ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ | ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ | ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ 1 ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ | ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ 2 ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ | ಕಾಯ ಸುಖದ ದ್ರವ್ಯ ಧನವಲ್ಲಾ3 ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ | ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತÉೂೀರೆ ಬೇಗನೆ ತೋಯಜನಯನೆಮದವಾರಣ ಗಮನೆ ಪ ಮಾರನ ತಾಪವ ಸೈರಿಸಲಾರೆನೆನೀರೆ ನಿನಗೆ ಮುತ್ತಿನ್ಹಾರವ ಕೊಡುವೆನೆ ಅ.ಪ ನೀರೊಳು ಮುಳು ಮುಳುಗಾಡುತ ಬಂದುಮಥಿಸಿದ ಪಯ ಸಿಂಧುಧಾರುಣಿ ಚಿಮ್ಮುತ ಮೇಲಕೆ ತಂದುದನುಜನ್ನ ಕೊಂದುಮೂರುಪಾದವ ಬೇಡುತ ನಿಂದುಮುನಿಕುಲದಲಿ ಬಂದುನಾರಿಬಿಟ್ಟು ಪರನಾರಿಯರಾಳಿದತೋರೆರಮಣಿ ಹಯವೇರಿ ಮೆರೆದನ 1 ಕತ್ತಲೆ(ತಾಮಸ ದೈತ್ಯ)ನೊಡನೆ ಕಾದಿದನು ಧೀರಕಡೆದನು ಕೂಪಾರಕುತ್ತಿ ಮಣ್ಣಗಿದು ಮೆದ್ದನು ಬೇರದಾನವ ಸಂಹಾರ ಒತ್ತಿ ಬಲಿಯನು ಕಾಯ್ದನು ಶೂರಕುಜನ ಕುಠಾರ ಹತ್ತು ಶಿರನ ಕತ್ತರಿಸಿ ಗೋಕುಲದೊಳುಬತ್ತಲೆ ರಾಹುತನಾಗಿ ಮೆರೆದನ 2 ನಿಗಮ ಕದ್ದವನ ನೀಗಿದ ಧಿಟ್ಟನೆಗಹಿದ ಬೆಟ್ಟಅಗಿದು ಮಣ್ಣನೆ ಜಠರದಲ್ಲಿಟ್ಟಘುಡಿ ಘುಡಿಸುವಸಿಟ್ಟಜಗಕೆಲ್ಲ ನೋಡೆ ಎರಡಡಿಯಿಟ್ಟಕೊಡಲಿಯ ಪೆಟ್ಟಮೃಗವ ಕೆಡಹಿ ಕುಂತಿಮಗಗೆ ಸಾರಥಿಯಾಗಿಜಗವ ಮೋಹಿಸಿ ಹಯವೇರ್ದ ಶ್ರೀಕೃಷ್ಣನ 3
--------------
ವ್ಯಾಸರಾಯರು
ಎಂದು ಕಾಂಬುವೆ ಎನ್ನ ಸಲಹುವತಂದೆ ಉಡುಪಿಯ ಜಾಣನಮಂದಹಾಸ ಪ್ರವೀಣನಇಂದಿರಾ ಭೂರಮಣನ ಪ.ಕಡಲ ತಡಿಯೊಳು ಎಸೆವ ರಂಗನಕಡೆಗೋಲ ನೇಣ ಪಿಡಿದನಮೃಡಪುರಂದರಅಜರೊಡೆಯನ ಈರಡಿಗಳಲಿ ಶಿರ ಇಡುವೆ ನಾ 1ದೇವಕಿಯ ಜಠರದಲ್ಲಿ ಬಂದನಆವಪಳ್ಳಿಯಲ್ಲಿ ನಿಂದನಮಾವ ಕಂಸನ ಕೊಂದನಕಾವನಯ್ಯಮುಕುಂದನ2ಪೂರ್ಣಪ್ರಜÕರಿಗೊಲಿದು ದ್ವಾರಕೆಯಮಣ್ಣಿನೊಳು ಪ್ರಕಟಿಸಿದನ ಭವಾರ್ಣವಕೆ ಪ್ಲವನಾದನ ಪ್ರಸನ್ನವೆಂಕಟ ಕೃಷ್ಣನ 3
--------------
ಪ್ರಸನ್ನವೆಂಕಟದಾಸರು