ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಸಾರಿ ಪ. ಶೌರಿ ಸುರ ನರವಂದಿತ ಚರಣವ ಕೋರಿ ಪರಿಪರಿ ಬೇಡುವೆ ನಿನ್ನೆಡೆ ಸಾರಿ ಅರಿಯದ ಕಂದನ ಪೊರೆ ದಯೆತೋರಿ ಅರಿಯೆನದಾರನು ಮರೆಯೆನು ನಿನ್ನನು ಕರುಣಾಕರನೆಂಬೀ ಬಿರುದುಳಿಸಿನ್ನು 1 ಮನ್ಮಥಪಿತ ಬಾ ಸುಂದರಕಾಯ ಮನ್ನಿಸು ಎನ್ನಪರಾಧವ ಜೀಯ ಚಿನ್ಮಯರೂಪನೆ ಚೆನ್ನಿಗರಾಯ ಅನ್ಯರ ನೆರೆಯೆನು ನೀ ಕೇಳಯ್ಯ ಎನ್ನೊಳಗೀಪರಿ ಛಲವೇಕಯ್ಯ ಇನ್ನಾದರು ಕೈಪಿಡಿ ದಮ್ಮಯ್ಯ 2 ಮಂದರಗಿರಿಧರ ಗೋವಿಂದನೆ ಬಾ ನಂದಕುಮಾರನೆ ತಡೆಯದೆ ನೀ ಬಾ ನಂದಿನಿಗೊಲಿದಾನಂದವ ಕೊಡು ಬಾ ವೃಂದಾವನ ವಿಹಾರನೇ ಬಾ ಬಾ ಇಂದಿರೆಯರಸನೆ ಶೇಷಗಿರೀಶನೆ ಇಂದೆನಗೊಲಿದೈ ತಂದೆಯೆ ಭಳಿರೆನೆ 3
--------------
ನಂಜನಗೂಡು ತಿರುಮಲಾಂಬಾ
ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ಬೋಧ ಭಾನು ಬರುತೈದನೆ ನಾದ ವಿನೋದವೆಂಬ ಈಕೋಳಿಯು ಕೂಗುತೈತವರನೀಕ್ಷಿಸೆ ಸತ್ಕರುಣಾ ಕಟಾಕ್ಷದಿಂಏಳಯ್ಯ ಗುರುವರ್ಯ ಏಳಯ್ಯ ಗುರುವರ್ಯ ಯತಿಜನಾಲಂಕಾರಪಏಳು ಭಕ್ತಾಧಾರ ಯಮನಿಯಮ ಸಂಚಾರಏಳು ವಿದ್ವದ್ವರ್ಯ ಪರಮಹಂಸಾಚಾರ್ಯ ಏಳು ಗೋಪಾಲ ಯತಿವರ್ಯಾ ಸ್ವಾಮಿಅ.ಪಆಧಾರ ಮಣಿಪೂರ ಹೃದಯ ಕಮಲಗಳಲ್ಲಿನಾದ ಬಿಂದು ಕಲೆಗಳೆಂಬರುಣನುದುಸಿದಬೋಧೆಯೆಂಬರ್ಕನಾವಿರ್ಭವಿಸಿದನು ಸಹಸ್ರಾರ ಕಮಲದ ತುದಿಯಲಿವೇದವೇದ್ಯಾನಂತಮಹಿಮ ಚಿನ್ಮಯರೂಪನಾದಸೌಖ್ಯಾಕಾರ ಕಲಿ ಕಲ್ಮಷವಿದೂರಆದಿಮಧ್ಯಾಂತರಹಿತಾನಂದ ನಿತ್ಯನಿಜಬೋಧನೊಲಿದುಪ್ಪವಡಿಸಾ ಸ್ವಾಮೀ1ನಿತ್ಯವೆ ನಿಮ್ಮ ಪದವೆಂದಜಾಂಡವನಿದನನಿತ್ಯವೆಂದಖಿಳ ವಿಷಯಗಳಲಿ ವಿರತರಾಗಿಅತ್ಯಂತ ಶಮ ದಮಾದಿಗಳೆಂಬ ಸಾಧನದಿ ಮುಕ್ತಿ ಸುಖವನು ಬಯಸುತಾಪ್ರತ್ಯಕ್ಷರ ಬ್ರಹ್ಮರೈಕ್ಯವರಿಯದೆ ವಿದುಗಳತ್ಯಂತ ತ್ವರೆುಂದ ನಿಮ್ಮ ಮುಖಕಮಲದಿಂತತ್ವಮಸಿ ವಾಕ್ಯದರ್ಥವ ತಿಳಿಯಬೇಕೆಂದು ನೃತ್ಯವನು ಮಾಡುತಿಹರೂ ಸ್ವಾಮಿ 2ದೇಹೇಂದ್ರಿಯಾಂತರಂಗವನೇತಿಗಳಿದು ಸಂದೇಹದಲಿ ಕೂಟಸ್ಥ ನೀನೆಂಬುದರಿಯದೆಮಹಾ ವಿಚಾರಿಸಿ ಭಕ್ತ ಸುಲಭನೆ ದಾಟಿಸೈ ಮೋಹಸಾಗರವನೆನುತಾಪಾಹಿ ನೊಂದೆವು ಸಂಸ್ಕøತಿಯ ಬಂಧದಲಿ ನಮ್ಮಬೇಹುದೈಪಾಲಿಸಲು ಯೋಗನಿದ್ರೆಯ ಬಿಟ್ಟುದಾಹರಿಸು ವೇದಾಂತಗೋಪ್ಯವನೆನುತ ನತಸಮೂಹ ಕಾದಿದೆ ಕೃಪಾಳು ಸ್ವಾಮಿ 3ಕೇಳಿ ಭಕುತರ ದೈನ್ಯ ಸಲ್ಲಾಪಗಳನಿಂತುಲೀಲಾವತಾರ ಗುರುರಾಯನೊಲಿದೆದ್ದವರಲಾಲಿಸುತ ಧನ್ಯರಾದಿರಿ ಸನ್ಮತಿಯೊಳಿಂತು ಮೇಳಾಪವಾುತೆನುತಾಬಾಲರಿರ ನಿಮ್ಮನಂತಃಕರಣದ ಧ್ಯಾನಜಾಲಸುತ್ತಿರಲಾಗಿ ನಿಮ್ಮ ನಿಜವನು ಮರೆದುಕಾಲಕರ್ಮಾಧೀನವಾಗಿ ನೊಂದಿರಸತ್ಯವೀ ಲೋಕವೆಂದರಿಯದೆ ಎನಲು ಗುರುವೇ 4ಜೀವೇಶ್ವರರ ವಾಚ್ಯ ಲಕ್ಷ್ಯಾರ್ಥವನು ನಿಚ್ಚ ಭಾವಿಸುತ ಬ್ರಹ್ಮ ಕೂಟಸ್ಥರೆಂದವರಿಗೆ ಸ್ವಭಾವದಿಂ ಭೇದವಿಲ್ಲೌಪಾಧಿಕವಿದೆಂದು ಸಾವಧಾನದಲಿ ತಿಳಿದೂನಾವೆ ಪರಿಪೂರ್ಣಾತ್ಮರೆಂದು ಬೋಧಾಮೃತವಸೇವಿಸಿದಡನುದಿನಂ ಕೃತಕೃತ್ಯರಹಿರೆನಲ್‍ದೇವ ಕೃತಕೃತ್ಯರಾದೆವು ನಮೋ ಎನುತ ಸ್ವಭಾವ ಪದದಲಿನಿಂದರೂ ಸ್ವಾಮೀ 5
--------------
ಗೋಪಾಲಾರ್ಯರು
ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ. ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ ರಮಣನೆ ನುಡಿ ನುಡಿ1 ಇನಕುಲಮಂಡನ ವನರುಹಲೋಚನ ಜನಕಜಾ ಸುಪ್ರೇಮನೆ ಚಿನ್ಮಯರೂಪನೆ ಮನುಮುನಿ ಸೇವ್ಯನೆ 2 ಸುರನರ ಪೂಜಿತ ಸರಸಿಜ ಭವಪಿತ ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ ವರಶೇಷಗಿರಿದೊರೆ 3
--------------
ನಂಜನಗೂಡು ತಿರುಮಲಾಂಬಾ
ಸ್ಮರಿಸಿ ಬೇಡುವೆ ಹರಿಯ ಮುರಾರಿಯ ಸ್ಮರ ಕೋಟಿತೇಜನ ಸುರಮುನಿವಂದ್ಯನ ಪ ಮನ್ಮಥಕೋಟಿ ಲಾವಣ್ಯರೂಪದಿ ಮೆರೆವ ಮನ್ಮಥಯ್ಯನ ಪೊಗಳುತ್ತಲಿ ಚಿನ್ಮಯರೂಪನ ಚಿದ್ರೂಪನಾದನ ಹೃನ್ಮನದಲಿ ಪಾಡಿಪೊಗಳಿ ಕೊಂಡಾಡುತ ಅ.ಪ ಮನ್ಮನÀದೊಳು ಸ್ಮರಿಸಿ ಸ್ಮರಿಪ ಭಾಗ್ಯವು ಮುನ್ನ ಕರುಣಿಸಿ ಸಲಹು ಬಲು ಸಂ- ಪನ್ನ ನಿನಗೆದುರಿಲ್ಲ ಧರೆಯೊಳು ಪನ್ನಗಾದ್ರಿ ನಿವಾಸ ಶ್ರೀಶನ1 ವಿಶ್ವವ್ಯಾಪಕ ನೀನೆ ವಿಶ್ವಮೂರುತಿ ನೀನೆ ವಿಶ್ವ ನೀನೆ ಶ್ರೀ- ವಿಶ್ವವಸುನಾಮ ಸಂವತ್ಸರದೊಳು ಮೆರೆವ ವಿಶ್ವಮೂರುತಿ ಶ್ರೀ ಸರ್ವೇಶ್ವರ ನೀನೆಂದು2 ವಿಶ್ವಮಯ ವಿಶ್ವೇಶ ಶ್ರೀಹರಿ ವಿಶ್ವನಾಮಕ ವಿಮಲ ಸುಖಮಯ ವಿಶ್ವವನು ಉದರದೊಳು ಧರಿಸಿದ ವಿಶ್ವವನು ವದನದಲಿ ತೋರ್ದನ 3 ಕಮಲದಳಾಕ್ಷನ ಕಮನೀಯ ರೂಪನ ಕಮಲ ಸಂಭವನ ಪೆತ್ತಿಹ ಧೀರನ ಕಮಲಮುಖಿಯ ಕರಕಮಲದಿ ಪೂಜ್ಯನ ಕಮಲೆಯೊಡಗೂಡುತ ನಲಿವನ 4 ಕಮಲ ಕರದೊಳು ಪಿಡಿದ ಕಮಲೆಯ ಕಮಲನಾಭನ ಪಿತನೆ ಮುದದೊಳು ಕಮಲೆಯನು ಕೈಪಿಡಿದು ಮೆರೆಯುವ ಕಮಲನಾಭವಿಠ್ಠಲನ ಪ್ರತಿದಿನ5
--------------
ನಿಡಗುರುಕಿ ಜೀವೂಬಾಯಿ