ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗುವಾರತಿ ಬನ್ನಿ ಲಲನೆಯರೆಲ್ಲರು| ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ ಪ ಮಲ್ಲಯುದ್ದವನೆ ಮಾಡಿ ಮಾವ ಕಂಸನ ಕೊಂದು ಇಳೆಯೊಳು ಜಯವರಿಸಲು ನಡೆತಂಡನು 1 ದುಷ್ಟಬುದ್ದಿಯನ್ನುಳ್ಳ ಜಟ್ಟೇರ ಮಡಹಿಸಿ| ಸೃಷ್ಟಿಯ ಭಾರನಿಳಹಿಸಿ ಶಿಷ್ಟರ ಕಾಯ್ದನು 2 ಗಂಡರ ಗಂಡ ಪ್ರಚಂಡನಾಗಿ ಮೆರೆದನು| ಕುಂಡಲ ಭೂಷಿತ ಗಂಡ ಕಪೋಲಾ 3 ವರ ಉಗ್ರಸೇನಗ ಅರಸುತನವನಿತ್ತಾ| ಗುರು ಮಹಿಪತಿ ಸುತ ಪೊರೆವ ಶ್ರೀ ಅರಸಗೆ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಸೂಕಿ ಶಯನ ಅಶೋಕ ಪರಾಕೂ |ವಾಸುದೇವಾನಿರುದ್ಧ ಶ್ರೀ ಕೃಷ್ಣ ಪರಾಕೂ ||ಸಾಸಿರನಾಮದ ಹರಿಯೆ ಪರಾಕೂ |ದೋಷರಹಿತ ರಘುಪತಿಯೆ ಪರಾಕೆಂದು ||ಮೀಸಲಾರುತಿಯಾ ಬೆಳಗೀರೆ ಪವೃಂದಾವನದೊಳಗಿಹನೆ ಪರಾಕೂ |ತಂದಿ ತಾಯ್ಗಳ ಬಿಡಿಸಿಹನೆ ಪರಾಕೂ ||ಸಿಂಧುರವರದ ಗೋಪಾಲ ಪರಾಕೂ ||ಸಿಂಧುಶಯನಪದ್ಮನಾಭಪರಾಕೆಂದು ||ಛಂದದಲಾರುತಿಯಾ ಬೆಳಗೀರೆ1ಸತ್ಯಾಭಾಮಿ ರುಗ್ಮಿಣಿ ರಮಣಾ ಪರಾಕೂ |ಮುತ್ಯಗ ಪಟ್ಟಗಟ್ಟಿದವನೆ ಪರಾಕೂ ||ಭಕ್ತ ಪೋಷಕ ತ್ರಿವಿಕ್ರಮನೆ ಪರಾಕೂ |ಸತ್ಯಸಂಕಲ್ಪಹೃಷಿಕೇಶ ಪರಾಕೆಂದು ||ಮುತ್ತಿನಾರುತಿಯಾ ಬೆಳಗೀರೆ 2ಮಾಧವಖರ ದೂಷಣಾರಿ ಪರಾಕೂ |ಬಾದರಾಯಣಪುರುಷೋತ್ತಮ ಪರಾಕೂ ||ಯಾದವರೊಳು ಪುಟ್ಟಿದನೆ ಪರಾಕೂ |ವೇದ ಉದ್ಧರ ಮತ್ಸ್ಯರೂಪಿ ಪರಾಕೆಂದು ||ಮೋದದಲಾರುತಿಯಾ ಬೆಳಗೀರೆ3ಇಂದ್ರ ಬಲಿಯನುಂಡಾ ಧೀರ ಪರಕೂ |ಕಂದಗೊಲಿದ ನರಸಿಂಹ ಪರಾಕೂ ||ನಂದನಂದನಶೌರಿಪರಾಕೂ |ಮಂದರಪರ್ವತ ಧರನೆ ಪರಾಕೆಂದು ||ಕುಂದಣದಾರುತಿಯಾ ಬೆಳಗೀರೆ 4ಜಟ್ಟೇರ ಹುಡಿಗುಟ್ಟೀದವನೆ ಪರಾಕೂ |ದುಷ್ಟ ಕಂಸನ ತರಿದವನೆ ಪರಾಕೂ ||ಕೆಟ್ಟಾಜಾಮಿಳಗೊಲಿದವನೆ ಪರಾಕೂ |ಅಷ್ಟು ಲೋಕವ ಸಲಹುವನೆ ಪರಾಕೆಂದು ||ತಟ್ಟಿಯೊಳಾರುತಿಯಾ ಬೆಳಗೀರೆ5ಮಾರನಯ್ಯಾ ಪ್ರಾಣೇಶ ವಿಠಲ ಪರಾಕೂ |ನೀರಜಾಂಬಕ ಶ್ರೀನಿವಾಸ ಪರಾಕೂ ||ದ್ವಾರಕಿನಿಲಯಮುರಾರೆ ಪರಾಕೂ |ಕ್ಷೀರಾಬ್ಧಿ ಸುತಿಯ ವಲ್ಲಭನೆ ಪರಾಕೆಂದು ||ನಾರಿಯರಾರುತಿಯಾ ಬೆಳಗೀರೆ 6
--------------
ಪ್ರಾಣೇಶದಾಸರು