ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಕಿಂತ ಗುಣವಿಲ್ಲ ನರಗೆ ದಯಕೆ ನಿರ್ಬಂಧವಿಲ್ಲಣ್ಣ ಜಗದಿ ಪ ಹೃದಯ ಮಂದಿರದಲಿ ನೆಲೆಸಿಹ ದಯೆಯು ಮೃದು ಮಳೆಹನಿ ತೆರದಲಿ ಸುರಿಯುವುದು ಅ.ಪ ಬಾರಿಯ ಸ್ಥಾನಕೆ ಈ ದಯೆ ಗುಣವು ಭಾರಿಯ ಶಕುತಿಯ ನೀಡುವುದು ಚಾರು ಕಿರೀಟವ ಮೀರಿದ ಕಾಂತಿಯ ಬೀರುವುದೀ ದಯೆ ನರಪತಿಗೆ 1 ರಾಜನ ದಂಡವ ನೋಡುತ ನೋಡುತ ಈ ಜಗವೆಲ್ಲವು ನಡುಗುವುದು ರಾಜನ ಕಾರ್ಯಗಳೆಲ್ಲಕೆ ದೈವಿಕ ತೇಜವ ಕೊಡುವುದು ದಯೆ ಗುಣವು 2 ನಶ್ವರವೆಲ್ಲವು ಪ್ರಾಕೃತವು ಈಶ್ವರ ಧರ್ಮವೆ ಈ ದಯೆಯು ಶಾಶ್ವತ ಧರ್ಮಗಳೆಲ್ಲವು ದಯದಿ ಮಿಶ್ರಿತವಾದರೆ ಸುಖಮಯವು 3 ಪರಮ ಪುರುಷ ದಯೆ ತೋರದಿರೆ ವರಗತಿ ಪಡೆಯಲು ನರಗಳವೆ ಕರುಣೆ ಪ್ರಸನ್ನನ ಮೊರೆ ಹೋಗದೆ ನೀ ಅರಿಯಲು ಸಾಧ್ಯವೆ ಕರುಣೆಯ ಬೆಲೆಯ 4
--------------
ವಿದ್ಯಾಪ್ರಸನ್ನತೀರ್ಥರು
ಆಕಾರದಿ ತೋರಿರೆ ಜಗವೆಲ್ಲವು |ಓಂಕಾರದ ಹೊರತು ಏನಿಲ್ಲ ಪ ಆದಿ ಶೂನ್ಯದಿಂದ ಅಕಾರ ಪುಟ್ಟಿತು |ದಂಡಕ ಉಕಾರ ಪಡೆಲಿಲ್ಲ 1 ಶೂನ್ಯ ದಶನಾದೆಲ್ಲ 2 ಇದರ ಮೂಲವು ಸಿದ್ಧರು ಬಲ್ಲರು |ಗೋರಖ ಮತ್ಸ್ಯೇಂದ್ರಾದಿಯರೆಲ್ಲ 3 ಆದಿಸಿದ್ಧ ಬಾಬಾ ಚೈತನ್ಯನು |ತುಕಾ ವಾಣಿಗೆ ಹೇಳಿದನಲ್ಲ 4 ಮನಿಹಾಳ ವಾಸಿ ಎಮ್ಮ ಶಿವನು |ಗಿರಿಜೆಗೆ ಉಪದೇಶಿಸಿದನಲ್ಲ 5
--------------
ಅಜ್ಞಾತ
ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ ಜೀವ ಕೋಟಿಗಳೆಲ್ಲ ಕಾವ ಪಾವನಾತ್ಮಕ ಸಂಜೀವ ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ ನಿಂದು ಬ್ರಹ್ಮಾಂಡ ಪೊತ್ತು ಅಂದು ಜಗಭಾರ ವಹಿಸಿದೆಯೊ ದಯಾಸಿಂಧು ಎಂದೆಂದೂ 1 ಸರುವ ತತುವೇಶರ ವ್ಯಾಪಾರ ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ ವೈರಾಗ್ಯ ಐಶ್ವರ್ಯ ನಿನ್ನಯ ಗುಣ ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ ಅಂದು ಸೃಷ್ಟಿಯೊಳು ಬಂದೂ ಪೊಂದಿ ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ ಕರುಣಾಸಿಂಧು ಎಂದೆಂದೂ 2 ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ ಗುಣಸ್ತವನ ಮಾಳ್ಪರೆಲ್ಲ ಸುರ ಗಣಾ ಮಣಿದು ಬೇಡುವರೆಲ್ಲ ಅನುದಿನಾ ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು ಕೇಶ ನಖಾಗ್ರ ಪರ್ಯಂತ ಚಿತ್ಸುಖ ಗಭೇದ ನೀ ಛಂದ ಶಾಸ್ತ್ರದಿ ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್ ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ ಘನ್ನಾ ಉರಗಾದ್ರಿವಾಸ ವಿಠಲನ್ನ 3
--------------
