ನಿನ್ನಾಧೀನ -----------
ವೆಂಕಟಾದ್ರಿವಾಸ ವೆಂಕಟ ಪರಹರಿಸೊ
ನೀ ಎನ್ನ ಸಂಕಟ ಪ
ಚಿನ್ಮಯ-----ನಾದ-----ಶ್ರೀನಿವಾಸ
ಪರಮಪುರಷ ಮುನ್ನ ನಾ ಮಾಡಿದ
ದೋಷದಿಂದ ಅಮಲನಾಗಿ
ವ್ಯರ್ಥ ಬಳಲುತಿಹೆನಾ ------
ಘನವೆ ನಿನಗೆ ಇರುವುದಿನ್ನು
ಅನಿಮಿಷವು ನಿಮ್ಮ ಧ್ಯಾನದಲ್ಲಿ
ಮಗ್ನರಾದ ಅವರಾ 1
ಶರಣರಾದ ಅವರಾ ಪೊರೆವ
ಬಿರುದು ನಿನ್ನದಾಗಿ ಇರಲು
ಪರಮ ಪತಿತ ಪಾವನನೆ
ಭಕ್ತ ಜನರ ಬಿಡದೆ ಕಾಯ್ವ
ಧೊರಿಯು ನೀನೇ ಎಂದು ನಿನ್ನ
ಚರಣಕಮಲ ನೆಚ್ಚಿದವನಾ
ಪರಿವೆ ಮಾಡದೆ ಇರುವುದಿನ್ನು
ಭರದಿ ಮೋಚನ ಪಾಪನಾಶನ 2
--------ದೊಳಧಿಕನಾದವನ
ವರಹೊನ್ನ ನಿ---------
ನಿಗಮಗೋಚರ 'ಹೊನ್ನವಿಠ್ಠಲಾ’
ನಿತ್ಯ ಸತ್ಯ ಜಗವಿಲಾಸ
--------ಯಿಂದ ನಿನ್ನ ಪಾಡುವಂಥ
ಭಜಕರನ್ನ-------------
ರಕ್ಷಿಸುವ ಅಭಯ ನಿನ್ನದಾಗಿ ಇರಲೂ 3