ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಿಯನಹುದೊ ಎನ್ನ ನೀ ಎನ್ನ ಪಿಡಿದಿಹ ಕೈಯಲ್ಲಿ ನಿನ್ನ ಧ್ರುವ ನೋಡದವಗುಣನ್ನ ಅವಗುಣನ್ನ ಮಾಡುವೆ ನೀ ಪಾವನ ನೀಡುವೆ ಪಡೆದೆನ್ನ ಪಡೆದೆನ್ನ ಕೂಡು ದಯದಲಿ ಸಂಪನ್ನ 1 ಭಿನ್ನವಿಲ್ಲದೆ ನೀಯೆನ್ನ ನೀಯೆನ್ನ ಚನ್ನಾಗ್ಯಾದೆ ಪ್ರಸನ್ನ ಉನ್ನತಗುಣ ನಿನ್ನ ನಿನ್ನ ಚಿನ್ಮಯದ ಚಂದ್ರನ್ನ 2 ಬಿರುದಿನ ಪ್ರಖ್ಯಾತ ಪ್ರಖ್ಯಾತ ಬಿರುದು ಪ್ರಾಣನಾಥ ತರಳ ಮಹಿಪತಿದಾತ ಸುದಾತ ಗುರುಶಿರೋಮಣಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ಕಂಡೆವು ಚಿನ್ಮಯದ ರೂಪ ಕಣ್ಣಾರೆ ಕಂಡೆವು ಮಾ ಧ್ರುವ ದೋರುವದು ಮಾ ಪೂರ್ಣಗೈಸುವದು ಮಾ 1 ತಾನಾಗಿಹುದು ಮಾ ಘೋಷಗೈವದು ಮಾ 2 ದೋರುದು ಮಾ ಕೈಗೂಡದು ಮಾ 3 ತಿಳಿಯಗೊಡದು ಮಾ ತಾನೆ ಭಾಸುದು ಮಾ 4 ಉತ್ತಮರೊಳಗೆ ಅತ್ಯಂತವಾಗಿನ್ನು ಅತ್ತಿತ್ತಲಾಗದೆ ಇಹುದು ಮಾ ಹೃತ್ಕಮಲದೊಳು ಕಂಡೆನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಯದೊಲವಿನ ಮೆಚ್ಚು ಧ್ರುವ ಮಾಡದ ಮಾಡಿಸಿತು ನೋಡಿದರೇನ ತಾಂ ನೋಡಿಸಿತು ಕೂಡದ ಕೂಡಿಸಿತು ಬಿಡದಾಗಿಹ್ಯದ ಬಿಡಿಸಿತು 1 ತನ್ನ ತಾನರಸಿತು ಇನ್ನೊಂದರನೆ ಮರೆಸಿತು ಭಿನ್ನ ಭೇದ್ಹರಿಸಿತು ಚಿನ್ಮಯದ ಸುಖ ಬೆರೆಸಿತು 2 ಕಾಣದ ಕಾಣಿಸಿತು ಉಣದೂಟನೆÀ ತಾ ಉಣಿಸಿತು ಅನುಮಾನಗಳಿಸಿತು ಘನ ಮಹಿಪತಿಗೆ ನುಡಿಸಿತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಜ ಗುಹ್ಯದ ಮಾತು ಸುಜನರಿಗಲ್ಲದೆ ತಿಳಿಯದು ಧ್ರುವ ಕಣ್ಣಿಗೆ ಕಣ್ಹೇಳುವ ಮಾತು ಪುಣ್ಯವಂತರಿಗಿದೆ ಹೊಳೆದೀತು ಇನ್ನೊಬ್ಬರಿಗೇನು