾರಗಳೊಂಭತ್ತಾಪುರಕಿರುವುದು ಮೂರು ಪೂರ್ವದಲ್ಲಿ | ಮೇ- ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ ಕಟ್ಟಿಹುದು ಕನ್ನಡಿಯಲಿ ತೋರುವುದುತ್ತರದಕ್ಷಿಣದೊಳೆರಡು ದ್ವಾರ ಪಶ್ಚಿಮದಲಿ ಕಾರಣವದರಲ್ಲಿ 16 ಮತ್ತದರೊಳಗಾರ್ಸುತ್ತು ಕೋಟೆ ಒಂ- ಬತ್ತು ಬಾಗಿಲ ಪುರದಿ | ಅನೇಕವು ಗೊತ್ತನಾವವಿಧವಿ | ಉತ್ತಮವಹಪುರದಿ | ಮುಖ್ಯವಾ- ಗಿರುವದೆರಡು ಬೀದಿ | ದೊರೆಯಮನೆ- ಯಿರುವುದು ವಿಸ್ತರದಿ17 ಇಂತರಮನೆಯಲಿ ದೊರೆ ಕಲಿಯಾಗುತ ಕಾಂತೆಯೊಡನೆ ಸೇರಿ | ಸದಾಸು- ಸ್ವಾಂತನಾಗಿಮೀರಿ | ಸೌಖ್ಯಹೊಂ- ದುತಲಾವೈಯ್ಯಾರಿ ನಿಂತರೆ ನಿಲುವನು ಕುಳಿತರೆ ಕೂಡುವ ಮಲಗಿದರೆ ನಾರಿ | ತಾನು ಮಲಗುವಯೇಕದಿ ಸೇರಿ | ಉಂಡ- ರುಣ್ಣುವನು ಅವಳನುಸಾರಿ 18 ಮನದಿಯೋಚಿಸದನೂ | ಈಗಲೆ ಮೃಗಯಾತ್ರೆಗೆತಾನೂ | ಸೊಗಸಿಂದ ಸೈನ್ಯವ ಕೂಡುತ ಪುಂ- ಚಪ್ರಸ್ಥವನವನು | ಪೊಕ್ಕು ಅ- ಲ್ಲಿರುವಮೃಗಗಳನ್ನು | ಹೊಡೆದು ಸಂ- ತೋಷದಿ ಸುಖಿಸುವೆನು 19 ಮೂರೆರಡು ಕುದುರೆಯೈದು ಮೇಲ್ ಮೂರು ಪತಾಕಿಗಳು | ಅ- ಚ್ಚೆರಡು ಎರಡು ಕೂಬರಗಳು | ಚಕ್ರ ವೆರಡುವರೂಥಗಳೇಳು ಆರಥಕೊಪ್ಪುವದೇ- ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ ಸಾರಥಿ ಎರಡು ಗತಿಗಳು | ಬಿಗಿಸಿಹುದು ಕನಕಭೂಷಣಗಳು 20 ಪುರಂಜನ ಭೂ- ಕಾಂತಕರದಿ ಧನುವ | ಪಿಡಿದುಸು- ಸ್ವಾಮತದಿಂದಲನುವಾ | ಗಿಬಹ ಹನ್ನೊಂ- ದು ತನ್ನ ಜನನ | ಸಂತಸದಲಿ ಕೂ- ಡುತ ಹೊರಡುತ ತಾ ಪೊಕ್ಕನು ಕಾನನವಾ | ಶರಗಳಿಂ- ದ್ಹೊಡದು ಮೃಗನಿವಹವಾ | ಮೇರೆಯಿಲ್ಲ- ದೆ ತಟ್ಟುತ ಭುಜವಾ 21 ಇನಿತು ಬೇಟೆಯಾಡುವ ಕಾಲದಿ ತನ್ನ ಮನದಿ ನೆನೆದು ಸತಿಯಾ | ತಕ್ಷಣವೇ ಬಂದು ಸೇರಿ ಮನೆಯ | ಕಾಣದೆ ಹುಡುಕಿದನು ಯುವತಿಯ ಮಂಚದೊಳಿಹ ಸತಿಯ | ಕಂಡುಲಾ- ಲಿಸುತ ಚಮತ್ಕøತಿಯಾ | ನುಡಿಯಲುಪ- ಚರಿಸಿದನಾಕಾಂತೆಯ 22 ನೂರುವರುಷವೀರೀತಿಯವಳೊಡನೆ ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ- ಸಾರದಿ ಕಾಲವನು | ಯಾರೆ- ಮೀರಿ ಹೋದುದಿನ್ನು | ಮೊಮ್ಮಕ್ಕಳ ಪಡೆದನನೇಕರನು ದೇಶತುಂಬಿಸಿದ ತನ್ನ | ವರನು 23 ಉತ್ತರ ದಕ್ಷಿಣ ಪಾಂಚಾಲಗಳಾ ಳುತ್ತಲಿವನು ತನ್ನ | ಸುತರಬೆರೆ- ಯುತ್ತಸದಾ ಚಿನ್ನ | ಬೆಳ್ಳಿ ನವ- ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ- ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ ಚಿಂತೆಯಿಲ್ಲದೆ ನಾ | ಬಲು ಪುಣ್ಯವಂತನೆ | ನ್ನುತ್ತತಿಳಿದಿರುವನಾ 24 ಚಂಡವೇಗವೆಂಬುವರಾ ತಮ್ಮತಮ್ಮ ಹೆಂಡಿರುಗಳು ತಾವು | ಸೇರಿಮು- ನ್ನೂರರವತ್ತು ಜನವು | ಗಂಧರ್ವರು ಬಂಡೆಬ್ಬಿಸಿ ಪುರವು | ದಂಡು ಮುಂದಾಗೆ ರಿಪುಬಲವು | ಕ್ಷೀಣಗತಿ ಹೊಂದುತಲಿರೆ ಪುರವು 25 ಸ್ತ್ರೀಜಿತನಾಗಿಹಕಾರಣದಲಿಯಾ ರಾಜಪುರಂಜನಗೆ | ಯತ್ನವಿ- ಲ್ಲದೆ ತನ್ನಯಪುರಿಗೆ | ಕೇಡುಬಂ- ದರು ತೋರದು ಕೊನೆಗೆ | ಶೋಕದಿ ಮನದೊಳಗೆ | ಮಿ ಡುಕುತಲಿರಲಾನೃಪತಿಮೇಗೆ | ಮತ್ತು ಶತ್ರುಗಳುನೆರೆಯೆ ಹೀಗೆ 26 ಯವನೇಶ್ವರನೊಬ್ಬನುಭಯಪ್ರಜ್ವಾ ರಾದಿ ಸೈನಿಕರನು | ಕಾಲಕನ್ಯಾಖ್ಯ ಯುವತಿಯನ್ನು | ಕರೆದುಕೊಂ- ಡೀಪುರವ ಸೇರಿದನು | ಬವರದಿ ಗೆದ್ದನು ಭವಿಸಿದನಾ ಕನ್ಯಾಮಣಿಪಟ್ಣವನು | ಭೋಗಿಸಿದ- ಳಾಪ್ರಜ್ವಾರನನು | ಸುಡಲುಪುರಿ ಕಂಡು ಪುರಂಜನನು 27 ಕಾಲಕನ್ಯೆ ತಾ ಲೀಲೆಯಿಂದಲಿ ನೃ- ಪಾಲನ ಹತ್ತಿಗೆಯಾ | ಪಿಡಿಯೆ ಹಾ- ಹಾಯೆನಲಾರಾಯಾ | ಅಬಲತೋ- ರದು ಮುಂದೆ ಉಪಾಯ | ಬಾಲಕರನು ಪತ್ನಿಯ | ನುಕೂಗಿಬಿಡು-
ಪ್ರಸನ್ನ ಶ್ರೀ ಕಲ್ಕಿ ಅಮಿತ ವಿಕ್ರಮ ಕಲ್ಕಿ ಅನಘ ಲಕ್ಷ್ಮೀರಮಣ ಶರಣು ಮಾಂ ಪಾಹಿ ಕೃಷ್ಣ ನರಹರಿ ಕಪಿಲ ತಿಲಕ ವೇಂಕಟರಮಣ ಪ್ರಾಣ ಹೃದ್‍ವನಜಸ್ಥ ರಕ್ಷಮಾಂ ಸತತ ಪ ಶ್ರೀ ದುರ್ಗಾಭೂರಮಣ ವಿಷ್ಣು ರುದ್ರ ಬ್ರಹ್ಮ ಮಾಯಾ ಜಯಾ ಕೃತಿ ಕೂರ್ಮ 1 ಧನ್ವಂತರಿ ಶರಣು ಅಜಿತ ಸ್ತ್ರೀರೂಪನೇ ಘನಭೂಮಿಧರ ನಾರಸಿಂಹ ವಾಮನ ತ್ರಿಪದ ರೇಣುಕಾತ್ಮಜರಾಮ ವೇಣುಗೋಪಾಲ ನಮೋ ಬುದ್ಧ ಸುಜನಪ್ರಿಯ ಕಲ್ಕಿ 2 ವೃಷಭ ತಾಪಸ ಯಜ್ಞ ದತ್ತ ವಡವಾವಕ್ತರ ಕೃಷ್ಣ ಹರಿನಾರಾಯಣ ವೇದವ್ಯಾಸ ಶಿಂಶುಮಾರ ಸುಗುಣಾರ್ಣವನೆ ಶ್ರೀಶ ಸರ್ವಾಶ್ರಯ ಅನಂತ ಸುಖರೂಪ 3 ಭೂಲೋಕದಲಿ ಮಣಿಮಂತಾದಿ ಅಸುರರು ಶೀಲ ಹರಿಭಕ್ತರನ ಕಂಡು ಸಹಿಸದಲೆ ಬಾಲ ಶಶಿಶೇಖರನ ಸ್ತುತಿಸಿ ವರಗಳ ಪಡೆದು ಇಳೆಯಲಿ ಜನಿಸಿದರು ತತ್ವಜ್ಞಾನಿಗಳ ವೋಲ್ 4 ಸೂತ್ರ ವಿರುದ್ಧ ಭಾಷ್ಯಗಳ್ ಮಾಡಿ ವೇದೋಪನಿಷದ್‍ಗಳಿಗೆ ಅಪ ಅರ್ಥ ಪೇಳಿ ಸಾಧುಗಳ ಮನಕೆಡಿಸೆ ಮಧ್ವಾಖ್ಯ ಸೂರ್ಯನು ಉದಿಸಿ ಸಜ್ಜನರ ಹೃತ್ತಿಮಿರ ಕಳೆಯೆ 5 ಶ್ರೀಪತಿ ವಿಷಯಕ ಜ್ಞಾನ ಮರೆ ಮಾಡುವ ಇಪ್ಪತ್ತು ಮೇಲೊಂದು ಅಪದ್ದ ದುರ್ಭಾಷ್ಯ ಅಪವಿತ್ರ ಅಚರಣೆ ದುಸ್ತರ್ಕ ದುರ್ವಾದ ಈ ಪರಿಸ್ಥಿತಿಯ ನೆಟ್ಟಗೆ ಮಾಡಿದಾ ಮಾಧ್ವ 6 ಇಪ್ಪತ್ತಿ(ತ್ತು) ಎರಡನೇ ಭಾಷ್ಯಾ ಸಿದ್ಧಾಂತವ ಉಪನಿಷದ್ ದಶಕಕೆ ಸರಿಯಾದ ಭಾಷ್ಯಗಳ ಸಪ್ತ ತ್ರಿಂಶತ್ ಒಟ್ಟುಗ್ರಂಥ ಸುರಧೇನುವ ಅಪವರ್ಗಾನಂದ ಒದಗಿಸಿದ ಯೋಗ್ಯರಿಗೆ 7 ಸದ್ಧರ್ಮ ಆಚರಣೆ ಯೋಗ್ಯ ಉಪಾಸನಾ ಭಕ್ತಿ ಸವೈರಾಗ್ಯ ಜ್ಞಾನ ಉನ್ನಾಹ ಅಧಿಕಾರಿಗಳು ಈ ಪರಿಯಲಿ ಸುಖಿಸಲು ಕ್ಷಿತಿಯ ಜನರಿಗೆ ಲಭಿಸಿತು ಕ್ಷೇಮ 8 ಕಾಲವು ಜರುಗಿತು ದೈತ್ಯರು ನೋಡಿದರು ಮೆಲ್ಲಮೆಲ್ಲನೆ ಪುನಃ ವಿಷಮ ಮಾಡಿದರು ಶೀಲರ ಹಿಂಸಿಸಿ ಸದ್ಧರ್ಮ ಕೆಡಿಸಿದರು ಖಳರು ಕ್ರೌರ್ಯವ ವರ್ಧಿಸಿದರು ದಿನ ದಿನದಿ 9 ಮಹಾಭಯಂಕರ ದೈತ್ಯ ಸಮೂಹವ ಸಂಹನನ ಮಾಡಿದಳು ಮಹಾದುರ್ಗಾದೇವಿ ಬ್ರಾಹ್ಮಣಕುಲದಲಿ ಪ್ರಾದುರ್ಭವಿಸಿದ ದೇವಿ ಮಹಾದುರ್ಗಾ ಜಗದಾಂಬಾ ಶರಣು ಮಾಂಪಾಹಿ 10 ಮಾಸ ಋತು ವರುಷಗಳು ಕಾಲ ಪ್ರವಹಿಸಿತು ಜನಗಳು ಕಲಿಯುಗದ ಕಡೇ ಭಾಗ ಬರಲಾಗ ಹೀನ ಕರ್ಮಂಗಳಲಿ ಆಸಕ್ತರಾದರು 11 ಪುರಾಣಂಗಳಲಿ ಕಲಿಯಗದ ಸ್ಥಿತಿಗತಿಯು ವಿವರಿಸಿದಂತೆಯೇ ನೆನೆಯಲೂ ಭೀತಿ - ಕರ ಪಾಪಕರ್ಮದಲಿ ಜನರು ರತರಾಗಿರಲು ನರಪರ ಕ್ರೂರತನ ದಿನ ದಿನ ಹೆಚ್ಚಿತು 12 ಜ್ಞಾನಾದಿ ಸಂಪತ್ತು ಕಳಕೊಂಡ ಜನರು ವಿಷ್ಣು ದ್ವೇಷಿಗಳಾಗಿ ಬಹು ಬಹು ನೀಚ- ತನದಲಿ ಇರುತಿರಲು ದೇವತಾವೃಂದವು ನಿನ್ನ ಬೇಡಿದರು ಪುನಃ ಧರ್ಮಸ್ಥಾಪಿಸಲು 13 ಯದಾಯದಾಹಿ ಸದ್ಧರ್ಮಕ್ಕೆ ಹಾನಿಯು ಅಧರ್ಮಕ್ಕೆ ವೃದ್ಧಿಯು ಆಗುವದೋ ಆಗಾಗ ಸಾಧುಗಳ ರಕ್ಷಣೆಗೆ ಪಾಪಿಗಳ ಹನನಕ್ಕೆ ಸದ್ಧರ್ಮ ಸ್ಥಾಪನೆಗೆ ಅವತಾರ ಮಾಳ್ಪಿ 14 ಭೂಮಿಯಲಿ ಸುಪವಿತ್ರ ಶಂಭಳ ಗ್ರಾಮದಲಿ ಬ್ರಾಹ್ಮಣ ಮಹಾತ್ಮ ವಿಷ್ಣು ಯಶಸ್ ಭವನದಲಿ ಅಮಿತ ಪೌರುಷಜ್ಞಾನ ಆನಂದಮಯ ನೀನು ವಿಮಲ ಕಲ್ಕ್ಯವತಾರ ಮಾಡಿದಿ ಮಹೋಜ 15 ಕ ಎಂದರಾನಂದ ಕಲ್ಕೆಂದರೆ ಜ್ಞಾನ ಆನಂದ ರೂಪ ಶೂಲಿ ವಜ್ರಿಗಳಿಗೆ ಸುಖಜ್ಞಾನ ಬಲ ಕೊಡುವ ಠಲಕನಮೋ ಪಾಪಹರ ಸೌಭಾಗ್ಯದಾತ 16 ಲೋಕವಿಲಕ್ಷಣ ಸುಪ್ರಭಾಶ್ವ ಏರಿ ನಿಖಿಳ ದುರ್ಮತಿ ಭೂಪಾಲ ಚೋರರನ್ನ ಅಖಿಳ ಪಾಪಿಗಳ ಅಧರ್ಮ ಆಚರಿಸುವರ ಶ್ರೀಕಾಂತದ್ವೇಷಿಗಳ ಕತ್ತರಿಸಿ ಕೊಂದಿ 17 ಸತ್ಯವ್ರತ ಸುರವೃಂದ ವಸುಮತಿ ಪ್ರಹ್ಲಾದ ಶತಮಖ ಪ್ರಜೆಗಳು ವಿಭೀಷಣ ಸುಗ್ರೀವ ಪಾರ್ಥಸುಧಾಮ ರಕ್ಷಕನೇ ಸುರಬೋಧಕನೇ ಸತ್ಯಧರ್ಮರ ಕಾಯ್ವ ಕರುಣಾಳು ಕಲ್ಕಿ 18 ಜ್ಞಾನಸುಖ ಭೂಮದಿ ಗುಣಪೂರ್ಣ ನಿರ್ದೋಷ ವಿಷ್ಣು ಪರಮಾತ್ಮ ಹರಿ ಉದ್ದಾಮ ಬ್ರಹ್ಮ ಪೂರ್ಣಪ್ರಜ್ಞಾರ ಹೃಸ್ಥ ವನಜಭವಪಿತ ಕಲ್ಕಿ ಪ್ರಸನ್ನ ಶ್ರೀನಿವಾಸ ಶರಣು ಮಾಂಪಾಹಿ 19 -ಇತಿ ಕಲ್ಕ್ಯಾವತಾರ ಸಂಪೂರ್ಣಂ -
ಬಾರೊ ನಂದನಂದನ ಅರವಿಂದಲೋಚನ ಪ ಅರವಿಂದಲೋಚನ ಭವಬಂಧ ಮೋಚನ ಅ.ಪ ದುರುಳ ದುರ್ಯೋಧನನ ಅನುಜ ಕರದಿ ಎನ್ನ ಸೀರೆ ಪಿಡಿದು ಭರದಿ ಎಳೆಯುವ 1 ಅರಿಯದಂತೆ ಇರುವರೆಲ್ಲ ಕಿರಿಯ ಜನಗಳು ಹರಿಯೆ ಕರುಣಾನಿಧಿಯೇ ಎನ್ನ ಮೊರೆಯ ಕೇಳಲೊ 2 ಕಾಮ ಜನಕ ನಾಮಗಿರಿ ಶ್ರೀ ಸ್ವಾಮಿ ನರಹರೆ ಹೇಮಕಶಿಪು ತನುಜನಂತೆ ಪ್ರೇಮದಿ ಸಲಹೆಲೊ 3
ಮನೆ ಮನೆಯು ಹರಿಯ ಆಲಯವಾಗಬೇಕು ಪ ಜನಗಳು ಸದಾಚಾರ ಶೀಲರಾಗಬೇಕು ಅ.ಪ ಭೂತ ಸರ್ಗದಲಿ ಹೊಸ ನೀತಿಗಳ ಕಲ್ಪನೆಯು ಘಾತಕವು ಲೋಕಹಿತಕೆಂದರಿಯದೆ ಜಾತಿ ಬೇಡೆನ್ನುವರ ರೀತಿನೀತಿಗಳು ಆ ಪಾತರ ರಮಣೀಯವೆಂಬುದ ತೋರಬೇಕು 1 ಅಸ್ತವಾಗಲಿ ಜಾತಿ ಮತ ಭೇದವೆಲ್ಲವು ಸ್ವಸ್ಥವಾಗುವುದೆಂದು ಭಾರತವು ಎನ್ನುವರು ಮಸ್ತಕದಿ ಕರವಿಟ್ಟು ಕುಳಿತುಕೊಳ್ಳುವ ತೆರದಿ 2 ಬಹುಮತವು ಎಮ್ಮದೆಂಬುವ ಮದವು ಬೆಳೆಯುತಿರೆ ಸಹನವೇ ಸಾಧುಜನಗಳಿಗೆ ಶರಣ ಇಹಪರಗಳಲ್ಲಿಯೂ ಪ್ರಸನ್ನ ಹರಿ ಸಲಹುವನು ಕುಹಕ ಮಾರ್ಗವು ಬೇಧ ಸಹಜ ಧರ್ಮಗಳಿಂದ 3
