ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ ||ಮಂದರ ಧರ ಗೋವಿಂದನು ಹರಿ ಉಪೇಂದ್ರನು ಲಕ್ಷ್ಮೀವೃಂದಾವನ ಗೋಕುಲ ಪ್ರೀಯಾ ಪ ಕುಂಡಲ ಮಂಡಿತ ಪುಂಡರೀಕಾಕ್ಷಾ 1 ತೊಟ್ಟಲಲ್ಲೆ ತಾ ಬಟ್ಟನೆ ಚೀಪುತ | ಧಿಟ್ಟಾ ಕೃಷ್ಣನುತಟ್ಟನೆ ಚುಂಬನವ | ಕೊಟ್ಟಾ ವಿಷವನು ಕೊಟ್ಟವಳಸುವನುಧಿಟ್ಟಿಸಿದಾ ಜಗಜಟ್ಟಿಯು ಕೃಷ್ಣಾ 2 ಬಾಲಕರನು ಹೆಗಲೇರಿಸಿ ಮೇಲಿನ | ನೆಲವಿನ ಬೆಣ್ಣೆಯಕಳವನು ಮಾಡಿ | ಶಾಲಾ ಹುಡುಗರ ಪಾಲಾ ಉಣಿಸುತಲಿವಲಕ್ಷ್ಮೀಲೋಲಾ ರಂಗಯ್ಯಾ 3 ಮಣಿ ಫಣಿ ಫಣಿದಲಿ ಮೆಟ್ಟಿ |ಕುಣಿಕುಣಿದಾಡುತಲಿ 4 ಮಾಧವ | ಮಂಗಲ ಕರತರಂಗನ | ಅರಿತತಿ ಭಂಗವ ಬಿಡಿಸುತ |ಕಂಗಳ ಸದೋದಿತ ರುಕ್ಮ 5
--------------
ರುಕ್ಮಾಂಗದರು
ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಪ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ 2 ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ 3 ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ | ಪರಮಾತ್ಮನಿಗೆ ಎಣೆಯುಂಟೆ 4 ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ | ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ | ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ 5 ಅಣಕವಾಡಲಿ ಬೇಡ ಕೆಣಕಿದರೆ ನಿನ್ನ | ಹೊಣಿಕೆಹಾಕುವೆ ಹಿಡತಂದು ಎನ್ನಯ | ಮನವೆ ನಿನ್ನಯ ಚರಣಕ್ಕೆ ಶೋಭಾನೆ 6 ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ | ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ ಗುಷ್ಟ ಕಚ್ಚದಲೆ ಬಿಡೆ ನಾನು 7 ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ | ಇಂದು ನಾನೇನು ಕೊಡಲಿಲ್ಲವೆಲೋ ತಂದೆ | ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ 8 ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ | ತೆಕ್ಕಿಸಿದಾ ವಿಜಯವಿಠ್ಠಲ ಎನ್ನ ಅಕ್ಕರವೆಲ್ಲ ತೀರಿಸಿದಾ | ಶೋಭಾನೆ 9
--------------
ವಿಜಯದಾಸ
