ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಲದೆಲೆಯ ಮ್ಯಾಲೆ ಮಲಗಿದ್ದಾದಿಕೇಶವ(ನ) ನೋಡ ಬನ್ನಿರಾಲದೆಲೆಯ ಮ್ಯಾಲೆ ಕೃಷ್ಣ ಬಾಲರೂಪ ಧರಿಸಿ ಅಂಧಕಾರ ಪ್ರಳಯ ಜಲದ ಒಳಗೊಂದಾಲದೆಲೆÉಯ ಮ್ಯಾಲೆ ಕೃಷ್ಣ ಪ ಪ್ರಳಯ ಕಾಲದಲ್ಲೆ ಹರಿಯು ಸರ್ವ ಜೀವರನೆಲ್ಲ ತನ್ನ ಉದರದೊಳಗಿಂಬಿಟ್ಟುಕೊಂಡು ಛಲವ ಮಾಡದಂತೆ ರಂಗ ಬೆರಳು ಬಾಯೊಳಗಿಟ್ಟು ಚೀಪುತ ಹರಳು ಮಾಣಿಕ್ಯದರಳೆಲೆ ಮಾಗಾಯಿ ಕೌಸ್ತುಭ ಕಟಿಸೂತ್ರ ಕರುಣ ಸಾಗರಗಿನ್ನು ವರ ವೈಕುಂಠವಾಸ ಒಂದಾಲದೆಲೆಯ ಮ್ಯಾಲೆ 1 ಅಷ್ಟು ಜೀವರನೆಲ್ಲ ತನ್ನ ಹೊಟ್ಟೆಯೊಳಗಿಂ ಬಿಟ್ಟು ಕೊಂಡು ಸೃಷ್ಟಿ ಲಯಕೆ ಕರ್ತನಾದ ಶ್ರೇಷ್ಠ ಸುಂದರಾಂಗ ತನ್ಹೆಬ್ಬೆಟ್ಟು ಬಾಯೊಳ ಗಿಟ್ಟು ಚೀಪುತ ವಕ್ಷಸ್ಥಳದಿ ಹೆಚ್ಚಿನ ಶ್ರೀವತ್ಸ ತೋರುತ ಉತ್ತಮ ವೈಜ(ಯಂ)ತಿ ವಜ್ರ ಕೆತ್ತಿದ ಕಿರೀಟ ಲಕ್ಷ್ಮೀಚಿತ್ತ ಚೋರನಾದ ಪರಮಾತ್ಮ ಪರಮ ಹರುಷದಿಂ ದ್ವೊಂದಾಲದೆಲೆಯ ಮ್ಯಾಲೆ 2 ಗಂಧ ಕಸ್ತೂರಿ ಪರಿಮಳ ಸುಗಂಧವಾದ ಕುಸುಮ ಕೆಲದಿ ಹೊಂದಿ ಕಟ್ಟಿದ ತುಳಸಿಮಾಲಿಕಿಂದೆ ಪರಮ ಶೋಭಿತವಾದ ಬಂದಿ ಕಂಕಣ ಬಾಹುಪ್ಪುರಿಗಳು ದುಂಡುಮುತ್ತಿನ ಕೂದಲ ಕಾಂತಿ ಕದಪಿಲೆಸೆಯಲು ಅಂದಿಗೆ ಪಾಗಡ ಗೆಜ್ಜೆ ಚೆಂದವಾದ ನಾದಗಳಿಂದ ಇಂದುಕೋಟಿ ರವಿಯ ತೇಜ ಮಂದಹಾಸ ಮುಖದ ಹರಿ ಒಂದಾಲದೆಲೆಯ ಮ್ಯಾಲೆ 3 ಥಳಥಳಿಸುವಂತ್ಹೊಳೆವೊ ಚಕ್ರ ಧವಳವರಣ ಶಂಖ ಕರದಿ ಹವಳದುಟಿಯು ಹರಿಯ ಪದ್ಮ ದಳಗಳಂತಕ್ಷಿಗಳ ಚೆಲುವ ಅರುಣನಂತೆ ಚರಣ ಕರದಲ್ಲಿ ಒತ್ತುವೊ ಸಿರಿಯ ಪರಮಪುರುಷ ನೋಡಿ ಸರಸದಿ ಜರ ಪೀತಾಂಬರ ನಾಭಿಕಮಲಕ್ಕೊಲೆವೊ ಒಡ್ಯಾಣವನೆ ಇಟ್ಟು ಹಲವು ಸೂರ್ಯರಂತೆ ಲಕ್ಷ್ಮೀರಮಣ ಶ್ಯಾಮವರಣ ಹರಿ ಒಂದಾಲದೆಲೆಯ ಮ್ಯಾಲೆ 4 ಅಳಕÀನಂದನ ಪಿತನು ತಾ ಘ- ನೋದಕÀದೊಳು ತಾ ರಂಗ ಚಾಮರ ಎಣಿಕಿಲ್ಲದೆ ಮಾ ಣಿಕ್ಯದಾಭರಣ ಫಣಿಪಮಂಚಶಯನ ನೀಲ ಕನಕರತ್ನ ಬಿಗಿದ್ಹಾಸಿಕೆಯಲಿ ಪಂಚಶರನ ಜನಕ ಜಗವ ನಿಟ್ಟು ತನ್ನಲ್ಲಿ ಅಳಕಗೂದಲು ಚೆಂಡಿಕೆಲ್ಲೆ ಅರಳುಮಲ್ಲಿಗೆ ಸುತ್ತಿಹರಿಗೆ ಝಳಕು ಮಿಂಚಿನಂತೆ ಜಗಕÉ ಬೆಳಕಿನÀಲಿ ಭೀಮೇಶ ಕೃ ಷ್ಣೊಂದಾಲದೆಲೆಯ ಮ್ಯಾಲೆ 5
--------------
ಹರಪನಹಳ್ಳಿಭೀಮವ್ವ
ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ ||ಮಂದರ ಧರ ಗೋವಿಂದನು ಹರಿ ಉಪೇಂದ್ರನು ಲಕ್ಷ್ಮೀವೃಂದಾವನ ಗೋಕುಲ ಪ್ರೀಯಾ ಪ ಕುಂಡಲ ಮಂಡಿತ ಪುಂಡರೀಕಾಕ್ಷಾ 1 ತೊಟ್ಟಲಲ್ಲೆ ತಾ ಬಟ್ಟನೆ ಚೀಪುತ | ಧಿಟ್ಟಾ ಕೃಷ್ಣನುತಟ್ಟನೆ ಚುಂಬನವ | ಕೊಟ್ಟಾ ವಿಷವನು ಕೊಟ್ಟವಳಸುವನುಧಿಟ್ಟಿಸಿದಾ ಜಗಜಟ್ಟಿಯು ಕೃಷ್ಣಾ 2 ಬಾಲಕರನು ಹೆಗಲೇರಿಸಿ ಮೇಲಿನ | ನೆಲವಿನ ಬೆಣ್ಣೆಯಕಳವನು ಮಾಡಿ | ಶಾಲಾ ಹುಡುಗರ ಪಾಲಾ ಉಣಿಸುತಲಿವಲಕ್ಷ್ಮೀಲೋಲಾ ರಂಗಯ್ಯಾ 3 ಮಣಿ ಫಣಿ ಫಣಿದಲಿ ಮೆಟ್ಟಿ |ಕುಣಿಕುಣಿದಾಡುತಲಿ 4 ಮಾಧವ | ಮಂಗಲ ಕರತರಂಗನ | ಅರಿತತಿ ಭಂಗವ ಬಿಡಿಸುತ |ಕಂಗಳ ಸದೋದಿತ ರುಕ್ಮ 5
--------------
ರುಕ್ಮಾಂಗದರು
ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ಪ. ಪಾಕಶಾಸನವಂದ್ಯ ಪರಮ ಕಾರುಣ್ಯನಿಧಿ ಜೋಕೆಯಿಂ ಭಕ್ತರನು ರಕ್ಷಿಸಲು ಬಂದೆಯೊ ಅ.ಪ. ಸಿರಿ ಆಲದೆಲೆಯ ಮೇ- ಲೊಂದು ಬೆರಳನೆ ಚೀಪುತ ಮುಂದೆ ಶೇಷಶಯನನಾಗಿ ಬ್ರಹ್ಮನ ಪಡೆದು ಮಂದಹಾಸದಿ ನಲಿಯುತ ಇಂದಿರೆ ಸಹಿತಲಿರೆ ಭಕ್ತರೆಲ್ಲರು ಆಗ ನೋಡಲಿಲ್ಲೆಂದೆನುತ ಇಂದು ಈ ನಾಗರಾಜನ ಮಂಚವನೆ ಏರಿ ಸಿಂಧುಶಯನನೆ ಮಲಗಿದ್ಯಾ ಸ್ವಾಮಿ 1 ಅಜಗೆ ವೇದವನಿತ್ತು ಅಸುರನ್ನ ಕೊಂದು ನೀ ಭುಜಗಶಯನನೆ ಮಲಗಿದ್ಯಾ ಋಜುಗಣವಂದಿತನೆ ಬೆನ್ನಲಿ ಗಿರಿಪೊತ್ತ ಆಯಾಸದಿಂ ಮಲಗಿದ್ಯಾ ದ್ವಿಜಧ್ವಜನೆ ಭೂಮಿಯನು ಮೇಲೆತ್ತಿ ತಂದು ಸಾಕಾಗಿಲ್ಲಿ ಶಯನಿಸಿದೆಯಾ ಭಜಿಸಿದ ಬಾಲಕನ ಪಿತನೊಡನೆ ಕಾದಾಡಿ ಬಳಲಿ ನೀ ಪವಡಿಸಿದೆಯಾ ಸ್ವಾಮಿ 2 ಇಂದ್ರ ಪದವಿಗೆ ಬಂದ ಬಲೀಂದ್ರನ ನೆಲಕೊತ್ತಿ ಬಂದಿಲ್ಲಿ ಮಲಗಿಪ್ಪೆಯಾ ಕೊಂದು ಜನನಿಯ ಚಿಂತೆಯಿಂದ ಮನದಿನೊಂದು ಬಂದಿಲ್ಲಿ ಮಲಗಿಪ್ಪೆಯಾ ತಂದೆ ತಾಯಿ ಆಜ್ಞೆಯಿಂದ ಅಡವಿಯ ಅಲೆದು ಬಂದಿಲ್ಲಿ ಮಲಗಿಪ್ಪೆಯಾ ಮಂದರೋದ್ಧರ ಶ್ರೀಶ ಮಾವನ್ನ ಕೊಂದು ನೀ ಬಂದಿಲ್ಲಿ ಪವಡಿಸಿದೆಯಾ ಸ್ವಾಮಿ 3 ನಾರಿಯರ ವ್ರತ ಕೆಡಿಸಿ ನಾಚಿಕೆಯಿಂ ಬಂದು ಏರಿ ಮಂಚವÀ ಮಲಗಿದ್ಯಾ ಏರಿ ಕುದುರೆಯನು ದುಷ್ಟರ ಶಿರವ ತರಿಯುತ್ತ ಸೇರಿ ಶೇಷನ ಮಲಗಿದ್ಯಾ ಬಾರಿ ಬಾರಿಗೆ ಇಂಥ ಕಾರ್ಯಗಳ ಮಾಡಿಸಿ ಬಳಲಿಲ್ಲಿ ಮಲಗಿಪ್ಪೆಯಾ ನಾರದಾದ್ಯರ ಗಾನ ಕೇಳುತಾನಂದದಿಂ ನಿದ್ರೆಗೈಯುತ ಮಲಗಿದ್ಯಾ ಸ್ವಾಮಿ 4 ಭಕ್ತ್ರರಾಡುವ ಸಲಿಗೆ ಬಿನ್ನಪಕೆ ಬ್ಯಾಸತ್ತು ಯುಕ್ತಿಯಿಂ ಪವಡಿಸಿದೆಯಾ ಮುಕ್ತರ ಸ್ತುತಿಗೆ ನಿದ್ರೆಯು ಬಾರದೆಂತೆಂದು ಮುಕ್ತೇಶ ಇಲ್ಲಿ ಮಲಗಿದೆಯಾ ಎತ್ತ ನೋಡಲು ಮಾರ್ಗಬಿಡಳು ಕಾವೇರಿ ಎಂದು ಸೋತಿಲ್ಲಿ ಮಲಗಿಪ್ಪೆಯಾ ಚಿತ್ತಜಾಪಿತ ಸ್ವಾಮಿ ಭಕ್ತರೆಬ್ಬಿಸಲೆಂದು ಚಿತ್ತದಲಿ ಇಪ್ಪದೇನೋ ದೇವ 5 ಅಸುರರ ಕಾಟ ವೆಗ್ಗಳವಾಗೆ ಬಂದಿಲ್ಲಿ ಅಡಗಿ ನೀ ಮಲಗಿಪ್ಪೆಯಾ ಬಿಸಜನಾಭನೆ ನಿನ್ನ ಬಗೆಯರಿತು ಎಬ್ಬಿಸುವ ಬಲವಂತರನ್ಯಾರೆಲೊ ಶಶಿವದನ ಭಕ್ತರನುದ್ಧರಿಸಲೋಸುಗದಿ ಬಂದಿಲ್ಲಿ ಮಲಗಿಪ್ಪೆಯಾ ಭವ ಬಂಧನವ ಪರಿಹರಿಸಿ ಘಸನಗೊಳಿಸದಲೆ ಕಾಯೊ ಜೀಯ 6 ಏಳು ಫಣೆಯ ಸರ್ಪನ ಮೇಲೆ ಮಲಗಿ ಏಳು ಕಣ್ದೆರದು ನೋಡೋ ತಾಳಲಾರೆನೊ ನಿನ್ನ ಸೇವೆಯಗಲಿದ ದುಃಖ ಏಳು ಮನ್ನಿಸಿ ಪಾಲಿಸೊ ವ್ಯಾಳಶಯನನೆ ನಿನ್ನ ಸೇವೆಯನು ಎನ್ನಿಂದ ಲೀಲೆಯಿಂ ಸ್ವೀಕರಿಸೆಲೊ ಭಾಳ ಬೇಡುವದೇನೊ ಗೋಪಾಲಕೃಷ್ಣವಿಠ್ಠಲ ಈ ವ್ಯಾಳೆ ಎನ್ನ ಸಲಹೊ ಸ್ವಾಮಿ 7
--------------
ಅಂಬಾಬಾಯಿ
ಸರಸಿಜನೇತ್ರ ನಿನ್ನಲೀಗ ಸ್ಮರಿಸುವೆ ಬೇಗದಿ ಬಾ ಪ ಸಿರಿ ಪಂಕಜಪೀಠರ ಸ್ತೋತ್ರವನು ಸರಸಾಗಿ ನೀ ಪರಿಗ್ರಹಿಸಿ ಇರುತಿರ್ಪ ಹರೇ 1 ಮುರಲೀಧರ ಶ್ರೀ ಅರಿಪಂಕಜವ ಕರದೊಳಗೆ ತಿರುಗಿಸುತ ವರಗಾನಿಸುವಾ 2 ಮರುಛ್ರೀಕರು ಈ ತರುವಾಗಿಹರು ಚರಣವ ಚರಣವ ಶ್ರೀ ನರಹರಿಯ ನೆರೆ ಚೀಪುತಲಿ * 3
--------------
ಪ್ರದ್ಯುಮ್ನತೀರ್ಥರು