ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶನ ಭಜಿಸೋ ಹೇ ಮನಸೆ ನೀ ಕುಂದುವ ಜಗಮಾಯದಂದಕ್ಕೆ ಮೋಹಿಸದೆ ಪ ಅರಿವಿನೀಸಮಯವ ಅರಲವ ಕಳೆಯದೆ ಹರಿಶರಣರವಚನ ಶ್ರವಣ ಮಾಡುತ ನೀ 1 ಮನುಷ್ಯ ಜನುಮದ ಫಲವ ನೆನೆಸೀನಿಜಜ್ಞಾನದಿ ವನಜನಾಭನ ಕತೆ ಮನನಮಾಡನುದಿನ 2 ಹೇಸಿಕೆಸಂಸಾರ ನಾಶನೆಂದರಿದು ನೀ ಶ್ರೀಶ ಶ್ರೀರಾಮನ ನಿಜಧ್ಯಾಸದಿಟ್ಟೆಡೆಬಿಡದೆ 3
--------------
ರಾಮದಾಸರು
ಜಾತಿಭ್ರಷ್ಟ ಹೊಲೆಮಾದಿಗರಿವರಲ್ಲವೇನೋ ನೀತಿಬಾಹಿರರಾಗಿ ಆಚರಿಸುವವರು ಪ ಪನ್ನಂಗಶಯನ ಉನ್ನತ ಕತೆ ಕೀರ್ತ ನ್ಯನ್ನು ಕೇಳೆನೆ ಮುಖವನ್ನು ಹಿಂತಿರುವಿ ಭಿನ್ನ ಬೇಸರಿಲ್ಲದೆ ಅನ್ಯಜನ ಸುದ್ದಿಯೊಳು ಕುನ್ನಿಯಂದದಿ ದಿನಗಳನ್ನು ಕಳೆವವರು 1 ಆಲಯದ ಸತಿಯಳ ತಾಳದೆ ತುಸುತಪ್ಪು ತಾಳಿಯನ್ಹರಕೊಂಡು ದಾಳೀಯ ಹೊಡೆದು ಮೇಲುಜಾತಿಲಿ ಹುಟ್ಟಿ ಕೀಳು ಸೂಳೇರಿಗೊಲಿದು ಹೇಳಿದತೆರ ಕುಣಿದು ಬೀಳುಗಳೆವವರು 2 ಸದ್ಧರ್ಮಕಾರ್ಯಕ್ಕೆ ಇದ್ದುದ ಸಲ್ಲಿಸೆನಲು ಕದ್ದು ತಂದುಕೊಡುವೆವೆಂದಬದ್ಧ ನುಡಿಯುವವರು ಬದ್ಧ್ದ........ಬಂದು ಒದ್ದು ಕೂಡ್ರಿಸಲಾಗ ಸದ್ದಿಲ್ಲದೆ ತಂದು ಬೇಡಿದ್ದು ಕೊಡುವವರು 3 ಜ್ಞಾನಿಗಳು ಬಂದರೆ ಗೋಣೆತ್ತಿನೋಡದೆ ಹೀನಜನರಿಗೆ ಬಹುಮಾನ ಕೊಡುವವರು ಧ್ಯಾನ ದಾಸರ ತರದಿ ಜ್ಞಾನದ ಮಾತ್ಹೇಳಿ ಗೇಣ್ಹೊಟ್ಟಿಗೆ ಪರರ ಗೋಣು ಮುರಿವವರು 4 ತಾಸಿನ ಮೋಜೆಂಬ ನಾಶನ ಜಗಮಾಯ ಮೋಸನರಿಯದೆ ಯಮಪಾಶದೊಳು ಬಿದ್ದು ದಾಸಜನಪ್ರಿಯ ಜಗದೀಶ ಶ್ರೀರಾಮನ ಧ್ಯಾಸಮುರಿದು ದು:ಸ್ಸಹವಾಸದಿರುವವರು 5
--------------
ರಾಮದಾಸರು
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು ಬಯಸಿ ಕರೆದರೆ ಬರುವರೇನಯ್ಯಾ ಪ ಬಯಸಿಕರೆದರೆ ಬರುವರೇನೋ ಜಯಶ್ರೀ ಮುರಹರಿಯ ನಾಮ ಓದಿ ಕಳೆದುಕೊಂಡ ಶೂರರು ಅ.ಪ ಮಹ ವಿಷಯಲಂಪಟ ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು ಲೇಖ್ಯದಮೇಲೆ ಘನ ಅನಂದದಿರುವರು 1 ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ - ಪಾರಮಹಿಮೆಯ ಅಮೃತ ಪೀರುವವರು 2 ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು 3
--------------
ರಾಮದಾಸರು
ಭೇದವ ಮರೆಸಿದ ನಮ್ಮಯ್ಯ ಸು ಸಾಧನ ತಿಳಿಸಿದ ಪ ಭೇದ ಮರೆಸುತ ವಾದನೀಗಿಸಿ ಪರ ಸಾಧನದ ನಿಜಹಾದಿಗೆ ಹಚ್ಚಿದ ಅ.ಪ ಮಂದಮತಿಯ ತರಿದ ಎನ್ನಯ ಭವ ಬಂಧ ಪರಿಹರಿಸಿದ ಕುಂದುವ ಜಗಮಾಯದಂದುಗ ಗೆಲಿಸಿದ ಕಂದನೆಂದುದ್ಧಾರಗೈದ ತಂದೆ ಸಿಂಧುಶಾಯಿ 1 ಜ್ಞಾನಕೆ ಹಚ್ಚಿದ ಎನ್ನದೆ ನಿಜ ಧ್ಯಾನವ ಪಾಲಿಸಿದ ನಾನಾಯೋನಿಯೊಳು ಜನಿಸಿ ಜನಿಸಿ ಬಹ ಹಾನಿಯಿಂದುಳಿಸಿದ ದಾನವಕುಲಹರ 2 ಏನೆಂದು ಬಣ್ಣಿಸಲಿ ನಮ್ಮಯ್ಯನ ಆನಂದದ ಕೀಲಿ ತಾನೆ ಒಲಿದಿತ್ತೆನ್ನಗಾನಂದಮಯಾಂಬುಧಿ ದೀನಜನಾಪ್ತ ಮಮಪ್ರಾಣ ಶ್ರೀರಾಮಯ್ಯ 3
--------------
ರಾಮದಾಸರು
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು