ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತ ತಿಮಿರಕೆ ಸೂರ್ಯ ಶರಣ ಜನ ಭಾಗ್ಯೋದಯ ಪ ನರಹರಿಯ ದಾಸಾರ್ಯ ಮರುತಮತ ಪರಿಚರ್ಯ ಶಿರಬಾಗಿ ಮುಗಿವೆ ಕೈಯ್ಯ ಅ.ಪ. ಘೋರತರ ಸಂಸಾರ ಸಾರತರವೆಂದರಿದು ಪಾರಮಾರ್ಥಿಕವ ತೊರೆದು ಭೂರಿ ನರಕದಿ ಬೆಂದು ಗಾರಾಗಿ ಪೋಪರಂದು ನಾರದರೆ ನೀವ್ ಬಂದು ನಾರಾಯಣಾ ಎಂದು ಚೀರಿದಾ ಧ್ವನಿಗೆ ಅಂದು ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು ಸೇರಿ ಸುಖಿಸಿದರು ಎಂದು 1 ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು ಮೆರೆವ ಕನ್ನಡ ದೇಶದಿ ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ ಇರುವ ಭೂಸುರ ವಂಶದಿ ವರಗರ್ಭದಲಿ ಜನಿಸಿದಿ ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ ಸರ್ವಭಾಗ್ಯವ ಗಳಿಸಿದಿ 2 ಚಿನಿವಾರ ವ್ಯಾಪಾರದನುವರಿತು ನವಕೋಟಿ ಧನಕಧಿಪನೆಂದೆನಿಸುತ ಧನಕನಕ ವಸ್ತು ವಾಹನನಿಚಯ ಸಂಗ್ರಹದಿ ತನುಮನಂಗಳ ಶ್ರಮಿಸುತ ಕನಸಿಲಾದರು ದಾನಧರ್ಮಗಳ ನೆನೆಯದೆಲೆ ದಿನಮಾನಗಳ ಕಳೆಯುತ ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ ಘನ ಮಹಿಮ ಬಂದ ನಗುತ 3 ಅಂದು ತಾನೊಲಿದಿತ್ತ ಚೆಂದದಾ ವರಗಳನು ಇಂದು ಸಲಿಸುವೆನು ಎಂದು ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ ಕಂದನಿಗೆ ಮುಂಜಿಯೆಂದು ಮಂದ ಭಾಗ್ಯನ ತೆರದಿ ಪೊಂದಿ ಯಾಚಿಸಲು ನಿಂದು ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು ಸಿಂಧು 4 ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ ಪತ್ನಿಯನು ಯಾಚಿಸಿದನು ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು ಇತ್ತ ಬಂದಿಹೆನೆಂದನು ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ ನಿತ್ತು ಕಳುಹೆನು ಏನನೂ ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ ನತ್ತನ್ನು ಕೊಡು ಎಂದನು 5 ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ ಮೂಗುತಿಯ ತೆಗೆದಿತ್ತಳು ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ ಸಾಗಿ ಬಂದನು ಇತ್ತಲು ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು ಮೂಗುತಿಯ ಕ್ರಯಕೆ ಕೊಡಲು ಈಗ ಬಂದಿಹೆನೆಂದು ನಿಮಗದನು ತೋರಲು ಹೇಗೆ ಬಂದಿತು ಎನ್ನಲು 6 ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ ವನಜನಾಭನು ಪೇಳ್ದನು ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ ಅನುವರಿತು ಬಹೆನೆಂದನು ಸಂತೈಸಿ ಪೊರಮಡಿಸಿ ನಿನಗೆ ನಾಮವನಿಡುವೆನು ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ ವನಿತೆಯಾ ಬರಿ ಮೂಗನು 7 ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು ಮುತ್ತೈದೆ ಮನದಿ ನೊಂದು ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು ಇತ್ತ ತಾರೆನಲು ನಿಂದು ವಿಪ್ರ ಮತ್ತೇನು ಮಾಡುವರೊ ಕತ್ತಲೆಯು ಮುತ್ತಿ ತಿಂದು ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು ಕುತ್ತು ಪಾರಾಹುದೆಂದು 8 ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು ಕರದಿ ಬಟ್ಟಲನು ಹಿಡಿದು ಹರಣದಾಸೆಯ ತೊರೆದು ಸಿರಿವರನ ಪದನೆನೆದು ಕುಡಿಯುವನಿತರೊಳು ತಿಳಿದು ಕರುಣದಿಂ ಮೂಗುತಿಯ ಗರಳದಲು ಕೆಡಹಲಾ ಮಣಿ ಹರುಷದಳೆದು ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು ಭರದಿ ಅಂಗಡಿಗೆ ಬಂದು 9 ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ ಮೂಗುತಿಯು ಕಾಣದಿರಲು ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು ಬೇಗನೆ ಮನೆಗೆ ಬರಲು ಹೇಗೆಂದು ತಿಳಿಸದಿರಲು ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ ಬಾಗಿ ವಂದಿಸಿ ನುಡಿದಳು 10 ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು