ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿಹರಿಸು ದಯಾನಿಧಿ ಶರಣರ ಸಂಕಟವಾ ಧರೆಯ ತಳದಿ ನಾ ಪರಮಧೀನನು ಮರೆಯದಿಯೋ ಪದವಾ ಪ ಜಲದೊಳಗೆ ಪೊಕ್ಕರೂ ನಿನ್ನ ಬಿಡುವನಲ್ಲಾ ಬಲುಬೆಟ್ಟದ ಬುಡದೊಳು ಕುಳಿತರು ಪಿಡಿವೆನಲ್ಲಾ ನೆಲವಿಡಿದು ಕೋರೆಯಲಿ ತೋರ್ದರು ಅರಿವೆನಲ್ಲಾ ಗಲವರೆಗೆ ಸಿಂಹಮೊಗ ಧರಿಸಿದರೂ ಸರಿ ಬೆಚ್ಚಿ ಬೆವರೋನಲ್ಲಾ 1 ಸರಿ ತಿರಕನಂತೆ ನೀ ತಿಳಿದರೂ ಬಿಡುವನಲ್ಲಾ ಕರತಳದಿ ಕೊಡಲಿಯ ಪಿಡಿದರೂ ಸರಿವನಲ್ಲಾ ನೆರೆ ಧರಿಸಿ ಜಟವನ ಪೊಕ್ಕರೂ ಬಿಡುವನಲ್ಲಾ ಕರದಿ ಚಕ್ರವ ಪಿಡಿದು ತೋರಲೆಂದೆಂದಿಗುಜ್ವಲನಲ್ಲಾ 2 ವಸನಗಳಿಲ್ಲದೆ ನುಸುಳನರಿದೆನಲ್ಲಾ ಎಸೆವ ಸಮತುರಗವೇರಿ ಪೋಗಲು ಬಿಡುವನಲ್ಲಾ ದಶರೂಪಿ ನಿನ್ನನು ಬಿಡುವ ಶರಣನಲ್ಲಾ ಕುಸುಮನಾಭ ಶಿರಿ ನರಸಿಂಹವಿಠ್ಠಲ ಆಲಿಸೆನ್ನ ಸೊಲ್ಲಾ 3
--------------
ನರಸಿಂಹವಿಠಲರು
ವಾರಿಧಿ ನಿಚ್ಚನೆ ಪ ನೀರೊಳು ಪೊಕ್ಕಹನೇ ರಂಗೈಯ್ಯ ಭಾರವ ಪೊತ್ತಿಹನೇ ಪೋರಾಚೆÉಗೆ ಇದು ದಾರ ಕಲಿಸಿದರೆನೆ ನೀರಜಭವರು ನಿರ್ಜರರು ನಗುತಿಹರು 1 ಕಂದ ಮೂಲವ ಗೆಲುವಾ ರಂಗೈಯ್ಯ ಬಂದ ಕಂಭವ ನೋಡಿದಾ ಕಂದ ಇಂಥ ಬುದ್ಧಿ ಎಂದು ಕಲಿತಿಯೇನೇ ಮೇದಿನಿ ಪ್ರಲ್ಹಾದ ನಗುತಿಹರು 2 ತಿರುಕನಂತೆ ಬೇಡುವಾ ರಂಗೈಯ್ಯ ಕರದಿ ಕೊಡಲಿವಿಡಿವಾ ಹರಕುತನವು ತಂದೆ ಯಾಕೋ ನಿನಗೆ ಎನೆ ಸುರಗಂಗೆ ವರ ಜಮದಗ್ನಿ ನಗುತಿಹರು 3 ಜಟವ ಬೆಳೆಸಿ ಕಟ್ಟಿಹಾ ರಂಗಯ್ಯ ಹಟದಿ ಮಾತುಳನಳ್ದೀಹಾ ಹಟಮಾರಿತನ ನಿನಗ್ಯಾರು ಕಲಿಸಿದರೆನೆ ದಿಟ ಪವಮಾನಾರ್ಜುನರು ನಗುತಿಹರು 4 ಅರಿವೆ ತಾನುಡಲು ವಲ್ಲ ರಂಗೈಯ್ಯ ತುರಗವೇರಲು ಬಲ್ಲಾ ನರಸಿಂಹವಿಠ್ಠಲ ಸರಿಯಲ್ಲವಿದು ಎನೆ ಸುರರು ಗಹಗಹಿಸಿ ನಗುತಿಹರು 5
--------------
ನರಸಿಂಹವಿಠಲರು
ಸತತ ಚಿಂತಾಮಣಿಯೆ | ಸುರರೊಳಗೆ ನಿನಗೆಣಿಯೆಸಂತರನ ಪೊರೆವಂಥ ಮುನಿಯೆ | ಸುಖ ಜ್ಞಾನ ಖಣಿಯೇ ಪ ಭವ ಭುವನ ನಿಧಿ ತಾರಕನೆ 1 ಭಾರತಿ ಮನೆ | ಕುಂಬಾರನ ವುಳಹಿದನೆಭಾರತದೊಳು ನೀನೆ | ಭೂಭಾರ ನಿಳುಹಿದವನೆ2 ಶಂಖ ಚಕ್ರಾಧರನೆ ನಿ- | ಶ್ಶಂಕ ಮಹಾಮಹಿಮನೆಶಂಕರ ಸುರಪಾಲಕನೆ | ಶಂಕ ಚಕ್ರವಿತ್ತವನೆ 3 ಘಟಿಕಾಚಲ ವಾಸ | ಉತ್ಕøಷ್ಟ ನರಹರಿಯ ದಾಸಭಟ ಜನರಿಗೆ ಬಲು ಲೇಸಾ ಅ- | ಜಟವಾಗಿ ಕೊಡುವ ಸಂನ್ಯಾಸಾ 4 ಸಿರಿ ನಿತ್ಯ ಸ್ಮರಿಸುವ ಗುರು ಶಿರೋರತ್ನಾ 5
--------------
ಮೋಹನದಾಸರು