ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಕೃಷ್ಣವೇಣಿ | ಜಗಪಾವನೀ | ಜಯಕರುಣಿ ಭಯಹರಿಣಿ ಭವತಾರಿಣಿ ಪ ಮಾಬಳೇಶ್ವರನ ಸುಜಟಾ ಭಾಗದಲಿ ಪದ್ಮ | ನಾಭನಂಶದಿ ಬಂದು ಶೋಭಿಸುತಲಿ | ಈ ಭುವನಜನರ ಮನದಾಭೀಷ್ಟಮಂ ಕೊಡಲು | ತಾ ಭರದಿ ನದಿರೂಪನಾಗಿ ಪ್ರವಹಿಸಿದೆ 1 ನಿನ್ನೆಡೆಗೆ ನಡೆತಂದು ನಿನ್ನ ಜಲ ವೀಕ್ಷಿಸುತ | ನಿನ್ನ ಘೋಷವ ಕೇಳಿ ತನ್ನ ಕರದಿ | ನಿನ್ನ ಸ್ಪರ್ಶನ ಅಚಮನ ಮಾರ್ಜನದಿಂದ | ತನುಮನೇಂದ್ರಿಯಗಳು ಪಾವನವಾದವು 2 ಪೊಡವಿಯೊಳಧಿಕ ತೀರ್ಥ ತಡಿಯಗ್ರಾಮವೇ ಕ್ಷೇತ್ರ | ಸುರರು | ಒಡಲೊಳಿಹ ಜಲಚರಗಳೊಡನೆ ಗತಿಸಾಧಕರು | ನುಡಿವ ಪಕ್ಷಿಗಳು ಸಲೆ ಗಿಡಮರಗಳು 3 ಸಾಗಿಸುವ ಕರ್ಮೇದ್ರಿ ತ್ಯಾಸದ್ಧರ್ಮದಿಂ | ಯೋಗ ಅಷ್ಟಾಂಗದಿಂ ಯಾಗದಿಂದ | ಭೋಗಿಸುವ ಪುಣ್ಯವನು ರಾಗದಿಂ ತೀರದಿಹ | ಯೋಗಿಜನಕೀವೆ ತಾನೀಗ ದಯದಿ 4 ಬಿಂದುಮಾತ್ರವೇ ಬೀಳಲೊಂದು ಕಾಯದಿ ಅಘದ | ವೃಂದ ನಾಶನವಹುದು ಮಿಂದಡವನ | ಛಂದಮಂ ಬಣ್ಣಿಸುವದಿಂದು ತಿಳಿಯದು ಎನುತ | ತಂದೆ ಮಹೀಪತಿ ಜ ಕರದ್ವಂದ್ವ ಮುಗಿಯೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿತ್ಯ ಪರಿಪೂರ್ಣ ಕಾಮ ಪಟ್ಟಾಭಿರಾಮ ತನ್ನ ಸ್ಮರಿಸುವ ಜನಕೀವನು ಕ್ಷೇಮ ಪ ಭಾಸ್ಕರವಂಶ ಭೂಷಣ ತರಣಿಜಮಿತ್ರ ಭವ್ಯ ಚರಿತ್ರ | ದಾಶರಥಿ ಕರುಣಾಳು ಸರೋಜನೇತ್ರ ಅ.ಪ ಜಡಮತಿಯಾದರೂ ಇವನ | ಮರೆಯಾ ಇನ್ನು ಧೃಢಮತಿಗೆ ತನ್ನನೇ ಕೊಡುವೆನೈಯ್ಯಾ 1 ತಮ್ಮೋಳು ತಾವು ತಿಳಿದು | ಭಜಿಸುವರು ಇನ್ನು ಹೆಮ್ಮೆಯ ಮಾತುಗಳು ಬಿಡಿರಿ ಜನರು 2 ರಾಮನು ನರನೆಂಬ ಪಾಮರನ ಬಾಯಲಿ ಮಣ್ಣು ಸೋಮಶೇಖರ ತನ್ನ ಸತಿಗೆ | ಪೇಳಿದ ಇವನ ನಾಮದ ಮಹಿಮೆ ಕುಣಿಕುಣಿದು 3 ನಿರುತಾ ಪೊಗಳುವವಿವನ ವೇದ | ಇವನಾ ಚರಣೆ ಸಜ್ಜನರಿಗೆ ಬಲುಸ್ವಾದ 4 ಸೇತುವೆ ಕಟ್ಟುವುದುಂಟೆ ಕೋತಿದಂಡುಗಳೆಲ್ಲಾ ವ್ರಾತ ರಹಸ್ಯವೇತಕೆ ಚಿಂತೆ 5 ಹೊರಗಿನ ಕಣ್ಣಿಂದ ಅರಿಯಲು ಸಾಧ್ಯವಲ್ಲಾ ನೆರೆ ಒಳಗಣ್ಣಲಿ ನೋಡಬೇಕು | ಸ ದ್ಗುರು ಕಟಾಕ್ಷವಾದವಗೆ ಜೋಕು 6 ಪ್ರತ್ಯಕ್ಷವಾದಿಗಳಿಗೆ ಮೃತ್ಯುವಿನ ಬಾಯೊಳು ಸತ್ತು ಹುಟ್ಟುವುದು ತಪ್ಪುವುದಿಲ್ಲಾ | ಆ ಪತ್ತು ಇದೇ ದುರ್ಜನಿರಿಗೆಲ್ಲಾ 7 ಮಗನು ಬ್ರಹ್ಮನು ಮೊಮ್ಮಗನು ರುದ್ರನು ಮೂ ಜಗವನಾಳುವ ನಾರಾಯಣನಿವನು | ತಾನು ಮಗುವಾಗಿ ದಶರಥಗುದಿಸಿದನು 8 ಮುನಿ ಯಾಗವ ಪಾಲಿಸಿ ವನಿತೆಯ ಶಾಪ ಬಿಡಿಸಿ ತನ್ನೊಳಗಿಟ್ಟು ತಾ ಹುಡುಕಿದನು 9 ನರನಾಗಿ ದೈತ್ಯರ ಮುರಿದು ದೇವತೆಗಳಿಗೆ ಗರಸನಾಗಿ ಸಾಕೇತಪುರದಿ ಪೊಳೆದ 10 ನರನು ಪಾಮರನು ಹ್ಯಾಗೆ ತಿಳಿಯುವನು | ಸಂಸೃತಿ ಶರಧಿಯೊಳು ಬಿದ್ದು ಬಳಲುವನು11
--------------
ಗುರುರಾಮವಿಠಲ
ಮಾರುತಿಯೆ ಕೃಪೆ ಮಾಡೈ ವರ ಪ ಪ್ರಾಣ ಹರ ಗಂಭೀರನೆ ಅ.ಪ. ಕಾಲ ವಕ್ಷ ವಿಮಲ ಪಕ್ಷ 1 ವಾತ ಲಂಕೇಶ ಮುಖ ಭೀತಿಸಂದಾಯಕ2 ವಿವರ್ಜಿತ ಭೀಮ ನಿತ್ಮಾತ್ಮಕ 3 ಕಾನನ ಗೋಚರ ವಾನರ ಪುಂಗವ ಜನಕೀ ಪ್ರಾಣದ ಧೇನುನಗರಹಿತ4
--------------
ಬೇಟೆರಾಯ ದೀಕ್ಷಿತರು
