ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸು ಗುರು ಸತ್ಯಸಂಧ ಮುನಿಯಾ ವೃಂದಾವನಕೆ ಹರುಷದಿಂದ ಎಂದೆಂದು ಪ ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು ಜಂಗಾದ್ರಿ ಮೊದಲಾದ ಕ್ಷೇತ್ರಗಳನು ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ ತುಂಗಾತಟದಿ ವಾಸವಾಗಿಪ್ಪ ಯತಿವರಗೆ 1 ಭೂದೇವನುತ ಸತ್ಯಬೋಧ ಮುನಿವರ ಕರ ವೇದಿಕದೊಳುದ್ಭವಿಸಿದ ಕಲ್ಪವೃಕ್ಷ ಸಾಧುಜನರಿಗೆ ಬೇಡಿದಿಷ್ಟಾರ್ಥಗಳ ಮೋದದಿ ಕೊಡುವ ಮಹಿಮರ ಕಂಡು 2 ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ ಧೀಮಂತ ಜನರಿಗುಪದೇಶಿಸಿ ನಿರಂತರ ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ 3
--------------
ಜಗನ್ನಾಥದಾಸರು