ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ತಿಳಿವರು ಮನುಜರು ತಿಳಿದೊಮ್ಮೆ ತಿಳಿಯರು ನಳಿನಾಕ್ಷ ನಾಶರಹಿತನಲ್ಲದಿಲ್ಲವೆಂದು ಪ ಅರ್ಕಜಂಬುಜ ಬಲ್ಲ .................. ಮಾರ್ಕಂಡೆಯ ಮುನಿ ಬಲ್ಲ ಮಹಿ ಬಲ್ಲಳು ಅರ್ಕ ತನುಜ ಬಲ್ಲ ಅಂಬರೀಷ ಬಲ್ಲ ದೇ ವರ್ಕಳವೊಡಿಯ ಮಾಧವನಲ್ಲದಿಲ್ಲವೆಂದು 1 ವಾಯುನಂದನ ಬಲ್ಲವಾ............. ಯತಿ ಬಲ್ಲ ಕರಿ ಬಲ್ಲನೊ ರಾಯ ಧರ್ಮಜ ಬಲ್ಲ ರಾಜ ರಾಜನು ಬಲ್ಲ ಮಾಯಾರೂಪತಾಳಿ ಹರಿಯಲ್ಲದಿಲ್ಲವೆಂದು2 ಗರುಡದೇವನು ಬಲ್ಲ ಗಂಗಾತನಯ ಬಲ್ಲ ಉರಗಾಧಿಪತಿ ಬಲ್ಲ ಉಮೆ ಬಲ್ಲಳು ................ಶರಣರಣ್ಣಪ್ಪ ಪರಮಾತ್ಮ -ಇಂ ದಿರಾಪತಿಯಲ್ಲದಿಲ್ಲವೆಂದು3 ಪಾರಾಶರನು ಬಲ್ಲ ಪ್ರಹ್ಲಾದ ಭಕ್ತ ಬಲ್ಲ ನಾರದಮುನಿ ಬಲ್ಲ ನರಬಲ್ಲನು ವಾರಿಜಸಖ ಬಲ್ಲ ವಶಿಷ್ಠ ತಪಸಿ ಬಲ್ಲ ಧಾರುಣಿಕರ್ತೃ ಶ್ರೀಧರನಲ್ಲದಿಲ್ಲವೆಂದು 4 ಬಲಿಚಕ್ರವರ್ತಿ ಬಲ್ಲ ಭೃಗುಋಷೇಶ್ವರ ಬಲ್ಲ ಕಳಸಸಂಭವ ಬಲ್ಲ.................. ಬಲ್ಲನು ಗಿಳಿಮುಖದವ ಬಲ್ಲ ಗೌತಮ ಮುನಿ ಬಲ್ಲ ಇಳಿಗೆ ಆಧಾರ ಶ್ರೀಕೃಷ್ಣನಲ್ಲದಿಲ್ಲರೆಂದು 5 ಉದಧಿರಾಯನು ಬಲ್ಲ ಉಧ್ಧವ ಯದು ಬಲ್ಲ ವಿಧುಶೇಖರ ಬಲ್ಲ ವಿದುರ ಬಲ್ಲ ಪದುಮನಾಭನೆ ಪರಗತಿಯಲ್ಲದಿಲ್ಲವೆಂದು 6 ಜನಕರಾಜನು ಬಲ್ಲ ಜಾಹ್ನವಿನದಿ ಬಲ್ಲಳು ದನುಜೋತ್ತಮ ಬಲ್ಲ ವಾಲ್ಖ್ಯ ಬಲ್ಲ ಅನುಸಾಲ್ವಪತಿ ಬಲ್ಲ ಅಜಮಿಳನು ಬಲ್ಲ ಜನಸ್ಥಿತಿಲಯ ಜನಾದರ್Àನ ಅಲ್ಲದಿಲ್ಲವೆಂದು7 ಜಮದಗ್ನಿ ಬಲ್ಲ ಜಾತವೇದಸ ಬಲ್ಲ ಸಾಮಾವರ್ತಿ ಬಲ್ಲ ಶಶಿ ಬಲ್ಲನು ಆ ಮಹಾಕಪಿ ಬಲ್ಲ ಅಕ್ರೂರನು ಬಲ್ಲ ರೋಮ ರೋಮ ಬ್ರಹ್ಮಾಂಡ ರಾಮನಲ್ಲದಿಲ್ಲವೆಂದು 8 ಪುಂಡರೀಕ ಬಲ್ಲ ದಾ................... ವಂದಾರವ ಬಲ್ಲ ಸಿರಿ ಬಲ್ಲಳು .............. ಆಶಾ ಶ್ರೀಶ ವಿಜಯವಿಠ್ಠಲೇಶನಲ್ಲದಿಲ್ಲವೆಂದು
--------------
ವಿಜಯದಾಸ
ಭಾಗ್ಯದ ಲಕ್ಷ್ಮೀ ಬಾರಮ್ಮಾ - ನಮ್ಮಮ್ಮಾ ನೀ ಸೌ-ಭಾಗ್ಯದ ಲಕ್ಷ್ಮೀ ಬಾರಮ್ಮಾ ಪಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||ಸಜ್ಜನ ಸಾಧು ಪೂಜೆಯ ವೇಳೆಗೆ |ಮಜ್ಜಿಗೆಯೊಳಗಿನ ಬೆಣ್ಣೆಯಂತೆ 1ಕನಕವೃಷ್ಟಿಯ ಕರೆಯುತ ಬಾರೆ |ಮನಕೆ ಮತಿಯ ಸಿದ್ದಿಯ ತೋರೆ ||ದಿನಕರಕೋಟಿ ತೇಜದಿ ಹೊಳೆಯುತ |ಜನಕರಾಜನ ಕುಮಾರಿ ಸೀತೆ 2ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |ಕಂಕಣ ಕೈಯಾ ತಿರುವುತ ಬಾರೆ ||ಕುಂಕುಮಾಂಕಿತೇ ಪಂಕಜಲೋಚನೆ |ವೆಂಕಟರಾಯನ ಮೋಹದ ರಾಣಿ 3ಅತ್ತಿತ್ತಗಲದೆ ಭಕ್ತರ ಮನೆಯಲಿ |ನಿತ್ಯಮಂಗಲವುನಿತ್ಯಮಹೋತ್ಸವ ||ಸತ್ಯವ ತೋರುವ ಸಜ್ಜನರಿಗೆ ನೀ |ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ 4ಸಕ್ಕರೆ ತುಪ್ಪದ ಕಾಲವೆ ಹರಿಸಿ |ಶುಕ್ರವಾರದ ಪೂಜೆಯ ಕೊಂಬೆ ||ಆಕ್ಕರವುಳ್ಳ ಅಳಗಿರಿ ರಂಗನಶಕ್ತಪುರಂದರವಿಠಲನ ರಾಣಿ5
--------------
ಪುರಂದರದಾಸರು