ಕಾಲ ತಪ್ಪಿದರು ಸಾವಕಾಲ ತಪ್ಪದೋ
ಯಾವ ಜೀವ ಜಂತುಗಳಿಗೂ ಕಾಯವಿಡಿದು ಬಂದ ಬಳಿಕ ಪ
ಜನಿಸಿ ತಂದೆತಾಯ
ಕರ ದೊಳಿರಲಿ ಸ್ತನವನುಂಡು ಭರದಿನಿದ್ರೆ ಗೈಯುರ್ತಿಲಿ
ನೆರೆದಬಾಲರೊಡನೆ ಆಡಿ ಚರಿಸುತಿರಲಿ ಬಾಲಕತ್ವ
ತೆರಳಿ ಜವ್ವನವು ಬಂದು ರಮಣಿಯನ್ನೆ ವರಿಸಿ ಇರಲಿ 1
ಕರಿ ಹತ್ತಿ ಮೆರೆಯುತಿರಲಿ
ದೊರೆಗಳೊಡನೆ ಚರಿಸುತಿರಲಿ ಮೇರು ಗಿರಿಯ ಶಿರದೊಳಿರಲಿ
ಶರಧಿ ಮಧ್ಯ ಪುರದೊಳಂಲರಣ್ಯದೊಳಗೆ ತಿರುಗುತಿರಲಿ
ಅತಳ ಸುತಳ ವಿತಳವನ್ನೆ ಪೊಕ್ಕುಇರಲಿ 2
ಕಾಯವಿದುವೆ ತನ್ನ ಪೆತ್ತ ತಾಯಿತಂದೆಗಳಿಗೋ
ಜಾಯೆ ಸುತರ ಗೃಧ್ರ ಭಲ್ಲುಕಾದಿಗಳಿಗೋ ಪುಲಿಗೋ
ವಾಯಸಾದಿ ಕ್ರಿಮಿಗೋ ಕೀಟಕಾದಿಗಳಿಗೋ
ಲಕ್ಷ್ಮೀರಮಣನೊಬ್ಬ ಬಲ್ಲನಿದನು 3