ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಸುಖವ ಜಗಪಾಲಯ ಒಡೆಯ ವೈಕುಂಠದಾಲಯ ಪ ಕೊಡು ಸುಖ ನಿಮ್ಮಯ ಅಡಿಯದಾಸರ ಸೇವೆ ಸಡಗರ ಸಂಪದ ಎಡೆಬಿಡದೆ ಅ.ಪ ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ ಜಡಭವತೊಡರನು ಕಡೆಹಾಯ್ಸಿ ಅಡಿಗಡಿಗೆ ನಿನ್ನಡಿದೃಢ ಭಕುತಿ 1 ಸಾಗರಸಂಸಾರಭೋಗದ ಬಲುಘೋರ ನೀಗಿಸಿ ನಿಜಜ್ಞಾನ ಪಾಲಿಸಿ ಬೇಗನೆ ನೀಡು ತವದರುಶನವ 2 ಮನಸಿನ ಹರಿದಾಟ ಘನಘನ ದುಶ್ಚಟ ವನು ಪರಿಹರಿಸಿ ದಯಮಾಡು ಮನಶಾಂತಿ ಸದುಗುಣವ 3 ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ ಬಿನುಗು ತ್ರಿದೋಷ ದೂರಮಾಡಿ ಜನನ ಮರಣಂಗಳ ಗೆಲಿಸಭವ 4 ಭೂಮಿಯೊಳಧಿಕೆನಿಪ ಸ್ವಾಮಿ ಶ್ರೀರಾಮಭೂಪ ನೇಮದಿ ಬೇಡುವೆ ವರ ನೀಡು ಆ ಮಹಕೈವಲ್ಯ ಪದವಿಯ 5
--------------
ರಾಮದಾಸರು
ನಿರಂಜನ ನಿತ್ಯ ನಿರಂಜನ ಪ ಸುಗುಣ ಸಂತೃಪ್ತ ನಿಗಮಾದಿವಿನುತ ಅಗಜೇಶ ಜಗಪಾಲಯ 1 ಗಜಚರ್ಮಾಂಬರ ರಜತಾದ್ರಿ ಮಂದಿರ ಭಜಿಪರ ಭಯವಿದೂರ 2 ನಂಬಿದ ಭಕುತರ ಇಂಬುಗೊಟ್ಟು ವರ ಗುಂಭದಿ ಕೊಡುವ ದೇವ 3 ಮಹಿಮ ನೀ ಉದಯಾಗಿ ಮಹಿಯೊಳು ಮುಂಡರಗಿ ಮಹಸ್ಥಲವೆನಿಸಿದಿಯೋ4 ದೋಷವಿನಾಶನ ಶ್ರೀಶ ಶ್ರೀರಾಮನ ದಾಸರ ದಯಸಂಪೂರ್ಣ 5
--------------
ರಾಮದಾಸರು