ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಗುರುನಮನ ಮುಳುಗಿ ಮೀಯೊ ಮನುಜ ಪ ದುರಿತ ಹರಿಸಿ ಸುಸ್ಥಿರ ಪದ (ಕರುಣಿಸುವಂಥ) ಅ.ಪ ಸ್ವಾರ್ಥವಾಗದಣ್ಣ || ಮುಕ್ತಿಸಂಪದಗಳ ಅರ್ತಿಯೊಳ್ ಪಡೆಯಲು 1 ಮೂರ್ಜಗಪತಿ ದಯವಿಡನಣ್ಣ || ಅರ್ಜುನ ಸಖನ ಪದಾಬ್ಜವ ಸೇರಲು 2 ಅಕ್ಷಯ ಸುಖವ ತನ್ನಿಚ್ಛೆಯೊಳ್ ಪಡೆದು ಮು-| ಮುಕ್ಷುವಾಗಿ ನಿಜ ಮೋಕ್ಷವ ಪಡೆಯಲು 3 ಸನ್ನಿಧಿ ಭಾಗ್ಯವನುಣ್ಣುತಿರುವರೆ 4 ಆದಿಮಧ್ಯಾಂತವಿಲ್ಲದ ಪದವಿಯೊಳ್ ಸ-| ದಾನಂದನಾಗಿ ವಿನೋದದೊಳಿರುವರೆ 5
--------------
ಸದಾನಂದರು
ಎಂತಹದೋ ನಿನ್ನ ಸಂದುರಶನಾ | ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪ ಓದನ ತಿಂದೆ | ಪರರ ದ್ರವ್ಯದ ತಂದೆ | ಪರ ಸತಿಯರಿಗೆ ನೊಂದೆ | ಗುರು ಹಿರಿಯರ ನಿಂದೆ | ಹಿರದಾಗಾಡಿದೆ ಮುಂದೆ | ಬರುತಿಪ್ಪ ಪಾಪದಿಂದೆ | ಪರಿಯಾಗಿ ಈ ಬಂದೆ | ಅರುಹು ತೊರದೆ ಬಂದೆ | ಕರುಣಿಸು ಜಗದ ತಂದೆ 1 ಸುಜನರ ಗುಣವ ಹಳಿದೆ | ಕುಜನರ ಸಂಗದಲಿ ಬೆಳಿದೆ | ಭಜನೆಗೆÀಟ್ಟು ಸುಳಿದೆ | ಪ್ರಜರನು ಪೊಗಳಿದೆ | ವೃಜ ಪುಣ್ಯಕೋಶ ಕಳಿದೆ | ಋಜುಮಾರ್ಗವ ತೊರದುಳಿದೆ | ರಜನಿಚರ ಮತಿಗಳಿದೆ | ವಿಜಯ ವಾರ್ತೆಗೆ ಮುಳಿದೆ | ತ್ರಿಜಗಪತಿ ಕೇಳಿದೆ 2 ಹರಿವಾಸರವ ಬಿಟ್ಟೆ | ದುರುಳರಿಗೆ ಧನ ಕೊಟ್ಟೆ | ಹರಿಭಕ್ತರ ತೊರೆದು ಕೆಟ್ಟೆ | ಹರಿಶ್ರವಣ ಬಚ್ಚಿಟ್ಟೆ | ಪರಮ ವ್ರತವ ಮೆಟ್ಟೆ | ಹರುಷದಲ್ಲಿಗೆ ಮನಮುಟ್ಟಿ | ಬಟ್ಟೆ | ವಿರಕುತಿಯನು ಬಿಟ್ಟೆ | ದುರಿತಕ್ಕೆ ಗುರುತಿಟ್ಟೆ | ಬಟ್ಟೆ 3 ಜ್ಞಾನವೆಂಬೋದೇ ಇಲ್ಲಾ | ಏನು ಪೇಳಲಿ ಸೊಲ್ಲಾ | ನೀನೆಂಬೋದಿಲ್ಲವಲ್ಲಾ | ಹಾನಿ ವೃದ್ದಿಗಳೆಲ್ಲಾ | ನಾನುಂಟೆ ಎಲ್ಲ ಸಲ್ಲಾ | ದಾನಾದೆ ಸತತ ಖುಲ್ಲಾ | ತಾ ನುಡಿಗೆ ಸೋತು ಚಿಲ್ಲಿ | ರಾನಡತಿ ಸಿರಿನಲ್ಲಾ | ನಾ ನಡದೆ ನೀ ಬಲ್ಲಾ | ದೇ ನೋಡು ಪ್ರತಿ ಮಲ್ಲಾ 4 ಅಪರಾಧಿ ನಾನಯ್ಯ | ಅಪವಾದದವನಯ್ಯ | ಕೃಪಣದಿಂದೆನ್ನ ಕಾಯಾ | ಉಪಜಯವಾಯಿತು ಪ್ರೀಯಾ | ಸ್ವಪನದಿ ಪುಣ್ಯ ಸಹಾಯಾ | ಲಪಮಾಡಲಿಲ್ಲ ಜೀಯಾ | ಕೃಪೆಯಲ್ಲಿ ಪಿಡಿ ಕೈಯಾ | ವಿಜಯವಿಠ್ಠಲರೇಯಾ | ಗುಪುತವಾದುದುಪಾಯಾ | ತಪಸಿಗಳ ಮನೋಜಯಾ 5
--------------
ವಿಜಯದಾಸ
ಎಂದು ಕಾಂಬೆನು ನಂದ ಗೋಪನ | ಕಂದ ಶ್ರೀ ಗೋವಿಂದನ ಮಂದರಾಚಲಧರ ಶ್ರೀಯದುಕುಲ | ಚಂದ್ರಗುಣಸಾಂದ್ರ ವಿಜಯಸೂತನ ವಿಶ್ವಪಾಲನ | ಭುಜಗವರ ಪರಿಯಂಕನ ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರಗಮನನ 1 ನವನೀತ ಚೋರನ ಬಾಲಕೃಷ್ಣ ಗೋಪಾಲನ ಶೈಲ ಬೆರಳಿಲಿ ತಾಳಿ ಗೋಕುಲ ಪಾಲಿಸಿದ ಪರಮಾತ್ಮನ2 ಭಾಮೆ ರುಕ್ಮಿಣಿ ರಮಣ ರಂಗನ ಸಾಮಗಾನ ವಿಲೋಲನ ಶ್ರೀಮದಾನಂದ ಮುನಿಕರಾರ್ಚಿತ ಶಾಮಸುಂದರ ವಿಠಲನ 3
--------------
ಶಾಮಸುಂದರ ವಿಠಲ
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ಪ ಮೃಗಲಾಂಛನ ವದನೆ ಮೃದು ಸರಸಿಜ ಸದನೆ ಕಿರೀಟಿಯ ಬೀಗನ್ನ1 ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆ ಕಮಲ ತುಳಸಿ ಮಣಿಹಾರನ್ನ ಜಗದಾಧಾರನ್ನ ದಶಾವತಾರನ್ನ 2 ಅಜರಾಮರಣ ಸಿಧ್ದಿ ತ್ರಿಜಗದೋಳ್ ಪ್ರಸಿದ್ಧಿ ಜಗವÀ ಪೋಷನ 3
--------------
ವಿಜಯದಾಸ
ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು ಬ್ರಹ್ಮವೆಲ್ಲಿದೇಹವು ಬ್ರಹ್ಮವು ಒಂದೆಯೋ ದೇಹವು ಇಹುದು ಬ್ರಹ್ಮದಲ್ಲಿ ಪ ಮಾಯೆಯು ಬಿಟ್ಟು ಬ್ರಹ್ಮವು ಎಂದೆನೆಮಾಯೆಯ ಬಿಟ್ಟು ಬ್ರಹ್ಮೆಲ್ಲಿಕಾಯ ಬಿಟ್ಟು ಆತ್ಮವು ಎಂತೆನೆಕಾಯವ ಬಿಟ್ಟು ಆತ್ಮೆಲ್ಲಿ1 ಪಿಂಡವ ಬಿಟ್ಟು ಬ್ರಹ್ಮಾಂಡ ವೆಂತೆನೆಪಿಂಡಾಂಡಿಲ್ಲದೆ ಬ್ರಹ್ಮಾಂಡವೆಲ್ಲಿಖಂಡವ ಬಿಟ್ಟಾಖಂಡವೆಂತೆನೆಖಂಡವ ಬಿಟ್ಟು ಅಖಂಡವದೆಲ್ಲಿ2 ಜಗವನು ಬಿಟ್ಟು ತನ್ನನು ತೋರೆನೆಜಗವನು ಬಿಟ್ಟು ತಾನೆಲ್ಲಿಜಗಪತಿ ಚಿದಾನಂದ ಸದ್ಗುರು ನೀನು ನೀಜಗಸಂಶಯವೆಲ್ಲಿ 3
