ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಪೀಠಕೇ ನಳಿನದಳಾಂಬಕೇ ಜಗನ್ನುತೆ ಪ. ಬಾಲೇಂದುನಿಭ ಫಾ¯ ಶ್ರಿತಪರಿಪಾಲೇ ಕೋಮಲೇ ಅ.ಪ ಕುಂದರದನೆ ಮಂದಗಾಮಿನೀ ವಂದಿತಾಮರ ವೃಂದಾರ ವೃಂದಾನಂದಪ್ರದೇ 1 ತೋರಮುತ್ತಿನ ಚಾರುಪೀಠಕೆ ಸಾರಿಬಾ ವರ ಸಾರಸಾನನೇ ನಾರೀಮಣಿಯರೆ ಸಾರಿಕರುವರು ಮೀರಿದಾನಂದದಿಂದ 2 ಶೇಷಶೈಲ ನಿವಾಸಿನೀ ನತ ಪೋಷಿಣೀ ಜಯಶ್ರೀ ರಮಾಮಣಿ ಯಾಸಾ ಸಾರಸನೇತ್ರೇ ಕಮಲಾವಾಸೇ ದಯೆತೋರಿಸೇ 3
--------------
ನಂಜನಗೂಡು ತಿರುಮಲಾಂಬಾ
ಏಳುಪೀಠಕೆ ನಳಿನಸಂಭವೆ ಜಗನ್ನುತೆ ಪ ಬಾಲೇಂದು ನಿಭಫಾಲೆ ಶ್ರೀತಪರಿಪಾಲೆ ಕೋಮಲೆ ಅ.ಪ. ಸಿಂಧುನಂದನೆ ಇಂದುಸೋದರಿ ಕುಂದರದನೆ ಮಂದಗಾಮಿನಿ ವಂದಿತಾಖಿಲವೃಂದಾರಕ ವೃಂದಾನಂದಪ್ರದೆ 1 ತೋರಮುತ್ತಿನ ಚಾರುಪೀಠಕೆ ಸಾರುಬೇಗನೆ ಸಾರಸಾನನೆ ನಾರೀರನ್ನೆಯರು ಸಾರಿಕರೆವರು ಮೀರದಾನಂದದಿಂ 2 ಶೇಷಶೈಲನಿವಾಸಿನೀ ನತಪೋಷದಾಯಿನಿ ಶ್ರೀರಮಾಮಣಿ ಯಾಸಾಸಾರಸನೇತ್ರೆ ಕಮಲಾವಾಸೇ ದಯೆತೋರಿಸೆ 3
--------------
ನಂಜನಗೂಡು ತಿರುಮಲಾಂಬಾ
ನಿನ್ನ ನಾ ಬಿಡುವನಲ್ಲಾ ಗೋಪಾಲಾ ನಿನ್ನ ಬಿಡುವನಲ್ಲ ಎನ್ನ ರಕ್ಷಿಸದಿರೆ ಪನ್ನಗಾದ್ರಿಯವಾಸ ಪರಮಪುರುಷರಂಗಾ ಪ ನಾಗಾರಿ ರೂಪನಾದ ಪರಮಾನಂದ ಭೋಗಿಶಯನ ವಿನೋದ ಭಕ್ತವತ್ಸಲ ಸಾಗರನಳಿಯ ಭೂಸುರಧೇನು ಪೋಷಕ ಭಾಗವತರ ಪ್ರಿಯಾ ಯೋಗಿಗಳರಸ1 ಜಲಜಾಕ್ಷ ನಳಿನನಾಭ ಜಾನಕೀರಮಣ ಜಲನಿಧಿಶಯನ ದೇವಾ ಜಗದೋದ್ಧಾರ ಜಲಜಬಾಂಧವ ಕುಲ ಶ್ರೇಷ್ಠಾದಿ ಮೂರುತಿ ಒಲಿದೆನ್ನ ದುಷ್ಕರ್ಮನಳಿದು ಪೋಷಿಸದಿರೆ 2 ಶಂಬರಾರಿಯ ಪಿತನೆ ಜಗನ್ನುತ ಕುಂಭಿನೀಧವನಾದನೇ ಗೋವಿಂದ ಶ್ರೀ ಕಂಬುಕಂಧರ ಕೃಷ್ಣಾ ಅಂಬುಧಿ ಬಂಧಿಸಿ ಅಂಬುಜಾಕ್ಷಿಯ ತಂದ ಹರಿ 'ಹೆನ್ನ ವಿಠ್ಠಲಾ’ 3