ಪೊದ್ದಿಯಾಚಿಸಲು ಜರಿದೆ ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ ವೃದ್ಧಿಗೋಸುಗವೆ ಬರಿದೆ ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ ಉದ್ಧಾರವಿಲ್ಲೆಂದು ತಿಳಿದೆ ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು ಹೆದ್ದಾರಿ ಹಿಡಿದು ನಡೆದೆ 11 ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ- ಶಿಷ್ಟವನು ದಾನಗೈದು ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು ವಿಠ್ಠಲನ ಪುರಕೆ ನಡೆದು ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ ಇಷ್ಟಾರ್ಥ ಸಿದ್ಧಿಗೈದು ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ ಶ್ರೇಷ್ಠರಿಂದುಪದೇಶ ಪಡೆದು 12 ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ ಗದ್ಯಪದ್ಯಗಳಿಂದಲಿ ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು ಮುದ್ದಾಗಿ ವರ್ಣಿಸುತಲಿ ಮದ್ದಳೆಯ ತಾಳ ವೀಣೆಗಳ ಗತಿಹಿಡಿದು ಶುದ್ಧರಾಗಗಳಿಂದಲಿ ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು ಪೊದ್ದಿ ಕುಣಿಯುವ ತೆರದಲಿ 13 ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ- ವಿರ ಗ್ರಂಥ ರಚಿಸಿ ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ ಸಾರ ಮಹಿಮೆಗಳ ತುತಿಸಿ ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ ಪಾರಣೆಯ ವಿಧಿಯ ತಿಳಿಸಿ ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು ಸಾರಿ ಡಂಗುರವ ಹೊಯಿಸಿ 14 ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ ಧರೆಯನೆಲ್ಲವ ತಿರುಗುತ ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ ಕೊರಳುಬ್ಬಿ ಶಿರ ಬಿಗಿಯುತ ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ ಹರಿ ಮಹಿಮೆ ಕೊಂಡಾಡುತ ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ ಹರುಷದಿಂದಲಿ ಉಣಿಸುತ 15 ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು ಶಕ್ತನಹ ದೇವ ಬಂದ ಓಗರ ಉಂಡ ಸುತನಾಗಿ ನೀರ ತಂದ ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ ಕ್ಷಿತಿಪತಿಗೆ ದೃಢ ತೋರಿದ ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು ಪಥದಲ್ಲಿ ತಲೆಗಾಯಿದ 16
--------------
ಲಕ್ಷ್ಮೀನಾರಯಣರಾಯರು
ಗೋವಿಂದ ನಮೋ ಗೋವಿಂದಹರಿಗೋವಿಂದಂ ನಮೋ ಗೋವಿಂದ ಪಗೋವಿಂದಂ ನಮೋ ಗೋವಿಂದೆಂದೊಡೆಬಂದ ಜರಾಮರಣ್ಹರಿದುಪೋಪುದು ಅ.ಪಶರಧಿಮುಳುಗಿದ ಗೋವಿಂದಂ ನಮೋಶರಧಿಈಸಿದ ಗೋವಿಂದಕರಿಕೆಯನು ಮೆದ್ದ ಗೋವಿಂದಂ ನಮೋನರಮೃಗಾಕಾರ ಗೋವಿಂದಪರಶು ಧರಿಸಿದ ಗೋವಿಂದಂ ನಮೋಧರೆಯ ಬೇಡಿದ ಗೋವಿಂದಶರಧಿಹೂಳಿದ ಗಿರಿಯನೆತ್ತಿದಪುರವ ಭಂಗಿಸಿದ ತುರಗವೇರಿದ 1ಸಿಂಧುಕಲಕಿದ ಗೋವಿಂದಂ ನಮೋಸಿಂಧುಮಂದಿರ ಗೋವಿಂದಮಂದರೋದ್ಧಾರ ಗೋವಿಂದಂ ನಮೋಇಂದಿರೆಯ ಪ್ರಿಯ ಗೋವಿಂದಬಂದ ಭುವನಕೆ ಗೋವಿಂದಂ ನಮೋನಿಂದ ಗಿರಿಯಲಿ ಗೋವಿಂದಬಂದ ಭಕುತರ ಬಂಧ ಕಳೆದಾನಂದ ನೀಡುತ ಚೆಂದದಾಳುವ 2ದನುಜಸಂಹರ ಗೋವಿಂದಂ ನಮೋಚಿನುಮಯಾತ್ಮಕ ಗೋವಿಂದಮ(ನುಮುನಿಯಾ) ನಂದಗೋವಿಂದಂ ನಮೋಚಿನುಮಯಾತ್ಮಕ ಗೋವಿಂದವಿನಮಿತಾಗಮ ಗೋವಿಂದಂ ನಮೋಜನಕಜೆಯವರಗೋವಿಂದವನಜಸಂಭವವಿನುತ ವಿಶ್ವೇಶಜನಕ ಜಾಹ್ನವೀಸುಜನಶುಭಕರ3ನೀಲಶ್ಯಾಮಹರಿಗೋವಿಂದಂ ನಮೋಲೋಲಗಾನ ಸಿರಿಗೋವಿಂದಕಾಲಕುಜ(ನ) ಕುಲ ಗೋವಿಂದಂ ನಮೋಪಾಲಮೂಲೋಕ ಗೋವಿಂದಮಾಲಕೌಸ್ತುಭ ಗೋವಿಂದಂ ನಮೋಮೇಲುಆಲಯಗೋವಿಂದಕಾಳಿಮದ್ರ್ನ ಕಾಲಭಯಹರಲೀಲಸಮ ವಿಶಾಲಮಹಿಮ 4ಸತ್ಯ ಸಂಕಲ್ಪ ಗೋವಿಂದಂ ನಮೋಸತ್ಯಸನ್ನುತಗೋವಿಂದಭಕ್ತವತ್ಸಲ ಗೋವಿಂದಂ ನಮೋನಿತ್ಯನಿರ್ಮಲ ಗೋವಿಂದಚಿತ್ತಜನಪಿತ ಗೋವಿಂದಂ ನಮೋಮೃತ್ಯು ಸಂಹರ ಗೋವಿಂದಭಕ್ತಜನರಾಪತ್ತು ಪರಿಹರಮುಕ್ತಿದಾಯಕಕರ್ತುಶ್ರೀರಾಮ5
--------------
ರಾಮದಾಸರು
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು