ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಿಸೊ ತವರೂಪ ತೋಯಜ ನೇತ್ರ ಪ ಮಾರಜನಕ ಕರುಣಾರಸಪೂರ್ಣನೆ ನಾರಾಯಣ ಭವತಾರಕ ಮಮ ಸ್ವಾಮಿ ಅ.ಪ. ದಶರಥ ನಂದನ ವಸುಮತಿ ರಮಣ ತ್ರಿ ದಶವಂದಿತ ಚರಣ ಪಶುಪತಿಧನುಭೇದನ ವಸುಧಾಸುತೆರಮಣ ಋಷಿಪತ್ನಿ ಶಾಪಹರಣ ಅಸಮಾ ವಲ್ಕಲ ಚೀರವಸನಾ ಭೂಷಣಸ್ವಾಮಿ ಬಿಸಜಾಪ್ತನ ಸುತಗೊಲಿದವನಗ್ರಜ ನಸುವನು ತೊಲಗಿಸಿ ಅಸುನಾಥನ ಸುತ ಗೊಸೆದು ಬಿಸಜಭವ ಪದವಿಯ ಕರುಣಿಸಿ ವಿಷಧಿಯ ಬಂಧಿಸಿದಸಮ ಸಮರ್ಥ 1 ದಿನಮಣಿವಂಶ ಮಸ್ತಕಮಣಿಯೆಂದೆನಿಸಿ ಮುನಿ ಕೌಶಿಕನ ಯಜ್ಞಫಲವಾಗಿ ರಕ್ಷಿಸಿ ಅನಲಾಕ್ಷಧನು ಮುರಿದು ಮುನಿಪತ್ನಿಯನು ಪೊರೆದು ಜನಕಸುತೆಯ ಕರವನು ಪಿಡಿದ ಧೀರ ಜನಕನಾಜ್ಞೆಯಿಂ ವನವ ಪ್ರವೇಶಿಸಿ ಇನಸುತಗೊಲಿಯುತ ಅನಿಲಜನಿಂದಲಿ ಘನಸೇವೆಯ ಕೊಂಡನಿಮಿಷ ವೈರಿಯ ಹನನಗೈದ ಹೇ ಅನುಪಮ ಶೂರ2 ಲೀಲಾಮಾನುಷರೂಪ ಭೂಲಲನಾಧಿಪ ಫಾಲಾಕ್ಷವಿನುತ ವಿಶಾಲಸುಕೀರ್ತಿಯು ತಾ ಆಲಸ್ಯವಿಲ್ಲದೆ ವಿಶಾಲವನವ ಪೊಕ್ಕು ವಾಲಿಯ ಸಂಹರಿಸಿ ಪಾಲಿಸಿ ಸುಗ್ರೀವನ ಲೋಲಲೋಚನೆಯಿಹ ಮೂಲವ ತಿಳಿದು ಬಂ ದ್ಹೇಳಿದ ಪವನಜಗಾಲಿಂಗನವಿತ್ತು ಖೂಳ ದಶಾಸ್ಯನ ಕಾಲನೆಂದೆನಿಸಿದ ಶ್ರೀಲೋಲನೆ ಶ್ರೀ ಕರಿಗಿರೀಶನೆ3
--------------
ವರಾವಾಣಿರಾಮರಾಯದಾಸರು
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ರಾಮಾ ನಿನ್ನ್ಹ್ಹೊರತನ್ಯರ ಕಾಣೆ ಪೊರೆ ನೀನೆನ್ನಾಣೇ ಶ್ರೀರಾಮಾ ಪ ಕಾಮಾಂತಕ ತನ್ನ ಭಾಮೆಗೊರೆದ ಶ್ರೀ ರಾಮತಾರಕಮಂತ್ರವೆ ಗತಿ ಲೋಕಕೆ ರಾಮಾಅ.ಪ ಮತಿವಂತ ದಶರಥ ಕೌಸಲ್ಯೆಯರ ಸುತನಾಗ್ಯವತರಿಸಿ ಅತಿ ಬಾಲ್ಯದಿ ಮುನಿಯೊಡನಡವಿಗೆ ನಡೆದು ಕಡು ದುರುಳೆಯಸದೆದು ಮತಿಹೀನ ರಕ್ಕಸರುಪಟಳವಳಿದು ಮುನಿಪತಿ ಮಖ ಬೆಳೆದು ಪತಿಸುತಸಖಹಿತ ಜನಪತಿ ಜೀವಿತ ಪಥದಾದರ್ಶವ ಜಗತಿಗೆ ತೋರಿದೆ1 ಮುನಿಗೌತಮಸತಿ ತಾ ಶಿಲೆಯಂತಿರಲು ಪದರಜದಿಂದುದ್ಧರಿಸಿ ಜಾಹ್ನವಿ ಚರಿತೆಯ ಕೇಳುತ ನಲಿದು ಅನುಜಾತನ ಬೆರೆದು ಜನನಾಥನ ಜನಕನ ಮಿಥಿಲೆಗೆ ನಡೆದು ಹರಧನುವನುಪಡೆದು ಅನುಪಮವೆನಿಪದ ನಡುವೊಳೆ ಖಂಡಿಸಿ ಜನಕಸುತೆಯ ಕರಕಮಲವ ಪಿಡಿದೆ 2 ಪರಶುಹಸ್ತರು ಮಾರ್ಗದಿ ಎದುರಾಗಿ ಅಂಜಿಸೆ ಬೆರಗಾಗಿ ಕರದಲ್ಲಾಟಿಕೆಯೊಲು ಧನುವದಗ್ರಹಿಸಿ ಕ್ಷಣದಲ್ಲುಪಹರಿಸಿ ಜನಕೆ ಹಿರಿಯರಿಗೆ ದಶರಥನಿಗೆ ಸುರನರರೆಲ್ಲರು ಪರಮಾನಂದದೊ ಳಿರುತಿರೆ ವಸಿದೆ ಸುದತಿಯೊಡನೆ ರಘುರಾಮ3 ಹಿಂದೆ ನಾ ಬಹುಜನ್ಮಗಳಲಿ ಬಂದು ನೊಂದೆನು ಈ ಭವದಿ ನಿನ್ನಲಿ ಬಂದು ನಿಂದೆ ಗತಿಯೆಂದು ಸಂದೇಹವಿಲ್ಲ ನೀನೇ ಗುಣಸಿಂಧು ಜಗಕಾಪದ್ಬಂಧು ತಂದೆ ನೀನಿಂದೆನ್ನ ಬಂಧನ ಬಿಡಿಸದೆ ಕೊಂದೆಯಾದರೆ ಕುಂದದು ನಿನಗಪಯಶ 4 ಆನಂದಮಯ ನೀನಾನಂದದಲ್ಲಿದ್ದೆ ಆಶ್ಚರ್ಯವದೇಳು ಆನಂದವನಂದು ಕುಂದದಲಿತ್ತೆ ಜಗಕತಿಶಯವೇಳು ಸಾನಂದದೊಳಿದ್ದರು ತವಸನ್ನಿಧಿಬಲದಿ ಅತಿಶಯಮತ್ತೇಳು ನ್ಹೊಂದಿಸಿ ಪೊರೆ ರಘುರಾಮವಿಠಲ 5
--------------
ರಘುರಾಮವಿಠಲದಾಸರು