ವರ್ಣಿಸಲಳವೆ ಕರುಣಾಳು ಗುರುವರ ನಿಮ್ಮ ವರ್ಣವರ್ಣದ ಚರಿತೆ ಗುಣಗಣಗಳ ಪ. ವರ್ಣಪ್ರತಿಪಾದ್ಯ ದೇವತೆಗಳಿಗೆ ಅಳವಲ್ಲ ಇನ್ನಿದನು ಪಾಮರರು ಅರಿಯುವರೆ ಜಗದಿ ಅ.ಪ. ಪ್ರತಿಪ್ರತಿ ಕಲ್ಪದಲಿ ಅತಿಶಯದ ತಪಚರಿಸಿ ಪತಿತಪಾವನ ಹರಿಯ ಮನ ಮೆಚ್ಚಿಸಿ ಕ್ಷಿತಿಯೊಳಗೆ ಅವತರಿಸಿ ದೇವಾಂಶರೆಂದೆನಿಸಿ ಪತಿತರನು ಪಾವನವಗೊಳಿಪ ಘನಮಹಿಮ 1 ಭಕ್ತರು ಕರೆದಲ್ಲಿ ಆಸಕ್ತಿಯಿಂ ಬಂದು ಯುಕ್ತಯುಕ್ತಗಳಿಂದ ತತ್ವಗಳನರುಹಿ ಮುಕ್ತಿಗೊಡೆಯನ ಮಾರ್ಗ ಮುಕ್ತಾರ್ಥ ಜನಕರುಹಿ ಮುಕ್ತಿಪಥ ಸವಿತೋರ್ವ ಶಕ್ತಿ ಮಹಿಮೆಗಳ 2 ಪಾದ ಪದ್ಮಸುತ ತಂದೆ ಮುದ್ದು ಮೋಹನದಾಸರಾಯರೆಂದೆನಿಸಿ ಮಧ್ವಮತಸಾರಗಳ ಹೀರಿ ಮಕರಂದವನು ಸಿದ್ಧಿಗೊಳಿಸಿ ಸುಜನಕೀವ ಶ್ರೀ ಗುರುವೆ3 ಕರಿಗಿರಿ ನರಹರಿಯ ಚರಣಕಮಲ ಧ್ಯಾನ ಅರಘಳಿಗೆ ಬಿಡದೆ ಮನಮಂದಿರದಿ ಸ್ಮರಿಪ ಕರುಣಜಲನಿಧಿಯೆ ನಿಮ್ಮ ಮೊರೆಹೊಕ್ಕವರ ಕಾಯ್ವ ಪರಮಪ್ರಿಯರೆಂತೆಂಬ ಬಿರುದುಳ್ಳ ಗುರುವೇ 4 ಕಮಲಾಂತ ಪ್ರೀತ ಶ್ರೀ ಕಮಲನಾಭನ ಪಾದ ಕಮಲ ಮನದಲಿ ಸ್ಮರಿಪ ಕಮನೀಯ ಗಾತ್ರ ಕಮಲಾಕ್ಷ ಗೋಪಾಲಕೃಷ್ಣವಿಠ್ಠಲನ ಪದ ಕಮಲ ಮನದಲಿ ತೋರಿ ಕೃಪೆಯಗೈಯ್ಯುವುದು 5
--------------
ಅಂಬಾಬಾಯಿ
ವಾಯುದೇವರು ನಮೋ ನಮೋ ಹನುಮಾ ಪ್ಲವಗೋ ತ್ತುಮಾಂಜನೇಯ ನಾಮಾ ಪ ಶಮಾದಿಗುಣಗಣ ಸಮೀರ ನುತಜನ ಪ್ರಮಾದ ಹರಿಸೆಲೊ ಉಮೇಶ ವಂದ್ಯನೆ ಅ.ಪ ದಶಾಪುರುಷ ನೀನೇ ತ್ರೀ - ದಶಾಸ್ಯಮುಖ ಮಹ ನಿಶಾಚರೇಶರ ದಶಾಕಳೆದು ಈ ವಸೂಧಿಯೋಳು ಮೆರೆದೆ 1 ಬಕಾಸುರಗೆ ವೈರೀ ನಿನ್ನ ಭಕೂತ ಜನಕೀಪರಿ ಅಖೀಳ ಸೌಖ್ಯದ ಲಕೂಮಿರಮಣನ ಭಕೂತಿ ಪೂರ್ವಕ ಮೂಕೂತಿ ದಾಯಕ 2 ಯತೀಶಕುಲನಾಥಾ ದಶ - ಮತೀನಾಮ ಖ್ಯಾತಾ ಕ್ಷಿತೀಶ ಗುರುಜಗನ್ನಾಥಾವಿಠಲ ದೂತ ಪಾಥೋಜಜಾಂಡಕೆ ನಾಥಾನೆ ಪಾಲಿಸೊ 3