ಬಿಟ್ಟು ಬರಲಾರಳಮ್ಮಯ್ಯಪಟ್ಟಮಂಚವ ಭಾವೆಬಿಟ್ಟರೆ ರುಕ್ಮಿಣಿ ಕೃಷ್ಣನ ಬೆರೆದಾಳೆಂಬೊ ಅಂಜಿಕೆಯಿಂದ ಪ. ಪಾದ ಸಿಕ್ಕಿತೋ ಸಿಗದೆಂದುಚಿಕ್ಕ ಚನ್ನಿಗಳ ಕೈವಶಚಿಕ್ಕ ಚನ್ನಿಗಳ ಕೈವಶವಾಗದಂತೆಜಪ್ಪಿಸಿಕೊಂಡು ವಟವಾದಳೆ 1 ಶಂಬರಾರಿ ಪಿತನ ತಂಬುಲಸಿಗದೆಂದು ಚುಂಬನದ ಸಮಯ ಚಿಗಿಳೀತುಚುಂಬನದ ಸಮಯ ಚಿಗಿಳೀತು ಎಂತೆಂಬೊಹಂಬಲದಿ ಒಳಗೆ ಕುಳಿತಳೆ2 ನಲ್ಲೆ ರಂಗಯ್ಯನ ಎಲ್ಲೆಲ್ಲಿ ಬಿಡಲೊಲ್ಲೆಎಲ್ಲ ನಾರಿಯರ ನೆರವಿಕೊಂಡುಎಲ್ಲ ನಾರಿಯರ ನೆರವಿಕೊಂಡು ಮನೆಯೊಳುನಿಲ್ಲಗೊಡರೆಂಬೊ ಭಯದಿಂದ3 ಒಗೆತನ ನಗೆಗೀಡಾಯಿತು ನೋಡೆ ಈ ಬಗೆ ಎಲ್ಲೆ ಕಾಣೆ ಜಗದೊಳು ಈ ಬಗೆ ಎಲ್ಲೆ ಕಾಣೆ ಜಗದೊಳು ರುಕ್ಮಿಣಿ ತಗಿ ನಿನ್ನನಡತೆ ತರವಲ್ಲ4 ಅನಂತ ಮಹಿಮಗೆ ಇನ್ನೆಂಥ ಕಾವಲತನ್ನ ನಿಜರೂಪ ಅವರಲ್ಲಿತನ್ನ ನಿಜರೂಪ ಅವರಲ್ಲಿ ರಮಿಸೋದುತನ್ನ ಮನದಲ್ಲಿ ನಿಜ ಮಾಡಿ5 ಸಾಗರಶಾಯಿ ಮನಕೆ ಹ್ಯಾಂಗೆ ಬಂದೀತುಎಂದು ಹೀಗೆ ಕೈ ಮುಗಿದು ತಲೆಬಾಗಿಹೀಗೆ ಕೈ ಮುಗಿದು ತಲೆಬಾಗಿ ರುಕ್ಮಿಣಿಆಗೊಂದು ಮನದ ಬಯಕೆಲ್ಲ6 ಎಷ್ಟು ಜಪಿಸಿ ನೀನು ಠಕ್ಕಿಸಿ ಕೃಷ್ಣನ ಇಟ್ಟಾನೆ ರಮಿಯ ಎದಿಮ್ಯಾಲೆ ಇಟ್ಟಾನೆ ರಮಿಯ ಎದಿಮ್ಯಾಲೆ ರುಕ್ಮಿಣಿ ಇಷ್ಟರ ಮ್ಯಾಲೆ ತಿಳಕೊಳ್ಳ7
--------------
ಗಲಗಲಿಅವ್ವನವರು
ಬಿಡದಿರು ಕೈಯ್ಯ ರಂಗ ಒಡೆಯ ಶ್ರೀ ನರಸಿಂಗ ಬಡವನ ಮೇಲಪಾಂಗವಿಡುರಮಾಲಿಂಗಿತಾಂಗ ಪ. ನುಡಿವ ಮಾತುಗಳ ನಿನ್ನಡಿಗಳ ಸ್ತವವೆಂದು ಒಡಂಬಡೊ ನಿಜ ದಾಸ ಭಿಡೆಯ ಮೀರದ ದೇವ 1 ವಾರಿಜನಾಭ ನಿನ್ನ ಪ್ರೇರಣೆಯಿಂದ ಸರ್ವ ಧಾರುಣಿವರರ ದಯಾರಸ ದೊರೆವುದು 2 ಅಂಬುಜಾಲಧರಬಿಂಬಫಲಾಮೃತ ಚುಂಬನಲೋಲ ನೀ ಬೆಂಬಲಾಗಿರು3 ಹರಿ ನಿನ್ನ ಕೃಪಾರಸವಿರಲು ಚತುರ್ವಿಧ ಪುರುಷಾರ್ಥವೆಲ್ಲ ಸೇರಿ ಬರುವದೆಂದರಿದೆನು 4 ದುರಿತರಾಶಿಗಳನ್ನು ತರಿವರೆ ಶಕ್ತನಾದಪರಮಪಾವನ ಶೇಷಗಿರಿವರನೆಂದೆಂದಿಗು 5
--------------
ತುಪಾಕಿ ವೆಂಕಟರಮಣಾಚಾರ್ಯ
ಗುಟ್ಟ ಪೇಳಿದಳೊಂದು ಗುಣು ಗುಣು ಗುಣು ಎಂದು |ಗಟ್ಟಿ ಪೇಳಿದರತ್ತೆ ಬೈಯ್ಯುವಳೆಂದು ಪಪಚ್ಚೆ ಮಂಚದಿ ಬಂದು ಮಲಗಿಕೊಳ್ಳೆಂದು |ನಟ್ಟಿರುಳಲಿ ಬಹೆ ಕೃಷ್ಣ ಕೇಳೆಂದು ಅ.ಪಹದಿನಾರು ಸಾವಿರ ಸುದತಿಯರನು ಸೇರಿ |ಮದನಕೇಳಿದೊಳೆನ್ನ ಮರೆತೆಯಶೌರಿ|ಮದುವೆಯಾದವನೂರೊಳಿಲ್ಲ ಬಿಕಾರಿ |ಮದನತಾಪದಿ ಬೆಂದು ಬಳಲಿ ಬಾಯಾರಿ 1ಗುರುಕುಚವನುನೋಡುಹರುಷ ಮಾತಾಡು |ಮರುಗ ಮಲ್ಲಿಗೆ ಜಾಜಿ ಸರವ ತಂದೀಡೊ |ಕರುಪುರ ವೀಳ್ಯವ ಸವಿದು ನೀನೋಡು|ಪರಿಪರಿಯಲಿ ನಿನ್ನ ಕೃಪೆಯನೀಡಾಡು 2ಚಂದ್ರಗಾವಿಯ ಸೀರೆ ನೆರಿ ಹಿಡಿದುಟ್ಟು |ಚಂದದಿ ಕುಪ್ಪಸ ತೊಟ್ಟು ಜಡೆಬಿಟ್ಟು |ಚಂದನಕುಂಕುಮ ಕಸ್ತೂರಿ ಬೊಟ್ಟು |ಮಂದರಧರ ಗೊೀವಿಂದಗೆ ಚುಂಬನ ಕೊಟ್ಟು 3
--------------
ಗೋವಿಂದದಾಸ