ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

[ಶ್ರೀ ಪ್ರಾಣದೇವರ ಅನುಗ್ರಹವಿಲ್ಲದೆ ಶ್ರೀ ಹರಿಯು ಎಂದಿಗೂ ಒಲಿಯನೆಂಬ ಪ್ರಮೇಯ. ಪೂರ್ವಜನ್ಮದಲ್ಲಿ ವಾಲಿ ಹನುಮಂತನ ಅನುಗ್ರಹವಿಲ್ಲದ ಕಾರಣ ರಾಮನು ನಿಗ್ರಹಿಸಿದ. ಅರ್ಜುನನಾದಾಗ್ಗೆ ಭೀಮನು ಅಗ್ರಜನಾಗಿ ದಯ ಮಾಡಿದುದಕ್ಕೆ ಕೃಷ್ಣನು ಸಖನಾದ. ಮೂರನೆ ಜನ್ಮ ಜಯತೀರ್ಥರಾದಾಗ್ಗೆ ಜ್ಞಾನವಿತ್ತು ಕುಮತಗಳ ನಿರಾಕರಿಸಿದಿ ಪ್ರಾಣನ ಕೃಪೆಯಿಂದ ಎಲ್ಲ ಸೌಖ್ಯ ಗಂಟು. ಈಗಾದರು ಹಿಂದಿನಂತೆ ಪೊರೆಯೊ ಎಂದು ಪ್ರಾರ್ಥನೆ.] ಧ್ರುವತಾಳ ಹಿತಮಾಳ್ಪ ಜನಕನಾಗಿ ರಕ್ಷಸು ಎಂದೆಂಬೆನೆಪಿತೃ ಸಮಾನ ಜೇಷ್ಠನೆಂದೆಂಬ ವಿಧದಿ ಪಿತನೆ ಸರಿ ಎನಗೆ ಉಪಕಾರವ್ಯಾತಕಿನ್ನುಮಾತರಿಶ್ವನೆ ದೂರ ನೋಳ್ಪದೇನೊಭಾತೃನಾಗಿ ಎನ್ನ ಪಾಲಿಸು ಎಂದೆಂಬೆನೆನೋತ ಪುಣ್ಯಗಳಿಂದ ಹರಿಯು ತಾನೆ ಸ್ವತ ಏವ ಮಾಡಿದ ಈಗ ನುಡಿವದೇನೊಮಾತೃ ನೀನೆ ದೇಹ ಪೊರೆಯುವಲ್ಲಿಅತುಳ ಗುರುವಾಗಿ ಬೋಧಿಸು ಎಂದೆಂಬೆನೆಆತ್ಮ ಗುರುವಿಗೆ ನಿಜ ಗುರುವೆನಿಸಿದೆ ನಿತ್ಯನೂತನವಾಗಿ ಯಿದನು ಬೇಡಿಕೊಂಬುವದೇನುವೀತಿ ಹೋತ್ರನೆ ದೈತ್ಯ ಸಂತತಿಗೆಪ್ರತ್ಯಂತರ ಜನುಮದ್ವಯದಿ ನಿಜ ಮುಖದಿಂದಲೆಮತಿಯು ನೀಡಿದ ಮುಖ್ಯ ಗುರು ನೀನೆ ಪ್ರತಿಯಿಲ್ಲದೆ ಇದ್ದ ಇಷ್ಟನೇನೊ ಎನಗೆಗತಿ ಪ್ರದಾತನು ನೀನೆ ಆವಕಾಲಆಪ್ತನಾಗಿ ನೀನು ಸಲಹಬೇಕೆಂಬೆನೆ ಗತ ಜನ್ಮಗಳಲಿ ನೀನು ಮಾಡಿದುಪ-ಕೃತಿಗಳೆಣಿಸೆ ಈಗ ನಿನಗಿಂದಧಿಕವಾದಆಪ್ತನಾವನು ಎನಗೆ ಅರಸಿ ನೋಡಾಮತಿಯು ರಹಿತವಾದ ಜನುಮಗಳು ಬರಲಿಅತಿ ಹಿತ ನೀನೆ ಎನಗೆ ಇಹ ಪರದಿಅತಿಶಯ ಕೃಪಾನಿಧೆ ಗುರು ವಿಜಯ ವಿಠ್ಠಲರೇಯಅತಿ ಪೀಯನಾಗುವನು ನಿನ್ನ ದಯದಿ 1 ಮಟ್ಟತಾಳ ಬಾಂಧವನು ನೀನೆ ಎರಡು ಬಗೆಯಿಂದ ತಂದೆ ನಿನ್ನುಪಕಾರ ಅನಂತ ಜನುಮದಲಿಮಂದನಾದವ ನನು ತೀರಿಸಬಲ್ಲೆನೆಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲ ನಿ-ನ್ನಿಂದಲಿ ಎನಗೆ ಅನುಗ್ರಹ ಮಾಡುವನೊ 2 ತ್ರಿವಿಡಿತಾಳ ನಿನ್ನ ಕರುಣಪೇಕ್ಷ ಮಾಡದಲೆ ಒಂದುಜನುಮ ಹರಿ ಕರುಣವಿಲ್ಲದಲೆ ಕಳದೇಅನಂತರದಿ ಎನ್ನ ಪುಣ್ಯ ಸಾಸಿರದಿಂದಅನುಜನಾದೆ ನಿನ್ನ ಕೃಪೆಯಿಂದಲಿಮನುಜ ಕೃತಿಯಾದರು ಪ್ರತಿಮದಲ್ಲಿ ಘನ್ನ ಚೇಷ್ಟಾದಿಗಳು ತೋರಿದಂತೆ ಎನ್ನ ನಾಮಕನಾಗಿ ಎನ್ನ ರೂಪದಿಂದಎನ್ನ ಕೃತ್ಯಗಳೆಲ್ಲ ನೀನೆ ಮಾಡಿಉನ್ನತವಾದ ಕೀರ್ತಿ ತಂದು ಇತ್ತು ಎನ್ನಜನ್ನರ ಮಧ್ಯದಲಿ ಶ್ರೇಷ್ಠನೆನಸಿಪನ್ನಗ ತಲ್ಪನ್ನ ಕರವಶನೆನನಿಸಿದಿನಿನ್ನ ಕರುಣಕೆ ಎಣೆ ಆವದಯ್ಯಾಎನ್ನ ಸ್ವಭಾವದಿಂದ ಹರಿ ತಾನು ಇನಿತಾದ ಮನ್ನಣೆ ಮಾಡುವನೆ ಎಂದಿಗನ್ನನಿನ್ನುಪಕಾರವೆಂಬ ವನ್ನಧಿಯೊಳಗೆ ನಿರುತಮುಣಗಿ ಇಪ್ಪೆನಯ್ಯಾ ತೆರವಿಲ್ಲದೆ ಚನ್ನ ಪ್ರಸನ್ನ ಗುರು ವಿಜಯ ವಿಠ್ಠಲರೇಯನಿನ್ನಿಂದಲೆ ಎನಗೆ ಬಂಧುನಾದಾ 3 ಅಟ್ಟತಾಳ ದುರುಳ ಮತಗಳೆಂಬೊ ಮಾಯಿ ಗೋಮಾಯಿಗಳುಶಿರವೆತ್ತಿ ನೋಡದೆ ಪಲಾಯಧ್ವರಾದರು ಈತೆರವಾದ ಮಹತ್ಮಿ ನಿನ್ನದು ನಿನ್ನದುಮರಳೆ ಮಾತುಗಳನ್ನು ತೋರದಿದ್ದರನಿಗೆ (ರೆನಗೆ)ಕರುಣವಲ್ಲದೆ ಅನ್ಯಾಲೋಚನೆ ಇದಕ್ಕಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಪೊರೆವನು ನಿನ್ನಯ ಬಲದಿಂದಲಾವಾಗ 4 ಆದಿತಾಳ ಮೂರ್ತಿ ಗುರು ವಿಜಯ ವಿಠ್ಠಲರೇಯನಿನ್ನಿಂದ ಮಾಡಿಸುವ ವಸುಧಿಯ ವ್ಯಾಪಾರ 5 ಜತೆ ನಿಖಿಳ ಸೌಖ್ಯವೆ ಉಂಟುಉನ್ನತ ಮಹಿಮ ಗುರು ವಿಜಯ ವಿಠ್ಠಲ ಒಲಿವ || [ನಳ ನಾಮ ಸಂ|| ಚೈತ್ರ ಬ|| 12 ಆದಿತ್ಯವಾರ]
--------------
ಗುರುವಿಜಯವಿಠ್ಠಲರು
ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಇನ್ನೇಕೆ ಯಮನ ಬಾಧೆಗಳು? |ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ಪಪತೀತ ಪಾವನನೆಂಬ ನಾಮ-ಸಕಲ |ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ||ಕ್ರುತುಕೋಟಿ ಫಲ ಒಂದೇ ನಾಮ-ಸದ್ |ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ1ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ |ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ||ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ |ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ 2ಹದಿನಾಲ್ಕು ಲೋಕವಾಳುವ - ನಮ್ಮ |ಮದನಜನಕನಾಗಿ ಮಹಿಮೆ ತೋರುವ ||ಪದುಮನಾಭನಾಗಿ ಮೆರೆವ- ನಮ್ಮ |ಪುರಂದರವಿಠಲನ ಹರುಷದಿ ಕರೆವ 3
--------------
ಪುರಂದರದಾಸರು
ಭಾವೆತೋರೆಲೆ ಶ್ರೀನಿವಾಸನ ಜಗದಜೀವಗಳಿಗೆ ಭಿನ್ನನಾದ ವಾವೆಯಿಲ್ಲದ ಶ್ರೀನಿವಾಸನ ಪ.ಮಾವನ ಅಣುಗನನುಜೆಯಳಿಗೆ ಮಾವನೆನಿಸಿದ ತನ್ನ ಮಗಳಮಾವನ ಸೊಸೆಯ ಬಸಿರಲುದಿಸಿ ಮರಮೆಳೆಯನು ಸೇರಿ ಮತ್ತೆಮಾವನ ಸುತರಿಗಜ್ಜನೆನಿಸಿದ ಮಗುಳೆಮಾವನ ಮಾವನ ಮಗಳಿಗಣ್ಣನೆನಿಸಿದ ಒಮ್ಮೆ[ಬಾವನ] ಭವನವೆಣ್ಗಳ ಬಿಡಿಸಿ ರಮಿಸಿದ 1ಸತಿಯ ಸುತೆಗೆ ಅರಸನಾದ ಸತಿಯಳಿಗೆ ಸಹೋದರನಾದಸತಿಯಳನುಜ ಕುಲದಿ ಜನಿಸಿಸತಿಹಲವರ ಕೂಡಿ ಸುಖಿಸಿಸತಿಸಖಿಯರ ಬಂಧುವೆನಿಸಿದ ಮತ್ತೆ ಸುತನಸತಿಯ ಮಗನ ಮೊಮ್ಮನೆನಿಸಿದ ಓರ್ವ ಮೊಮ್ಮನಸತಿಗೆ ನೋಡಿದಳಿಯನೆನಿಸಿದ 2ಅಣ್ಣಗೆ ಜನಕನಾಗಿ ಮಗನ ಅಣ್ಣನೆನಿಸಿದ ಜಗವರಿಯಲುಅಣ್ಣನೆ ತಮ್ಮ್ಮಗೆ ತಮ್ಮನಾದ ಹುಟ್ಟಿದ ತಾಣವಜರಿದುಬೆಳೆದುಅಣ್ಣಗೆ ಭಾವನಾಗಿರುವ ಚೆಲುವನೆ ತನ್ನ ಬಾವನಅಣ್ಣನಯ್ಯಂಗೆ ಪುತ್ರನಾದವನೆ ಪ್ರಸನ್ನವೆಂಕಟತನ್ನವಳಿಗಾಪ್ತನಾಗಿ ಹೊರೆವನೆ 3
--------------
ಪ್ರಸನ್ನವೆಂಕಟದಾಸರು