ಹೆಚ್ಚಿನ ಗೋಜ್ಯಾಕೆಲೆ ಹುಚ್ಚು ತಿಳಿ
ಮುಚ್ಚಿಕೊಂಡಿದೆ ನಿನ್ನ ಭವಕಿಚ್ಚು ಪ
ಹುಚ್ಚು ಮತಿಯ ನೀಗಿ ಅಚ್ಯುತನಂಘ್ರಿಯ
ಮೆಚ್ಚಿಸಿ ಮೆಲಿ ಅನುಭವದ್ಹುಚ್ಚು ಅ.ಪ
ಕೀಳನಾಗದೆ ನೀ ನಿಜವ ತಿಳಿ ನಿನ್ನ ಕಾ
ಲೊಳು ಬಿದ್ದಾದ ಸಂಕೋಲಿ
ನಾಳೆಗೆ ಬರುತಾದ ಕಾಲನ ದಾಳಿಯು
ತಾಳದೆಳಿತಾರ ಜಡಿದ್ವಜ್ರದ ಕೀಲಿ 1
ಹಂದಿಯ ಜನುಮಕೆ ಬೀಳಬೇಡ ಬೇಡಿ
ಮಂದರ ನಿಲಯನ
ಹೊಂದಿ ಭಜಿಸಿ ಆನಂದಪಡಿ 2
ದೂರದಿಂದ ಬಂದಿದ್ದಿ ಹೌಹಾರಿ ತ್ವರ ವ್ಯಾ
ಪಾರ ಮಾಡಿಕೊಳ್ಳೊ ಭರ್ಜರಿ
ಸಾರ ಮೋಕ್ಷಾಧಿಪ ಧೀರ ಶ್ರೀರಾಮನ ಪಾದ
ವಾರಿಜ ನಂಬಿ ಹೊಡಿ ಜಯಭೇರಿ 3