ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಶಾರದೆ ಸರಸ್ವತಿ ಭಾರತಿ ಭಗವತಿ ಪ ಸಿರಿಸೊಸೆ ಪಾವನೆ ಸುರನುತ ಚರಣೆ ಅ.ಪ ಮಧುರ ಸಂಭಾಷಿಣೆ ವಿಧಿವರರಾಣಿ ಬುಧಜನ ತೋಷಿಣೆ ವಿಧುಮುಖಿಜನನಿ 1 ಧವಳಸುಗಾತ್ರೆ ಕಮಲನೇತ್ರೆ ಕವಿಜನ ಸ್ತೋತ್ರೆ ದಿವಿಜೆ ಪವಿತ್ರ 2 ರಾಜರಾಜಾರ್ಚಿತೆ ರಾಜಿಪಸುಚರಿತೆ ಮೂಜಗಭರಿತೆ ಜಾಜಿ ಪಟ್ಟಣವಾಸೆ 3
--------------
ಶಾಮಶರ್ಮರು
ಅರಿವರಾರೆಲೋ ನಿನ್ನ ಅಗಮ್ಯ ಚರಿತ ಚರಣದಾಸರ ಪರಮ ಆನಂದಭರಿತ ಪ ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ ಆವರೀತಿಗು ಕಾವದೇವ ನಾನೆಂದಿ 1 ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು ಜೀವಜೀವರಲಿ ಜಡ ಜೀವ ಬೇರೆನಿಸಿದಿ ಜೀವಜೀವರ ಜೀವ ಚೈತನ್ಯರೂಪ 2 ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ 3 ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ 4 ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ ದೇವದೇವರ ದೇವ ದೇವ ಶ್ರೀರಾಮ ತವ ಸೇವಕನೆನಿಸೆನ್ನ ಕಾಯೊ ಕೈಪಿಡಿದು 5
--------------
ರಾಮದಾಸರು
ನಮಿಸುವೆನಾಂ ಪಾಲಿಸು ನಾಥನೆ ಪ ಸಾರಸಭವತಾತ ನಾರದ ಮೌನಿನುತ ಮೂರ ಕೋಟಿ ಸುಂದರಾಂಗ ಮುರಹರ ಗೋವಿಂದ 1 ಶಂಖಚಕ್ರ ಗಧಾ ಪಂಕಧಾರಿ ಸದಾ ಕಿಂಕರಗಣ ಪಾವನಘನ ವೆಂಕಟರಮಣ2 ಶ್ರೀಜನಾರ್ಧನ ರಾಜಸತನಾ ಮೂಜಗಭರಿತ ಪರಾತ್ಪರ ಜಾಜಿಶ್ವರಾ 3
--------------
ಶಾಮಶರ್ಮರು
ಪಡಕೊ ನಿಜಗುರುತಾ ನಿಜಗುರುತಾ ಪಡೆವದಿದೆ ನಿಜ ನೀ ಗುರುತಾ ಧ್ರುವ ಸಾಧಿಸಿ ಗುರು ಗುರುತಾ, ಸಾಧಿಸಿ ಗುರು ಗುರುತಾ ಅದೇ ತುಂಬೇದ ಜಗಭರಿತಾ 1 ಮನ್ನಿಸೆ ತಿಳಿ ತ್ವರಿತಾ ಮನ್ನಿಸಿ ತಿಳಿತ್ವರಿತಾ ನಿನ್ನದಲ್ಲಿದು ಹೊರತಾ 2 ತರಣೋಪಾಯದ ವರತಾ ತರಣೋಪಾಯದ ವರತಾ ಗುರುಕರುಣದ ದಯಗರತಾ 3 ಪರಮ ಙÁ್ಞನಾಮೃತಾ ಪರಮ ಙÁ್ಞನಾಮೃತಾ ತರಳ ಮಹಿಪತಿ ಮನೋಹರಾ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕುತಜನರ ಮುಕುಟಮಾನಸ ನಿಖಿಲಜಗತ್ರಾಣ ಮಧುಸೂದನ ಪ ಜಗಜೀವನ ಜಗಪಾಲನ ಜಗವಂದನ ಜಗಪಾವನ ಜಗಭರಿತ ಜಗನ್ನಾಥ ಜಗ ಜಯಕಾರ ಜಗದಾಧಾರ 1 ಜಲಜಪಾಣಿ ಜಲಜನಾಭ ಜಲಜನೇತ್ರನೆ ಜಲಜಗಾತ್ರನೆ ಜಲಜಾಭರಣ ಜಲಧಿಶಯನ ಜಲಜಸುತೆನಾಥ ಜಲಜಾಸನಪಿತ 2 ಉರಗಶಯನ ಗಿರಿಧಾರಣ ಗಿರಿಜಾವಂದಿತ ದುರಿತರಹಿತ ಜರಾಮರಣಹರಣ ಪರಮ ಕರುಣಿ ಶ್ರೀರಾಮ ಶರಣಪ್ರೇಮ 3
--------------
ರಾಮದಾಸರು
