ಮಧ್ವವರದಾ ಕೃಷ್ಣಾ ವಿಠಲ ಪೊರೆಯಿವಳ ಪ
ಅಧ್ವರೇಡ್ಯನೆ | ದೇವ ಕಾರುಣ್ಯ ಮೂರ್ತೇ ಅ.ಪ.
ಸುಸ್ತೇಶ ಸೂಚಿಸಿದ ಕ್ಲುಪ್ತಿಯನ್ನನುಸರಿಸಿಇತ್ತಿಹೆನು ಉಪದೇಶ ಚಿತ್ತಜನಪಿತನೆಅರ್ಥಿಯಲಿ ಮನ್ನಿಸುತ ಚಿತ್ತೈಸು ಬಿನ್ನಪವಕೃತ್ತಿವಾಸನ ತಾತ ಸ್ತುತ್ಯ ಸರ್ವೇಶ 1
ಸನ್ನುತ ಚರಣ ಸೀಮೆ ಮೀರಿದ ಮಹಿಮಭಾಮಿನಿಯ ಪೊರೆಯೆಂದು ಪ್ರಾರ್ಥಿಸುವೆ ಹರಿಯೇ2
ತರತಮದ ಸುಜ್ಞಾನ ಎರಡು ಮೂರ್ಭೇದಗಳುಅರಿವನೇ ಇತ್ತಿವಳ ಪೊರೆವುದೈ ಹರಿಯೆಮರುತ ಮತದಲ್ಲಿಹಳ ನಿರುತ ಕಾಯಲಿ ಬೇಕುಕರಿವರದ ಧೃವವರದ ತರಳೆಹಲ್ಯಯ ವರದ 3
ಪತಿಸೇವೆ ಹಿತದಿಂದ ಕೃತನಾಗಿಯಿವಳಿಂದಗತಿಗೆ ಸಾಧನವೆನಿಸೋ ಮರುತಾಂತರಾತ್ಮಹಿತ ವಹಿತವೆರಡರಲಿ ರತಿ ಸಮತೆ ಪ್ರದನಾಗಿಕೃತ ಕೃತ್ಯಳೆಂದೆನಿಸೊ | ಕೃತಿರಮಣದೇವ 4
ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರಜೀವ ಜಡರೂ ದೇವರಾಧೀನ ವೆಂಬಭಾವನೆ ತಿಳಿಸು ಗುರುಗೋವಿಂದ ವಿಠಲಯ್ಯಸಾವಧಾನದಿಯಿವಳ ಕೈಯನೇ ಪಿಡಿಯೋ 5