ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ಪೊರೆಯೊ ಪ್ರಭು ಪರಮಾತ್ಮ ಕರುಣಾಕರನೆ ಎನ್ನೊಳ್ ಕರುಣದೃಷ್ಟಿಯನಿಟ್ಟು ಪ ದಾರಿದ್ರ್ಯದೋಷಂಗಳ್ ಛಿದ್ರಛಿದ್ರ ಮಾಡಯ್ಯ ಅದ್ರಿಧರನೆ ಕೃಪಾಸಮುದ್ರ ದೊರೆಯೆ 1 ಬರುವ ಕಂಟಕದೆನ್ನ ಸೆರೆಯಬಿಡಿಸಿ ನಿನ್ನ ಚರಣಕರುಣಾರ್ಣವದಿರಿಸೊ ಮುರಾರಿ ಹರಿ 2 ಆವ ಭಯವು ಎನಗೀಯದೆ ತ್ರಿಜಗ ಜೀವ ಜನಕಜೆಪತಿ ಕಾಯೊ ಶ್ರೀರಾಮ 3
--------------
ರಾಮದಾಸರು
ಹರಿ ಗೋವಿಂದ ಮುಕುಂದ ಮನುವಂದ್ಯ ಮಾಧವ ಹರ ಅಜನುತ ಪರಮಾನಂದ ಪ ದೇವ ಗಿರಿಧರ ಸುರನರ ಮುರಹರ ಪರತರ ಶರಧಿಜಾ ವರ ನರಹರಿ ಕೇಶವ ಸ್ಮರಿಪರ ಸುರತರು ಪರಮಪ್ರಕಾಶನೆ ಪುರಹರವರಸುಖ ಸುರೇಶ 1 ಈಶ ಮುನಿಕುಲ ವಸುಕಾಲ ತನುಶೀಲ ವನಮಾಲ ಜನಕಜೆಪತಿ ಭಕ್ತರಾನಂದ ವನಜಾಕ್ಷ ದಿನಕರ ಘನಪ್ರಭೆತನುಶೋಭ ವಿನಮಿತ ಸನಕಾದಿಸಾನಂದ 2 ಜಗದೀಶ ಅಘಪೋಷ ಮೃಗನಾಶ ಲಕುಮೀಶ ಖಗಗಮನ ದಶಶತನಾಮ ಬಗೆಬಗೆ ಪೊಗಳುವ ನಿಗಮ ಆಗಮನುತ ಶ್ರೀರಾಮ 3
--------------
ರಾಮದಾಸರು