ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗಿದನು ಶ್ರೀರಂಗ ಶ್ರೀರಂಗ ಪ ಕಲಿಜನರ ನೋಡುತಲಿ ಅಳುಕಿದಾಮನದಿಂದ ಅ.ಪ ಜೀವ ಜಗಬಿಂಬನಿಗೆ ಯಾವುದೈ ಆಯಾಸ ಕಾವ ಸಚರಾಚರವ ಶ್ರೀವರನಿಗುಂಟೆ ನಿದ್ರೇ ಸಾರ್ವಭೌಮನಿಗೆ ಕ್ಷುದ್ರಜೀವ ಸಮರೆಂತೆಂಬ ಕೋವಿದಾಭಾಸಗಣ ಸೇವೆಕೊಳ್ಳನು ಎಂದು 1 ವೈದೀಕರೆನ್ನುತಲಿ ವೇದಮರ್ಮವ ತಿರುಚಿ ಬೌದ್ಧಮತವನೆ ಮತ್ತೆ ಬೊಧಿಪರೆ ಈ ಜನರು ಸಾಧು ಸಮ್ಮತ ಮಧ್ವವಾದ ನೋಡದೆ ಬರಿದೆ ಸಾಧು ವೇಷದಿ ತಿರಿಪ ಗರ್ದಭರ ಕಂಡಂಜಿ 2 ನಾಮಜಪವೇನಿಲ್ಲ ನೇಮ ನಿಷ್ಠೆಗಳಿಲ್ಲ ನಾಮ ಹಾಕುವ ದೊಡ್ಡ ನೇಮವಂದೇಯಿಹುದೆ ಹೇಮಗೋಸುಗ ತತ್ವ ಹೋಮಮಾಡುವ ಎಲ್ಲ ಕಾಮ ಕಾಮಿನಿ ಜನರ ವಾಮಗುಣಗಣನೆನೆದು 3 ಅನ್ನದೇವನ ತೊರೆದು ಅನ್ನಕೊಂಬರೆ ಕ್ರಯಕೆ ಅನ್ಯರೆನ್ನದೆ ಹರಿಗೆ ಇನ್ನು ಘಳಿಪರೆ ನಿರಯ ಹುಣ್ಣಂತಮವಿಪರೀತ ಕಣ್ಣಿಂದ ನೊಡದವ ಧನ್ಯಧನ್ಯನು ಎಂದು ಕಣ್ಣುಗಳ ಮುಚ್ಚುತಲಿ 4 ಶ್ರೀಲೊಲ ಮಲಗಿದಡೆ ಏಳುವುದು ಜಗವೆಂತು ವ್ಯಾಳಗುರುಹೃಸ್ಥ “ಶ್ರೀ ಕೃಷ್ನವಿಠಲ”ನೆ ತಾಳಿ ಕೃಪೆ ಹೃದಯದಲಿ ಶೀಲರೂಪವ ತೋರೊ ಕಾಲ ವಾಲಗವ ಕೈಕೊಂಡು 5
--------------
ಕೃಷ್ಣವಿಠಲದಾಸರು
ಸೂರ್ಯಾಂತರ್ಗತ ಹರಿ ನಮೋ ನಮೋ ವೀರ್ಯಾದಿಗಳದಾತ ನಮೋ ನಮೋ ಜಗಬಿಂಬ ಪ ತೋಯಜಾಕ್ಷನ ವಿಷ್ಣು ನಮೋನಮೋ ಜೀಯ ಪಾಲಿಸುದೇವ ನಮೋನಮೋ ಮಮಬಿಂಬ ಅ.ಪ ಆನಂದ ಪರಿಪೂರ್ಣ ನಮೋನಮೋ ಏನೆಂಬೆ ಪರಮೋಚ್ಚ ನಮೋನಮೋ ಶ್ರೀನಾಥ ಸಿರಿಪೂರ್ಣ ನಮೋನಮೋ ಏನೆಂಬೆ ಪರದೋಚ್ಚ ನಮೋನಮೋ ಶ್ರೀನಾಥ ಸಿರಿಪೂರ್ಣ ನಮೋನಮೋ ನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ 1 ನಾಲ್ಕರು ನಿಜರೂಪಿ ನಮೋನಮೋ ಕಾಲಾದಿಗಳ ನಾಳು ನಮೋನಮೋ ಏಳೆರಡು ಜಗಪಾಲ ನಮೋನಮೋ ಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ 2 ಸರ್ವಾಂಗರ್ಬಹಿವ್ಯಾಪ್ತ ನಮೋನಮೋ ಸರ್ವಾಶ್ರಯನೆಗೋಜ ನಮೋನಮೋ ದೇವಾದಿದೇವ ವಿಭು ನಮೋನಮೋ ಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ 3 ಸರ್ವದೋಷವಿದೂರ ನಮೋ ನಮೋ ಸರ್ವಸುಗುಣ ಪರಿಪೂರ್ಣ ನಮೋನಮೋ ಜೀವ ಜಗದಿಂದ ಬಿನ್ನ ನಮೋ ನಮೋ ಶ್ರೀ ವಿಧೀರ ಪರಿಪಾಲ ನಿಸ್ಸೀಮ 4 ಸೃಷ್ಟ್ಯಾದ್ಯಷ್ಠಕರ್ತ ನಮೋನಮೋ ತುಷ್ಠಿ ಪುಷ್ಠಿಯ ನೀಡು ನಮೋನಮೋ ಶ್ರೇಷ್ಟ ಶ್ರೀಕೃಷ್ಣ ವಿಠಲ ನಮೋನಮೋ ದೃಷ್ಠಿ ಬೀರುತ ಬೇಗ ಕಾಣಿಸೈ ತವರೂಪಮೋಕ್ಷದನೆ 5
--------------
ಕೃಷ್ಣವಿಠಲದಾಸರು