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1 ತುಳಿದನ ಅವಗೊಲಿದನ ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2 ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3 ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4 ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5 ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6 ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7 ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8 ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9 ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10 ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11 ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12 ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13 ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14 ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15
--------------
ವರದೇಶವಿಠಲ
ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು
ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರಏಳು ಪಾಂಡವಪಾಲ ಏಳುಸಿರಿಭೂಲೋಲಏಳು ಪಾವನಚರಿತ ಏಳೆರಡು ಜಗಭರಿತಏಳು ಯದುಕುಲಲಲಾಮಾ ಪ.ಮೂಡುತಿವೆಅರುಣಕಿರಣೋಡುತಿವೆ ತಮದ ಕುಲಬಾಡುತಿವೆ ತಾರಿನನ ಬೇಡುತಿವೆ ಚಕ್ರವಾಕಾಡುತಿವೆಕೀರಬಲು ಪಾಡುತಿವೆತುಂಬಿನಲಿದಾಡುತಿವೆಖಗಸಮೂಹರೂಢಿಯೊಳು ಮುನಿಜನರು ನೋಡಿ ರವಿಗತ ಹರಿಯಷೋಡಶುಪಚಾರಾರ್ಚನೆ ಮಾಡಿ ಮನದಣಿಯೆ ಕೊಂಡಾಡಿ ಕುಣಿದಾಡಿ ಭವಕಾಡನೀಡಾಡಿವರಬೇಡುತೈದಾರೆ ಗಡ ಹರಿಯೆ 1ವಿಷ್ಣುಪದೆ ವೃದ್ಧನದಿ ಕೃಷ್ಣವೇಣ್ಯಖಿಳ ಸಂಹೃಷ್ಟಿಪ್ರದೆ ಕಾವೇರಿ ಇಷ್ಟದಾ ಯಮುನೆಅಘನಷ್ಟಕಾರಣೆ ಭೀಮೆ ಶಿಷ್ಟಾಂಗೆ ತುಂಗೆವರತುಷ್ಟಿದಾಯಕ ನದಿಗಳುಕೃಷ್ಣ ನಿನ್ನಡಿಯುಗಳ ಸ್ಪøಷ್ಟರಾಗುತಲಿ ಉತ್ಕøಷ್ಟ ಪದ ಪಡೆವೆವೆಂದಷ್ಟ ದಿಗತಟದಿಂದಚೇಷ್ಟಿತ ತರಂಗದಿಂ ಸ್ಪಷ್ಟ ಬಂದಿರೆ ಕರುಣದೃಷ್ಟಿಯಿಂದವರ ನೋಡೈ ಹರಿಯೆ 2ಕೇಶನಾಕೇಶ ಕಕುಭೇಶಾದಿ ಅಮರರಾಕಾಶದಲಿ ದುಂದುಭಿಯ ಘೋಷ ಮೊಳಗಿಸಿದರನಿಮೇಷ ಮುನಿ ವೀಣೆಯುಲ್ಲಾಸದಿಂ ಮಿಡಿಮಿಡಿದು ಧನಶ್ರೀ ಭೂಪಾಳಿಯಿಂದಶೇಷಶಯನಖಿಳ ನಿರ್ದೋಷಗುಣಪೂರ್ಣಸರ್ವೇಶ ಮುಕುಂದ ಭಟಕೋಶನೆಂದವರು ನಿನ್ನಬೇಸರದೆ ಪಾಡುತಿಹರು ಶ್ರೀಶ ಪ್ರಸನ್ವೆಂಕಟೇಶನೆ ಒಲಿದುಪ್ಪವಡಿಸೊ ಹರಿಯೆ 3
--------------
ಪ್ರಸನ್ನವೆಂಕಟದಾಸರು