ಮಾವನ ಮರ್ದನ ಜಗದ ಜೀವನ ಪ ಸೇವಕಜನ ಭಾವದೊಳಿಹ್ಯ ದೇವದೇವ ದೇವಕಿ ಕಂದನೋ ಅ,ಪ ನವನೀತ ಜಾರತನದಿ ಮೀರಿದವನ ನಿರಂಜನ 1 ಅಂಗನೆಯರ ಭಂಗಿಸಿದ ಅಂಗನೆಯಾಗಿ ಸಂಗರವ ಗೆಲಿದ ಪಿಂಗದಿವನಮಹಿಮಾರಿಂದಂಗಜಾರಿ ವಂದ್ಯನೋ 2 ನಾಮರೂಪಿಲ್ಲದವನು ನಾಮಧಾರಿ ಎನಿಸಿದನೆ ಸ್ವಾಮಿ ರಾಮನ ಮಹಿಮೆ ಈ ಕಾಮಿಜನಗಳು ಬಲ್ಲರೇ 3
ರಾಜರಯ್ಯ ನಾವು ನಮ್ಮ ರಾಜೀವಾಕ್ಷನ ಕರುಣವ ಪಡೆದರೆ ಪ ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ- ಪಂಚ ನಡತೆಯೇ ನಮಗೆ ಕಛೇರಿ ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್ ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು 1 ದೇವಾದಾಯದ ಧನವೇ ರೆವಿನ್ಯೂ ಕಾವನು ಕೊಲ್ವನು ಹರಿಯೆಂಬವುದು ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು 2 ದೇವೇಂದ್ರಾದಿಗಳೇ ಕಲೆಕ್ಟರ್ ಸುರರು ತಾಲ್ಲೂಕಾಫೀಸರು ಧರ್ಮನಿಷ್ಠರೆಲ್ಲ ನೌಕರ ಜನಗಳು 3 ದಾನಧರ್ಮವೇ ಡಬ್ಲಿಯು ಎಸ್ಸು ಜ್ಞಾನ ಸಾಧನವೇ ವಸೂಲಿ ಲೆಖ್ಖ ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4 ಸಪ್ತಾವರ್ಣವೇ ಸಪ್ತಾಂಗದ ಸಭೆ ಸಪ್ತಧರ್ಮವೇ ಕಾರ್ಯಗೌರವವು ಗುರೂಪದೇಶವೇ ಜ್ಞಾನಾರ್ಜನೆಯು 5 ವನಜನಯನ ಗುರುರಾಮವಿಠ್ಠಲನೆ ಸೈನು ಮೊಹರು ಮಹಾ ಚಕ್ರವರ್ತಿಯು 6