ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ಶಿವಮಂತ್ರವ ಜಪಿಸೋ ಮೂಢಶಿವಮಂತ್ರವ ಜಪಿಸೋಶಿವನೇ ನೀನಾಗುವೆಯೆಂದು ನಂಬುತ ಪ ಸ್ನಾನ ಬೇಡ ಸಂಧ್ಯಾಕರ್ಮವು ಬೇಡಧ್ಯಾನ ಬೇಡ ಧಾರಣೆ ಬೇಡಮೌನ ಬೇಡ ಮಣಿಮಾಲಿಕೆ ಬೇಡಧ್ಯಾನ ಬೇಡ ಪಶುವಧೆಗಳು ಬೇಡ 1 ದೇಶಕಾಲ ಪಾತ್ರವ ನೋಡಬೇಡಕಾಷಾಯಾಂಬರ ಧಾರಣೆ ಬೇಡಭಾಸುರ ಜಡೆಯನು ಬೆಳೆಸಲು ಬೇಡಈ ಶರೀರವನೆ ದಂಡಿಸಬೇಡ 2 ಕಾಲನ ದೂತರು ಎಳೆಯದ ಮುನ್ನನಾಲಿಗೆ ತನ್ನಾಧೀನವಾಗಿರುವಾಗಏಳುಕೋಟೆ ಮಂತ್ರಕೆ ಮಣಿಯಾದ ವಿ-ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು 3
--------------
ಕೆಳದಿ ವೆಂಕಣ್ಣ ಕವಿ
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ 1 ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ 2 ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ 3 ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ 4 ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ 5 ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ 6 ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ 7 ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ 8 ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ 9 ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ 10 ಗಂಗಾಜನಕನÀ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ11
--------------
ಶ್ರೀಪಾದರಾಜರು