--------------
ಹೆನ್ನೆರಂಗದಾಸರು
ಬಂದನು ಕೃಷ್ಣ ಗೋವಿಂದ ಮುಕುಂದ ಭವ ಬಂಧನ ಪರಿಹಾರ ಶೌರಿ ಪ ಸಾರಸಪತ್ರನೇತ್ರ ಅನಘ ಘನನೀರದÀ ನಿಭಗಾತ್ರ ಶಕಟಾಂತಕ ಧೀರ ಕರುಣಾ ಪಾತ್ರ ಮುರಹರ ಜಂಭಾರಿಸನ್ನುತ ಗೋತ್ರಾ ಧಾರಿ ಮುನಿಜನ ಮಂದಾರ ಗೋಪಾಲ ಘನ ಸಾರ ಶೋಭಿತ ಯದುವೀರ ನಾರಾಯಣ 1 ಪಂಡಿತ ಕುಸುಮಪಾಣೆ ಜನಕ ಶ್ರೀ ಅಂಡಜಗಮನ ಗಾನಲೋಲನೆ ತಂಡ ರಕ್ಷಕ ಪುರಾಣಪುರುಷ ಕೋ ದಂಡ ಪಾಣಿ ಧುರೀಣ ಕುಂಡಲಿಶಯನ ಭೂಮಂಡಲಾಧಿಪ ಬಲೋ- ದ್ದಂಡ ಪರಾಕ್ರಮ ಚಂಡಮಹಿಮ ರಾಮ 2 ವೇದವೇದ್ಯ ಸುನಾಮಾ ತ್ರಿಜಗನ್ನುತ ಯಾದವ ಸಾರ್ವಭೌಮ ಪರಮಾತ್ಮ ಆದಿತೇಯಾಬ್ಧಿ ಸೋಮ ರಮೇಶಾಂಬುಜೋದರ ಸುಗುಣಧಾಮ ಮಾಧವ ನರಮೃಗ ಪ್ರಹ್ಲಾದ ವರದ ಸನÀಕಾದಿ ವಂದಿತ ಚರಣ 3
--------------
ಹೆನ್ನೆರಂಗದಾಸರು
ಎಂದಿಗೆಂದಿಗೆ ತೀರದು ನಮ್ಮಪ್ಪನ ಮಹಿಮಿನ್ನೆಂದಿಗೆಂದಿಗೂ ತೀರದು ಪ.ಎಂದೆಂದಂದದಿ ಸಂಧಿಸಿ ಪೊಂದಿದಾಇಂದಿರೆಸುಂದರೆ ಬಂದಾನೆಂದೆಂತೆಂದಳುವೃಂದಾರಕಾರವಿಂದಜಾಹೀಂದ್ರರು ನಿಂದರೂತಂದೆ ಮುಕುಂದ ಆನಂದನಂದನ ಮಹಿಮೆ 1ನಿಗಮಗಳು ಗುರುತ ಪೊಗಳಲು ಮಿಗೆ ತಪಸಿಗಳೆಣಿಕೆಗೆ ಮೈಯಗೊಡದೆ ನಗುವನಖಗಧ್ವಜ ಮೃಗಮುಖ ತ್ರಿಗೇಹ್ಯ ಪನ್ನಗಶಾಯಿಅಘದೂರ ಸುಗುಣಗಣನ ಮಹಿಮೆ 2ಉನ್ನತಕುನ್ನತ ಇನ್ನಣುಗಿನ್ನಣುಘನ್ನಕೆ ಘನ್ನ ಜಗನ್ನುತ ಸನ್ನಿದತನ್ನವನೆನ್ನಲು ಮನ್ನಿಪ ಚಿನ್ಮಯಚೆನ್ನ ಪ್ರಸನ್ವೆಂಕಟನಾಥನ ಮಹಿಮೆ 3
--------------
ಪ್ರಸನ್ನವೆಂಕಟದಾಸರು