ಉರಗಾದ್ರಿವಾಸವಿಠಲದಾಸರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ನೀನೆ ಪರಬ್ರಹ್ಮಾ ಸತ್ಯವು ನೀನೆ ಪರಬ್ರಹ್ಮಾ | ನೀನೆಪರಶಿವ ನೀನೆ ಪರತರ ನೀನೆಪರಮಪರನಿನ್ನಿಂದ ನೀನೈಪಅನೇಕ ಕೊಡಗಳೊಳುರವಿತಾ | ಅನೇಕನೆನಿಸಿರಲು |ಅನೇಕ ವಾಘಟಉಪಾಧಿಯಳಿಯಲು |ಅನೇಕವೆಲ್ಲವು ಒಬ್ಬನೇ ನೀನೈ1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಸರ್ವಾಲಂಕಾರಾ ಕರಗಲು ಸರ್ವವು ಬಂಗಾರಾ |ಸರ್ವ ಜಗವೆಲ್ಲವು ನಿನ್ನೊಳಗಿರುವದು |ಸರ್ವ ರಹಿತ ನಿಜ ಶರ್ವನೆ ನೀನೈ2ಮಾಯಾಅವಿದ್ಯೆಯೊಳು ಶಿವ ಜೀವ ಕಾಯವು ಬಂದಿರಲು |ಮಾಯಾಅವಿದ್ಯೆಯ ಪರದೆಯು ಅಳಿಯಲು |ಕೇವಲ ಅತಿ ನಿಜ ಶಂಕರ ನೀನೈ3
--------------
ಜಕ್ಕಪ್ಪಯ್ಯನವರು
ಶಿವಸುಖ ದಾರಿಯ ನೋಡಣ್ಣಾ |ಅದು ಕೂದಲ ಎಳೆಕಿಂತ ಬಲು ಸಣ್ಣಾಪಭವದಲಿ ಮುಳುಗಿಹ ಪ್ರಾಣಿಯ ಕಾಣದೆ |ಘವ ಘವಿಸುವ ಚಿನ್ನದ ಬಣ್ಣಾಅ.ಪ.<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸಾಸಿವೆ ಕಾಳಿಗೆ ಸಾಸಿರ ಭಾಗಕೆ ಮೀರಿ ಉಳಿದಿಹುದಣ್ಣಾ ||ಘೋಷ ಸುಶಬ್ದದ ದಶಮದ್ವಾರದಿ |ಭಾಸುರಪರಮಣು ದ್ವಾರಣ್ಣಾ1ಸೂಜಿಯ ಮೊನೆಕಿಂತ ಸೂಕ್ಷಕೆ ಅತೀತನು |ಶೂನ್ಯಕೆ ಬೆಳಗುತ್ತಿಹುದಣ್ಣಾ || ಈ ಜಗವೆಲ್ಲವುಮೃಗಜಲದಂದದಿ | ಸಚ್ಚಿತ್ಸೂರ್ಯನ ಕಿರಣಣ್ಣಾ2ಅನುಭವ ಯೋಗಿಗೆ ಅನುಕೂಲವಾಗಿಹುದನಿಮಿಷ ದೃಷ್ಟಿಲಿಬಗೆಯಣ್ಣಾ || ಘನಗುರು ಶಂಕರ ತನ್ಮಯನಾಗಿಹ |ಚಿನುಮಯ ಗುರುತವೆ ನಿಜವಣ್ಣಾ3
--------------
ಜಕ್ಕಪ್ಪಯ್ಯನವರು
ಹರಿನೀನೇ ಗತಿಯೆಂದು ನೆರೆನಂಬಿದವರನುಮರೆತಿರುವುದು ನ್ಯಾಯವೆ? ಪಗರುಡಗಮನ ನೀ ಸಿರಿಲೋಲನಾರಿಗೆ |ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ಅ.ಪಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವದೃಷ್ಟಿಯೆನ್ನೊಳಗಿದೆಯೆ?ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನದುಷ್ಟ ಕರ್ಮವ ಬಿಡಿಸಿ ದಿಟ್ಟನೆಂದೆಣಿಸೊ 1ಭುಜಗಶಯನ ನಿನ್ನ ಭಜಕರ ಹೃದಯದಿನಿಜವಾಗಿ ನೀನಿಲ್ಲವೇ?ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನಸುಜನಪಾಲಕನೆಂದು ಭಜನೆ ಮಾಳ್ಪುದ ಕಂಡು 2ಭಾಗವತರರಸನೆ ಯೋಗಿಗಳೊಡೆಯನೆಬಾಗಿ ಬಿನ್ನಯಿಪೆ ನಿನ್ನಸಾಗರ ಶಯನನೆ ನೀಗಿಸಿ ಶ್ರಮವನುಜಾಗುಮಾಡದೆ ಎನ್ನ ಬೇಗದಿ ಕಾಯಯ್ಯ3ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು |ಎಂಟು ಮಂದಿಯ ಗರುವವನಳಿದು ||ನಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ |ಉಂಟಾದ ವೈಕುಂಠ ಬಂಟನೆಂದೆನಿಸೊ 4ಧರಣಿಯೊಳಗೆ ನೀ ಸುಜನರ ಸಲಹುವಬಿರುದು ಪಡೆದವನಲ್ಲವೆ? ||ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೊ |ಪರಮಪುರುಷಸಿರಿಪುರಂದರವಿಠಲ5
--------------
ಪುರಂದರದಾಸರು