ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆಯೆನಗಿಲ್ಲ ಸರ್ವೇಶ ನಿನಬಿಟ್ಟು ವಾಸುಕೀಶಯನ ಜಗದೀಶ ನಿನ್ಹೊರತೆನಗೆ ಪ ನಿಗಮದಾಸೆಗೆ ಹೋಗಿ ನೀರೊಳಗೆ ಮುಳುಗಿ ನೀ ಸುಧೆಯ ಆಸೆಗೆ ಹೋಗಿ ಸುರರ ಕೈ ಸಿಕ್ಕು ನೆಲದ ಆಸೆಗೆ ಮಣ್ಣು ಬಗೆದÀು ಶ್ರಮವನೆ ಬಟ್ಟು ಕೊರಳ ಹಾರದ ಆಸೆ(ಗೆ) ಕರುಳ ಬಗೆವೊದೆ ಕಷ್ಟ1 ಭೂಮಿಯಲಿ ಭಾಳಾಸೆ ಭುವನ ವ್ಯಾಪಿಸಿಕೊಂಡು ಕಾಮಧೇನಿ (ನುವಿ?)ನ ಆಸೆ ಕಾರ್ತವೀರ್ಯಾರ್ಜುನನ ಕೊಂದು ಸಿರಿಯ ಸೌಂದರ್ಯದಾಸೆ ಶಿವನೆಬಲ್ಲನು ನೆಗಹಿ ಉದರದಾಸೆಗೆ ಅಸುರೆಜಗಿದು ವಿಷಮೊಲೆನುಂಡಿ 2 ತ್ರಿಪುರ ಸತಿಯರ ಆಸೆಗ್ವಸನವಿಲ್ಲದೆ ತಿರುಗಿ ಅಶ್ವದಲಿ ಆಸೆ ಅತಿ ಕಲಿಭಂಜನನೆನಿಸಿ ಈಸುಪರಿ ಆಸೆ ಭೀಮೇಶ ಕೃಷ್ಣಗೆ ಇರಲು ನಾಶರಹಿತನೆ ನಿನ್ನ ನಾಮವಿದ್ದರೆ ಸಾಕು 3
--------------
ಹರಪನಹಳ್ಳಿಭೀಮವ್ವ
ಎಷ್ಟು ಚಲುವರೋ ರಾಮಕೃಷ್ಣರೆಷ್ಟು ಚಲುವರೊಎಷ್ಟು ಚಲುವರಿವರ ಶಿರದಿ ಬಿಟ್ಟ ಜುಲುಪಿ ಕೇಶ ಚಂದ ಪುಟ್ಟ ಬಾಲಕಾರು ಕೂಡಿ ಗೋಷ್ಟದೊಳಗೆ ಚಲಿಸಿದಾರೊ ಪ ನಿನಗು ಇದ್ದವೋ ಈ ಜುಲುಪಿ ನಿನ್ನನುಜಗಿದ್ದವೊಮುನಿಯ ಕೂಡಿ ಪೋಗುವಾಗ ವನದಿ ನಾಲ್ಕು ಹತ್ತು ವರುಷಜನತೆಗಾದ ನಯನ ಸುಖದ ಘನತೆ ನೀನು ತಿಳಿದು ಪೇಳೋ 1 ಬಹಳ ಶೂರನೋ ತಥೋಪಿ ಧೈರ್ಯಶೀಲನಾಮನೋಶೂಲ ಪಾಣಿ ಧನದ ಭೂಮಿ ಪಾಲು ಸಾಧಿಸಿ ಮುರಿದು ನಿಂತಬಾಲಕೃಷ್ಣ ಶತ್ರುಗಣದಿ ಬಾಲೆಯೆತ್ತಿಕೊಂಡು ಪೋದ 2 ಕಾಲ ಎತ್ತಜೀವ ಎತ್ತಕಾಯಪುತ್ರ ವೃತ್ತಿ ಮಾತೆ ಗುರು ಸುಪಾತ್ರರನ್ನು ಸುಖಿಸಿದಾರು 3 ಪಿತೃನಾಗ್ಞದಿ ನೋಡುತಲೆ ವನದೊಳ್ಹೆತ್ತೆ ಮಾಡಿದೆಮತ್ತ ಆನೆಯಮಲ್ಲ ಕಂಸನೊತ್ತಿ ತುಳಿದು ಮಧುರೆಯಲ್ಲಿಹತ್ತು ಒಂದು ವಯದ ಬಾಲ ಮುತ್ಯಾ ಮಾತೆಯರನು ಕಾಯ್ದ 4 ಕೂಸುಪಿಡಿಯಿತು ಪೂಥಣಿಯ ಮೊಲೆಯ ತಾಸು ತಿಂದಿತುಈ ಶರೀರದೊಳಗೆ ತಾಟಕಾಸುರೀಯ ಕೊಂದ ಇಂದಿರೇಶಅದ್ಭುತಾವದಿದರೊಳಾರು ಪೇಳೊ ದಾಶರಥಿಯೆ 5
--------------
ಇಂದಿರೇಶರು
ಕೇಳು ಇದು ನಿಜಸಾಧನಾ ಮಾಡು ಕೈವಲ್ಯಪ್ರಾಪ್ತಿಯಿದೋ ಮಾಡು ನೀ ಮಾಡು ಆನಂದಪ್ರಾಪ್ತಿಯಿದೋ ಪ ಭಕ್ತಿಭಾವದಿ ಭಜಿಸುತ ನಿನ್ನ ಚಿತ್ತವನು ಪರಮಾತ್ಮನೊಳಿನ್ನು ನಿಜಾತ್ಮದೊಳಿನ್ನು ನಲೆಸುತಲಿ ಭವಬಂಧವಾ ನೀಗಿ ಆನಂದಪ್ರಾಪ್ತಿಗಿದೊ1 ವಿಷಯಚಿಂತನೆ ಮನದೊಳಗಿಹುದೇ ನಾನು ನನ್ನದಿದೆಂಬುದು ಬೆಳೆಯೆ ಇದೇ ಕೇಳ್ ಮಾಯೆ ನಾಶವಹುದೀ ಮಾಯೆ ನೀ ನೋಡು ಈ ಭಕ್ತಿಯೋಗದಲಿ ಮಾಡು ನೀ ಮಾಡು ಸನ್ಮಾರ್ಗಸಾಧನೆಯಾ 2 ಭಕ್ತಿಯೊಂದೇ ಸುಲಭದ ಸಾಧನೆ ಚಿತ್ತಶುದ್ಧಿಯನೀವುದು ನಿಜದಿ ಮನುಜಗಿದು ಜಗದಿ ತತ್ವದಿ ತಿಳಿವಾ ಮಾರ್ಗವತೋರಿ ಕೈವಲ್ಯವೀವುದಿದೋ ಕೇಳು ನೀ ಕೇಳು ಶ್ರೀ ಶಂಕರನ ಬೋಧಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬಾಯತೋರೋ ರಂಗ ಬಾಯತೋರೋ ಮುದ್ದು ಬಾಯಲಿ ತುತ್ತು ಅನ್ನವನಿಡುವೆ ಬಾಯತೋರೋ ಪ ಕತ್ತಲಿನಂತಿರುವ ತುಟಿಗಳ ತೆರೆಯುತ ಬಾಯತೋರೋ ಜ- ಗತ್ತಿನ ಬೆಳಕನು ನೋಡುವೆ ಒಮ್ಮೆ ಬಾಯತೋರೋ ಒತ್ತೊತ್ತಿನ ತುತ್ತನಿಡಲು ಬಂದಿರುವೆ ಬಾಯತೋರೋ ತುತ್ತೇ ತುತ್ತನು ತಿನ್ನುವೆ ಜಾಣ ಬಾಯತೋರೋ 1 ಭಂಜಿಸಿ ಬಲಿಯ ದಾನವ ಬೇಡಿದ ಬಾಯತೋರೋ ಅಂಜಿದ ನರನಿಗೆ ಗೀತೆ ಬೋಧಿಸಿದ ಬಾಯತೋರೋ ಗಂಜಿಯಕುಚೇಲಗವಲಕ್ಕಿ ಬೇಡಿದ ಬಾಯತೋರೋ ಅಂಜದ ಕರ್ಣಗೆ ಗುಟ್ಟು ಹೇಳಂಜಿಸಿದ ಬಾಯತೋರೋ2 ಅಮ್ಮ ಯಶೋದೆಯ ಮೊಲೆಹಾಲನುಂಡ ಬಾಯತೋರೋ ಗುಮ್ಮ ಪೂತನಿಯ ಅಸುಮೊಲೆ ಜಗಿದ ಬಾಯತೋರೋ ಸುಮ್ಮಸುಮ್ಮನೆ ಅಂಗನೆಗೆ ಮುತ್ತನಿಟ್ಟ ಬಾಯತೋರೋ ಗಮ್ಮನೆ ಅಪ್ಪಿ ಗೋಪಿಯರ ಪೀಡಿಸಿದ ಬಾಯತೋರೋ3 ಮೋಹನಮುರಳಿಯಮೋದದಿನುಡಿಸಿದಬಾಯತೋರೋ ಮೋಹನಾಂಗನೆಯರ ಮಾಟದಿ ಮಿಡಿಸಿದ ಬಾಯತೋರೋ ಮೋಹನ ರಾಗದಿ ಗೋವುಗಳ ಕರೆದ ಬಾಯತೋರೋ ಮೋಹಿಪ ರಾಧೆಯ ಮೈಯುಲಿಯೆ ಪಾಡಿದ ಬಾಯತೋರೋ 4 ಬಳಕುವ ಗೋಪಿಯರ ಚೇಡಿಸಿದಾ ತುಂಟ ಬಾಯತೋರೋ ಬಲರಾಮನನ್ನು ಗೋಳಾಡಿಸಿದ ಆ ಬಾಯತೋರೋ ಬುಳುಬುಳು ಮಣ್ಣನೆ ಮೆಲ್ಲುವಾ ಪುಟ್ಟ ಬಾಯತೋರೋ ಭಲರೆ ಅಮ್ಮನಿಗೆ ಬ್ರಹ್ಮಾಂಡ ತೋರಿದ ಬಾಯತೋರೋ 5 ಪುರಂದರ ಬಾಯಾಗಿ ಹಾಡಿದ ಬಾಯತೋರೋ ಸೂ ಕುಮಾರ ಲಕ್ಷ್ಮೀಶರಲಿ ಬರೆದಾಡಿದ ಬಾಯತೋರೋ ಶ್ರೀಕಾಂತ ನಮ್ಮ ಜಾಜಿಪುರೀಶನೆ ಬಾಯತೋರೋ ಸಾಕಾಯಿತೋ ಭವದ ಬವಣೆನೀಗಲು ಬಾಯತೋರೋ6
--------------
ನಾರಾಯಣಶರ್ಮರು
ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ ಉರಿಯನಪ್ಪಲು ಬಹುದು ಗರಳವನು ಕುಡಿ ಬಹುದು ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು 1 ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು ಅಗಜೆಯರಸನ ಉರಿಯ ನಯನ ಕಾನಲು ಬಹುದು ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು 2 ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು 3 ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು ವಿಷದ ಉರುಗನ ಕೂಡೆ ಸರಸವಾಡಲು ಬಹುದು 4 ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ ದುರಿತ ನಾಶನವಹುದು ಮರಳಿ ಜನ್ಮಕೆ ಬಾರದಂಥ ಪದವಿಯಹುದು5
--------------
ಕವಿ ಪರಮದೇವದಾಸರು
ಹಾರವ ಕಟ್ಟಿ ಕೊಡುವೆ ಲಕ್ಷ್ಮೀ ವರ ಭಕುತಿಯ ಪ. ಮಾರಮಣನಿಗೆ ಹಾರ ಹಾಕಿ ತೋರಿಪೆ ಪಥವೆಂದು ಅ.ಪ. ರಾಮ ಅಮೃತವೆಂಬ ನೇಮದ ಗಂಗೆಯ ಕಾಮಿಸಿ ತಂದು ನಿರಾಮಯ ಕೃಷ್ಣಗೆಂದು ಪ್ರೇಮದ ನಾರನು ಕಾಮಿತ ಪುಷ್ಪ ಮಂದಾರ ಮಲ್ಲಿಗೆಯನು ಸ್ವಾಮಿಗೆ ಸಲಿಸೆಂದು 1 ಅಗಣಿತ ಮಹಿಮಗೆ ಸೊಗವಿನ ತುಳಸಿಯ ಚಿಗರಿನ ಹಾರವ ಜಗಿದಾನಂದದಿ ಸೊಗಸಿನ ರೋಜವ ಬಗೆಬಗೆ ಭೋಗಗ ಳೊಗೆದುಗೆಂಡಸಂಪಿಗೆ ಚಿಗಿಚಿಗಿದಾಡುತ 2 ಯುಕ್ತಿಯ ಮರುಗ ಶಕ್ತಿ ಸ್ವರೂಪಳೆ ಭಕ್ತ ವತ್ಸಲನಿಗೆ ಇತ್ತಪೆ ನಾನೀಗ ಸ್ತುತ್ಯ ಶ್ರೀ ಶ್ರೀನಿವಾಸ ದೇವಕ್ಕಳಿಂ ನೀನೆಂದು 3
--------------
ಸರಸ್ವತಿ ಬಾಯಿ