ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರ್ಮದಮಾತು ಹಳಸಿ ಬಂದಿತು ಯುಗ ಧರ್ಮದಿಂದದು ವನವನು ಸೇರಿತು ಪ ಆಟ ನೋಟಕೆ ಉಂಟು ಪೋಟ ಪುಂಡರಿಗುಂಟು ಮಾರ ಕಟ್ಟಲುಂಟು ಕಾಟಕ ದೊರೆಗೆ ದಂಡವನು ಕೊಡಲಿಕುಂಟು ಚಂದ್ರ ಜೂಟಗರ್ಪಿತವೆಂದು ಕೊಡಲು ದ್ವಿಜರಿಗಿಲ್ಲ 1 ಕಲ್ಲು ಮಣ್ಣಿಗೆ ಇಕ್ಕಲುಂಟು ಆಕಳ ಎಮ್ಮೆ ಕೊಳ್ಳಲಿ ಕುಂಟು ಕೈಯೊಳು ಹೊನ್ನು ಚಿನ್ನಗಳ ಬಂಗಾರ ಮಾಡಿಸಲುಂಟು ಇಲ್ಲದೇಹಿ ಎಂದು ಯಾಚಿಪದ್ವಿಜರಿಗೆ 2 ಬಣ್ಣ ಸಣ್ಣಗಳ ಕೊಡಲಿ ಕುಂಟು ಕಾಮನ ತನ್ನ ಕೈಯಾರೆ ಲಕ್ಷ್ಮೀಶಗರ್ಪಿತವೆಂದು ಮನ್ನಿಸಿ ದ್ವಿಜರಿಗೀಯಲಿಕೆ ದುಡ್ಡುಗಳಿಲ್ಲ 3
--------------
ಕವಿ ಪರಮದೇವದಾಸರು
ಹೋದುದಿನ್ಯಾರಿಗೆ ಹೇಳೋಣ ಹೊಲಮೆದ್ದರಾರಿಗೆ ಹೇಳೋಣ ಪ ಎದ್ದನು ದುರ್ಜನ ಬಿದ್ದಬಿನುಗು ಪ್ರಜೆ ಉದ್ದ ಗುದ್ದಗಳೆಲ್ಲ ಸಮನಾಯಿತು ಇದ್ದ ಹೆಣ್ಮಕ್ಕಳ ಮೈಮೇಲಕೆ ಒಂದು ಉದ್ದಿನ ಕಾಳಷ್ಟು ಚಿನ್ನಗಳಿಲ್ಲ 1 ಕಂಚು ತಾಮ್ರವು ಮಾರಿಹೋಯಿತು ಕೊಂಚ ತಣ್ಣೀರ ಕೊಳ್ಳಲಿಕ್ಕಿಲ್ಲ ಸಂಚ ಕಾರವು ಪ್ರಾಣಕಾಯಿತು ನಾವಿನ್ನು ಪಂಚತ್ವವ ನ್ನೈದಿದರೊಳ್ಳಿತು ಎಂಬರು 2 ಭೂರಿ ಹೇಮರಜತಗಳ ಮಾರಿಯಾಯಿತು ಭಾರಿ ತೆರಿಗೆ ಶ್ರಮಸೀಮೆ ಪ್ರಜೆಗಳಿಗಾಯ್ತು ಭೀಮನ ಕೋಣೆ ಲಕ್ಷ್ಮೀರಮಣನ ನಂಬಿ ಭಿಕ್ಷೆಗೆ ಮನವ ತಾಳಿರಣ್ಣ 3
--------------
ಕವಿ ಪರಮದೇವದಾಸರು
ಕೇಳೆ ಯಶೋದೆ ನಿನ್ನ ಬಾಲಕನಾಟಗಳೂ |ಹೇಳಿಕೊಂಡರೆ ಸುಳ್ಳೇ ಕಾಣಿಸಿತಮ್ಮ ಪನೀರೊಳಾಡುವನಲ್ಲೆ, ಪೋರರ ಕೂಡಿಕೊಂಡು |ಮಾರಿಯೆಂಬೊದೇನು ಸಾರಿ ಬಾಹೊದೆ 1ಎಲ್ಲರಂತುಂಡು ಮನೆಯಲ್ಲಾಡಬಾರದೆ |ಕಲ್ಲೆತ್ತುವನೆ ಯಂಥ ಬಲ್ಲಿದನಂತೆ 2ನಿಮ್ಮ ಹಿತಾರ್ಥನಾಗಿ ಸಮ್ಮೀಸಿ ಪೇಳಿದರೆ |ಬೊಮ್ಮನ ಮಗನಂತೆ ನಮ್ಮನ್ನೇ ಬೈವ 3ಮೂರು ಕಣ್ಣವಪರನಾರೇರ ಮುಟ್ಟಲಾರ |ಊರೊಳಗಿವ ಬಲು ಮೀರಿದನಮ್ಮ 4ಸಣ್ಣವನೆನಬೇಡ ನಿನ್ನ ಮಗನಗೋಪಿ|ಅನ್ನಿಥವಾಡೆವೆಮ್ಮ ಚಿನ್ನಗಳಾಣೆ 5ಬೆಂಕಿಗಂಜದೆ ನಿರಾತಂಕದರೊಳಗಿಹ |ಮಂಕುತನವ ನೋಡೆ ಪಂಕಜನೇತ್ರೆ6ಇನ್ನೊಂದು ಮಾತು ಕೇಳೆ ಮೊನ್ನೆ ಮೊನ್ನೆ ಒಬ್ಬ |ಹೆಣ್ಣಿನ ಕೊಂದನಲ್ಲೆ ಅನ್ಯಾಯ ನೋಡೆ 7ಕಿತ್ತಿದನೊಂದು ಮರ ಮತ್ತೆರಡು ಮೂರೀದ |ಮತ್ತಗಜವ ಕೊಂದುನ್ಮತ್ತನ ನೋಡೆ 8ಸದ್ಯ ಹೋಗಲೀನಿತು ಇದ್ದೊಬ್ಬವನು | ಅಪ್ರ-ಬುದ್ಧನಾಗಬಾರದು ಬುದ್ಧಿಯ ಹೇಳೇ 9ಅಧಮರೊಡನೆನಿತ್ಯಕದನಮಾಡುವದೇಕೆ |ಮಧುಸೂದನನ್ನು ಒಳ್ಳೆ ಹದನದಲ್ಲೀಡೆ 10ಕಾಣ ಬಂದದ್ದಾಡಲು ಪ್ರಾಣೇಶ ವಿಠಲಗೆ |ಹೀನ ತೋರುವದಮ್ಮಾ ಏನನ್ನಬೇಕೆ 11
--------------
ಪ್ರಾಣೇಶದಾಸರು