ತಿಳಿದೀತು ಚಿನ್ಮಯದ ವಸ್ತು 1 ನೀತಿಗೆ ನಿಜವಾಗಿಹ್ಯ ಮುಗುಟ ಮಾತಿಗೆ ಮುಟ್ಟದವನೆ ಬಲು ನಿಗಟ ಮತಿಹೀನರಿಗಿದೇ ಒಗಟ ಯತಿಜನರಿಗೆ ಪ್ರಗಟ 2 ಸೋಹ್ಯ ಸೊನ್ನೆಯ ಮಾತನೆ ಕೇಳಿಕೊ ಗುಹ್ಯ ಹೇಳುವ ಗುರು ಬಳಕೊ ಮಹಿಪತಿ ನಿನ್ನೊಳು ನೀ ತಿಳಕೊ ಸಿದ್ಧದ ಬಲು ಬೆಳಕೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀನಿವಾಸನೆ ನಿನ್ನ ಧ್ಯಾನದಲಿ ನಾನಿದ್ದೆ ಕರವ ಪಿಡಿದೆ ಪ ಭಾನುಶತತೇಜ ನಿನ್ನಾನನಾಬ್ಜದ ಮಧುವ ಪಾನ ಮಾಡುತ ತೃಪ್ತಿ ಕಾಣದಿರುವೆ ಅ.ಪ ಕಾಮನಂತಹ ರೂಪ ಸೋಮನಂತಹ ಕಾಂತಿ ರಾಮನಂತಹ ಸತ್ಯ ಧರ್ಮ ನಡತೆ ಈ ಮಹಾ ಸುಗುಣಶಾಲಿಯು ನೀನು ನಿನ್ನಯ ಪ್ರೇಮವನು ಕಾಮಿಸುವ ಹಸುಳೆ ನಾನು 1 ಗಂಧ ಫಲಪುಷ್ಪ ತಾಂಬೂಲಗಳನು ಅಂದದ ಹೇಮದ ತಬಕದಲ್ಲಿ ತಂದು ಕೊಡುವೆನು ಪ್ರೇಮ ಕಾಣಿಕೆಯನು ಮಂದಹಾಸದಿ ನಿನ್ನ ಪಾಂಗದಿಂದ ನೋಡೋ 2 ಒಂದು ದಿನ ಕನಸಿನಲಿ ಕಂಡೆನಚ್ಚರಿ ದೃಶ್ಯ ಮುಂದೆ ನಿಂತಳು ಯುವತಿ ನಸುನಗುತಲಿ ಗಂಧ ತಾಂಬೂಲ ಫಲಪುಷ್ಪ ಪರಿಮಳದ್ರವ್ಯ ತಂದಿಹಳು ಚಿನ್ಮಯದ ತವಕದಲ್ಲ್ಲಿ ಕಂದನಿದ ನಿನಗಾಗಿ ತಂದಿರುವೆನೆಂದು ಮೃದು ಮಂದಹಾಸದಿ ತಲೆಯ ಸವರಿ ನುಡಿಯೆ ಸುಂದರಿಯೆ ನೀನಾರು ಬಂಧುವರ್ಗಗಳಲ್ಲಿ ಹಿಂದೆ ನಾ ನೋಡಿಲ್ಲವೆಂದು ನುಡಿಯೆ ನಂದಗೋಕುಲದಲ್ಲಿ ನಂದನಕುಮಾರನಿಗೆ ಅಂದ ರಾಣಿಯು ನಾನು ಸತ್ಯಭಾಮೆ ಇಂದ್ರದೇವನ ದಿವ್ಯ ನಂದನವನದಿಂದ ತಂದಿರುವೆ ನಿನ್ನ ವರಕುಲವನರಿತು ಸುಂದರಾಂಗನ ಸೇರಿ ಸುಖಪಡುವ ಸೌಭಾಗ್ಯ ಮುಂದಿಹುದು ನಿನಗೆ ಬಲು ತ್ವರಿತದಲ್ಲಿ ಅಂದು ನೀ ಈ ಸ್ವರ್ಣಮಯ ತವÀಕದಲ್ಲಿರುವ ಗಂಧ ಪುಷ್ಪಾದಿಗಳ ಫಲವನರಿವೆ ಚಂದದಲಿ ದಾಂಪತ್ಯ ಸುಖಶಾಂತಿ ಪಡೆಯುವೆ ಕಂದ ನೀ ಸ್ವೀಕರಿಸು ಪೋಗಿ ಬರುವೆ ಎಂದು ನುಡಿಯಲು ತರುಣಿ ಎಚ್ಚರಿತೆನು ಶುಭ ಸುದ್ದಿಯು ತಂದಿರುವೆ ತಬಕವ ಪ್ರಸನ್ನ ವದನ
--------------
ವಿದ್ಯಾಪ್ರಸನ್ನತೀರ್ಥರು
ಅಂಕಿತ ಪದ (ಶ್ರೀ ಪ್ರಸನ್ನ ಭೂವರಾಹ)142ಶ್ರೀಶ ಪ್ರಸನ್ನ ಭೂವರಾಹ ಚಿನ್ಮಯದೇವ -ಬಿಸಜಜ ಸಮೀರಾದಿ ಸುರವೃಂದ ವಂದ್ಯ -ಬಿಸಜಜಾಂಡದ ದೊರೆ ಸಹಸ್ರನಾಮನೆ ದಯ -ದಿಂಸಲಹೋ ಜ್ಞಾನಾದಿ ಧನವಿತ್ತು ಇವನ ಪಶ್ರೀಧರನೆ ಸುಖಮಯನೆ ಭೂಧರನೆ ಭೀತಿಹರವೇಧಮನುವಿಗೆ ಒಲಿದ ಶ್ವೇತವರಾಹ ||ದಿತಿಜಹರ ವಸೂಮತೀಯ ಉದ್ಧರಿಸಿ ಕಾಯ್ದಿಯೋನೀದಯದಿ ಸುಮತಿಯನು ಇತ್ತು ಪಾಲಿಪುದು 1ಕಾಲಗುಣಕರ್ಮನಿಮಿತ್ತ ಬಂದಿಹ ಇವನಬಲವಂತ ಕಷ್ಟಗಳ ಉಪಶಮಿಸಿ ಇವನಿಂ ||ಒಳ್ಳೇಸಾಧನ ಮಾಡಿಸುವದು ನೀಕೃಪೆಯಿಂದ |ಬಾಲೇಂದುಧರವಿನುತಭಕ್ತವತ್ಸಲ2ಭೂಮ ಉರುಗುಣ ಪೂರ್ಣನಿರ್ದೋಷಶ್ರೀರಮಣಶ್ಯಾಮ ವರ್ಣನೆ ಚಕ್ರ ಶಂಖ ಭೂಧರನೆ ||ಕಾಮಪಿತ ವೇಧಪಿತ ಭೂವರಾಹ ನಮೋ |ನಮೋ ಶ್ರೀ ಪ್ರಸನ್ನ ಶ್ರೀನಿವಾಸ ಸಲಹೆಮ್ಮ
--------------
ಪ್ರಸನ್ನ ಶ್ರೀನಿವಾಸದಾಸರು
ಪರಾತ್ಪರಪರಮಪಾವನನೆಪರಾಕುಫಣಿಶಯನ ಪಾಪಘ್ನಪ.ಸುರಾಸುರಾರ್ಚಿತ ಪುರಾಣಪುರುಷೇ-ಷ್ಟರ ನಿರಾಮಯ ಮುರಾರಿ ಶ್ರೀಹರಿ ಅ.ಪ.ನಯವೀತಭಯ ಪಾರ್ಥಪ್ರಿಯ ಸರ್ವನಿಯಾಮಕ ಚಿನ್ಮಯದಯಾವಂತ ಜಯಾಕಾಂತಹಯಾಸ್ಯಪಯೋಬ್ಧಿಶಯನ ವಿಯಾನ1ರಮಾರಮಣ ನಮಸ್ತೇ ನಿರುಪಮ ಮಹಿಮಸುಮೇಧ ಸುರೋತ್ತಮಮಮಾಪರಾಧ ಕ್ಷಮಾ ಕುರು ವಿ-ರಾಮ ನಿಯಮ ಪದುಮದಳನಯನ 2ಗುಣಾರ್ಣವ ಶರಣಾಗತಭರಣ ನಿ-ರ್ಗುಣ ಶ್ರೀ ಲಕ್ಷ್ಮೀನಾರಾಯಣಪ್ರಾಣಸುತ್ರಾಣದೇವಗಣಾಗ್ರಣಿಯಾನಂದ ಗೋವಿಂದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