ಒಟ್ಟು 10 ಕಡೆಗಳಲ್ಲಿ , 2 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ಕೊಡುಜಡಜಾಕ್ಷ ನಿಮ್ಮಡಿ ಧ್ಯಾನಮೃತ ಕಡುದಯದೆನ್ನಯ ಜೆಹ್ವೆಗೆ ಸತತ ಪ ದುರುಳ ದಾನವರೊದೆದ ಸುರರನುದ್ಧರಿಸಿದ ಪರಮಪಾವನ ಪಾದಸ್ಮರಣಸಂಜೀವನ 1 ಅತ್ರಿಮುನಿಯ ಕಾಯ್ದ ಸತ್ರಾಜಿತನ ಪೊರೆದ ಸತ್ಯವ್ರತೆಗೆ ವರವಿತ್ತ ಅಮಿತಪುರುಷ 2 ಭಕ್ತರಾಪತ್ತು ಕಳೆದು ಅರ್ಥಿಯಿಂ ಕಾಯ್ವ ಪ ವಿತ್ರ ಶ್ರೀರಾಮನಾಮ ಮುಕ್ತಿ ಸಂಪದಸಿದ್ಧಿ 3
--------------
ರಾಮದಾಸರು
ನಂಬಿದೆನು ನಿನ್ನ ಅಂಬುಜನಯನ ಬೆಂಬಿಡದೆ ಕಾಯೆನ್ನ ಶಂಬರಾರಿಪಿತನೆ ಪ ಇಂದು ನೀ ಗೆಲಿಸಯ್ಯ ಮಂದರಧರಗೋವಿಂದ ಎರಗುವೆ ಪದಕೆ 1 ಜಡಜಾಕ್ಷ ನಿಮ್ಮಡಿಗೆ ದೃಢದಿಂದ ಬೇಡುವೆನು ತಡೆಯೆನ್ನನು ಕಡೆಹಾಯ್ಸು ದುರಿತದಿಂ 2 ಜಗದೊಳಗೆ ಎನ್ನನು ನಗೆಗೇಡು ಮಾಡದೆ ಮಗನನ್ನ ಸಲಹಯ್ಯ ಖಗಗಮನ ಶ್ರೀರಾಮ 3
--------------
ರಾಮದಾಸರು
ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ ಪರಮ ಪರತರ ತವಬಿರುದುಗಳರಿದು ಪ ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ 1 ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ 2 ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ ಬಿಡದಿರ್ದು ಕಾಯ್ವಂಥ ಕಡುದಯದ ದೇವ ದೃಢದಿಂದ, ನಂಬಿದೆ ಒಡಲಾಸೆ ಪೂರೈಸು ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ 3
--------------
ರಾಮದಾಸರು
ಪುಣ್ಯೋದವೇ ಈ ಪುಣ್ಯಭೂಮಿಯೊಳು ಪನ್ನಂಗಶಯನ ಸನ್ನುತಿಪ ದಾಸರಿಗೆ ಪ ಕಡುಸಿರಿವಂತರಾದೊಡೆ ಬಡವರ ಬಾಯ್ಬಡಿಯದೆ ಕೊಡುವಿಡುವ ಕೆಡದತಿ ಪುಣ್ಯ ಬಡತನವಿರ್ದಡೆ ಎಡೆಬಿಡದೆ ಒಡಲೊಳು ಜಡಜಾಕ್ಷನಡಿಧ್ಯಾನ ಹಿಡಿದ ಮಹಪುಣ್ಯ 1 ಮಡದಿಯರೊಂದಿಗೆ ಬಿಡದೆ ಸಂಸಾರಗೈಯೆ ದೃಢಯುತರು ಮನೆಯೊಳಗಡಿಯಿಡುವ ಪುಣ್ಯ ಸಡಗರದಿ ಮಕ್ಕಳನ್ಹಡೆದು ಮೋಹದಿ ಜಗ ದೊಡೆಯನ್ಹೆಸರಿಟ್ಟು ನುಡಿಯುವ ಪುಣ್ಯ 2 ತಿರುಕರಾಗಿರ್ದಡೆ ತಿರಿದು ತಂದನ್ನವನು ಹರಿಯಪ್ರಸಾದವೆಂದು ತಿರಿದುಣುವ ಪುಣ್ಯ ಪರಮಪುರುಷನ ಚರಣ ನಿರುತ ಸ್ಮರಿಪ ಪುಣ್ಯ 3 ಹಿಂದೆ ಮುಂದೆ ತಮಗೆ ನಿಂದೆಯಾಡಲು ಆ ನಂದದಿ ಹಿಗ್ಗದ ಕುಂದದ ಪುಣ್ಯ ಮಂದಿಮಕ್ಕಳು ಬಿಡದ್ಹೊಂದಿಸಲದು ಹರಿ ಗೆಂದು ಅರ್ಪಿಸಿ ಮನಸೊಂದೆಮಾಡಿದ ಪುಣ್ಯ 4 ನೀರಿನೊಳಿರಲೇನರಣ್ಯದೊಳರಿಲೇನು ಘೋರತಾಪದಿರಲೇನಪಾರಜ್ಞಾನಿಗಳು ಪಾರಮೋಕ್ಷಕ್ಕಧಿಪ ಧೀರ ಶ್ರೀರಾಮಪಾದ ವಾರಿಜದೊಳು ಮನ ಸೇರಿಸಿದ ಪುಣ್ಯರಿಗೆ5
--------------
ರಾಮದಾಸರು
ಬೇಡುವುದಿಲ್ಲನ್ಯ ನಾನೇನು ನಿನ್ನ ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ ಎನ್ನುಳಿಸು ತಂದೆಯನು ತರಿದೆನ್ನದಿಲ್ಲ ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ ನಿನ್ನ ದಾಸರ ಸಂಗವನ್ನು ಕರುಣಿಸಿ ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ ಭಿನ್ನವೇನಿದರೊಳು ಉನ್ನತಮಹಿಮ 1 ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ ಎಲೆದೇವ ತವಪಾದನಳಿನ ನಿರ್ಮಲಧ್ಯಾನ ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2 ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು ಉನ್ನತ ಕುಲಗೆಡು ಎನ್ನೊಳುಂಡೆನೆನು ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು ಅನ್ಯರನು ಬೇಡದಂತುನ್ನತ ಪದ ನೀಡಿ ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3
--------------
ರಾಮದಾಸರು
ಸಾಕು ಸಾಕು ವಿಮಲಾಂಗ ಕಾಕುಮನುಜರ ಸಂಗ ಪ ಬೇಕು ನಿಮ್ಮಯ ಚರಣದಾಸಜನರ ಸಂಗ ಲೋಕೇಶ ಕರುಣಿಸಿ ನೂಕು ಕುಜನಸಂಗ 1 ವಾಕರಿಸುತ್ವಮನ ಲೋಕರ ಗೆಳೆತನ ಶೋಕಾಬ್ದಿ ಕಡೆತನ ಲೌಕಿಕ ಬಲು ಹೀನ 2 ತಡೆಯದೆ ಈ ಕೇಡು ದೃಢದಿ ಬೇಡುವೆ ನಾ ಜಡಜಾಕ್ಷ ಶ್ರೀರಾಮ ಬಿಡಿಸು ಜನನ ಮರಣ 3
