ದಯಮಾಡು ದಯಮಾಡು ಶಾರದಾಂಬೇ
ನಯ ನೀತಿ ಕಲೆ ಭಾಗ್ಯ ಘನ ಕುಟುಂಬೇ ಪ
ಜಯ ವಿಜಯ ಯಶಭೋಗ ಶ್ರೀಕರಾಂಬೇ
ಭಯ ಭೀತಿ ಪರಿಹಾರೆ ವರಕದಂಬೆ ಅ.ಪ
ಫಣಿ ಕಲ್ಯಾಣಿ
ಸರಸಗುಣಿ ಗೀರ್ವಾಣಿ ವೀಣಾಪಾಣಿ 1
ಸಾರತರ ಶುಕವಾಣಿ ನೀರೇಜ ಮೃದುಪಾಣಿ
ಭೂರಿದಯೆ ಸುಶ್ರೋಣಿ ದೇವಿ ಶುಭವಾಣಿ 2
ಸಕಲ ಲೋಕಖ್ಯಾತೆ ಸಕಲ ಜಗಸನ್ನುತೇ
ಸಕಲ ಜಗವಂದಿತೇ ಸಕಲ ಶುಭಗೀತೇ
ಸಕಲ ವೈಭವದಾತೇ ಸಕಲ ಸದ್ಗುಣ ಲಸಿತೇ
ಸಕಲ ಸನ್ನುತೇ ಮಾಂಗಿರೀಶ ವಿನುತೇ 3