ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಬೇಡಲೊ ಕೃಷ್ಣ ನಾಚಿಕಿಲ್ಲದೆ ಪ ಜ್ಞಾನಶೂನ್ಯನಾಗಿ ಬಹಳ ಹೀನ ಕಾರ್ಯ ಮಾಡಿ ನಾನು ಅ.ಪ. ಪರರ ವನಿತೆ ಧನಗಳಿಂಗೆ ಅರಿತು ಅರಿತು ಆಶೆಪಡುತ ದುರಿತಕೋಟಿಗಳನು ಮಾಡಿ ಪರಮ ನೀಚನೆನಿಸಿದವನು 1 ವನಗಳನು ಕಡಿಸಿ ಹಿರಿದು ಮನೆಗಳನ್ನು ರಚಿಸಿಕೊಂಡು ವನಿತೆ ಮಾತು ಕೇಳಿ ಜನನಿ ಜನಕರನ್ನು ತೊರೆದ ಪಾಪಿ 2 ಸತ್ಯ ಮತವನು ತುಚ್ಛಗೈದು ನಿತ್ಯಕರ್ಮಗಳನು ಬಿಟ್ಟು ಮತ್ತನಾಗಿ ತಿಂದು ಮಲಗಿ ಕತ್ತೆಯಂತೆ ಹೊರಳುವವನು 3 ಆರ್ತರಾದ ಜನರ ಸಲಹಿ ಕೀರ್ತಿಯನ್ನು ಹೊಂದಿ ದೇಹ ಸಾರ್ಥಕವನು ಮಾಡಿಕೊಳದೆ ಧೂರ್ತನೆನಿಸಿಕೊಳುವ ನರನು 4 ವಾಸುದೇವ ಸಕಲ ದೋಷ ರಾಸಿಗಳನು ದಹಿಸುವ ರಂ- ಗೇಶವಿಠಲರೇಯ ನಿನ್ನ ದಾಸನೆಂದು ಪೇಳದವನು 5
--------------
ರಂಗೇಶವಿಠಲದಾಸರು
ಮಾನವ ಜನುಮ ನಾನು ಯಾರೆಂಬ ಖೂನವಿಲ್ಲದೆ ಪ ಕಾಲನಾಜ್ಞೆಯನ್ನು ಪಡೆದು ಸೂಳ ಎಣಿಸಿ ಜಗಕಿಳಿದು ಜಾಲಹಾಕಿ ಜವನಗೊಲಿದು ಶೂಲಕ್ಹಾಕುವ ಮಾರಿಗೊಲಿದು 1 ತಂದ ಪುಣ್ಯವನ್ನು ಕೆಡಿಸಿ ಮಂದಿಮಕ್ಕಳನ್ನು ಬಿಡಿಸಿ ಮಂದನೆನಿಸಿ ಕುಂದುಹೊರೆಗೆ ಬಂಧಕ್ಕೆಳೆವ ರಂಡೆನ್ಹೊರೆಸಿ2 ಜನನಿಜನಕರನ್ನು ಜರೆದಿ ಮನೆಯ ಹೆಂಡಿರ ಮಾನ ಕಳೆದಿ ಬಿನುಗು ಸೂಳೆಗೆ ವಶನಾದಿ ಬಿನುಗರೊಳಗೆ ಬಿನುಗನಾದಿ 3 ನೀಗಿದಿ ಕುಲಶೀಲತೆ ಮುದಿ ಗೂಗೆಯಂದದಿ ದಿನಗಳೆದಿ ಭಾಗವತದ ಭಾಗ್ಯ ಮರೆದಿ ಕಾಗೆನುಂಗಿದ ಹೊಲೆಯನಾದಿ 4 ಸಾಧು ಸುಜನಬೋಧ ಜರೆದಿ ವೇದವಾಕ್ಯ ಮೀರಿ ನಡೆದಿ ಶೋಧಿಸಿ ಸಮಯ ತಿಳಿಯದ್ಹೋದಿ ಆದಿ ಶ್ರೀರಾಮಗ್ಹೊರತಾದಿ 5
--------------
ರಾಮದಾಸರು
ಹುಚ್ಚರಾಗಿ ಕೆಡಬೇಡಿರೆಚ್ಚರವ ಪಡಿರೋ ಮೆಚ್ಚಿ ಸ್ತ್ರೀಯರ ಇಚ್ಛೆಗೊಳಗಾಗದಿರಲೊ ಪ ಬಡಿವಾರತನದಿಂದ ಕಡುದೈನ್ಯದೋರುವರು ಒಡಲೊಳಗಿನ ಹರಳು ಒಡೆದರಳುವಂತೆ ಒಡಲೊಳೊಂಚನೆ ಬಿಡರು ಕಡೆತನಕ ಸ್ಥಿರವಲ್ಲ ಕಡುಪಾಪಿರೂಪಿನ ಮಡದಿಯರ ಮನವು 1 ಮನವ ಕರಗಿಸಿ ತನ್ನ ಮನೆಯ ಪುರುಷನ ಜರೆದು ಮನಮೋಹಿಸಿನ್ನೊಬ್ಬ ಗೆಣೆಯನಂ ಕೂಡಿ ತಿನುವಳು ಬಿಡದೊಂದುದಿನ ಪತಿಯ ಪ್ರಾಣಮಂ ಘನಪಾಪಿ ವನಿತೆಯರ ಮನನಂಬಿಗಲ್ಲ 2 ತನ್ನ ಪುರುಷನಮುಂದೆ ಬಣ್ಣದಮಾತಾಡಿ ಹಣ್ಣಿಗೆತಂದವನ ತನ್ನೊಶದಲಿರಿಸಿ ಮುನ್ನ ಜನನೀ ಜನಕರನ್ನು ಅಗಲಿಸಿ ಒಡನೆ ತನ್ನಯ ಅನುಕೂಲವನ್ನೆ ಸಾಧಿಪಳು 3 ಅವಗೆ ಹಿತವನೆ ತೋರಿ ಇವಗೆ ಕಾಲನೆ ಎತ್ತಿ ಅವನಿಗೆ ಕೈಕೊಟ್ಟು ದಿವರಾತ್ರಿಯೆನದೆ ಭ ಭವ ಭವವ ತಿರುಗುವರು ಜೀವಘಾತಕಿಯರದಾವ ಭರವಸವೊ 4 ಹರಿದಿಯರ ಒಡನಾಟ ನರಕಕ್ಕೆ ಮೂಲವು ದುರಿತಕ್ಕೆ ತವರಿದು ಮರೆಮೋಸದುರುಲು ದುರುಳೆಯರ ಚರಿತಕ್ಕೆ ಮರುಳಾಗಿ ಕೆಡದೆ ಭವ ಹರ ಶ್ರೀರಾಮನ ಪದಸ್ಮರಣೆ ಸಂಪಾದಿಸಿರೊ 5
--------------
ರಾಮದಾಸರು