--------------
ಚಿದಾನಂದ ಅವಧೂತರು
ನೀನೆ ದಯಾನಿಧಿಯು ಶ್ರೀ ಗುರುರಾಯ ನೀನೆ ದಯಾನಿಧಿಯು ಧ್ರುವ ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ 1 ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ 2 ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮಾಧವ ನೀನೆ 3 ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದಿ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ4 ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ ಕಷ್ಟವ ಪರಿಹರಿಸಿದ ಶಿಷ್ಟ ವಿಭೀಷಣಗೊಲಿದು ಪಟ್ಟವಗಟ್ಟವು ವಿಷ್ಣವು ನೀನೆ 5 ಮದನನೊಲಿದು ಕಾಳಿಂಗನ ತುಳಿದು ಕದನದಲಿ ಬಾಣಾಸುರನಳಿದು ಮೇದಿನಿಯೊಳು ಮರೆ ಇಲ್ಲದೆ ದೈತ್ಯರ ಮರ್ದಿಸಿದ ಮಧುಸೂದನನು ನೀನೆ 6 ತ್ರಿಪುರವನಳಿದು ತ್ರಿಗುಣವ ತಾಳಿದ ತೆತ್ತೀಸ ಕೋಟಿ ದೇವರುಗಳಿಗಾಳಿದ ಅಕ್ರೂರಗೊಲಿದು ಚರಿತ್ರವದೋರಿದ ತ್ರಿಜಗಪತಿ ತ್ರಿವಿಕ್ರಮ ನೀನೆ7 ವಾಲಿಯನಳಿದು ವಾಲ್ಮೀಕಿಗೊಲಿದು ಬಲಿಚಕ್ರನ ಮುನಿಮುಂದಲಿ ಸುಳಿದು ಬ್ರಾಹ್ಮಣನಾಗಿ ದಾನವ ಬೇಡಿದ ಮಾನ್ನವಗೊಲಿದ ಶ್ರೀ ವಾಮನ ನೀನೆ 8 ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ ಸ್ಥಳದಲಿ ಶ್ರೀ ಮಹಾಲಕ್ಷ್ಮಿಯ ಧರಿಸಿದ ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ ಶ್ರೀದೇವಿಗೊಲಿದಿಹ ಶ್ರೀಧರ ನೀನೆ 9 ದಾಸರ ಕ್ಲೇಶಕಿಲ್ಮಿಷಗಳ ತೊಳೆದು ಅಂಬರಿಷ ರುಕ್ಮಾಂಗದಗೊಲಿದು ಶುಕ ಶೌನಕ ಪರಾಶರ ಮುನಿಗಳಿಗೆ ಹರುಷನಿತ್ತ ಹೃಷಿಕೇಶನು ನೀನೆ 10 ಕ್ಷಿತಿಯೊಳು ದೃಢ ಪತಿವ್ರತೆಗೊಲಿದು ಯತಿ ಮುನಿಗಳಿಗಿನ್ನು ಗತಿಗಳನಿತ್ತು ಪತಿತರ ತಾರಿಸಿ ಪಾವನಗೈಸಿದ ಪರಂಜ್ಯೋತಿ ಪದ್ಮನಾಭನು ನೀನೆ 11 ದೇವಕಿಗೊಲಿದು ಸ್ಥಾಪಿಸಿ ಧರೆಯೊಳು ದ್ವಾರಕಿಯಲಿ ನಿಜ ಲೀಲೆಯು ತೋರಿದ ದುರಿತ ವಿಧ್ವಂಸನ ದೇವಕಿ ಪುತ್ರ ದಾಮೋದರ ನೀನೆ 12 ಸಿದ್ದ ಶರಣರಿಗೊಲಿದ ಸದ್ಗತಿ ಸುಖಸಾಧನ ಸಹದೇವಗದೋರಿದ ಸಂಭ್ರಮದಿ ಸುಧಾಮಗ ಒಲಿದು ಸಂತೋಷವನಿತ್ತ ಸಂಕರುಷಣ ನೀನೆ 13 ವಸುಧಿಯೊಳು ಭಸ್ಮಾಸುರನ ಮರ್ದಿಸಿ ಭಾಷೆಯನಿತ್ತು ಭಕ್ತರ ಪಾಲಿಸಿ ಋಷಿ ವೇದವ್ಯಾಸಗೊಲಿದಾತನು ವಸುದೇವಸುತ ವಾಸುದೇವನು ನೀನೆ 14 ವಿದುರುದ್ಧವ ಗರುಡಗೊಲಿದು ಭೃಗುಮುನಿ ಕಪಿಲ ಯೋಗೇಂದ್ರನ ಸಲಹಿದ ಸ್ಥಿರಪದವಿತ್ತರೊಂದು ಮಂದಿಗೆ ಪ್ರಸನ್ನವಾದ ಪ್ರದ್ಯುಮ್ನನು ನೀನೆ 15 ಸೀತಾ ಸುದ್ದಿಯ ತಂದವಗೊಲಿದು ಹತ್ತು ತಲೆಗಳ ಇದ್ದವನಳಿದು ಕದ್ದುಬೆಣ್ಣೆಯ ಮುದ್ದೆಯ ಮೆದ್ದು ಉದ್ದವಗೊಲಿದ ಅನಿರುದ್ಧನು ನೀನೆ 16 ಸೋಕಿಸಿ ಪೂತಣಿಯ ಕಾಯವು ಹೀರಿದ ಭಕ್ತ ಪುಂಡಲೀಕನ ಸಲಹಿದ ಭಕ್ತಿಗೆ ಒಲಿದು ಮುಕ್ತಿಯನಿತ್ತ ಪರಮ ಪರುಷ ಪುರುಷೋತ್ತಮನು ನೀನೆ 17 ಅಕ್ಷಯವೆಂದು ರಕ್ಷಿಸಿ ಸಭೆಯೊಳು ದ್ರೌಪದಿ ಕರುಣಕಟಾಕ್ಷದಿ ಸಲಹಿದ ಭಕ್ತವತ್ಸಲನಾಗಿ ಗಜೇಂದ್ರಗೆ ಅಧೋಕ್ಷಜ ನೀನೆ 18 ನರನಾರಿಯು ನಾಂಟೀಶರನಾಗಿ ನಖಮುಖದಲಿ ಹಿರಣ್ಯಕನ ಸೀಳಿ ಭಕ್ತಪ್ರಹ್ಲಾದಗ ಒಲಿದು ಸ್ತಂಭದಿ ಪ್ರಕಟಿಸಿದ ನರಸಿಂಹನು ನೀನೆ 19 ಅನಿಳ ಸ್ನೇಹಿತ ಅಜಗ್ನಾನಗ ಒಲಿದು ಅಹಲ್ಯಾ ಶಾಪ ವಿಮೋಚನ ಮಾಡಿದ ನೆಚ್ಚಿದ ಧ್ರುವನ ನಿಜ ಭಕ್ತಿಗೆ ಒಲಿದು ಅಚಲ ಪದವಿತ್ತುಚ್ಯುತ ನೀನೆ 20 ಜಗದೊಳು ಭಕ್ತಜನರಿಗೆ ಒಲಿದು ಜಾಹ್ನವಿ ನಿರ್ಮಿಸಿ ಜನಕನ ಸಲಹಿದ ಸಾಧು ಸಜ್ಜನ ಮುನಿ ಸಂಜೀವನ ಜಾನಕೀಪತಿ ಜನಾರ್ಧನನು