ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ಪಾಲಿಸು ಪರಮ ಕೃಪಾಲಯ ಪ. ಪಾಲಿಸು ನಿನ್ನಯ ಬಾಲನು ಬೇಡುವ ಬಯಕೆಯ ಲಕ್ಷ್ಮೀ- ಲೊಲ ನೀ ಕರದು ತಾರಾಕೆಯ ಅ.ಪ. ತುರುವು ಮೊಲೆಯನುಂಬ ಕರುವಿನ ಬೆನ್ನನು ತುರಿಸುತ ತಿರುಗುವ ತೆರದಲಿ ನೀ- ನಿರುವಿಯೆಂದರಿದೆನು ಮನದಲಿ ಚರಣ ಪಂಕಜಗಳ ಶರಣ ಹೊಕ್ಕೆನ್ನನು- ದ್ಧರಿಸು ಶ್ರೀಕಾಂತ ಗುಣದಲಿ ಸ್ವೀ- ಕರಿಸುತ ನನ್ನ ನಿನ್ನ ಕೆಲದಲ್ಲಿ 1 ಖಗರಾಜ ಭೂಧರವರ ನಾಗಭೂಷಣ ಶಕ್ರ ಪೂಜಿತ ನಿನ್ನಾ- ವಾಗ ಕಾಂಬೆನು ಗೃಹರಾಜಿತ ಮೂಗಭಾವದ ತಪ್ಪ ಮನಕೆ ತರುವರೆ ಮ- ಹಾ ಗಣಪತಿ ಶಬ್ದ ವಾಚ್ಯನೆ ಎನ್ನ ಬೇಗ ಕರೆಸು ಸರ್ವಾಧ್ಯಕ್ಷನೆ 2 ಎಲ್ಲವು ನಿನಗೊಪ್ಪಿಸುವೆ ಎಂಬುದ ನೀ ಬಲ್ಲಿ ಶ್ರೀಭೂರಮೆನಲ್ಲನೆ ಎನ- ಗಿಲ್ಲ ಭಾರವು ಜಗಮಲ್ಲನೆ ತಲ್ಲಣ ಬಿಡಿಸಿ ಪಾಲಿಸು ಶಿರದಲಿ ಪದ ಪಲ್ಲವನನು ವೆಂಕಟೇಶನೆ ಸರಿ- ಯಲ್ಲ ನಿನಗೆ ಶ್ರೀನಿವಾಸನೆ3
--------------
ತುಪಾಕಿ ವೆಂಕಟರಮಣಾಚಾರ್ಯ