ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ನೋಡಿದರಲ್ಲಿ ಚನ್ನಕೇಶವನು ಪುಲ್ಲಲೋಚನನಾದ ಶ್ರೀ ಕೃಷ್ಣನು ಪ ಭೂತಳ ಪಾತಾಳ ಸಕಲ ಲೋಕಗಳಲ್ಲಿ ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ ಮಾತು ಚೇಷ್ಟಗಳಲ್ಲಿ ಕೆರೆ ಭಾವಿ ವನದಲ್ಲಿ ಕೋತಿ ಖಗವೃಂದ ಪಶುವರ್ಗಂಗಳಲ್ಲಿ 1 ವೇದ ಶಾಸ್ತ್ರಗಳಲ್ಲಿ ಸರ್ವ ಧರ್ಮಗಳಲ್ಲಿ ಬೋಧಕ ಮೊದಲಾದ ಗುರು ವರ್ಗದಲ್ಲಿ ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ ವಾದ್ಯ ಮೃದಂಗಾಗಿ ನಾದಂಗಳಲ್ಲಿ 2 ಕಣ್ಣುಗಳಿಗೆಸೆಯುವ ಸಕಲ ವಸ್ತುಗಳಲ್ಲಿ ಮಣ್ಣಿನಲಿ ಸರ್ವತ್ರ ಘನ ಸೃಷ್ಟಿಯಲ್ಲಿ ಬಣ್ಣಿಸಲ್ಕಾಗದ ಹರಿ ಕೀರ್ತನೆಗಳಲ್ಲಿ ಹೆಣ್ಣು ಹೊನ್ನು ಮಣ್ಣು ತ್ರಿವರ್ಗದಲ್ಲಿ 3 ಸಕಲ ಚರ ಪ್ರಾಣಿಯಲಿ ಅಚರ ಜೀವಗಳಲ್ಲಿ ಸಕಲ ಸ್ತ್ರೀ ಪುರುಷರಲಿ ಸುರದನುಜರಲ್ಲಿ ಸಕಲ ಧಾನ್ಯಗಳಲಿ ತಿಂಡಿ ತಿನಸುಗಳಲ್ಲಿ ಸುಖ ದುಃಖ ಬಹಿರಂಗ ಅಂತರಂಗದಲಿ 4 ದಿನದಲ್ಲಿ ನಿಶೆಯಲ್ಲಿ ಅನ್ನಪಾನಗಳಲ್ಲಿ ಅಣುರೇಣು ತೃಣಕಾಷ್ಟ ಸರ್ವ ದಿಕ್ಕಿನಲೀ ಕನಸಿನಲಿ ಮನಸಿನಲಿ ಪಂಚ ಭೂತಗಳಲ್ಲಿ ಜನನ ಮರಣಾತೀತ ಚನ್ನಕೇಶವನು 5
--------------
ಕರ್ಕಿ ಕೇಶವದಾಸ
ಸರ್ವಾಂತರ್ಯಾಮಿ ನಿನಗೆ ಪ ದೇವತಿರ್ಯಗ್ ಮನುಷ್ಯಾದಿ ಜಂತುಗಳಲ್ಲಿ ದಿವಿಭುವಿ ಪಾತಾಳದೊಳ ಹೊರಗಿರುವಗೆ ಅ.ಪ ಪ್ರಾಣ ಪ್ರತಿಷ್ಟೆಗೋಳಕತ್ರಯ ಚಿಂತನೆ ನೀನೆ ಕರುಣದಿ ಮನ್ಮಾನಸದೊಳು ಪೊಳ- ದೇನೇನು ಮಾಡಿಸಲದು ನಿನಗರ್ಪಿತ 1 ಅಣುವಿನೊಳಣುವಾಗಿ ಮಹತ್ತಿನೊಳ್ಮಹತ್ತಾಗಿ ಎಣÉಸಲೆನ್ನಳವೆ ನಿನ್ನಯ ಮಹಾಮಹಿಮೆಯ ವಿನುತಿಸುವುದು ಕೊನೆಗಾಣದೆ ಶೃತಿ ತತಿ 2 ಶ್ವೇತದ್ವೀಪಾನಂತಾಸನ ವೈಕುಂಠ ಆ- ಪ್ರೀತಿಯಿಂದಲಿ ನಿನ್ನ ಭಜಿಸುತಿರುವ ಭಕ್ತ- ವ್ರಾತವ ಸಲಹುವ ಗುರುರಾಮವಿಠಲನೆ 3
--------------
ಗುರುರಾಮವಿಠಲ