ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶನ ಭಜಿಸೋ ಹೇ ಮನಸೆ ನೀ ಕುಂದುವ ಜಗಮಾಯದಂದಕ್ಕೆ ಮೋಹಿಸದೆ ಪ ಅರಿವಿನೀಸಮಯವ ಅರಲವ ಕಳೆಯದೆ ಹರಿಶರಣರವಚನ ಶ್ರವಣ ಮಾಡುತ ನೀ 1 ಮನುಷ್ಯ ಜನುಮದ ಫಲವ ನೆನೆಸೀನಿಜಜ್ಞಾನದಿ ವನಜನಾಭನ ಕತೆ ಮನನಮಾಡನುದಿನ 2 ಹೇಸಿಕೆಸಂಸಾರ ನಾಶನೆಂದರಿದು ನೀ ಶ್ರೀಶ ಶ್ರೀರಾಮನ ನಿಜಧ್ಯಾಸದಿಟ್ಟೆಡೆಬಿಡದೆ 3
--------------
ರಾಮದಾಸರು
ಭೇದವ ಮರೆಸಿದ ನಮ್ಮಯ್ಯ ಸು ಸಾಧನ ತಿಳಿಸಿದ ಪ ಭೇದ ಮರೆಸುತ ವಾದನೀಗಿಸಿ ಪರ ಸಾಧನದ ನಿಜಹಾದಿಗೆ ಹಚ್ಚಿದ ಅ.ಪ ಮಂದಮತಿಯ ತರಿದ ಎನ್ನಯ ಭವ ಬಂಧ ಪರಿಹರಿಸಿದ ಕುಂದುವ ಜಗಮಾಯದಂದುಗ ಗೆಲಿಸಿದ ಕಂದನೆಂದುದ್ಧಾರಗೈದ ತಂದೆ ಸಿಂಧುಶಾಯಿ 1 ಜ್ಞಾನಕೆ ಹಚ್ಚಿದ ಎನ್ನದೆ ನಿಜ ಧ್ಯಾನವ ಪಾಲಿಸಿದ ನಾನಾಯೋನಿಯೊಳು ಜನಿಸಿ ಜನಿಸಿ ಬಹ ಹಾನಿಯಿಂದುಳಿಸಿದ ದಾನವಕುಲಹರ 2 ಏನೆಂದು ಬಣ್ಣಿಸಲಿ ನಮ್ಮಯ್ಯನ ಆನಂದದ ಕೀಲಿ ತಾನೆ ಒಲಿದಿತ್ತೆನ್ನಗಾನಂದಮಯಾಂಬುಧಿ ದೀನಜನಾಪ್ತ ಮಮಪ್ರಾಣ ಶ್ರೀರಾಮಯ್ಯ 3
--------------
ರಾಮದಾಸರು
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು