ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಕುಲ ಬಿಟ್ಹ್ಯಾಂಗಿಲ್ಲಿಗೆ ಬಂದೆ ಶಿರಿಕೃಷ್ಣ ರಂಗಾ ವ್ಯಾಕುಲದಲಿ ನೀ ಸಾಗರ ತ್ಯಜಿಸಿ ಜೋಕೆಯಿಂದಲಿ ನಿಜಧಾಮಕೆ ಬಂದೆ ಪ ಬನ್ನವ ಪಡುತಿಹ ಭಕುತನ ನೋಡಿ ಚಿಂತೆಯ ಮಾಡಿ ಎನ್ನಂತರಂಗದ ಬಾಧೆಗಳು ಕಾಡೆ ಬಳಲುವುದಾ ನೋಡೆ ಮನ್ನಿಸಿ ಶರಣನ ಬಾಧಿಸುವ ಪೀಡೆ ಪರಿಹಾರ ಮಾಡೆ ಪನ್ನಗ ಶಯನ ಶ್ರೀಹರಿಯೇ ಓಡೋಡಿ ಬಂದೆ 1 ಪೊಕ್ಕಿಹೆನು ಸಂಸಾರಾರ್ಣವದೊಳಗೆ ಬಹು ದುಃಖದ ಅಲೆಗೆ ಲೆಕ್ಕವಿಲ್ಲದಾ ಜಂತುಗಳದರೊಳಗೆ ಇಂಬಿಲ್ಲಾ ಅಲ್ಲಿಡಿಂಬಕೆ ಸಿಕ್ಕಿ ಬಳಲುವಂಥ ಭಕುತನ ನೋಡಿ ಬಿಡುಗಡೆ ಮಾಡೆ ಅಕ್ಕರದಿಂದಲಿ ಭರದಿ ಕಾಪಾಡಲು ಬಂದೆ 2 ಶರಣರ ಪೊರೆಯುವುದೇ ನಿನ ಗುಟ್ಟು ಬಣ್ಣಿಸಲಿನ್ನೆಷ್ಟು ಕರುಣಿಸಿ ಬರುವಿ ಶಿರಿಯನು ಬಿಟ್ಟು ಭಕುತರೆ ನಿನಕಟ್ಟು ನಿರುಪಮ ನಿನ್ನಯ ದಯಕೇನೆನ್ನಲಿ ಶರಣರ ಪೊರೆಯುವಿ ನರಸಿಂºವಿoಲಾ ಬಂದೆ 3
--------------
ನರಸಿಂಹವಿಠಲರು