ನೀನೆ 21 ಅಂಗದಗೊಲಿದಾನಂದವನಿತ್ತು ಕುಂದದೆ ಕರೆದುಪಮನ್ಯುನ ಸಲಹಿದ ದಿನಕರ ಚಂದ್ರ ಕಳಿಯಗಳಿತ್ತು ಇಂದ್ರಗೆ ಒಲಿದ ಉಪೇಂದ್ರನು ನೀನೆ 22 ಧರೆಯೊಳು ಭಕ್ತನ ಜನ್ಮವು ಹರಿಸಿ ಹರಿಶ್ಚಂದ್ರನ ಕ್ಲೇಶವು ಪರಿಹರಿಸಿದ ಸುರಮುನಿಗೊಲಿದ ಶ್ರೀ ಹರಿಯು ನೀನೆ 23 ಕಾಳಿ ಮಥನವು ಮಾಡಿ ಕರುಣದಿ ಸುರರಿಗೆ ಅಮೃತವನಿತ್ತು ಸಲಹಿದ ಕಲ್ಕ್ಯಾವತಾರದ ಲೀಲೆಯ ತೋರಿದ ಕಪಟ ನಾಟಕ ಶ್ರೀ ಕೃಷ್ಣನು ನೀನೆ 24 ಸಂಧ್ಯಾನದ ಸಾಹಾಯವನಿತ್ತು ಕಾಯದಿ ಸದ್ಗತಿ ಸಾಧನದೋರಿದ ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯ ಪರಮ ದಯಾನಿಧಿಯು ನೀನೆ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸಬಾರದೆ ಮನವೆ ಭಜಿಸಬಾರದೆ ಭಜಿಸಲಿಕ್ಕೆ ಭಾವದಿಂದ ನಿಜವಾ ಗೊಲಿವ ಹರಿ ಮುಕುಂದ ಧ್ರುವ ನಿಜವಬಿಟ್ಟು ದಣವದ್ಯಾಕೆ ತ್ರಿಜಗಪತಿಗೊಂದಿಸದೆ ತಾನು ಭಜನ ಮುಖ್ಯವೆಂದು ಸುಜನರೆಲ್ಲ ಪೇಳುತಿರಲಿಕ್ಕಾಗಿ 1 ಪ್ರೀತಿಯಿಂದರ್ಜುನ ನೋಡಿ ಗೀತೆಯಲ್ಲಿ ಶ್ರೀಕೃಷ್ಣತಾನು ನೀತಿಹಿತವ ಭಕ್ತಿಯೋಗದಲ್ಲಿ ಸಾರತಿರಲಿಕ್ಕಾಗಿ 2 ಪ್ರಕಟಭಾವಕೊಲಿದ ನೋಡಿ ಅಖಿಲದೊಳು ಸುಲಭದಿಂದ ಭಕುತಿ ಸುಖವನಿತ್ತು ಸಲಹುತಿಹ್ಯ ಮಹಿಪತಿಸ್ವಾಮಿಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುರಹರ ಬಾರೋ ವನಮಾಲಾ ಚರಣವ ತೋರೋ ಗೋಪಾಲಾ ಪ ಮೊರೆಯ ಕೇಳಿದರೂ ಕರುಣೆಯು ಬರಲಿಲ್ಲ ಶರಣನ ಮರೆವುದು ತರವಲ್ಲಾ ಅ.ಪ ಶರನಿಧಿಗಳಿವೆ ಗಿರಿಯ ಧರಿಸಿದೆ ಧರಣಿಯನೆತ್ತಿದೆ ತರಳನ ಪೊರೆದೆ ವರವಟುವಾದೆ ಬುದ್ಧ ಕಲ್ಕಿ ನೀನಾದೆ 1 ನಿಗಮೋದ್ಧಾರಾ ನಗಧರ ಭೂವರಾ ಮೃಗಮುಖ ವಾಮನ ಪರಶುಧವಾ ಜಗಪತಿ ಮುರಳೀಲೋಲಾ ಪುರಹರಾ ಖಗವಾಹನ ಕಲ್ಕಿ ವಿವಿಧಾವತಾರಾ2 ಗಂಗೆಯ ಜನಕಾ ಶರಣರ ಕನಕಾ ಮಂಗಳದಾಯಕಾ ಅಸುರಾಂತಕಾ ತುಂಗವಿಕ್ರಮ ಶ್ರೀಮಾಂಗಿರಿನಾಯಕಾ ಅಂಗಜಜನಕಾ ಲೋಕಮೋಹಕಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏಕೆ ನಿರ್ದಯನಾದೆ ಎಲೋ ದೇವನೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ಪಕಂಗೆಟ್ಟು ಕಂಬವನು ಒಡೆದು ಬಯಲಿಗೆ ಬಂದುಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆಬಂಗಾರವೆಷ್ಟು ಕೊಟ್ಟನು ಹೇಳೋ ಹರಿಯೇ 1ಸಿರಿಗೆ ಪೇಳದೆ ಮುನ್ನ ಸೆರಗ ಸಂವರಿಸದೆಗರುಡನ ಮೇಲೆ ಗಮನವಾಗದೆ ||ಭರದಿಂದ ನೀ ಬಂದು ಕರಿಯನುದ್ದರಿಸಿದೆಕರಿರಾಜನೇನು ಕೊಟ್ಟನು ಹೇಳು ಹರಿಯೇ 2ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆನಿಜದಿ ರುಕ್ಮಾಂಗದ ಮೊಮ್ಮಗನೆ ||ಭಜನೆಗೈವರೆ ಹಿತರೆ ನಾ ನಿನಗನ್ಯನೆತ್ರಿಜಗಪತಿ ಸಲಹೆನ್ನಪುರಂದರವಿಠಲ3
--------------
ಪುರಂದರದಾಸರು
ಭಾರತೀದೇವಿ ಸ್ತೋತ್ರಗಳು120ಶರಣು ಶ್ರೀ ಮಾರುತನ ರಾಣಿಯೆ |ಶರಣು ಮಂಗಳ ಶ್ರೋಣಿಯೇ ||ಶರಣು ಸ್ಮಿತ ಮುಖ ಉರಗವೇಣಿಯೆ |ಶರಣುಸರಸಿಜಪಾಣಿಯೇ ಪಇಂದ್ರಸೇನೆ ಪುರಂದರಾರ್ಚಿತೆ |ಇಂದಿರಾಪತಿ ಕೃಷ್ಣನಾ ||ನಂದದಲಿ ಸೇವಿಸುವ ಭಕುತಿಯ |ಇಂದುಧರನಿಗೆ ಕೊಡುವಳೇ 1ಗರುಡನುತ ಪದ ಸರಸೀರುಹೆ ವೃಕೋ |ದರನ ಪ್ರೀತಿಗೆ ಯೋಗ್ಯಳೇ ||ತರುಣಿ ಶಿರೋಮಣಿ ದುರ್ಮತಿಯ ಕಳೆದು |ಕರುಣದಲಿಕರಪಿಡಿವುದು 2ವಿದ್ಯುನ್ನಾಮಕೆ ಧಾತಜಾತಳೆ |ಶ್ರದ್ಧೆ ದಾತೆ ನಿರಂತರ ||ತಿದ್ದಿ ಯನ್ನ ವಕ್ರಮತಿಯದ್ರುಹಿಣ|ವಿದ್ಯೆಪಾಲಿಸೆ ಭಾರತೀ 3ಕಾಳೀ ದ್ರೌಪದಿಸ್ಥಾಣುಕನ್ಯಾ |ಶೈಲಜಾದಿ ನಮಸ್ಕøತೇ ||ಕಾಲಿಗೆರಗುವೆ ಯನ್ನಬಿನ್ನಪ|ಕೇಳಿಜ್ಞಾನವ ಪ್ರೇರಿಸೇ 4ಗಜಗಮನೆ ನಳನಂದಿನಿ ಅನಘೆ |ಸುಜನಹೃದಯ ನಿಕೇತನೆ ||ತ್ರಿಜಗಪತಿಪ್ರಾಣೇಶ ವಿಠಲನ |ಭಜನೆಯೊಳು ಮನ ನಿಲ್ಲಿಸೇ 5
--------------
ಪ್ರಾಣೇಶದಾಸರು