--------------
ರಾಮದಾಸರು
ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ ಹ್ಯಾಗೆ ಒಲಿಯುವನೊ ಪ ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ ನಾಗಶಾಯಿ ನಿಗಮಾಗಮೊಂದಿತ ರಾಘವೇಶನು ಬೇಗ ಒಲಿಯದಿರೆ ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ ಧಣಿಯು ಇಲ್ಲದ ದುರ್ದೈವ ಬಾಳು ಹೆಣನ ಸಮವಿದು ಮನ್ನಿಸೆ ಕೆಳದಿ ಗಣನೆಯಿಲ್ಲದ ಜನಮವ್ಯಾಕಿದು ಸನಕಸನಂದರೆಣಿಕೆಯಿಲ್ಲದೆ ಮಣಿದು ಆತಗೆ ಧನ್ಯರಾದದ್ದು ನೆನೆಸಿ ಮನದೊಂದು ದಿನಸುವಾಗುವುದು ಚಿನಮಯಾತ್ಮನ ಕಾಣದಿರಲಾರೆ 1 ನೀರೆ ಬೇಗಿನ್ನು ಕರೆತಂದು ತೋರೆ ಸಾರಸಾಕ್ಷನ್ನ ಅಗಲಿರಲಾರೆ ವಾರಿಧಿಶಾಯಿನ್ನ ಹರಣದೊಡೆಯನ್ನ ಮಾರ ಸುಂದರಪಾರ ಮಹಿಮನ ಬಾರಿಬಾರಿಗೆ ಸ್ಮರಿಸಿ ಮನ ಬಲು ಘೋರ ಬಡುತದೆ ವಾರಿಜಾಕ್ಷಿ ಕರೆ ತಾರೆ ಶೀಘ್ರದಿ ನಾರಸಿಂಹನ 2 ಕಡಲೊಳಿರುವನೋ ದೃಢದಿ ಕರೆಯಲು ಒಡನೆ ಬರುವನೋ ಜಡಜಾಕ್ಷಿ ಕೇಳೆ ಜಡಜನಾಭನೋ ದೃಢಕರೊಡೆಯನೋ ಬಿಡದೆ ಆತಗೆ ಮಿಡುಕಿ ಮಿಡುಕಿ ಹಿಡಿಕಿಯಾಯಿತು ದೇಹ ಸೊರಗಿ ಒಡೆಯ ಶ್ರೀರಾಮನಡಿಗೆ ಹೊಂದಿ ನಾ ತೊಡರಿನೊಳಗಿಂದ ಕಡೆಗೆ ನಿಲ್ಲುವೆ 3
--------------
ರಾಮದಾಸರು
ಶ್ರೀ ಶೇಷದೇವರು73ಶೇಷದೇವ ಶೇಷದೇವ ವಾರುಣೀಶಪಾಹಿಮಾಂ ಶೇಷದೇವಪಷಡ್ಗುಣೈಶ್ವರ್ಯಪೂರ್ಣ ಕೇವಲಾನಂದರೂಪಜಡಜಾಕ್ಷ ಜಯೇಶನಿಗೆಪರ್ಯಂಕನಮೋ ನಮೋ1ದ್ಯುಭ್ವಾದಿಗಳಿಗಾಧಾರ ವೇದವತೀಶಕೂರ್ಮವಿದ್ಯುನ್ ರಮಣ ಕೂರ್ಮರ ಒಲುಮೆ ನಿನ್ನಲಿ ಸದಾ 2ಗಿರಿಸಿಂಧುಯುತಧರೆ ಬ್ರಹ್ಮಾಂಡ ಸರ್ವವಧರಿಸಿರುವೆ ಫಣಿಯ ಮೇಲೆ ಶರ್ಷಪದಂತೆ ನೀನು 3ಖದ್ರೂಜಾದಿ ವಿಷ ಸರ್ವದೋಷವೆನಗೆ ತಗಲದಂತೆಕರ್ದಮರ ಸುತನಲ್ಲಿ ಭಕ್ತಿಜ್ಞಾನ ಸತತವೀಯೊ 4ಶ್ರಷ್ಟಿಧರ ಶುಕ್ಲವರ್ಣ ಸಹಸ್ರಫಣಿ ನೀಲವಾ¸ Àಸೃಷ್ಟಿಕರ್ತ ವೇಧತಾತ ಪ್ರಸನ್ನ ಶ್ರೀನಿವಾಸನ ತೋರೊ 5
--------------
ಪ್ರಸನ್ನ ಶ್ರೀನಿವಾಸದಾಸರು