ಜಗನ್ನಾಥ
ಸಮುದ್ರ ತೀರದಿ ಜಗನ್ನಾಥ
ಸಮಗ್ರ ಸೇವೆಯ ಕೊಡುವಾತ ಪ
ಸಮರ್ಥ ಫಲ್ಗುಣ ರಥಸೂತ
ಸಮಸ್ತಲೋಕವ ಪೊರೆವಾತ ಅ.ಪ
ಬಲಭದ್ರಾನುಜೆಯರನೊಡವೆರಸಿ
ಜಲನಿಧಿ ಮಧ್ಯದಿ ದ್ರೋಣದಿಂದಿಳಿಸಿ
ಒಲಿದು ವೈಕುಂಠಕೆ ಅವದಿರ ಕಳಿಸಿ
ಸಲೆ ನಿಂದೆಯಾ ಜಗನ್ನಾಥನೆಂದೆನಿಸಿ 1
ಪಾಂಡವರಕ್ಷಕ ನೀಲಾಂಗಾ
ಪುಂಡರೀಕಾಂಬಕಾ ಮದನಾಂಗಾ
ಅಂಡಜವಾಹನ ರಿಪುಮದಭಂಗ
ಕಂಡೆ ನಿನ್ನನಾ ಮಾಂಗಿರಿರಂಗ 2