--------------
ಗುರುಜಗನ್ನಾಥದಾಸರು
ಶ್ರೀಹರಿ ಮೂಜಗದೊಳು ನೀನು ತೇಜವುಳ್ಳವನಾಗಿ ಪ ಕಾಲದಿ ನಿನ್ನಯ ಮೇಲಿಹ ನಿರ್ಮಾಲ್ಯ ಮಾಲೆಯನೆಲ್ಲ ವಿಸರ್ಜಿಸಿ ತೊಳೆದು ನೀಲಮಾಣಿಕ ವಜ್ರಮಯವಾದ ಪೀಠದ ಮೇಲೆ ವಾಲಗವಾಗಿ ಲೀಲೆಯ ತೋರುತ1 ಮೊದಲು ಸಂಕಲ್ಪಿಸಿ ತುಳಸಿ ಶ್ರೀಗಂಧದಿ ಉದಕ ಶುದ್ಧವ ಮಾಡಿ ಅದರೊಳು ಬಳಿಕ ವಿಧಿಸಿಯೆ ಮತ್ತೇಳು ನದಿಯನುಚ್ಚರಿಸಲು ಒದಗಿ ಬಾರೆಲೊ ಕರಚರಣ ಮಜ್ಜನಕೀಗ 2 ಮಾನಸದಘ್ರ್ಯವು ಆಚಮನಗಳು ನಾನಾ ಪಂಚಾಮೃತ ಫಲವಭಿಷೇಕವು ಗಾನ ಸೂಕ್ತಗಳಿಂದ ಮಧುಪರ್ಕಾದಿಗಳು 3 ವಸ್ತ್ರವಾಭರಣವು ಯಜ್ಞಸೂತ್ರವ ತೊಡಿಸಿ ಚಿತ್ರವಾಗಿಹ ಗಂಧ ಅಕ್ಷತೆವಿಡಿಸಿ ಪತ್ರಪುಷ್ಪವು ಶ್ರೀತುಳಸಿ ಮಾಲೆಗಳಿಂದ ಸ್ತೋತ್ರವು ಸಾಹಸ್ರನಾಮಗಳಾಯಿತು 4 ಧೂಪಮಾಧ್ರೂಪಯ ದೀಪದ ದರುಶನವು ಆದಷ್ಟು ಸರ್ವೋಪಚಾರಗಳು ಕದಳಿ ನಾರಿಕೇಳÀವು ಪರಿ ನೈವೇದ್ಯ ದಯಾಪರಮೂರ್ತಿ 5 ಆಗರದೊಳು ಬೆಳೆದ ನಾಗವಲ್ಲಿಯ ದಳ ಪೂಗಿಯಫಲ ಸಹ ನಾಗಶಯನಗಿಟ್ಟು ಬೇಗದಿ ಮಂಗಳ ಪದಗಳ ಹೇಳಿ ಲೇ ಸಾಗಿ ಎತ್ತುವ ಅಮೋಘದಾರತಿಗಳ 6 ಮಾಡಿದ ಪೂಜೆಯ ನೋಡಿ ಕರುಣದಿಂದ ಬೇಡಿದಿಷ್ಟವನೀಯೊ ರೂಢಿಯ ಒಡೆಯ ಪಾಡಿ ಪೊಗಳುವೆ ನಿನ್ನ ಪಂಥ ಬೇಡೆನ್ನೊಳು ಅನುದಿನ ವರಾಹ ತಿಮ್ಮಪ್ಪ 7
--------------
ವರಹತಿಮ್ಮಪ್ಪ